ಶತಕ ಸಿಡಿಸಿದ್ದು ಕೊಹ್ಲಿಯೇ ಆದರೂ ಹೃದಯ ಗೆದ್ದಿದ್ದು ಕನ್ನಡಿಗ ರಾಹುಲ್; ಇದರ ಮಧ್ಯೆ ಟ್ರೋಲ್ ಆದ ಹಾರ್ದಿಕ್
Virat Kohli - Hardik Pandya: ವಿರಾಟ್ ಕೊಹ್ಲಿ ಶತಕಕ್ಕೆ ನೆರವಾದ ಕೆಎಲ್ ರಾಹುಲ್ ನಡೆಯನ್ನು ಕೊಂಡಾಡಿದ ಅಭಿಮಾನಿಗಳು, ಹಾರ್ದಿಕ್ ಪಾಂಡ್ಯ ವಿರುದ್ಧ ಗರಂ ಆಗಿದ್ದಾರೆ. ನೀವು ರಾಹುಲ್ರನ್ನು ನೋಡಿ ಬುದ್ದಿ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಬಾಂಗ್ಲಾದೇಶ ವಿರುದ್ಧದ (India vs Bangladesh) ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli), ಶತಕ ಸಿಡಿಸಲು ನೆರವಾದ ಕನ್ನಡಿಗ ಕೆಎಲ್ ರಾಹುಲ್ (KL Rahul) ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದರಲ್ಲೂ ಕಿಂಗ್ ಕೊಹ್ಲಿ ಅಭಿಮಾನಿಗಳಂತೂ ರಾಹುಲ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಹುಲ್ರನ್ನು ಹೊಗಳುತ್ತಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನ (Hardik Pandya) ತರಾಟೆಗೆ ತೆಗೆದುಕೊಂಡಿದ್ದಾರೆ. ಫುಲ್ ಟ್ರೋಲ್ ಮಾಡುತ್ತಿದ್ದಾರೆ. ರಾಹುಲ್ರನ್ನು ನೋಡಿ ಬುದ್ದಿ ಕಲಿಯಿರಿ ಎಂದು ಕಿಡಿಕಾರಿದ್ದಾರೆ. ಇನ್ನು ಕೊಹ್ಲಿ ಶತಕ ಸಿಡಿಸಲು ತಾನು ಒಪ್ಪಿಸಿದ್ದೇಗೆ ಎಂದು ಕೆಎಲ್ ರಾಹುಲ್ ಪಂದ್ಯದ ಬಳಿಕ ಬಹಿರಂಗಪಡಿಸಿದ್ದಾರೆ.
41.3ನೇ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ 48ನೇ ಏಕದಿನ ಶತಕ ದಾಖಲಿಸಿದರು. ಕೊಹ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 97 ಎಸೆತಗಳಲ್ಲಿ ಅಜೇಯ 103 ರನ್ ಸಿಡಿಸಿದರು. ಆದರೆ ಕೊಹ್ಲಿ ಶತಕ ಸಿಡಿಸಲು ಇನ್ನೂ 20 ರನ್ ಅಗತ್ಯ ಇದ್ದಾಗ ರಾಹುಲ್ ಒಂದು ರನ್, ಬೌಂಡರಿ ಸಿಡಿಸಿದರೂ ಕೊಹ್ಲಿಗೆ ಶತಕ ಕೈ ತಪ್ಪುತ್ತದೆ ಎಂಬ ಕಾರಣಕ್ಕೆ ರಾಹುಲ್ ಒಂದು ರನ್ ಸಹ ಓಡಲಿಲ್ಲ.
ಒಂದೂ ರನ್ ಗಳಿಸದ ರಾಹುಲ್ ಶತಕ ಪೂರೈಸುವಂತೆ ಕೊಹ್ಲಿಗೆ ಹೇಳಿದ್ದರು. ಆದರೆ ಕೊಹ್ಲಿ ಇದಕ್ಕೆ ಒಪ್ಪಿರಲಿಲ್ಲ. ಈ ಹಂತದಲ್ಲಿ ಕೊಹ್ಲಿಯನ್ನು ಹೇಗೆ ಒಪ್ಪಿಸಲಾಯಿತು ಎಂಬುದನ್ನು ರಾಹುಲ್ ವಿವರಿಸಿದ್ದಾರೆ. ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸಂದರ್ಭದಲ್ಲಿ ಗುಟ್ಟು ಬಹಿರಂಗಪಡಿಸಿದ್ದಾರೆ.
