ಕನ್ನಡ ಸುದ್ದಿ  /  ಕ್ರಿಕೆಟ್  /  Exclusive: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ವಿರಾಟ್ ಕೊಹ್ಲಿ- ಅನುಷ್ಕಾ ದಂಪತಿ?

Exclusive: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ವಿರಾಟ್ ಕೊಹ್ಲಿ- ಅನುಷ್ಕಾ ದಂಪತಿ?

ಟೀಂ ಇಂಡಿಯಾದ ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ?. ಕೆಲ ಮೂಲಗಳನ್ನು ಆಧರಿಸಿ ‘ಹಿಂದುಸ್ತಾನ್ ಟೈಮ್ಸ್ ಇಂಗ್ಲಿಷ್’ ವೈಬ್‌ಸೈಟ್ ವರದಿ ಮಾಡಿದೆ.

2017ರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಇಟಲಿಯಲ್ಲಿ ಮದುವೆಯಾಗಿದ್ದರು.
2017ರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಇಟಲಿಯಲ್ಲಿ ಮದುವೆಯಾಗಿದ್ದರು.

ಮುಂಬೈ: ಟೀಂ ಇಂಡಿಯಾದ (Team India) ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಮತ್ತು ನಟಿ ಅನುಷ್ಕಾ ಶರ್ಮಾ (Anushka Sharma) ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂಬುದು.

ಟ್ರೆಂಡಿಂಗ್​ ಸುದ್ದಿ

ಕೆಲವು ಮೂಲಗಳನ್ನು ಆಧಾರಿಸಿ ‘ಹಿಂದೂಸ್ತಾನ್ ಟೈಮ್ಸ್’ ಗೆ ಲಭ್ಯವಾಗಿರುವ ಎಕ್ಸ್‌ಕ್ಲೂಸಿವ್ ವರದಿ ಪ್ರಕಾರ, ವಿರಾಟ್ ಮತ್ತು ಅನುಷ್ಕಾ ದಂಪತಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅನುಷ್ಕಾ ಶರ್ಮಾ ಈಗಾಗಲೇ ಮೂರು ತಿಂಗಳ ಗರ್ಭಿಣಿ ಅವಧಿಯನ್ನು ಮುಗಿಸಿ ಎರಡನೇ ತ್ರೈಮಾಸಿಕದಲ್ಲಿ ಇದ್ದಾರೆ ಎಂದು ವರದಿ ಮಾಡಿದೆ.

ಮೂಲಗಳ ಪ್ರಕಾರ ಅನುಷ್ಕಾ ಶರ್ಮಾ ಅವರು ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರೂ ಕಳೆದ ಬಾರಿಯಂತೆ ಈ ಸಲವೂ ಔಪಚಾರಿಕವಾಗಿ ಈ ವಿಷಯವನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದ್ದಾರೆ. 2021ರಲ್ಲಿ ವಿರುಷ್ಕಾ ದಂಪತಿ ವಮಿಕಾ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.

ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅನುಷ್ಕಾ ಶರ್ಮಾ

35 ವರ್ಷದ ಅನುಷ್ಕಾ ಶರ್ಮಾ ಮುಂಬೈನಲ್ಲಿ ನಡೆದ ಕಾರ್ಯಕ್ರವೊಂದರಲ್ಲಿ ಕಾಣಿಸಿಕೊಂಡಿದ್ದರೂ ಸಾರ್ವಜನಿಕರ ಕಣ್ಣಿನಿಂದ ದೂರ ಉಳಿದಿದ್ದಾರೆ. ಇದು ಕಾಕತಾಳೀಯವಲ್ಲ, ಊಹಾಪೋಹಗಳನ್ನು ತಪ್ಪಿಸಲು ಹೀಗೆ ಮಾಡಿದ್ದಾರೆ ಎಂದು ಹೇಳಲಾಗಿದೆ.

2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದಕ್ಕೆ ಇದೂ ಒಂದು ಕಾರಣ

ಅನುಷ್ಕಾ ಶರ್ಮಾ ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಎಲ್ಲೇ ಪಂದ್ಯಗಳನ್ನು ಆಡಿದ್ದರೂ ಅಲ್ಲಿ ಪಾಲ್ಗೊಳ್ಳುವ ಮೂಲಕ ಪತಿಗೆ ಬೆಂಬಲ ಸೂಚಿಸುತ್ತಿದ್ದರು. ಆದರೆ ಇದೀಗ ಅನುಷ್ಕಾ ಎಲ್ಲಿಗೂ ಪ್ರಯಾಣಿಸುತ್ತಿಲ್ಲ. ವಿರಾಟ್ ಆಡುವ ಯಾವುದೇ ಪಂದ್ಯದಲ್ಲೂ ಕಾಣಿಸುತ್ತಿಲ್ಲ. ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಇತ್ತೀಚೆಗೆ ಮುಂಬೈನ ಹೆರಿಗೆ ಆಸ್ಪತ್ರೆಯೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋಗಳನ್ನು ಎಲ್ಲೂ ಪ್ರಕಟಿಸದಂತೆ ಅಲ್ಲಿದ್ದವರನ್ನು ವಿನಂತಿಸಿದ್ದರು ಎಂದು ಮತ್ತೊಂದು ಮೂಲದಿಂದ ಗೊತ್ತಾಗಿದೆ.

