ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಮಳೆ ಅಡ್ಡಿ? ವಾಷ್ಔಟ್ ಆದರೆ ಬೆಂಗಳೂರು ಪ್ಲೇಆಫ್ ಲೆಕ್ಕಾಚಾರ ಏನು?
RCBs IPL Playoff Chances: ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಷ್ಔಟ್ ಆದರೆ ಬೆಂಗಳೂರು ಪ್ಲೇಆಫ್ ಲೆಕ್ಕಾಚಾರ ಏನು? ಇಲ್ಲಿದೆ ವಿವರ.

ಪ್ರತಿಷ್ಠೆಯ ಕದನಕ್ಕೆ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸಿದ್ಧಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಕಾದಾಟಕ್ಕೆ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಮುಖಾಮುಖಿಯಲ್ಲಿ ಚೆನ್ನೈ ತಂಡವನ್ನು ಅವರ ತವರು ನೆಲದಲ್ಲೇ ಮಣಿಸಿರುವ ಆರ್‌ಸಿಬಿ ಈಗ ತಮ್ಮ ಅಭಿಮಾನಿಗಳ ಮುಂದೆ ಬಗ್ಗುಬಡಿಯಲು ಭರ್ಜರಿ ಕಸರತ್ತು ನಡೆಸಿದೆ. ಆದರೆ ಅದಕ್ಕೂ ಮುನ್ನ ಉಭಯ ತಂಡಗಳ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಹೊರ ಬಿದ್ದಿದೆ. ಪಂದ್ಯಕ್ಕೆ ಮಳೆಯ ಭೀತಿ ಹೆಚ್ಚಿಸಿದೆ. ಕಳೆದ 2 ದಿನಗಳಿಂದ ರಾತ್ರಿ ವೇಳೆಯೇ ಮಳೆ ಸುರಿಯುತ್ತಿದೆ.
ಪಂದ್ಯಕ್ಕಿದೆ ಮಳೆ ಭೀತಿ
ಹವಾಮಾನ ಮುನ್ಸೂಚನೆ ಪ್ರಕಾರ ಇವತ್ತು ಸಹ (ಮೇ 3) ರಾತ್ರಿ ಮಳೆ ಬೀಳುವ ಸಾಧ್ಯತೆ ಇದೆ. ಆರ್‌ಸಿಬಿ vs ಸಿಎಸ್‌ಕೆ ಪಂದ್ಯದ ಹವಾಮಾನ ಮುನ್ಸೂಚನೆ ಉತ್ತಮವಾಗಿಲ್ಲ. ಅಕ್ಯೂವೆದರ್ ಪ್ರಕಾರ, ಶನಿವಾರ ಸಂಜೆ ಮಳೆಯಾಗುವ ಸಾಧ್ಯತೆ ಶೇ 50 ಕ್ಕಿಂತ ಹೆಚ್ಚಿದೆ. ಪಂದ್ಯದ ವೇಳೆ ಮಳೆಯಿಂದ ಅಡಚಣೆಗಳು ಉಂಟಾಗಬಹುದು. ನಿರಂತರ ಮಳೆ ಸುರಿದರೆ ಪಂದ್ಯ ರದ್ದಾಗಲೂಬಹುದು. ಆಗ ಎರಡೂ ತಂಡಗಳಿಗೆ ತಲಾ 1 ಅಂಕ ಸಿಗಲಿದೆ. ಆದರೆ ಉಭಯ ತಂಡಗಳಿಗೆ ಯಾವುದೇ ನಷ್ಟ ಆಗುವುದಿಲ್ಲ. ಆರ್‌ಸಿಬಿ ಪ್ಲೇಆಫ್ನತ್ತ ಮತ್ತೊಂದು ಹೆಜ್ಜೆ ಇಡಲಿದೆ.
ಕೆಲವೊತ್ತು ಮಳೆ ಸುರಿದರೆ ಓವರ್ಗಳ ಕಡಿತದೊಂದಿಗೆ ಪಂದ್ಯ ಆರಂಭವಾಗಬಹುದು. ಏಕೆಂದರೆ ಚಿನ್ನಸ್ವಾಮಿ ಮೈದಾನದಲ್ಲಿ ಸಬ್ ಏರ್ ವ್ಯವಸ್ಥೆ ಇರುವ ಕಾರಣ ಕೆಲವೇ ಪಂದ್ಯಗಳ ಪಂದ್ಯವಾದರೂ ನಡೆಯಬಹುದು ಎಂಬ ಭರವಸೆ ಅಭಿಮಾನಿಗಳಲ್ಲಿದೆ. ಈಗಾಗಲೇ ಸಿಎಸ್‌ಕೆ ಪ್ಲೇಆಫ್ನಿಂದ ಹೊರಬಿದ್ದಿರುವ ಹಿನ್ನೆಲೆ ಸೋತರೂ ಗೆದ್ದರೂ ಪ್ರಯೋಜನ ಇಲ್ಲ. ಆದಾಗ್ಯೂ, ಆರ್‌ಸಿಬಿ ಎರಡು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸಲು ಉತ್ಸುಕವಾಗಿದೆ. ಆಗ ಯಾವುದೇ ಪೈಪೋಟಿ ಇಲ್ಲದೆಯೇ ಪ್ಲೇಆಫ್ನತ್ತ ಹೆಜ್ಜೆ ಇಡಲಿದೆ. ತಂಡ ಸಮತೋಲಿತವಾಗಿದ್ದು, ಪ್ರಶಸ್ತಿ ಗೆಲ್ಲಲು ಉತ್ಸುಕವಾಗಿದೆ.
ಪಂದ್ಯ ರದ್ದಾದರೆ ಆರ್‌ಸಿಬಿ ಇನ್ನೊಂದು ಗೆಲುವು ಬೇಕು
ಆರ್‌ಸಿಬಿ 10 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಒಟ್ಟು 14 ಅಂಕ ಗಳಿಸಿದೆ. ಇಂದಿನ ಪಂದ್ಯವು ವಾಶ್ಔಟ್ ಆದಲ್ಲಿ 1 ಅಂಕ ಸೇರ್ಪಡೆಯಾಗಿ 15 ಅಂಕ ಆಗಲಿದೆ ಏರುತ್ತದೆ. ಆರ್‌ಸಿಬಿ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ಇನ್ನೂ ಒಂದು ಗೆಲುವು ಅಗತ್ಯವಾಗಿರುತ್ತದೆ. ಹಾಗಂತ ಇದು ಖಚಿತವೂ ಅಲ್ಲ. ಏಕೆಂದರೆ ಉಳಿದ ತಂಡಗಳಿಂದಲೂ ಅತ್ಯುತ್ತಮ ಪ್ರದರ್ಶನ ಹೊರ ಬರುತ್ತಿರುವ ಹಿನ್ನೆಲೆ ಪ್ಲೇಆಫ್ ಪ್ರವೇಶಿಸಲು ಕಠಿಣ ಪೈಪೋಟಿ ಏರ್ಪಡುತ್ತಿದೆ. ಹಾಗಾಗಿ ಅವುಗಳ ಫಲಿತಾಂಶಗಳು ಆರ್‌ಸಿಬಿ ಮೇಲೆ ಪರಿಣಾಮ ಬೀರಬಹುದು.
ಸ್ಥಾನ | ತಂಡ | ಪಂದ್ಯ | ಗೆಲುವು | ಸೋಲು | ರದ್ದು | ಅಂಕ | NRRR |
---|---|---|---|---|---|---|---|
1 | ಮುಂಬೈ ಇಂಡಿಯನ್ಸ್ | 11 | 7 | 4 | 0 | 14 | 1.274 |
2 | ಗುಜರಾತ್ ಟೈಟಾನ್ಸ್ | 10 | 7 | 3 | 0 | 14 | 0.867 |
3 | ರಾಯಲ್ ಚಾಲೆಂಜರ್ಸ್ ಬೆಂಗಳೂರು | 10 | 7 | 3 | 0 | 14 | 0.521 |
4 | ಪಂಜಾಬ್ ಕಿಂಗ್ಸ್ | 10 | 6 | 3 | 1 | 13 | 0.199 |
5 | ಡೆಲ್ಲಿ ಕ್ಯಾಪಿಟಲ್ಸ್ | 10 | 6 | 4 | 0 | 12 | 0.362 |
6 | ಲಕ್ನೋ ಸೂಪರ್ ಜೈಂಟ್ಸ್ | 10 | 5 | 5 | 0 | 10 | -0.325 |
7 | ಕೋಲ್ಕತ್ತಾ ನೈಟ್ ರೈಡರ್ಸ್ | 10 | 4 | 5 | 1 | 9 | 0.271 |
8 | ರಾಜಸ್ಥಾನ ರಾಯಲ್ಸ್ | 11 | 3 | 8 | 0 | 6 | -0.780 |
9 | ಸನ್‌ರೈಸರ್ಸ್ ಹೈದರಾಬಾದ್ | 10 | 3 | 7 | 0 | 6 | -1.192 |
10 | ಚೆನ್ನೈ ಸೂಪರ್ ಕಿಂಗ್ಸ್ | 10 | 2 | 8 | 0 | 4 | -1.211 |