ಬೌಲರ್​ಗಳ ಅಬ್ಬರವೋ, ಬ್ಯಾಟರ್​ಗಳ ಆರ್ಭಟವೋ; ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ಆತಿಥ್ಯ ವಹಿಸುವ ದುಬೈ ಪಿಚ್ ಯಾರಿಗೆ ನೆರವು?
ಕನ್ನಡ ಸುದ್ದಿ  /  ಕ್ರಿಕೆಟ್  /  ಬೌಲರ್​ಗಳ ಅಬ್ಬರವೋ, ಬ್ಯಾಟರ್​ಗಳ ಆರ್ಭಟವೋ; ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ಆತಿಥ್ಯ ವಹಿಸುವ ದುಬೈ ಪಿಚ್ ಯಾರಿಗೆ ನೆರವು?

ಬೌಲರ್​ಗಳ ಅಬ್ಬರವೋ, ಬ್ಯಾಟರ್​ಗಳ ಆರ್ಭಟವೋ; ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ಆತಿಥ್ಯ ವಹಿಸುವ ದುಬೈ ಪಿಚ್ ಯಾರಿಗೆ ನೆರವು?

Dubai International Cricket Stadium: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ vs ಬಾಂಗ್ಲಾದೇಶ ಪಂದ್ಯಕ್ಕೆ ಆತಿಥ್ಯ ವಹಿಸುವ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಪಿಚ್ ವರದಿಯನ್ನು ನೋಡೋಣ.

ಬೌಲರ್​ಗಳ ಅಬ್ಬರವೋ, ಬ್ಯಾಟ್ಸ್​ಮನ್​ಗಳ ಆರ್ಭಟವೋ; ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ದುಬೈ ಪಿಚ್ ಯಾರಿಗೆ ನೆರವು?
ಬೌಲರ್​ಗಳ ಅಬ್ಬರವೋ, ಬ್ಯಾಟ್ಸ್​ಮನ್​ಗಳ ಆರ್ಭಟವೋ; ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ದುಬೈ ಪಿಚ್ ಯಾರಿಗೆ ನೆರವು?

ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ-ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಐಸಿಸಿ ಟೂರ್ನಿಯಲ್ಲಿ ಭಾರತ ತಂಡವು ಫೆಬ್ರವರಿ 20ರಿಂದ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇಂಡೋ-ಬಾಂಗ್ಲಾ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸದಲಿದ್ದು, ಉಭಯ ತಂಡಗಳು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿವೆ. ಭಾರತ vs ಬಾಂಗ್ಲಾದೇಶ, ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಮುನ್ನ ದುಬೈ ಕ್ರೀಡಾಂಗಣದ ಪಿಚ್ ವರದಿಯನ್ನು ನೋಡೋಣ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರಿ ಬೆನ್ನಟ್ಟಿದ ತಂಡಗಳೇ ಹೆಚ್ಚು ಗೆಲುವು ಕಂಡಿವೆ. ಇಲ್ಲಿ ನಡೆದಿರುವ 58 ಏಕದಿನ ಪಂದ್ಯಗಳ ಪೈಕಿ 34ರಲ್ಲಿ ಚೇಸಿಂಗ್ ನಡೆಸಿದ ತಂಡಗಳು, 22ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಜಯದ ಸಿಹಿ ಕಂಡಿವೆ. 1 ಪಂದ್ಯ ಡ್ರಾ, 2 ಪಂದ್ಯಗಳು ಫಲಿತಾಂಶ ಇಲ್ಲದೆ ಅಂತ್ಯಗೊಂಡಿವೆ. ಕಳೆದ 4-5 ವರ್ಷಗಳಲ್ಲಿಯೂ ಚಿತ್ರಣ ಬದಲಾಗಿಲ್ಲ. 2021 ರಿಂದ, ದುಬೈನಲ್ಲಿ 24 ಏಕದಿನ ಪಂದ್ಯಗಳನ್ನು ಆಡಲಾಗಿದ್ದು, ಅದರಲ್ಲಿ ಚೇಸಿಂಗ್ ಮಾಡಿದ ತಂಡ 14 ಬಾರಿ ಗೆದ್ದಿದೆ.

