ಕನ್ನಡ ಸುದ್ದಿ  /  Cricket  /  Ellyse Perry Cheering And Supporting Rcb Mens Team To Win Ipl Trophy Royal Challengers Bengaluru E Sala Cup Namdu Prs

ಡಬಲ್ ಸಂಭ್ರಮಕ್ಕಿದೆ ಅವಕಾಶ; ‘ಈ ಸಲ ಕಪ್ ನಮ್ದು’ ಎಂದು ಆರ್​​ಸಿಬಿ ಪುರುಷರ ತಂಡಕ್ಕೆ ಚಿಯರ್​ ಮಾಡಿದ ಎಲ್ಲಿಸ್ ಪೆರ್ರಿ

Ellyse Perry : ಐಪಿಎಲ್​ನಲ್ಲಿ ಆರ್​​ಸಿಬಿ ಪುರುಷರ ತಂಡ ಟ್ರೋಫಿ ಗೆಲ್ಲಲಿ ಎಂದು ಮಹಿಳಾ ತಂಡದ ಆಟಗಾರ್ತಿ ಎಲ್ಲಿಸ್ ಪೆರ್ರಿ ಶುಭಕೋರಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

‘ಈ ಸಲ ಕಪ್ ನಮ್ದು’ ಎಂದು ಆರ್​​ಸಿಬಿ ಪುರುಷರ ತಂಡಕ್ಕೆ ಚಿಯರ್​ ಮಾಡಿದ ಎಲ್ಲಿಸ್ ಪೆರ್ರಿ
‘ಈ ಸಲ ಕಪ್ ನಮ್ದು’ ಎಂದು ಆರ್​​ಸಿಬಿ ಪುರುಷರ ತಂಡಕ್ಕೆ ಚಿಯರ್​ ಮಾಡಿದ ಎಲ್ಲಿಸ್ ಪೆರ್ರಿ

2024ರ ವುಮೆನ್ಸ್ ಪ್ರೀಮಿಯರ್​ ಲೀಗ್​​​ನಲ್ಲಿ (WPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ (Royal Challengers Bengaluru) ಟ್ರೋಫಿ ಗೆಲ್ಲುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸು ನನಸು ಮಾಡಿದೆ. 16 ವರ್ಷಗಳ ಟ್ರೋಫಿ ಬರ ನೀಗಿಸುವಲ್ಲಿ ಸ್ಮೃತಿ ಮಂಧಾನ (Smriti Mandhana) ಪಡೆ ಯಶಸ್ವಿಯಾಗಿದೆ. ಡಬ್ಲ್ಯುಪಿಎಲ್​​ನ 2ನೇ ಸೀಸನ್​ನಲ್ಲೇ ಆರ್​ಸಿಬಿ ಚಾಂಪಿಯನ್ ಆದರೂ 16 ವರ್ಷಗಳ ಐಪಿಎಲ್​​ನಲ್ಲಿ ಇನ್ನೂ ಟ್ರೋಫಿಗೆ ಗೆಲ್ಲದಿರುವುದು ಬೇಸರದ ಸಂಗತಿ.

ಡಬ್ಲ್ಯುಪಿಎಲ್​ನಲ್ಲಿ ಪ್ರಶಸ್ತಿ ಗೆದ್ದಿರುವ ಆರ್​​ಸಿಬಿ ಐಪಿಎಲ್​ನಲ್ಲೂ ಟ್ರೋಫಿ ಗೆದ್ದು 2024ರ ವರ್ಷವನ್ನು ಅವಿಸ್ಮರಣೀಯಗೊಳಿಸಲು ಸಜ್ಜಾಗಿದೆ. ಆ ಮೂಲಕ ಈಗಿರುವ ಸಂಭ್ರಮ ದುಪ್ಪಟ್ಟುಗೊಳಿಸಲು ಸಿದ್ಧವಾಗಿದೆ. ಒಂದೇ ವರ್ಷ ಎರಡು ಕಪ್​​ ಗೆಲ್ಲಲು ಪಣತೊಟ್ಟಿದೆ. ಇದರ ನಡುವೆ ಐಪಿಎಲ್​ನಲ್ಲಿ ಆರ್​​ಸಿಬಿ ಪುರುಷರ ತಂಡ ಟ್ರೋಫಿ ಗೆಲ್ಲಲಿ ಎಂದು ಮಹಿಳಾ ತಂಡದ ಆಟಗಾರ್ತಿ ಎಲ್ಲಿಸ್ ಪೆರ್ರಿ ಶುಭಕೋರಿದ್ದಾರೆ.

ಚಿಯರ್ ಮಾಡಿದ ಎಲ್ಲಿಸ್ ಪೆರ್ರಿ

ಡಬ್ಲ್ಯುಪಿಎಲ್ ಬಳಿಕ ಆಸ್ಟ್ರೇಲಿಯಾ ತಂಡದ ಪರ ಕಣಕ್ಕಿಳಿದಿರುವ ಪೆರ್ರಿ ಅವರು ಸ್ಟಾರ್​ ಸ್ಪೋರ್ಟ್ಸ್​ ಜೊತೆ ಮಾತನಾಡಿದ್ದು, ಈ ಸಲ ಕಪ್ ನಮ್ದು ಎಂದು ಹೇಳಿದ್ದಾರೆ. ಐಪಿಎಲ್​​ನಲ್ಲಿ ಪುರುಷರ ತಂಡದ ಇತಿಹಾಸವನ್ನೊಮ್ಮೆ ನೋಡಿ, ಹಲವು ಬಾರಿ ಹತ್ತಿರಕ್ಕೆ ಬಂದು ಸೋತಿದ್ದಾರೆ. ಅವರು ಟ್ರೋಫಿ ಗೆಲ್ಲಲು ನಿಜಕ್ಕೂ ಅರ್ಹರು. ಖಂಡಿತವಾಗಿಯೂ ಐಪಿಎಲ್​-2024 ಟ್ರೋಫಿ ಗೆಲ್ಲಲು ಆರ್​ಸಿಬಿ ಪುರುಷರ ತಂಡವನ್ನು ಹುರಿದುಂಬಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ. ಆರ್​ಸಿಬಿ ಮತ್ತು ಅಭಿಮಾನಿಗಳು ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಎರಡೂ ಪ್ರಶಸ್ತಿಗಳನ್ನು ಏಕಕಾಲದಲ್ಲಿ ಗೆಲ್ಲಲು ಉತ್ತಮ ಅವಕಾಶ ಸಿಕ್ಕಿದೆ. ಈ ಸಲ ಕಪ್ ನಮ್ದು ಎಂದು ಹೇಳಿದ್ದಾರೆ.

