ದಾಖಲೆಗಾಗಿ ಸರ್ಫರಾಜ್​ರನ್ನು ರನೌಟ್ ಮಾಡಿದ್ರು; ಜಡೇಜಾರನ್ನು ದೂಷಿಸಿದ ನೆಟ್ಟಿಗರು, ಕೋಪದಿಂದ ಕ್ಯಾಪ್ ಬಿಸಾಡಿದ ರೋಹಿತ್
ಕನ್ನಡ ಸುದ್ದಿ  /  ಕ್ರಿಕೆಟ್  /  ದಾಖಲೆಗಾಗಿ ಸರ್ಫರಾಜ್​ರನ್ನು ರನೌಟ್ ಮಾಡಿದ್ರು; ಜಡೇಜಾರನ್ನು ದೂಷಿಸಿದ ನೆಟ್ಟಿಗರು, ಕೋಪದಿಂದ ಕ್ಯಾಪ್ ಬಿಸಾಡಿದ ರೋಹಿತ್

ದಾಖಲೆಗಾಗಿ ಸರ್ಫರಾಜ್​ರನ್ನು ರನೌಟ್ ಮಾಡಿದ್ರು; ಜಡೇಜಾರನ್ನು ದೂಷಿಸಿದ ನೆಟ್ಟಿಗರು, ಕೋಪದಿಂದ ಕ್ಯಾಪ್ ಬಿಸಾಡಿದ ರೋಹಿತ್

Sarfaraz Khan Run Out : ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸರ್ಫರಾಜ್ ಖಾನ್ ರನೌಟ್​ಗೆ ಬಲಿಯಾದರು. ಈ ರನೌಟ್​ಗೆ ರವೀಂದ್ರ ಜಡೇಜಾ ಕಾರಣ ಎಂದು ನೆಟ್ಟಿಗರು ದೂಷಿಸುತ್ತಿದ್ದಾರೆ.

ದಾಖಲೆಗಾಗಿ ಸರ್ಫರಾಜ್​ರನ್ನು ರನೌಟ್ ಮಾಡಿದ್ರು; ಜಡೇಜಾರನ್ನು ದೂಷಿಸಿದ ನೆಟ್ಟಿಗರು
ದಾಖಲೆಗಾಗಿ ಸರ್ಫರಾಜ್​ರನ್ನು ರನೌಟ್ ಮಾಡಿದ್ರು; ಜಡೇಜಾರನ್ನು ದೂಷಿಸಿದ ನೆಟ್ಟಿಗರು

ಕಳೆದ ಮೂರು ವರ್ಷಗಳಿಂದ ದೇಶೀಯ ಕ್ರಿಕೆಟ್​​ನಲ್ಲಿ ರನ್ ಮಳೆ ಹರಿಸಿದ್ದ ಸರ್ಫರಾಜ್ ಖಾನ್ (Sarfaraz Khan) ಕೊನೆಗೂ ಭಾರತ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದು ಮಿಂಚಿದ್ದಾರೆ. ರಾಜ್​ಕೋಟ್​​ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಈ ಟೆಸ್ಟ್​​ನಲ್ಲಿ ಕಣಕ್ಕಿಳಿದ ಸರ್ಫರಾಜ್ ತನ್ನ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರು. 66 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 62 ರನ್ ಚಚ್ಚಿದರು. ರೋಹಿತ್​ ಔಟಾದ ನಂತರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುಂಬೈಕರ್​, ಸ್ಫೋಟಕ ಆಟವನ್ನಾಡಿದರು.

