ದಿನಕ್ಕೆ 8 ಕೆಜಿ ಮಟನ್ ತಿಂತೀರಿ, ಫಿಟ್ನೆಸ್ ಎಲ್ಲಿ? ಆಫ್ಘಾನ್ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ಆಟಗಾರರನ್ನು ರುಬ್ಬಿದ ವಾಸಿಂ ಅಕ್ರಮ್
ಕನ್ನಡ ಸುದ್ದಿ  /  ಕ್ರಿಕೆಟ್  /  ದಿನಕ್ಕೆ 8 ಕೆಜಿ ಮಟನ್ ತಿಂತೀರಿ, ಫಿಟ್ನೆಸ್ ಎಲ್ಲಿ? ಆಫ್ಘಾನ್ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ಆಟಗಾರರನ್ನು ರುಬ್ಬಿದ ವಾಸಿಂ ಅಕ್ರಮ್

ದಿನಕ್ಕೆ 8 ಕೆಜಿ ಮಟನ್ ತಿಂತೀರಿ, ಫಿಟ್ನೆಸ್ ಎಲ್ಲಿ? ಆಫ್ಘಾನ್ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ಆಟಗಾರರನ್ನು ರುಬ್ಬಿದ ವಾಸಿಂ ಅಕ್ರಮ್

ಐಸಿಸಿ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿರುವುದಕ್ಕೆ ವಾಸಿಂ ಅಕ್ರಮ್ ಫುಲ್ ಗರಂ ಆಗಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಸೋಲು ಕಂಡಿರುವುದಕ್ಕೆ ವಾಸಿಂ ಅಕ್ರಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಸೋಲು ಕಂಡಿರುವುದಕ್ಕೆ ವಾಸಿಂ ಅಕ್ರಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸೋಮವಾರ (ಅಕ್ಟೋಬರ್ 23) ನಡೆದ ಐಸಿಸಿ ಏಕದಿನ ವಿಶ್ವಕಪ್‌ (ICC ODI World Cup 2023) 22ನೇ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ (Pakistan) ವಿರುದ್ಧ ಅಫ್ಘಾನಿಸ್ತಾನ (Afghanistan) ಐತಿಹಾಸ ಗೆಲುವು ಸಾಧಿಸಿದೆ. ಆಫ್ಘಾನ್ ತಂಡದ ಒಗ್ಗಟ್ಟಿನ ಪ್ರದರ್ಶನದಿಂದ ಬಾಬರ್ ಅಜಮ್ ಅಂಡ್ ಟೀಂ ಹೀನಾಯ ಸೋಲು ಕಂಡಿದೆ. ಪಾಕಿಸ್ತಾನ ಈ ಸೋಲಿಗೆ ಆ ತಂಡದ ಮಾಜಿ ಆಟಗಾರರು ಕೆಂಡಾಮಂಡಲರಾಗಿದ್ದಾರೆ.

ವಿಶ್ವಕಪ್‌ನಲ್ಲಿ ಈವರೆಗೆ ಆಡಿರುವ 5 ಪಂದ್ಯಗಳ ಪೈಕಿ ಪಾಕಿಸ್ತಾನ ಮೊದಲೆರಡಲ್ಲಿ ಗೆದ್ದು ಸತತ ಮೂರು ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ವಿಶ್ವಕಪ್ ರೇಸ್‌ನಲ್ಲಿ ಉಳಿಯಬೇಕಾದರೆ ಉಳಿದ 4 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಪಾಕ್ ತಂಡ ಇದೆ. ಜೊತೆಗೆ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸುವಂತಾಗಿದೆ.

ಪಾಕ್ ಆಟಗಾರರನ್ನು ಜಾಡಿಸಿದ ವಾಸಿಂ ಅಕ್ರಮ್

ಅಫ್ಘಾನಿಸ್ತಾನ ವಿರುದ್ಧದ ಸೋಲಿಗೆ ಕಾರಣಗಳನ್ನು ಹುಡುಕುತ್ತಿರುವ ಬೆನ್ನಲ್ಲೇ ಪಾಕ್ ಮಾಜಿ ಆಟಗಾರ ವಾಸಿಂ ಅಕ್ರಮ್ (Wasim Akram) ಪಾಕಿಸ್ತಾನದ ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಇದು ಕೆಟ್ಟ ಸೋಲು, ಪಾಕಿಸ್ತಾನಕ್ಕೆ ಮುಜುಗರ ತರುವಂತದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಬಳಿಕ ಎ ಸ್ಪೋರ್ಟ್ಸ್ ಪ್ರಸಾರವಾಗುವ ದಿ ಪೆವಿಲಿಯನ್ ಶೋನಲ್ಲಿ ಮಾತನಾಡಿರುವ ಅವರು, ಈ ಸೋಲು ಮುಜುಗರದ ಸಂಗತಿಯಾಗಿದೆ. ಅಫ್ಘಾನಿಸ್ತಾನ ಕೇವಲ ಎರಡು ವಿಕೆಟ್ ಕಳೆದುಕೊಂಡು 280 ರನ್ ಗುರಿಯನ್ನು ತಲುಪುವುದು ಬಹಳ ದೊಡ್ಡ ವಿಷಯವಾಗಿದೆ. ಒದ್ದೆಯಾದ ಪಿಚ್ ಇರಲಿಲ್ಲ. ನಿಮ್ಮ ಫೀಲ್ಡಿಂಗ್ ಮತ್ತು ಫಿಟ್‌ನೆಸ್ ಮಟ್ಟವನ್ನು ನೋಡಿ ಎಂದು ಕಿಡಿಕಾರಿದ್ದಾರೆ.

