ಜಿಟಿ, ಆರ್ಸಿಬಿ, ಪಿಬಿಕೆಎಸ್ ಪ್ಲೇಆಫ್ ಟಿಕೆಟ್ ಕನ್ಫರ್ಮ್; ಉಳಿದೊಂದು ಸ್ಥಾನಕ್ಕೆ ಎಂಐ, ಡಿಸಿ, ಎಲ್ಎಸ್ಜಿ ಮಧ್ಯೆ ಫೈಟ್
ಐಪಿಎಲ್ 2025 ಕೊನೆಯ ಹಂತದಲ್ಲಿದೆ. ಗುಜರಾತ್ ಟೈಟಾನ್ಸ್, ಆರ್ಸಿಬಿ, ಪಂಜಾಬ್ ಕಿಂಗ್ಸ್ ಪ್ಲೇಆಫ್ ಟಿಕೆಟ್ ಖಚಿತಪಡಿಸಿಕೊಂಡರೆ, ಉಳಿದ ಒಂದು ಸ್ಥಾನಕ್ಕೆ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪೈಪೋಟಿ ಏರ್ಪಟ್ಟಿದೆ.

2025ರ ಐಪಿಎಲ್ನ 60ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ನಂತರ ಪ್ಲೇಆಫ್ ಹೋರಾಟ ತೀವ್ರಗೊಂಡಿದೆ. ಜಿಟಿ ಗೆಲುವಿನೊಂದಿಗೆ 3 ತಂಡಗಳು ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿವೆ. ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ಗೆ ಅರ್ಹತೆ ಪಡೆದಿವೆ. ಆದರೆ ಉಳಿದ ಒಂದು ಸ್ಥಾನಕ್ಕೆ ಮೂರು ತಂಡಗಳ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಒಂದು ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಸ್ಪರ್ಧಿಗಳು. ಸದ್ಯದ ಮಟ್ಟಿಗೆ ಪ್ಲೇಆಫ್ ಲೆಕ್ಕಾಚಾರ ಏನಿದೆ? ಯಾವ ತಂಡಕ್ಕೆಷ್ಟು ಸಾಧ್ಯತೆ ಇದೆ ಎಂಬುದರ ವಿವರವನ್ನು ಮುಂದೆ ನೋಡೋಣ.
ಮುಂಬೈ ಇಂಡಿಯನ್ಸ್ ಸಾಧ್ಯತೆ ಎಷ್ಟಿದೆ?
ಮುಂಬೈ ಇಂಡಿಯನ್ಸ್ 12 ಪಂದ್ಯಗಳಿಂದ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಎಲ್ಲಾ 3 ತಂಡಗಳಲ್ಲಿ ಗೆದ್ದು ಅಗ್ರ 4ರಲ್ಲಿರಲು ಎಂಐ ಪ್ರಬಲ ಸ್ಪರ್ಧಿಯಾಗಿದೆ. ಇದಕ್ಕೆ ಮುಂಬೈ ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆದ್ದರೆ ಮತ್ತು ಲಕ್ನೋ ಉಳಿದ ಮೂರು ಪಂದ್ಯಗಳಲ್ಲಿ ಒಂದನ್ನು ಸೋತರೆ, ಮುಂಬೈ ತಂಡವು ಪ್ಲೇ ಆಫ್ ಹಂತವನ್ನು ತಲುಪುತ್ತದೆ. ಮುಂಬೈ ತಂಡವು ಡೆಲ್ಲಿ ವಿರುದ್ಧ ಸೋತು ಪಂಜಾಬ್ ಅನ್ನು ಸೋಲಿಸಿದರೆ, ಡೆಲ್ಲಿ ಪಾಯಿಂಟ್ಸ್ ಟೇಬಲ್ನಲ್ಲಿ ಎಂಐ ಹಿಂದಿಕ್ಕುತ್ತದೆ. ಆದಾಗ್ಯೂ, ಡೆಲ್ಲಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಅನ್ನು ಸೋಲಿಸಬೇಕಾಗಿದೆ. ಉಳಿದ ಎರಡೂ ಪಂದ್ಯಗಳನ್ನು ಸೋತರೆ, ಮುಂಬೈ ತಂಡವು ಹೊರಗುಳಿಯುತ್ತದೆ.
