6 ಟಿ20, 2 ಏಕದಿನ ವಿಶ್ವಕಪ್, 25 ಪ್ರಶಸ್ತಿ; ಕ್ರಿಕೆಟ್ನಲ್ಲಿ ಎಲ್ಲಿಸ್ ಪೆರಿ ಮುಟ್ಟಿದ್ದೆಲ್ಲಾ ಚಿನ್ನ, ಎಂಥವರಿಗೂ ಸ್ಫೂರ್ತಿ ಅವರ ಜೀವನ
Ellyse Perry Birthday: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಎಲಿಸ್ ಪೆರಿ ಅವರು ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಹಿನ್ನೆಲೆ, ಕ್ರಿಕೆಟ್ ಸಾಧನೆಗಳು, ರೆಕಾರ್ಡ್ಸ್.. ಹೀಗೆ ಎಲ್ಲವನ್ನೂ ಈ ಮುಂದೆ ತಿಳಿಯೋಣ.
ಎಲ್ಲಿಸ್ ಪೆರಿ.. ಕ್ರಿಕೆಟ್ ಮತ್ತು ಫುಟ್‌ಬಾಲ್ ವಿಶ್ವಕಪ್‌ಗಳಲ್ಲಿ ಆಸ್ಟ್ರೇಲಿಯಾ ಪರಆಡಿದ ಏಕೈಕ ಆಟಗಾರ್ತಿ. ಎರಡು ವಿಭಿನ್ನ ಕ್ರೀಡೆಗಳಲ್ಲಿ ತನ್ನ ದೇಶ ಪ್ರತಿನಿಧಿಸಿದ ಆಸೀಸ್ನ ಕೆಲವೇ ಕ್ರೀಡಾಪಟುಗಳಲ್ಲಿ ಒಬ್ಬರು. ಕ್ರಿಕೆಟ್ಗೆ ನಿವೃತ್ತಿ ಘೋಷಿಸದಿದ್ದರೂ ಲೆಜೆಂಡ್ ಪಟ್ಟ ತನ್ನದಾಗಿಸಿಕೊಂಡಿರುವ ಪೆರಿ, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಯಾವುದೇ ಇರಲಿ ವಿಶ್ವ ಶ್ರೇಷ್ಠ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಾರೆ. ಎಲ್ಲಿಸ್ ಪೆರಿ, ತನ್ನ ವೃತ್ತಿ ಬದುಕಿನಲ್ಲಿ 6 ಟಿ20 ವಿಶ್ವಕಪ್, 2 ಏಕದಿನ ವಿಶ್ವಕಪ್ ಗೆದ್ದಿದ್ದಾರೆ. ಹೀಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳ ಸರಮಾಲೆಯನ್ನೇ ಸೃಷ್ಟಿಸಿರುವ ಪೆರಿ (Ellyse Perry Birthday) ಇಂದು (ನವೆಂಬರ್ 3) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇಂದು ಅವರು 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಹುಟ್ಟಿದ ದಿನಾಂಕ: 3 ನವೆಂಬರ್ 1990
ಹುಟ್ಟಿದ ಸ್ಥಳ: ವಹ್ರೂಂಗಾ, ಸಿಡ್ನಿ, ಆಸ್ಟ್ರೇಲಿಯಾ
ರಾಷ್ಟ್ರೀಯತೆ: ಆಸ್ಟ್ರೇಲಿಯನ್
ಶಾಲೆ: ಬೀಕ್ರಾಫ್ಟ್ ಪ್ರಾಥಮಿಕ ಶಾಲೆ
ಕಾಲೇಜು: ಪಿಂಬಲ್ ಲೇಡೀಸ್ ಕಾಲೇಜು
ಶಿಕ್ಷಣ: ಪದವಿ
ನಿವ್ವಳ ಮೌಲ್ಯ: $10 ಮಿಲಿಯನ್ (2023)
ಅಡ್ಡ ಹೆಸರು: ಪೆಜ್
ತಂದೆ: ಮಾರ್ಕ್ ಪೆರಿ
ತಾಯಿ: ಕ್ಯಾಥಿ ಪೆರ್ರಿ
ಸಹೋದರ: ಡೇಮಿಯನ್ ಪೆರ್ರಿ
ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು ಯಾವಾಗ?