ದುಬೈನಲ್ಲಿ ಭಾರತಕ್ಕೆ ಸಿಗುವ ಪಿಚ್ ಹೊಸದಾಗಿರಲಿದೆ. ಇಲ್ಲಿ ಎರಡು ಹೊಸ ಪಿಚ್‌ಗಳಿದ್ದು, ಇತ್ತೀಚೆಗೆ ಯಾವುದೇ ಪಂದ್ಯಕ್ಕೆ ಅವುಗಳನ್ನು ಬಳಸಲಾಗಿಲ್ಲ. ದುಬೈನ ಪಿಚ್ ಮೊದಲಿನಂತೆ ನಿಧಾನವಾಗಿರುವುದಿಲ್ಲ ಎಂದು ವರದಿಗಳು ಹೇಳುತ್ತಿವೆ. ಪಿಚ್‌ ಸ್ವಲ್ಪ ವೇಗವಾಗಿರುತ್ತವೆ. ಇದು ಸ್ಪಿನ್ನರ್‌ಗಳಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಒಬ್ಬ ಸ್ಪಿನ್ನರ್ ಸ್ವಲ್ಪ ವೇಗವಾಗಿ ಬೌಲಿಂಗ್ ಮಾಡಿದರೆ ಈ ಪಿಚ್ ಅವರಿಗೆ ಸ್ವರ್ಗವೇ ಸಿಕ್ಕಂತೆ. ಆದರೆ ಬ್ಯಾಟರ್​ಗಳು ಸ್ವಲ್ಪ ರನ್ ಗಳಿಸಲು ಕಷ್ಟಪಡಬಹುದು. ಒಂದು ವೇಳೆ ಪಿಚ್ ಮರ್ಮ ಅರಿತರೆ ಬ್ಯಾಟರ್​ಗಳೇ ದರ್ಬಾರ್ ನಡೆಸಲಿದ್ದಾರೆ ಎಂದು ವರದಿಗಳು ಹೇಳಿವೆ. ಸಂಜೆ ವೇಳೆ ಇಬ್ಬನಿಯೂ ಕಾಡಲಿದ್ದು, ಚೇಸಿಂಗ್ ತಂಡಕ್ಕೆ ನೆರವಾಗಲಿದೆ.

ಐವರು ಸ್ಪಿನ್ನರ್​ಗಳಿಗೆ ಮಣೆ ಹಾಕಿದ್ದು ಇದೇ ಕಾರಣಕ್ಕೆ

ಸ್ಪಿನ್ ಸ್ನೇಹಿ ಪಿಚ್ ಎಂಬ ಕಾರಣಕ್ಕೆ ಟೀಮ್ ಇಂಡಿಯಾ ಐವರು ಸ್ಪಿನ್ನರ್​​ಗಳಿಗೆ ಮಣೆ ಹಾಕಲಾಗಿದೆ. ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇವರೇ ಪಂದ್ಯದ ಗೇಮ್​ ಚೇಂಜರ್​ಗಳು ಎನ್ನಬಹುದು. ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾದರೂ ಪ್ಲೇಯಿಂಗ್​ 11ನಲ್ಲಿ ಮೂವರಿಗಷ್ಟೇ ಅವಕಾಶ ಸಿಗಲಿದೆ. ಇವರ ಜೊತೆಗೆ ವೇಗದ ಬೌಲರ್​ಗಳ ಬೌಲಿಂಗ್ ಕೂಡ ಪರಿಣಾಮ ಬೀರಲಿದೆ ಎನ್ನಬಹುದು.

ದುಬೈ ಕ್ರೀಡಾಂಗಣಕ್ಕೆ ಸಂಬಂಧಿಸಿದ ದಾಖಲೆಗಳು

  • ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗರಿಷ್ಠ ಸ್ಕೋರ್: 355/5, ಇಂಗ್ಲೆಂಡ್ vs ಪಾಕಿಸ್ತಾನ
  • ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕನಿಷ್ಠ ಸ್ಕೋರ್: 91/10, ನಮೀಬಿಯಾ vs ಯುಎಇ
  • ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅತಿ ದೊಡ್ಡ ಗೆಲುವು (ರನ್​ಗಳು): 162 ರನ್, ಸ್ಕಾಟ್ಲೆಂಡ್ vs ಪಿಎನ್​ಜಿ
  • ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅತಿ ಕಡಿಮೆ ಗೆಲುವು (ರನ್​​): 2 ರನ್​​, ದಕ್ಷಿಣ ಆಫ್ರಿಕಾ vs ಪಾಕಿಸ್ತಾನ.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯ: ಈ ಕಾರಣಕ್ಕೆ ತನಗೆ ನೀಡಿದ್ದ 95 ಲಕ್ಷ ಬೆಲೆಯ ವಿಐಪಿ ಟಿಕೆಟ್ಸ್ ಮಾರಿದ ಪಿಸಿಬಿ ಅಧ್ಯಕ್ಷ

ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಕ್ರಿಕೆಟ್ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್​ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.

ಚಾಂಪಿಯನ್ಸ್ ಟ್ರೋಫಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ತಂಡ

ನಜ್ಮುಲ್ ಹೊಸೈನ್ ಶಾಂಟೋ (ನಾಯಕ), ಸೌಮ್ಯ ಸರ್ಕಾರ್, ತಂಜಿದ್ ಹಸನ್, ತೌಹಿದ್ ಹೃದಯ, ಮುಷ್ಫಿಕರ್ ರಹೀಮ್, ಮಹ್ಮದುಲ್ಲಾ, ಝಾಕರ್ ಅಲಿ ಅನಿಕ್, ಮೆಹದಿ ಹಸನ್ ಮಿರಾಜ್, ರಿಷದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಪರ್ವೇಜ್ ಹೊಸೈನ್ ಎಮನ್, ನಸುಮ್ ಅಹ್ಮದ್, ತಂಜಿಮ್ ಹಸನ್ ಸಕಿಬ್, ನಹಿದ್ ರಾಣಾ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner