ರೊವ್ಮನ್​ ಪೊವೆಲ್ ನಾಟೌಟ್ ಆಗಿದ್ದರೂ ಗೆಲ್ತಿರಲಿಲ್ಲ ರಾಜಸ್ಥಾನ; ಇನ್ನಾದರೂ ಈ ನಿಯಮಕ್ಕೆ ತರಬೇಕು ತಿದ್ದುಪಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  ರೊವ್ಮನ್​ ಪೊವೆಲ್ ನಾಟೌಟ್ ಆಗಿದ್ದರೂ ಗೆಲ್ತಿರಲಿಲ್ಲ ರಾಜಸ್ಥಾನ; ಇನ್ನಾದರೂ ಈ ನಿಯಮಕ್ಕೆ ತರಬೇಕು ತಿದ್ದುಪಡಿ

ರೊವ್ಮನ್​ ಪೊವೆಲ್ ನಾಟೌಟ್ ಆಗಿದ್ದರೂ ಗೆಲ್ತಿರಲಿಲ್ಲ ರಾಜಸ್ಥಾನ; ಇನ್ನಾದರೂ ಈ ನಿಯಮಕ್ಕೆ ತರಬೇಕು ತಿದ್ದುಪಡಿ

IPL 2024 DRS Controversy : ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 1 ರನ್ನಿಂದ ಸೋತಿದೆ. ಆದರೆ ಕೊನೆಯ ಎಸೆತದಲ್ಲಿ ಔಟಾದ ರೊವ್ಮನ್ ಪೊವೆಲ್​ ನಾಟೌಟ್ ಆಗಿದ್ದರೂ ಆರ್​​ಆರ್​ ಸೋಲುತ್ತಿತ್ತು. ಅದ್ಹೇಗೆ? ಇಲ್ಲಿದೆ ವಿವರ.

ರೊವ್ಮನ್​ ಪೊವೆಲ್ ನಾಟೌಟ್ ಆಗಿದ್ದರೂ ಗೆಲ್ತಿರಲಿಲ್ಲ ರಾಜಸ್ಥಾನ; ಇನ್ನಾದರೂ ಈ ನಿಯಮಕ್ಕೆ ತರಬೇಕು ತಿದ್ದುಪಡಿ
ರೊವ್ಮನ್​ ಪೊವೆಲ್ ನಾಟೌಟ್ ಆಗಿದ್ದರೂ ಗೆಲ್ತಿರಲಿಲ್ಲ ರಾಜಸ್ಥಾನ; ಇನ್ನಾದರೂ ಈ ನಿಯಮಕ್ಕೆ ತರಬೇಕು ತಿದ್ದುಪಡಿ

ಲಾರ್ಡ್ಸ್​​​​ನಲ್ಲಿ ನಡೆದ 2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ (ODI World Cup 2019) ಪಂದ್ಯದ ಸೂಪರ್ ಓವರ್​​ನಲ್ಲಿ ಬೌಂಡರಿ ಕೌಂಟ್​ ನಿಮಯದಿಂದ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಹೃದಯವಿದ್ರಾವಕ ಸೋಲು ಕಂಡಿದ್ದನ್ನು ನೆನಪಿಸಿಕೊಳ್ಳಿ. ಇದು ವಿಶ್ವಮಟ್ಟದಲ್ಲಿ ಚರ್ಚೆ ನಡೆದಿತ್ತು. ಐಸಿಸಿ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಳಿಕ ಈ ನಿಯಮ ಬದಲಿಸಿತು. ಈಗ ಅಂತಹದ್ದೇ ಲೋಪ ದೋಷ ಬೆಳಕಿಗೆ ಬಂದಿದೆ.

2024ರ ಐಪಿಎಲ್​ನಲ್ಲಿ ಮೇ 2ರ ಗುರುವಾರ ಸನ್‌ರೈಸರ್ಸ್ ಹೈದರಾಬಾದ್-ರಾಜಸ್ಥಾನ್ ರಾಯಲ್ಸ್ (SRH vs RR) ನಡುವಿನ ಪಂದ್ಯವು ನಿಯಮಗಳ ಪುಸ್ತಕದಲ್ಲಿನ ಮತ್ತೊಂದು ದೊಡ್ಡ ಲೋಪದೋಷ ಬಹಿರಂಗಪಡಿಸಿದೆ. ಈ ನಿಯಮಕ್ಕೆ ಈಗಲೇ ತಿದ್ದುಪಡಿ ತರದಿದ್ದರೆ ಮುಂದೊಂದು ದಿನ 2019ರ ವಿಶ್ವಕಪ್​ ಫೈನಲ್​​ ವಿವಾದ ಮರುಕಳಿಸಿದರೂ ಅಚ್ಚರಿ ಇಲ್ಲ. ಇಷ್ಟಕ್ಕೂ ಆ ನಿಯಮ ಯಾವುದು? ಇಲ್ಲಿದೆ ವಿವರ.

