ಇಂಗ್ಲೆಂಡ್ ಸ್ಟಾರ್ ಆಟಗಾರನಿಗೆ ಗಾಯ; 3ನೇ ಏಕದಿನದ ಜೊತೆಗೆ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯ, ಆರ್​ಸಿಬಿಗೂ ಹೆಚ್ಚಾಯ್ತು ಚಿಂತೆ!
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ಸ್ಟಾರ್ ಆಟಗಾರನಿಗೆ ಗಾಯ; 3ನೇ ಏಕದಿನದ ಜೊತೆಗೆ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯ, ಆರ್​ಸಿಬಿಗೂ ಹೆಚ್ಚಾಯ್ತು ಚಿಂತೆ!

ಇಂಗ್ಲೆಂಡ್ ಸ್ಟಾರ್ ಆಟಗಾರನಿಗೆ ಗಾಯ; 3ನೇ ಏಕದಿನದ ಜೊತೆಗೆ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯ, ಆರ್​ಸಿಬಿಗೂ ಹೆಚ್ಚಾಯ್ತು ಚಿಂತೆ!

Jacob Bethell: ಇಂಗ್ಲೆಂಡ್ ಸ್ಟಾರ್ ಆಟಗಾರ ಜೇಕಬ್ ಬೆಥಲ್ ಗಾಯಗೊಂಡಿದ್ದು, 3ನೇ ಏಕದಿನದಿಂದ ಹೊರಬಿದ್ದಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯರಾಗುವ ನಿರೀಕ್ಷೆ ಇದೆ. ಆರ್​ಸಿಬಿಗೂ ಚಿಂತೆ ಹೆಚ್ಚಾಗಿದೆ.

ಇಂಗ್ಲೆಂಡ್ ಸ್ಟಾರ್ ಆಟಗಾರನಿಗೆ ಗಾಯ; 3ನೇ ಏಕದಿನದ ಜೊತೆಗೆ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯ, ಆರ್​ಸಿಬಿಗೂ ಹೆಚ್ಚಾಯ್ತು ಚಿಂತೆ!
ಇಂಗ್ಲೆಂಡ್ ಸ್ಟಾರ್ ಆಟಗಾರನಿಗೆ ಗಾಯ; 3ನೇ ಏಕದಿನದ ಜೊತೆಗೆ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯ, ಆರ್​ಸಿಬಿಗೂ ಹೆಚ್ಚಾಯ್ತು ಚಿಂತೆ! (REUTERS)

ಟೀಮ್ ಇಂಡಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ (India vs England) ತೀವ್ರ ಹೊಡೆತ ಬಿದ್ದಿದೆ. ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿ 2ನೇ ಪಂದ್ಯ ತಪ್ಪಿಸಿಕೊಂಡಿದ್ದ ಆಲ್​ರೌಂಡರ್ ಜೇಕಬ್ ಬೆಥೆಲ್ ಅವರು ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ದೀರ್ಘಕಾಲ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯರಾಗಲಿರುವ ಬೆಥೆಲ್, ತನ್ನ ಚೊಚ್ಚಲ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವುದೂ ಬಹುತೇಕ ಅನುಮಾನ ಎಂದು ಹೇಳಲಾಗಿದೆ. ಏಕದಿನ ಸರಣಿಯ ಮೊದಲ ಪಂದ್ಯದ ನಂತರ ಬೆಥೆಲ್ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಪಿಎ ವರದಿಯನ್ನು ಸ್ಕೈ ಸ್ಪೋರ್ಟ್ಸ್ ಉಲ್ಲೇಖಿಸಿದೆ.