ಅಂದಹಾಗೆ, ಮುಂಬೈ ಇಂಡಿಯನ್ಸ್ ಕೂಡ ಅಗ್ರ-2ರಲ್ಲಿ ಸ್ಥಾನ ಪಡೆಯಲು ಉತ್ತಮ ಅವಕಾಶ ಇದೆ. ಮುಂಬೈ ತಂಡವು ತಮ್ಮ ಎರಡೂ ಪಂದ್ಯಗಳನ್ನು ಗೆದ್ದರೆ, ಉತ್ತಮ ನೆಟ್ ರನ್ ರೇಟ್ ಹೊಂದಿರುವ ಕಾರಣ ಇದು ಸಾಧ್ಯವಾಗಲಿದೆ. ಆದಾಗ್ಯೂ, ಆರ್ಸಿಬಿ ಮತ್ತು ಪಂಜಾಬ್ ತಮ್ಮ ಉಳಿದ ಎರಡೂ ಪಂದ್ಯಗಳನ್ನು ಸೋತು 17 ಪಾಯಿಂಟ್ಗಳೊಂದಿಗೆ ಕೊನೆಗೊಂಡರೆ ಮಾತ್ರ ಇದು ಸಂಭವಿಸುತ್ತದೆ. ಮತ್ತೊಂದು ಅವಕಾಶ ಏನೆಂದರೆ ಗುಜರಾತ್ ಟೈಟಾನ್ಸ್ ತನ್ನ ಉಳಿದ ಎರಡೂ ಪಂದ್ಯಗಳನ್ನು ಸೋತರೆ, ಅಂಕಪಟ್ಟಿಯಲ್ಲಿ ಮುಂಬೈ ಅಗ್ರ -2 ಸ್ಥಾನ ಪಡೆಯುವ ಸಾಧ್ಯತೆ ಇದೆ. ಅದಕ್ಕಾಗಿ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯ.
ಡೆಲ್ಲಿ ಮುಂದಿರುವ ಅವಕಾಶಗಳೆಷ್ಟು?
ಡೆಲ್ಲಿ ಕ್ಯಾಪಿಟಲ್ಸ್ ಕಳೆದ 8 ಪಂದ್ಯಗಳಲ್ಲಿ 5ರಲ್ಲಿ ಸೋತಿದ್ದು, ಸಂಕಷ್ಟಕ್ಕೆ ಸಿಲುಕಿದೆ. ಈಗ ಉಳಿದ ಎರಡೂ ಪಂದ್ಯಗಳಲ್ಲೂ ಗೆದ್ದು ಪ್ಲೇಆಫ್ ಪ್ರವೇಶಿಸಲು ಜೀವ ತುಂಬಬೇಕು. ಮುಂಬೈ ಇಂಡಿಯನ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಡಿಸಿ ಸೋತರೆ ತಮ್ಮ 2025ರ ಐಪಿಎಲ್ ಪ್ರಯಾಣ ಕೊನೆಗೊಳ್ಳುತ್ತದೆ. ಡೆಲ್ಲಿ ತಂಡವು ಉಳಿದ ಎರಡೂ ಪಂದ್ಯಗಳನ್ನು ಗೆದ್ದು 17 ಅಂಕ ಗಳಿಸುವುದು ಅಗತ್ಯ. ಆಗ ಲಕ್ನೋ ತಂಡವು ತಮ್ಮ ಎಲ್ಲಾ 3 ಪಂದ್ಯಗಳನ್ನು ಗೆಲ್ಲಬೇಕೆಂದು ಡೆಲ್ಲಿ ಕ್ಯಾಪಿಟಲ್ಸ್ ಪ್ರಾರ್ಥಿಸಬೇಕು. ಆಗ ಲಕ್ನೋ ಮತ್ತು ಮುಂಬೈ ತಂಡಗಳು ತಲಾ 16 ಅಂಕಗಳೊಂದಿಗೆ ಹಿಂದುಳಿದಿಯಲಿವೆ. ಆಗ ಎರಡೂ ಪಂದ್ಯ ಗೆದ್ದರೆ ಡೆಲ್ಲಿ ಪ್ಲೇಆಫ್ಗೆ ಅರ್ಹತೆ ಪಡೆದುಕೊಳ್ಳಲಿದೆ. ಉಳಿದ ಪಂದ್ಯ ಸೋತರೂ 15 ಅಂಕ ಮಾತ್ರ ಪಡೆಯಲಿದ್ದು, 16 ಅಂಕಗಳೊಂದಿಗೆ ಮುಂಬೈ ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ.