ಅಂತಾರಾಷ್ಟ್ರೀಯ ಕ್ರಿಕೆಟ್ಗೆ 2007ರಲ್ಲಿ ಪದಾರ್ಪಣೆ ಮಾಡಿದರು. ಅಂದು ಜುಲೈ 22ರಂದು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಡೆಬ್ಯೂ ಮಾಡಿದರು. ಅವರು ಈವರೆಗೂ 147 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 2 ಶತಕ, 34 ಅರ್ಧಶತಕ ಸಹಿತ 3958 ರನ್ ಗಳಿಸಿದ್ದಾರೆ. ಅಲ್ಲದೆ, ಬೌಲಿಂಗ್ನಲ್ಲಿ 165 ವಿಕೆಟ್ ಕೂಡ ಕಿತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ 2008ರ ಫೆಬ್ರವರಿ 15ರಂದು ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ ಪೆರಿ, ಒಟ್ಟು 13 ಟೆಸ್ಟ್ ಆಡಿದ್ದಾರೆ. 2 ಶತಕ, 4 ಅರ್ಧಶತಕ ಸಹಿತ 928 ರನ್ ಸಿಡಿಸಿದ್ದಾರೆ. ಬೌಲಿಂಗ್ನಲ್ಲಿ 39 ವಿಕೆಟ್ ಉರುಳಿಸಿದ್ದಾರೆ.
ಅದೇ ವರ್ಷ ಇಂಗ್ಲೆಂಡ್ ವಿರುದ್ಧವೇ ಟಿ20 ಕ್ರಿಕೆಟ್ಗೂ ಪದಾರ್ಪಣೆ ಮಾಡಿದರು. 162 ಪಂದ್ಯಗಳಲ್ಲಿ 9 ಅರ್ಧಶತಕ ಸಹಿತ 2088 ರನ್ ಸಿಡಿಸಿದ್ದಾರೆ. ಇನ್ನು ಬೌಲಿಂಗ್ನಲ್ಲಿ 126 ವಿಕೆಟ್ ಕಿತ್ತಿದ್ದಾರೆ.
ಬಿಗ್ಬ್ಯಾಷ್ನಲ್ಲಿ 2000 ರನ್ಗಳ ಗಡಿ ತಲುಪಿದ ಪುರುಷ ಅಥವಾ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪೆರಿ ಪಾತ್ರರಾಗಿದ್ದಾರೆ. ಬಿಬಿಎಲ್ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆಯೂ ಆಕೆಯ ಹೆಸರಿನಲ್ಲಿದೆ. 86.33ರಲ್ಲಿ 777 ರನ್ ಗಳಿಸಿದರು. ಪ್ರಸ್ತುತ ಬಿಬಿಎಲ್ನಲ್ಲಿ 124 ಇನ್ನಿಂಗ್ಸ್ನಲ್ಲಿ 2 ಶತಕ, 30 ಅರ್ಧಶತಕ ಸಹಿತ 4430 ರನ್ ಬಾರಿಸಿದ್ದಾರೆ.
ಎಲ್ಲಿಸ್ ಪೆರಿ ಸಾಧನೆಗಳು
- ಫುಟ್ಬಾಲ್ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಗೋಲು
- ಏಕದಿನ ವಿಶ್ವಕಪ್ ಫೈನಲ್ನಲ್ಲಿ ಪಂದ್ಯಶ್ರೇಷ್ಠ
- 6 ಟಿ20 ವಿಶ್ವಕಪ್ಗಳ ಗೆಲುವು (2010, 2012, 2014, 2018, 2020, 2023)
- 2 ಏಕದಿನ ವಿಶ್ವಕಪ್ಗಳ ಗೆಲುವು (2013, 2022)
- ಡಬ್ಲ್ಯುಪಿಎಲ್ 2024
- 2 ಬಿಬಿಎಲ್ ಟ್ರೋಫಿ ಗೆಲುವು
- ಐದು ಪುಸ್ತಕಗಳ ಲೇಖಕಿಯೂ ಹೌದು
- ಆ್ಯಷಸ್ ಸರಣಿಯಲ್ಲಿ 4 ಬಾರಿ ಪಂದ್ಯಶ್ರೇಷ್ಠ
- ಬಿಬಿಎಲ್ ನಾಕ್ಔಟ್ನಲ್ಲಿ ಪಂದ್ಯಶ್ರೇಷ್ಠ
- ಡಬ್ಲ್ಯುಪಿಎಲ್ ನಾಕ್ಔಟ್ನಲ್ಲಿ ಪಂದ್ಯಶ್ರೇಷ್ಠ
- ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ಪರ ಆರೆಂಜ್ ಕ್ಯಾಪ್
ರಗ್ಬಿ ಆಟಗಾರನನ್ನು ಮದುವೆಯಾಗಿದ್ದ ಪೆರ್ರಿ
ಎಲ್ಲಿಸ್ ಪೆರಿ ಬಾಯ್ಫ್ರೆಂಡ್ ಯಾರು? ಹೀಗಂತ ಗೂಗಲ್ನಲ್ಲಿ ಸಿಕ್ಕಾಪಟ್ಟೆ ಸರ್ಚ್ ಮಾಡಲಾಗಿದೆ. ಇದಕ್ಕೆ ಉತ್ತರ ನೋಡಿದವರು ಅಚ್ಚರಿಗೆ ಒಳಗಾಗಿದ್ದಾರೆ. ಪೆರಿ ಅವರಿಗೆ 2015ರಲ್ಲಿ ವಿವಾಹವಾಗಿದೆ. ಆದರೆ ದುರಾದೃಷ್ಟವಶಾತ್ ಡಿವೋರ್ಸ್ ಕೂಡ ಆಗಿದೆ. ಈಕೆ ಖ್ಯಾತ ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಐದು ವರ್ಷಗಳ ನಂತರ ವಿಚ್ಛೇದನ ಪಡೆದರು.
ಎಲಿಸ್ ಪೆರಿ ಇನ್ನಷ್ಟು ಪ್ರಶಸ್ತಿಗಳು
ರಾಚೆಲ್ ಹೇಹೋ ಫ್ಲಿಂಟ್ ಪ್ರಶಸ್ತಿ: 2017, 2019, 2020
ಐಸಿಸಿ ಮಹಿಳಾ ಏಕದಿನ ವರ್ಷದ ಕ್ರಿಕೆಟರ್: 2019
ಐಸಿಸಿ ಮಹಿಳಾ ಏಕದಿನ ದಶಕದ ಕ್ರಿಕೆಟರ್: 2011-2020
ಐಸಿಸಿ ಮಹಿಳಾ ಟಿ20ಐ ದಶಕದ ಕ್ರಿಕೆಟರ್: 2011-2020
ವಿಸ್ಡನ್ ವಿಶ್ವದ ಪ್ರಮುಖ ಮಹಿಳಾ ಕ್ರಿಕೆಟರ್: 2016, 2019
ಐಸಿಸಿ ಮಹಿಳಾ ವಿಶ್ವ ಟಿ20 ಆಟಗಾರ್ತಿ: 2010
ಮಹಿಳಾ ಆಶಸ್ ಆಟಗಾರ್ತಿ: 2013-14, 2015, 2019
ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ ವಿಜೇತರು: 2016, 2018, 2020
ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಆಟಗಾರ್ತಿ: 2015-16
ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್‌ನ ಆಟಗಾರ್ತಿ: 2008-09
ಬೆಲಿಂಡಾ ಕ್ಲಾರ್ಕ್ ಪದಕ ವಿಜೇತರು: 2015-16, 2017-18, 2018-19
ಕ್ರಿಕೆಟ್ ಎನ್ಎಸ್ಡಬ್ಲ್ಯು ರೈಸಿಂಗ್ ಸ್ಟಾರ್: 2007-08
ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ ಸರಣಿ ಶ್ರೇಷ್ಠ: 2018-19
ಸಿಡ್ನಿ ಸಿಕ್ಸರ್ಸ್ ಆಟಗಾರ್ತಿ: 2017-18, 2018-19
ಕ್ರೀಡಾ ಎನ್ಎಸ್ಡಬ್ಲ್ಯು ವರ್ಷದ ಅಥ್ಲೀಟ್: 2019
ಆಸ್ಟ್ರೇಲಿಯಾ ಪೋಸ್ಟ್ ಲೆಜೆಂಡ್ಸ್ ಆಫ್ ಕ್ರಿಕೆಟ್: 2021