ನಾನು ವೈಯಕ್ತಿಕವಾಗಿ ಹೆಸರುಗಳನ್ನು ತೆಗೆದುಕೂಳ್ಳಲು ಶುರು ಮಾಡಿದರ ಅವರ ಮುಖಗಳು ಸಪ್ಪೆಯಾಗುತ್ತವೆ. ಈ ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿನ್ನುತ್ತಿರುವಂತೆ ಕಾಣಿಸುತ್ತದೆ. ಆದರೆ ಇವರ ಫಿಟ್ನೆಸ್ ಎಲ್ಲಿ ಎಂದು ಅಕ್ರಮ್ ಪ್ರಶ್ನಿಸಿದ್ದಾರೆ.

ವೃತ್ತಿಪರರಾಗಿ ನೀವು ಹಣ ಪಡೆಯುತ್ತಿದ್ದೀರಿ, ನಿಮ್ಮ ದೇಶಕ್ಕಾಗಿ ಆಡುತ್ತಿದ್ದೀರಿ. ನಿಮಗೆ ಒಂದು ನಿರ್ದಿಷ್ಟ ಮಾನದಂಡ ಇರಬೇಕು. ಮಿಸ್ಬಾ ಅವರು ಕೋಚ್ ಆಗಿದ್ದಾಗ ಆ ಮಾನದಂಡವನ್ನು ಹೊಂದಿದ್ದರು. ಆಟಗಾರರು ಅವನನ್ನು ದ್ವೇಷಿಸುತ್ತಿದ್ದರು ಆದರೂ ಅವರ ಕಾರ್ಯತಂತ್ರಗಳು ಕೆಲಸ ಮಾಡುತ್ತಿದ್ದವು. ಫೀಲ್ಡಿಂಗ್ ಎನ್ನುವುದು ಫಿಟ್ನೆಸ್‌ಗೆ ಸಂಬಂಧಿಸಿದ್ದು. ನಮ್ಮಲ್ಲಿ ಆ ಕೊರತೆಯಿದೆ. ಈಗ ನಾವು ಅದೇ ಸ್ಥಾನವನ್ನು ತಲುಪಿದ್ದೇವೆ ಎಂದಿದ್ದಾರೆ.

ದಯವಿಟ್ಟು ಮೊದಲು ದೇಶದ ಬಗ್ಗೆ ಯೋಜಿಸಿ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ವಾಸಿಂ ಅಕ್ರಮ್, ಮೊಹಮ್ಮದ್ ಯೂಸುಫ್ ಹಾಗೂ ಹಿಂದಿನ ಕೋಚಿಂಗ್ ಸ್ಟಾಫ್‌ ಅಡಿಯಲ್ಲಿ ಪಾಕಿಸ್ತಾನ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿತ್ತು. ರಮೀಜ್ ರಾಜಾ ಅವರನ್ನು ವಜಾಗೊಳಿಸಿದ ನಂತರ ಝಕಾ ಅಶ್ರಫ್ ಅವರನ್ನು ನಾಲ್ಕು ತಿಂಗಳ ಕಾಲ ಮುಖ್ಯಸ್ಥರನ್ನಾಗಿ ನೇಮಿಸುವ ಮೊದಲು ನಜಮ್ ಸೇಥಿ ಅವರಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಎಲ್ಲಾ ಬೆಳವಣಿಗಳ ಫಲಿತಾಂಸ ಈಗ ಗೊತ್ತಾಗುತ್ತಿದೆ. ದಯವಿಟ್ಟು ಮೊದಲು ದೇಶದ ಬಗ್ಗೆ ಯೋಜಿಸಿ ಎಂದು ವಾಸಿಂ ಅಕ್ರಮ್ ಪಿಸಿಬಿ ವಿರುದ್ಧವೂ ಕೆಂಡಾಮಂಡಲರಾಗಿದ್ದಾರೆ.

ಚೆನ್ನೈನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 282 ರನ್ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ ಇನ್ನೂ 1 ಓವರ್ ಬಾಕಿ ಇರವಂತೆ 2 ವಿಕೆಟ್ ಕಳೆದುಕೊಂಡು 286 ರನ್ ಬಾರಿಸುವ ಮೂಲಕ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ಪಡೆಯಿತು.

Whats_app_banner