ಲಕ್ನೋ ಮೂರಕ್ಕೆ ಮೂರೂ ಗೆಲ್ಲಬೇಕು
ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿರುವ ಕೊನೆಯ ನಾಲ್ಕು ಪಂದ್ಯಗಳಲ್ಲಿ 5ರಲ್ಲಿ ಜಯ ಗಳಿಸಿದೆ. ಲಕ್ನೋ ಸೂಪರ್ ಜೈಂಟ್ಸ್ಗೆ ಇನ್ನು ಮೂರು ಪಂದ್ಯಗಳು ಬಾಕಿ ಇವೆ. ಪ್ಲೇ ಆಫ್ ಪ್ರವೇಶಿಸಲು ಬಯಸಿದರೆ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು. ಆದರೆ ಉಳಿದ ಪಂದ್ಯಗಳ ಫಲಿತಾಂಶಗಳು ಆ ತಂಡಕ್ಕೆ ಅನುಗುಣವಾಗಿರಲಿ ಎಂದು ಲಕ್ನೋ ಪ್ರಾರ್ಥಿಸಬೇಕಾಗುತ್ತದೆ. ಲಕ್ನೋ ತನ್ನ ಉಳಿದ ಪಂದ್ಯಗಳನ್ನು ಗೆಲ್ಲುವ ಮೂಲಕ 16 ಅಂಕ ಪಡೆಯಬಹುದು. ಇದು ಸಾಧ್ಯವಾಗಬೇಕೆಂದರೆ ಮುಂಬೈ ಮತ್ತು ಡೆಲ್ಲಿ ತಮ್ಮ ಉಳಿದ ಎರಡೂ ಪಂದ್ಯಗಳನ್ನು ಸೋತರ ಮಾತ್ರ. ಡೆಲ್ಲಿ-ಮುಂಬೈ ತಲಾ ಒಂದು ಪಂದ್ಯವನ್ನು ಸೋತರೆ ಮತ್ತು ಲಕ್ನೋ ತನ್ನ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರೆ, ಪ್ಲೇಆಫ್ ಪ್ರವೇಶಿಸಲು ಅವಕಾಶ ಇದೆ. ನೆಟ್ರನ್ರೇಟ್ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಏಕೆಂದರೆ ಡೆಲ್ಲಿ-ಮುಂಬೈ ತಲಾ 1 ಪಂದ್ಯ ಸೋತು, ಒಂದು ಗೆದ್ದರೆ ಕ್ರಮವಾಗಿ 15, 16 ಅಂಕ ಪಡೆಯಲಿವೆ. ಆಗ ಮುಂಬೈ ಮತ್ತು ಲಕ್ನೋ ತಲಾ 16 ಅಂಕ ಪಡೆದರೂ ನೆಟ್ ರನ್ ರೇಟ್ ಹೆಚ್ಚು ಹೊಂದಿರುವ ತಂಡವು ಪ್ಲೇಆಫ್ಗೆ ಹೋಗಲಿದೆ.