ಖುಷಿಯನ್ನು ಡಬಲ್ ಮಾಡುತ್ತೇವೆ ಎಂದಿದ್ದ ವಿರಾಟ್ ಕೊಹ್ಲಿ

ಡಬ್ಲ್ಯುಪಿಎಲ್ ಗೆದ್ದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ, ಈ ಬಾರಿ ಪ್ರಶಸ್ತಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆ ಮೂಲಕ ಡಬಲ್ ಧಮಾಕ ನೀಡುವ ಸೂಚನೆ ನೀಡಿದ್ದರು. ಆರ್​ಸಿಬಿ ಅನ್​ಬಾಕ್ಸ್ ಈವೆಂಟ್​ನಲ್ಲಿ ಮಾತನಾಡಿದ್ದ​ ಕೊಹ್ಲಿ, ಆರ್​ಸಿಬಿಗೆ ಟ್ರೋಫಿ ಜಯಿಸುವುದು ನನ್ನ ದೊಡ್ಡ ಕಸನು. ಕಪ್ ಗೆದ್ದ ಬಳಿಕ ಸಿಗುವ ಅದರ ಅನುಭವ ಹೇಗಿರಲಿದೆ ಎಂಬುದನ್ನು ಅನುಭವಿಸುವ ಆಸೆ ಇದೆ. 2024ರ ಐಪಿಎಲ್​ನಿಂದ ಅದು ಡಬಲ್ ಆಗುವ ವಿಶ್ವಾಸ ಇದೆ ಎಂದಿದ್ದರು.

ಸಿಎಸ್​ಕೆ vs ಆರ್​ಸಿಬಿ ಪಂದ್ಯ

ಮಾರ್ಚ್​ 22ರಿಂದ ಐಪಿಎಲ್​ ಜಾತ್ರೆಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಹೈವೋಲ್ಟೇಜ್​ ಕದನಕ್ಕೆ ಚೆನ್ನೈನ ಎಂಎ ಚಿದಂಬರಂ ಅಥವಾ ಚೆಪಾಕ್ ಕ್ರಿಕೆಟ್​ ಮೈದಾನವು ಆತಿಥ್ಯ ವಹಿಸಲಿದೆ. ಈಗಾಗಲೇ ಉಭಯ ತಂಡಗಳು ಭರ್ಜರಿ ಸಮರಾಭ್ಯಸ ನಡೆಸಿವೆ.

ಡಬ್ಲ್ಯುಪಿಎಲ್ ಫೈನಲ್​​​ ಪಂದ್ಯದ ಚಿತ್ರಣ

ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್​ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿತು. ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ 8 ವಿಕೆಟ್​​ಗಳ ಗೆಲುವು ದಾಖಲಿಸಿತು. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, 18.3 ಓವರ್​​ಗಳಲ್ಲಿ 113 ರನ್​ಗಳಿಗೆ ಆಲೌಟ್​ ಆಯಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 19.3 ಓವರ್​ಗಳಲ್ಲಿ ಗೆದ್ದು ಬೀಗಿತು.

ಎಲ್ಲಿಸ್ ಪೆರ್ರಿ ಪ್ರದರ್ಶನ

ಆರ್​ಸಿಬಿ ಟ್ರೋಫಿ ಗೆಲ್ಲು ಪ್ರಮುಖ ಪಾತ್ರವಹಿಸಿದ್ದು ಆಸ್ಟ್ರೇಲಿಯಾದ ವಿಶ್ವ ಶ್ರೇಷ್ಠ ಆಲ್​ರೌಂಡರ್​ ಎಲ್ಲಿಸ್ ಪೆರ್ರಿ. ಬ್ಯಾಟಿಂಗ್, ಬೌಲಿಂಗ್​ ಮತ್ತು ಫೀಲ್ಡಿಂಗ್​ನಲ್ಲಿ ಅಸಾಧಾರ ಪ್ರದರ್ಶನ ತೋರಿದರು. 9 ಪಂದ್ಯಗಳಲ್ಲಿ 69.40ರ ಬ್ಯಾಟಿಂಗ್​ ಸರಾಸರಿಯಲ್ಲಿ 347 ರನ್ ಗಳಿಸಿದ್ದಾರೆ. ಅವರ ಈ ಆಟದಲ್ಲಿ 2 ಅರ್ಧಶತಕಗಳು ಸೇರಿವೆ. ಮತ್ತೊಂದೆಡೆ ಬೌಲಿಂಗ್​ನಲ್ಲಿ 7 ವಿಕೆಟ್ ಪಡೆದಿದ್ದಾರೆ. ಒಂದೇ ಪಂದ್ಯದಲ್ಲಿ 6 ವಿಕೆಟ್​ ಪಡೆದಿದ್ದು ವಿಶೇಷ.

IPL_Entry_Point