ಪಂದ್ಯದಲ್ಲಿ ನಡೆದಿದ್ದೇನು?

ಪಂದ್ಯದ ಕೊನೆಯ ಎಸೆತದಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 2 ರನ್ ಬೇಕಿತ್ತು. ಸ್ಟ್ರೈಕ್​​ನಲ್ಲಿ ರೊವ್ಮನ್​ ಪೊವೆಲ್, ವೇಗಿ ಭುವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ಲೋ ಫುಲ್​ಟಾಸ್​ಗೆ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ಅದಾಗಿಯೂ ಪೊವೆಲ್ ಒಂದು ರನ್ ಪೂರ್ಣಗೊಳಿಸಿದ ತಕ್ಷಣವೇ ರಿವ್ಯೂ ಮೊರೆಹೋದರು. ಆನ್​ಫೀಲ್ಡ್​ ಅಂಪೈರ್​ ಕೊಟ್ಟ ತೀರ್ಪು ಸರಿಯಾಗಿದೆ. ಚೆಂಡು ನೇರವಾಗಿ ಸ್ಟಂಪ್ಸ್​ಗೆ ಬಡಿದಿದೆ ಎಂದು 3ನೇ ಅಂಪೈರ್ ಹೇಳಿದ್ದಾರೆ. ಇದರೊಂದಿಗೆ ಎಸ್​ಆರ್​ಹೆಚ್​ 1 ರನ್ನಿಂದ ರೋಚಕ ಗೆಲುವು ಸಾಧಿಸಿತು.

ಆದರೆ ಈ ತೀರ್ಪು ಕೋಲಾಹಲ ಸೃಷ್ಟಿಸಿತು. ಚೆಂಡು ಸ್ಟಂಪ್ಸ್​ ತಪ್ಪಿ ಹೋಗಿದ್ದರೆ ಡಿಆರ್​​ಎಸ್​​​​ ರದ್ದಾಗುತ್ತಿತ್ತು. ಪೊವೆಲ್ ಒಂದು ರನ್ ಪೂರ್ಣಗೊಳಿಸಿದ್ದ ಕಾರಣ ಪಂದ್ಯವು ಸೂಪರ್ ಓವರ್​​ಗೆ ಹೋಗುತ್ತಿತ್ತು ಎಂದು ಕ್ರಿಕೆಟ್ ಪ್ರಿಯರು ಭಾವಿಸಿದ್ದರು. ಆದಾಗ್ಯೂ, ಕ್ರಿಕೆಟ್ ಅಭಿಮಾನಿಗಳು ಭಾವಿಸಿದಂತೆ ಆಗುತ್ತಿರಲಿಲ್ಲ. ಆನ್-ಫೀಲ್ಡ್ ಅಂಪೈರ್ ಔಟ್ ನೀಡಿದ್ದರಿಂದ ಒಂದು ವೇಳೆ ಡಿಆರ್‌ಎಸ್ ನಾಟ್-ಔಟ್ ತೀರ್ಪು ಕೊಟ್ಟಿದ್ದರೂ ಎಸ್​ಆರ್​ಹೆಚ್ ತಂಡವೇ ಜಯ ಸಾಧಿಸುತ್ತಿತ್ತು. ಅದ್ಹೇಗೆ?

ಪೊವೆಲ್ ನಾಟೌಟ್​ ಆಗಿದ್ದರೂ ಗೆಲ್ತಿರಲಿಲ್ಲ ಆರ್​ಆರ್​

ಐಸಿಸಿ ನಿಮಯಗಳ ಪ್ರಕಾರ, ಒಮ್ಮೆ ಮೈದಾನದಲ್ಲಿ ಔಟ್ ಎಂದು ನೀಡಿದರೆ ಆ ಬಾಲ್ ಡೆಡ್ ಬಾಲ್ ಎಂದು ಘೋಷಿಸಲ್ಪಡುತ್ತದೆ. ಒಂದು ವೇಳೆ ನಾಟೌಟ್ ಎಂದು ತೀರ್ಪು ಕೊಟ್ಟು ನಿರ್ಧಾರವನ್ನು ಬದಲಿಸಿದರೂ ಬ್ಯಾಟಿಂಗ್ ತಂಡದ ಖಾತೆಗೆ ಯಾವುದೇ ರನ್ ಸೇರುವುದಿಲ್ಲ. ಅಷ್ಟೇ ಅಲ್ಲದೆ, ಪೊವೆಲ್ ಎದುರಿಸಿದ ಚೆಂಡು ಬ್ಯಾಟ್​ಗೆ ತಾಗಿದ್ದರೂ ಮತ್ತು ಆ ಸಂದರ್ಭದಲ್ಲಿ ಅಂಪೈರ್ ಗುರುತಿಸಲು ವಿಫಲರಾದರೂ ಹಾಗೂ ಡಿಆರ್‌ಎಸ್ ನಿರ್ಧಾರವನ್ನು ಸರಿಪಡಿಸಿದರೂ ಆರ್​​ಆರ್​​ ಪಂದ್ಯವನ್ನು ಕಳೆದುಕೊಳ್ಳುತ್ತಿತ್ತು.