ವಮಿಕಾ ಹುಟ್ಟಿದಾಗಿನಿಂದ ವಿರುಷ್ಕಾ ದಂಪತಿ ತಮ್ಮ ಮಗಳ ಮುಖವನ್ನು ಸಾರ್ವಜನಿಕವಾಗಿ ತೋರಿಸುತ್ತಿಲ್ಲ. ಪುತ್ರಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲೂ ಫೋಸ್ಟ್ ಮಾಡುತ್ತಿಲ್ಲ. ಈ ವಿಚಾರದಲ್ಲಂತೂ ದಂಪತಿ ತುಂಬಾ ಕಟ್ಟುನಿಟ್ಟಾಗಿ ನಡೆದುಕೊಂಡಿದೆ.

ಅನುಷ್ಕಾ ಅವರು ತಮ್ಮ ಮುಂದಿನ ಸಿನಿಮಾ ಚಕ್ಡಾ ಎಕ್ಸ್‌ಪ್ರೆಸ್‌ ಚಿತ್ರೀಕರಣವನ್ನು ಕೆಲ ದಿನಗಳ ಹಿಂದಷ್ಟೇ ಮುಗಿಸಿದ್ದರು. ಈ ಚಿತ್ರದಲ್ಲಿ ಭಾರತದ ವನಿತೆಯರ ತಂಡದ ಮಾಜಿ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ವಮಿಕಾ ಹುಟ್ಟಿದ ನಂತರ ಮೊದಲ ಬಾರಿಗೆ ಚಕ್ಡಾ ಎಕ್ಸ್‌ಪ್ರೆಸ್ ಸಿನಿಮಾದ ನಟಿಸಿದ್ದೇನೆ ಎಂದು ಶರ್ಮಾ ಇತ್ತೀಚೆಗಷ್ಟೇ ಹೇಳಿದ್ದರು.

ತಾಯಿ-ಮಗಳ ಸಂಬಂಧ ಹೇಗಿದೆ?

ಮಾತೃತ್ವವು ನನ್ನನ್ನು ಆಂತರಿಕವಾಗಿ ಹೆಚ್ಚು ಆತ್ಮವಿಶ್ವಾಸದ ವ್ಯಕ್ತಿಯನ್ನಾಗಿ ಮಾಡಿದೆ. ಒಬ್ಬ ಹೆಣ್ಣಾಗಿ ನಾನು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೇನೆ ಎಂದು ಭಾವಿಸುತ್ತೇನೆ. ಇದು ಅತ್ಯಂತ ನಿಜವಾದ ವಿಷಯ. ಇನ್ನೊಬ್ಬ ಮನುಷ್ಯನ ಬಗ್ಗೆ ಕಾಳಜಿ ವಹಿಸುವುದು ಮತ್ತು ಎಲ್ಲದರಲ್ಲೂ ಮಗುವಿಗೆ ಮೊದಲ ಸ್ಥಾನ ನೀಡಲು ಬಯಸುತ್ತೇನೆ. ಮಗುವಿನೊಂದಿಗೆ ಸಂಪರ್ಕ ಹೊಂದಲು ಇದು ತುಂಬಾ ಮುಖ್ಯವಾಗಿದೆ.

ಮಗುವಿನ ಎಲ್ಲಾ ಕೆಲಸ ಕಾರ್ಯಗಳನ್ನು ನಾನೇ ಮಾಡುತ್ತೇನೆ. ಬೇಬಿ ಕೇರ್‌ ಕೆಲಸವನ್ನು ತುಂಬಾ ಆನಂದಿಸುತ್ತೇನೆ. ಮಗುವಿನ ಬಂಧವು ತುಂಬಾ ವಿಶೇಷವಾಗಿದೆ ಎಂದು ಅನುಷ್ಕಾ ಶರ್ಮಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. 2017ರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಇಟಲಿ ಮದುವೆಯಾಗಿದ್ದರು. ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಿದ್ದರು. ಸದ್ಯ ವಿರಾಟ್ ಕೊಹ್ಲಿ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದು, ಇಂದು (ಸೆಪ್ಟೆಂಬರ್ 30, ಶನಿವಾರ) ಗುವಾಹಟಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಇರಲಿದ್ದಾರೆ.

ಟಿ20 ವರ್ಲ್ಡ್‌ಕಪ್ 2024