ವೈಯಕ್ತಿಕ ದಾಖಲೆ ಬೇಡ ಎಂದಿದ್ದ ಕೊಹ್ಲಿ
ಈ ಬಗ್ಗೆ ಮಾತನಾಡಿದ ರಾಹುಲ್, ನಾನು ಸಿಂಗಲ್ ತೆಗೆದುಕೊಳ್ಳುವುದಿಲ್ಲ. ನಾನು ಸಿಂಗಲ್ ತೆಗೆದುಕೊಳ್ಳುವುದು ಬೇಡವೆಂದು ಹೇಳಿದೆ. ಆದರೆ ವಿರಾಟ್ ಇದಕ್ಕೆ ಸಹಮತ ನೀಡಲಿಲ್ಲ. ನೀನು ಸಿಂಗಲ್ ಪಡೆಯದಿದ್ದರೆ, ಜನರು ನನ್ನು ವೈಯಕ್ತಿಕ ದಾಖಲೆಗೆ ಆಡುತ್ತಿದ್ದಾರೆಂದು ಜನರು ತಿಳಿಯುತ್ತಾರೆ ಎಂದು ವಿರಾಟ್ ಹೇಳಿದ್ದರು.
ಆದರೆ ಪಂದ್ಯ ಹೇಗಿದ್ದರೂ ಸುಲಭವಾಗಿ ಪಂದ್ಯವನ್ನು ಸುಲಭವಾಗಿ ಗೆದ್ದುಕೊಳ್ಳುತ್ತೇವೆ. ಹೀಗಾಗಿ ನೀವು ಶತಕ ಪೂರೈಸಲೇಬೇಕು ಎಂದು ಹೇಳಿದ್ದೆ. ಆದರೆ ಕೊಹ್ಲಿ ಒಲ್ಲದ ಮನಸ್ಸಿನಿಂದ ಒಪ್ಪಿದ್ದರು. ಕೊನೆಗೆ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು ಎಂದು ಕನ್ನಡಿಗ ರಾಹುಲ್, ಶತಕದ ಹಿಂದಿರುವ ಗುಟ್ಟನ್ನು ಬಹಿರಂಗಪಡಿಸಿದರು.
ಹಾರ್ದಿಕ್ ವಿರುದ್ಧ ಗರಂ
ಕೆಎಲ್ ರಾಹುಲ್ ನಡೆಯನ್ನು ಕೊಂಡಾಡಿದ ಅಭಿಮಾನಿಗಳು, ಹಾರ್ದಿಕ್ ಪಾಂಡ್ಯ ವಿರುದ್ಧ ಗರಂ ಆದರು. ನೀವು ರಾಹುಲ್ರನ್ನು ನೋಡಿ ಬುದ್ದಿ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ 49 ರನ್ ಗಳಿಸಿದ್ದ ತಿಲಕ್ ವರ್ಮಾಗೆ ಅರ್ಧಶತಕ ತಪ್ಪಿಸಿದ್ದರು. ಓವರ್ಗಳಿದ್ದರೂ, ಸಿಕ್ಸರ್ ಬಾರಿಸಿ ಅರ್ಧಶತಕ ತಪ್ಪಿಸಿದ್ದರು ಹಾರ್ದಿಕ್. ಮತ್ತು ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೆಎಲ್ ರಾಹುಲ್ಗೆ ಶತಕ ತಪ್ಪಿಸಿದ್ದರು.
ರಾಹುಲ್ ಶತಕದ ಸಮೀಪ ಬಂದಿದ್ದರೂ ಅದಕ್ಕೂ ಮೊದಲು ಹಾರ್ದಿಕ್ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆಗ ಪಾಂಡ್ಯ ಸ್ವಾರ್ಥದ ಆಟಗಾರ ಎಂದು ನೆಟಿಜನ್ಸ್ ಟ್ರೋಲ್ ಮಾಡಿದ್ದರು. ಇದೀಗ ಕೊಹ್ಲಿಗೆ ಶತಕದ ತ್ಯಾಗ ಮಾಡಿದ ರಾಹುಲ್ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರ ಗುಣ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.