ಕಣಕ್ಕಿಳಿದ 75 ನಿಮಿಷಗಳಲ್ಲಿ ಭರ್ಜರಿ ಹಾಫ್ ಸೆಂಚುರಿ ಸಿಡಿಸಿದ ಸರ್ಫರಾಜ್, ತಂಡದ ಮೊತ್ತ 300ರ ಗಡಿ ದಾಟಿಸಲು ನೆರವಾದರು. ಆದರೆ, ಸುಗಮವಾಗಿ ಆಡುತ್ತಿದ್ದ ಬಲಗೈ ಬ್ಯಾಟರ್​ 81.5ನೇ ಓವರ್​​ನಲ್ಲಿ ಅನಗತ್ಯ ರನ್​ಗೆ ಓಡಲು ಯತ್ನಿಸಿ ರನೌಟಾದರು. ಜಡೇಜಾ 99 ರನ್​ ಗಳಿಸಿದ್ದ ಅವಧಿಯಲ್ಲಿ ಶತಕ ಸಿಡಿಸಲು ಒಂದು ಅಗತ್ಯ ಇತ್ತು. ಆಂಡರ್ಸನ್ ಎಸೆದ 81 ಓವರ್​ನ 5ನೇ ಎಸೆತದಲ್ಲಿ ಜಡ್ಡು ಮಿಡ್​ಆನ್​​ಗೆ ಚೆಂಡನ್ನು ತಳ್ಳಿದರು.

ಚೆಂಡನ್ನು ತಳ್ಳಿದ ಬೆನ್ನಲ್ಲೇ ರನ್​ ಕದಿಯಲು ಒಂದೆರೆಡು ಹೆಜ್ಜೆ ಮುಂದೆ ಇಟ್ಟರು. ಚೆಂಡನ್ನು ಗಮನಿಸದ ಅಷ್ಟರೊಳಗೆ ಸರ್ಫರಾಜ್ ಖಾನ್ ಪಿಚ್ ಅರ್ಧಕ್ಕೆ ಹೋಗಿದ್ದರು. ನಂತರ ಜಡೇಜಾ, ಆತನನ್ನು ಹಿಂದಕ್ಕೆ ಕಳುಹಿಸಿದರು. ಅದನ್ನು ಎಚ್ಚೆತ್ತು ಹಿಂತಿರುಗಲು ಪ್ರಯತ್ನಿಸಿದ ಸರ್ಫರಾಜ್​, ರನೌಟ್ ಆದರು. ಮಾರ್ಕ್​ವುಡ್ ಸ್ಟ್ರೈಟ್​ ಸ್ಟಂಪ್ಸ್​ಗೆ ಹೊಡೆದರು. ಬಹುಶಃ ಸರ್ಫರಾಜ್​ ಡೈವ್​ ಹೊಡೆದಿದ್ದರೆ ರನೌಟ್​​ನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇತ್ತು.

ಸರ್ಫರಾಜ್ ರನೌಟ್​ ಆಗುತ್ತಿದ್ದಂತೆ ಜಡೇಜಾ ಕೂಡ ಬೇಸರಕ್ಕೆ ಒಳಗಾದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಮಿಂಚುತ್ತಿದ್ದ ಸರ್ಫರಾಜ್ ಸಹ ಬೇಸರದೊಂದಿಗೆ ಡ್ರೆಸ್ಸಿಂಗ್​ ರೂಮ್​ಗೆ ಹೆಜ್ಜೆ ಹಾಕಿದರು. ಅದ್ಭುತವಾಗಿ ಆಡುತ್ತಿದ್ದ ಸರ್ಫರಾಜ್ ದುರದೃಷ್ಟಕರ ರನೌಟ್​ ಆದ ಬೆನ್ನಲ್ಲೇ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದ ನಾಯಕ ರೋಹಿತ್​​ ಶರ್ಮಾ ಕೋಪಗೊಂಡರು. ಹತಾಶೆಯನ್ನು ಹೊರಹಾಕಿ ತನ್ನ ಟೋಪಿಯನ್ನು ಎಸೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಡೇಜಾರನ್ನು ದೂಷಿಸಿದ ರೋಹಿತ್