ಹೌದು, ಪ್ರಸ್ತುತ ಕ್ರಿಕೆಟ್ ವಲಯದಲ್ಲಿ ಇದೇ ದೊಡ್ಡ ಚರ್ಚೆಯಾಗುತ್ತಿದೆ. ಇದು ಹೇಗೆ ಸಾಧ್ಯ ಎಂದು ಕೆಲವರು ವಾದಿಸುತ್ತಿದ್ದಾರೆ. ಬ್ಯಾಟರ್​​ ರಿವ್ಯೂ ಮೊರೆ ಹೋದರೆ, 'ಔಟ್​'ನ ಮೂಲ ನಿರ್ಧಾರವನ್ನು 'ನಾಟ್ ಔಟ್' ಎಂದು ಬದಲಿಸಿದದರೂ ಅದನ್ನು ಡೆಡ್ ಬಾಲ್ ಎಂದೇ ಪರಿಗಣಿಸಲಾಗುತ್ತದೆ.​ ಔಟ್​ ಅನ್ನು ನಾಟೌಟ್ ಕೊಟ್ಟ ಸಂದರ್ಭ ನೀವೇಷ್ಟೇ ರನ್ ಗಳಿಸಿದ್ದರೂ ಪ್ರಯೋಜನವಿಲ್ಲ ಎಂಬುದನ್ನು ಐಸಿಸಿ ನಿಯಮ ಹೇಳುತ್ತದೆ.

ನಿಯಮ ಬದಲಾವಣೆ ಮಾಡಬೇಕೆಂದ ಫ್ಯಾನ್ಸ್

ಆದರೆ ಇದು ದೊಡ್ಡ ಲೋಪದೋಷ ಎಂದರೂ ತಪ್ಪಾಗಲ್ಲ. ಉದಾಹರಣೆಗೆ; ಆರ್​ಆರ್​ ಮತ್ತು ಎಸ್​ಆರ್​ಹೆಚ್​​ ಪಂದ್ಯದ ಕುರಿತೇ ಮಾತನಾಡೋಣ. ಒಂದು ವೇಳೆ ರೊವ್ಮನ್ ಪೊವೆಲ್ ಎಲ್​ಬಿಡಬ್ಲ್ಯು ನಾಟೌಟ್ ಆಗಿದ್ದರೂ ಆರ್​ಆರ್ ಸೋಲುತ್ತಿತ್ತು. ಏಕೆಂದರೆ ಅವರು ರನ್ ಓಡಿದ್ದರೂ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ, ತಂಡಕ್ಕೆ ರನ್ ಸೇರ್ಪಡೆ ಆಗುತ್ತಿರಲಿಲ್ಲ. ಆದರೆ ಆ ರನ್ ಸೇರ್ಪಡೆಯಾಗಿದ್ದರೆ ಹೇಗಿರುತ್ತಿತ್ತು. ಪಂದ್ಯವು ಸೂಪರ್ ಓವರ್​​ಗೆ ಹೋಗುತ್ತಿತ್ತು.

ಈ ನಿಮಯಕ್ಕೆ ತಿದ್ದುಪಡಿ ತರಬೇಕು. ಏಕೆಂದರೆ ಔಟ್​, ನಾಟೌಟ್ ಎಂದು ತೀರ್ಪು ಬಂದಾಗ ಆಟಗಾರರು ಗಳಿಸಿದ್ದ ರನ್​ ಆ ತಂಡದ ಖಾತೆಗೆ ಸೇರಬೇಕು. ಇದು ಲೀಗ್ ಪಂದ್ಯವಾದ ಕಾರಣ ದೊಡ್ಡ ವಿವಾದಕ್ಕೆ ಕಾರಣವಾಗಿಲ್ಲ. ಆದರೆ, ವಿಶ್ವಕಪ್​ನಂತಹ ಟೂರ್ನಿಗಳಲ್ಲಿ ಇಂತಹದ್ದೇ ಘಟನೆ ಸಂಭವಿಸಿದರೆ ದೊಡ್ಡ ವಿವಾದ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈಗಿನಿಂದಲೇ ನಿಯಮ ಸರಿಪಡಿಸಲು ಮುಂದಾಗಬೇಕು. ಇದು ಎಚ್ಚರಿಕೆಯ ಕರೆಗಂಟೆಯಾಗಲಿ ಎಂದು ಫ್ಯಾನ್ಸ್​, ಐಸಿಸಿಗೆ ಒತ್ತಾಯಿಸಿದ್ದಾರೆ.

Whats_app_banner