ಹೀಗಾಗುತ್ತೆ ಎಂದು ಮೊದಲೇ ಗೊತ್ತಿತ್ತು; ವೀಸಾ ವಿಳಂಬ ಕುರಿತು ಮೌನ ಮುರಿದ ಸ್ಪಿನ್ನರ್ ಶೋಯೆಬ್ ಬಶೀರ್
Shoaib Bashir: ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಶೋಯೆಬ್ ಬಶೀರ್ ಪದಾರ್ಪಣೆ ಮಾಡಿದ್ದಾರೆ. ಪಂದ್ಯದ ಮೊದಲ ದಿನವೇ ಉತ್ತಮ ಪ್ರದರ್ಶನ ನೀಡಿದ ಅವರು, 28 ಓವರ್‌ಗಳಲ್ಲಿ 100 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರು.
ವೀಸಾ ವಿಳಂಬದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ 20 ವರ್ಷದ ಆಟಗಾರ ಶೋಯೆಬ್ ಬಶೀರ್‌ಗೆ (Shoaib Bashir) ಭಾರತ ಪ್ರವಾಸಕ್ಕೆ ಕಷ್ಟವಾಯ್ತು. ತಂಡದ ಇತರ ಆಟಗಾರರು ಭಾರತ ತಲುಪಿದರೂ, ಬಶೀರ್‌ಗೆ ವೀಸಾ ದೊರಕಿರಲಿಲ್ಲ. ಕೊನೆಗೂ, ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಂದಿಳಿದ ಬಶೀರ್, ಪದಾರ್ಪಣೆ ಪಂದ್ಯದಲ್ಲೇ ರೋಹಿತ್ ಶರ್ಮಾ ವಿಕೆಟ್ ಅಬ್ಬರಿಸಿದರು.
ವೀಸಾ ವಿಳಂಬದಿಂದಾಗಿ ಪಾಕಿಸ್ತಾನ ಮೂಲದ ಬಶೀರ್‌ಗೆ ಅಬುಧಾಬಿಯಿಂದ ಹೈದರಾಬಾದ್‌ಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು ಆಡಲಿಲ್ಲ. ಆ ಬಳಿಕ ಇದೀಗ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಬಶೀರ್ ಪದಾರ್ಪಣೆ ಮಾಡಿದ್ದಾರೆ. ಜನವರಿ 02ರ ಶುಕ್ರವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಉತ್ತಮ ಪ್ರದರ್ಶನ ನೀಡಿದ ಅವರು, 28 ಓವರ್‌ಗಳಲ್ಲಿ 100 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರು.
ಇದನ್ನೂ ಓದಿ | ವರ್ಷ 22, ಸಿಡಿಸಿದ್ದು 209; ಚಿಕ್ಕ ವಯಸ್ಸಲ್ಲೇ ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ದಿನದಾಟದ ಬಳಿಕ ವೀಸಾ ವಿಳಂಬದ ಕುರಿತು ಬಶೀರ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಪದಾರ್ಪಣೆ ಕುರಿತು ಹೇಳಿಕೊಂಡಿದ್ದಾರೆ. “ಇದು ಬಹಳ ವಿಶೇಷ ದಿನವಾಗಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ನಾನು ಅನುಭವಿಸಿದ ಎಲ್ಲದಕ್ಕ್ಕಿಂತಲೂ ಇದು ಇನ್ನಷ್ಟು ವಿಶೇಷವಾಗಿದೆ. ಅದರಲ್ಲೂ ರೋಹಿತ್ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ಮೊದಲ ವಿಕೆಟ್ ಪಡೆಯುವುದು ನಿಜಕ್ಕೂ ನಂಬಲಾಗದಂತಿದೆ. ಅವರು ಗುಣಮಟ್ಟದ ಆಟಗಾರ. ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅಲ್ಲದೆ ಸ್ಪಿನ್ ಬೌಲಿಂಗ್ ವಿರುದ್ಧ ಶ್ರೇಷ್ಠ ಆಟಗಾರ” ಎಂದು ಬಶೀರ್ ಹೇಳಿದ್ದಾರೆ.