ಸ್ಕ್ಯಾನ್​ ಮಾಡಿದ ವರದಿ ಬಿಡುಗಡೆಯಾದ ಬಳಿಕ ಎಡಗೈ ಆಟಗಾರ ನಾಲ್ಕರಿಂದ ಆರು ವಾರಗಳ ಕಾಲ ಆಟದಿಂದ ಹೊರಗುಳಿಯುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಬದಲಿಯಾಗಿ ಇಂಟರ್​ನ್ಯಾಷನಲ್​ ಲೀಗ್​ ಟಿ20ಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಟಾಮ್ ಬ್ಯಾಂಟನ್​ 3ನೇ ಏಕದಿನಕ್ಕೆ ಇಂಗ್ಲೆಂಡ್ ತಂಡ ಸೇರಿದ್ದಾರೆ. ಎಂಐ ಎಮಿರೇಟ್ಸ್ ಪರ ಅವರು 2 ಶತಕ ಬಾರಿಸಿ ಮಿಂಚಿದ್ದರು. ಗಾಯದ ಸಮಸ್ಯೆಗೆ (ಸ್ನಾಯು ಸೆಳೆತ) ಸಿಲುಕಿದ್ದ ವಿಕೆಟ್ ಕೀಪರ್ ಜೇಮೀ ಸ್ಮಿತ್ 3ನೇ ಏಕದಿನ ಪಂದ್ಯಕ್ಕೆ ಫಿಟ್ ಆಗುವ ನಿರೀಕ್ಷೆಯಿದೆ.

ಬೆಥೆಲ್ ಆರ್​​ಸಿಬಿಗೂ ಅಲಭ್ಯ?

ಚಾಂಪಿಯನ್ಸ್ ಟ್ರೋಫಿಗೆ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿರುವ ಬೆಥೆಲ್ ಮಹತ್ವದ ಟೂರ್ನಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ನಾಯಕ ಜೋಸ್ ಬಟ್ಲರ್​ ಕೂಡ ಖಚಿತಪಡಿಸಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆರಂಭಿಕ ಹಂತದ ಒಂದೆರಡು ಪಂದ್ಯಗಳನ್ನು ಸಹ ಕಳೆದುಕೊಳ್ಳುವ ಸಾಧ್ಯತೆ ಇದೆ.

ನಿಜ ಹೇಳಬೇಕೆಂದರೆ, ಚಾಂಪಿಯನ್ಸ್ ಟ್ರೋಫಿಯಿಂದ ಬೆಥೆಲ್ ಅವರನ್ನು ಹೊರಗಿಡಲಾಗುತ್ತದೆ ಎಂದು ನನಗೆ ಖಚಿತವಾಗಿದೆ ಎಂದು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಭಾನುವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಸೋಲಿನ ನಂತರ ಸುದ್ದಿಗಾರರಿಗೆ ತಿಳಿಸಿದರು. ಇದು ಅವರಿಗೆ ನಿಜವಾಗಿಯೂ ನಿರಾಶಾದಾಯಕವಾಗಿದೆ. ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡಿದ್ದರು ಎಂದು ಬಟ್ಲರ್​ ಹೇಳಿದ್ದಾರೆ.

ಜೋಶ್ ಹೇಜಲ್​​ವುಡ್ ಕೂಡ ಅಲಭ್ಯ?

ಆರ್​ಸಿಬಿ ವೇಗಿ ಜೋಶ್ ಹೇಜಲ್​ವುಡ್ ಕೂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾದ ವೇಗಿ ಹೇಜಲ್​ವುಡ್, ಕಣಕಾಲಿನ ಹಿ೦ಭಾಗದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಫಿಟ್​ನೆಸ್ ಸಮಸ್ಯೆಯ ಕಾರಣ ಐಸಿಸಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಐಪಿಎಲ್​​ ಆರಂಭಕ್ಕೆ ಒಂದೂವರೆ ತಿಂಗಳು ಇರುವ ಕಾರಣ ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಆರ್​ಸಿಬಿ ಪರ ಕಣಕ್ಕಿಳಿಯಲಿದ್ದಾರೆ.

ಕಟಕ್​ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 4 ವಿಕೆಟ್​ಗಳ ಅಂತರದಿಂದ ಗೆದ್ದು ಬೀಗಿತು. ಇದರೊಂದಿಗೆ ರೋಹಿತ್ ಪಡೆ, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಫೆಬ್ರವರಿ 19ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಫೆಬ್ರವರಿ 20ರಿಂದ ಭಾರತ ತಂಡ ತನ್ನ ಅಭಿಯಾನ ಆರಂಭಿಸಲಿದೆ.

Whats_app_banner