ಸರ್ಫರಾಜ್ ಔಟಾದ ಮರು ಎಸೆತದಲ್ಲೇ ಟೆಸ್ಟ್​ ಕ್ರಿಕೆಟ್​ನ 4ನೇ ಶತಕ ಪೂರೈಸಿದ ಜಡೇಜಾ ವಿರುದ್ಧ ಜಾಲತಾಣದಲ್ಲಿ ನೆಟ್ಟಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಉದಾಹರಣೆಗಳ ಸಮೇತ ಜಡ್ಡುರನ್ನು ಸ್ವಾರ್ಥಿ ಎಂದು ಜರಿದಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಹಾರ್ದಿಕ್​ರನ್ನು ರನೌಟ್ ಮಾಡಿದ್ದರು. 2021ರಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ರನೌಟ್ ಮಾಡಿದ್ದರು. ಇದೀಗ ಅರ್ಧಶತಕ ಸಿಡಿಸಿದ್ದ ಸರ್ಫರಾಜ್​ರನ್ನು ರನೌಟ್ ಮಾಡಿದ್ದಾರೆ. ಎಲ್ಲಾ ದಾಖಲೆಗಾಗಿ ಎಂದು ನೆಟ್ಟಿಗರು ಸಿಡಿದೆದ್ದಿದ್ದಾರೆ.

ರನೌಟ್‌ನಿಂದ ರೋಹಿತ್ ಅಸಮಾಧಾನಗೊಂಡರು. ಅಭಿಮಾನಿಗಳು ನಿರಾಶೆಗೊಂಡರು. ರಾಜ್‌ಕೋಟ್‌ನಲ್ಲಿ ಸರ್ಫರಾಜ್​ ರನೌಟ್​ಗೆ ಜಡೇಜಾ ಕಾರಣ ಎನ್ನುತ್ತಿದ್ದಾರೆ. ಮಗನ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದ ತಂದೆ ನಿರಾಸೆಗೊಂಡರು. ಸರ್ಫರಾಜ್ ಕ್ರೀಸ್‌ಗೆ ಕಾಲಿಟ್ಟಾಗ ಜಡೇಜಾ 84 ರನ್ ಗಳಿಸಿದ್ದರು. ಆದರೆ ಆಲ್‌ರೌಂಡರ್ ತನ್ನ ಶತಕ ತಲುಪುವ ಮೊದಲು ಯುವ ಬ್ಯಾಟರ್ 62 ರನ್‌ಗಳ ಅಬ್ಬರದ ಹಾದಿಯಲ್ಲಿ ಸಾಗಿದರು.

ಇಂಗ್ಲೆಂಡ್ ಸ್ಪಿನ್ನರ್‌ಗಳಾದ ಜೋ ರೂಟ್, ಟಾಮ್ ಹಾರ್ಟ್ಲಿ ಮತ್ತು ರೆಹಾನ್ ಅಹ್ಮದ್ ಅವರನ್ನು ಸಮರ್ಥವಾಗಿ ನಿಭಾಯಿಸಿದ ಸರ್ಫರಾಜ್, ವೇಗದ ಅರ್ಧಶತಕ ಸಿಡಿಸಿದರು. ಪ್ರಮುಖ ಬೌಲರ್​​ಗಳಿಗೆ ಬೆಂಡೆತ್ತಿದ ಮುಂಬೈಕರ್​ 48 ಎಸೆತಗಳಲ್ಲಿ ಅರ್ಧಶತಕದ ಗಡಿಯನ್ನು ದಾಟಿದರು. ಚೊಚ್ಚಲ ಪಂದ್ಯದಲ್ಲೇ ವೇಗದ ಅರ್ಧಶತಕ ಸಿಡಿಸಿದ ಭಾರತದ 2ನೇ ಬ್ಯಾಟ್ಸ್​ಮನ್ ಎಂಬ ದಾಖಲೆ ಬರೆದಿದ್ದಾರೆ. 2017ರಲ್ಲಿ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧ ಈ ದಾಖಲೆ ನಿರ್ಮಿಸಿದ್ದರು.

Whats_app_banner