ಇದನ್ನೂ ಓದಿ | ಇಂಗ್ಲೆಂಡ್ ಎದುರಿನ 2ನೇ ಟೆಸ್ಟ್ನಲ್ಲೂ ರೋಹಿತ್ ಶರ್ಮಾ ಕಳಪೆ ಬ್ಯಾಟಿಂಗ್; ಸೋಮಾರಿತನ ಎಂದ ಕೆವಿನ್ ಪೀಟರ್ಸನ್
ಬಶೀರ್ ಭಾರತ ವಿಮಾನ ಹತ್ತುವ ಮುನ್ನ ವೀಸಾ ಪಡೆಯಲು ಅಬುಧಾಬಿಯಿಂದ ಇಂಗ್ಲೆಂಡ್‌ಗೆ ಹಿಂತಿರುಗಬೇಕಾಗಿತ್ತು. ಆದರೆ, ಬಶೀರ್‌ಗೆ ತಾನು ವೀಸಾ ಪಡೆಯುವ ಖಚಿತವಾಗಿತ್ತಂತೆ.
ವೀಸಾ ಸಿಗುವ ಭರವಸೆ ಇತ್ತು
“ನನಗೆ ಯಾವುದೇ ಸಂದೇಹವಿರಲಿಲ್ಲ. ನಾನು ವೀಸಾ ಪಡೆಯುತ್ತೇನೆ ಎಂದು ನನಗೆ ಮೊದಲೇ ತಿಳಿದಿತ್ತು. ನಡುವೆ ಸ್ವಲ್ಪ ಗೊಂದಲವಾಯ್ತು. ಆದರೆ ನಾನು ಈಗ ಭಾರತದಲ್ಲಿದ್ದೇನೆ. ನಾನು ಪದಾರ್ಪಣೆಯನ್ನೂ ಮಾಡಿದ್ದೇನೆ. ನನಗೆ ಅಷ್ಟೇ ಮುಖ್ಯ. ಈ ಸಮಸ್ಯೆ ಬೇಗನೆ ಬಗೆಹರಿಯುತ್ತದೆ ಎಂದು ನನಗೆ ತಿಳಿದಿತ್ತು. ಆದ್ದರಿಂದ ಇಸಿಬಿ ಮತ್ತು ಬಿಸಿಸಿಐಗೆ ಧನ್ಯವಾದ ಸಲ್ಲಿಸುತ್ತೇನೆ,” ಎಂದು ಬಶೀರ್ ಹೇಳಿದ್ದಾರೆ.
ಇದನ್ನೂ ಓದಿ | ಶೋಯೆಬ್ ಬಶೀರ್ ಯಾರು; ಭಾರತ ಪ್ರವಾಸಕ್ಕೆ ವೀಸಾ ಸಮಸ್ಯೆ ಎದುರಿಸಿದ ಇಂಗ್ಲೆಂಡ್ ಸ್ಪಿನ್ನರ್ ಬಗ್ಗೆ ಇಲ್ಲಿದೆ ಮಾಹಿತಿ
20 ವರ್ಷದ ಬಶೀರ್ ಕೌಶಲ್ಯದ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಭಾರಿ ನಂಬಿಕೆ ಇಟ್ಟಿದೆ. ಬಶೀರ್ ಇಂಗ್ಲೆಂಡ್ನಲ್ಲೇ ಜನಿಸಿದರೂ ಅವರ ಕುಟುಂಬ ಪಾಕಿಸ್ತಾನ ಮೂಲದ್ದು. ಹಾಗಾಗಿ ಪಾಕಿಸ್ತಾನ ಮೂಲದ ಆಟಗಾರ ಎಂಬ ಕಾರಣಕ್ಕೆ ಬಶೀರ್‌ಗೆ ವೀಸಾ ನೀಡಿರಲಿಲ್ಲ. 2022-23ರಲ್ಲಿ ವೃತ್ತಿಪರ ಕ್ರಿಕೆಟ್ ಜೀವನ ಆರಂಭಿಸಿದ ಬಶೀರ್, ಅಕ್ಟೋಬರ್ 2022 ರಲ್ಲಿ ಸೋಮರ್‌ಸೆಟ್ ತಂಡಕ್ಕೆ ಸಹಿ ಹಾಕಿದರು. ಸೋಮರ್‌ಸೆಟ್ ತಂಡದ ಪರ ಮೊದಲ ಋತುವಿನಲ್ಲಿ ಬಶೀರ್ 6 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ, 10 ವಿಕೆಟ್ ಪಡೆದಿದ್ದಾರೆ. 7 ಲಿಸ್ಟ್-ಎ ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದರು. ಐದು ಟಿ20 ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantime.com)