ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೋಚ್ ಮಗಳ ಜೊತೆ ಸೀಕ್ರೆಟ್ ಲವ್ ಟ್ರ್ಯಾಕ್, 13 ವರ್ಷಗಳ ಡೇಟಿಂಗ್ ನಂತರ ಮದುವೆ; ಸುನಿಲ್ ಛೆಟ್ರಿ ಲವ್ ಸ್ಟೋರಿ

ಕೋಚ್ ಮಗಳ ಜೊತೆ ಸೀಕ್ರೆಟ್ ಲವ್ ಟ್ರ್ಯಾಕ್, 13 ವರ್ಷಗಳ ಡೇಟಿಂಗ್ ನಂತರ ಮದುವೆ; ಸುನಿಲ್ ಛೆಟ್ರಿ ಲವ್ ಸ್ಟೋರಿ

  • Sunil Chhetri Love Story : ಭಾರತ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ ಇತ್ತೀಚೆಗೆ ನಿವೃತ್ತಿ ಘೋಷಿಸಿದರು. ಜೂನ್​ 26ರಂದು ತಮ್ಮ ವೃತ್ತಿಜೀವನದ ಕೊನೆಯ ಪಂದ್ಯ ಆಡಲಿರುವ ದಿಗ್ಗಜ ಆಟಗಾರನ ಲವ್​ಸ್ಟೋರಿ ಹೇಗಿತ್ತು ಎಂಬುದನ್ನು ಈ ಮುಂದೆ ತಿಳಿಯೋಣ.

ಭಾರತದಲ್ಲಿ ಫುಟ್ಬಾಲ್ ಕ್ರೇಜ್​ ಹುಟ್ಟಿಸಿದ್ದೇ ಸುನಿಲ್​ ಛೆಟ್ರಿ ಎಂದರೆ ತಪ್ಪಾಗಲ್ಲ. 19 ವರ್ಷಗಳ ಭಾರತ ತಂಡವನ್ನು ಪ್ರತಿನಿಧಿಸಿರುವ ಸುನಿಲ್ ಛೆಟ್ರಿ, ಈಗ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ವಿದಾಯ ಘೋಷಿಸಿದ್ದಾರೆ. ಜೂನ್ 26 ಅವರ ಕೊನೆಯ ಪಂದ್ಯವಾಗಿರಲಿದೆ. ಅಂತಾರಾಷ್ಟ್ರೀಯ ಫುಟ್ಬಾಲ್​ನಲ್ಲಿ 94 ಗೋಲು ಗಳಿಸಿದ ಸುನಿಲ್ ಛೆಟ್ರಿ, ತನ್ನ ಕೋಚ್​ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. ನಿಜವಾಗಿಯೂ ಈ ಪ್ರೇಮಕಥೆ ಸಿನಿಮಾವನ್ನೂ ಮೀರಿಸುತ್ತದೆ.
icon

(1 / 10)

2017ರಲ್ಲಿ ವಿವಾಹವಾದ ಸುನಿಲ್ ಮತ್ತು ಸೋನಮ್ 13 ವರ್ಷಗಳ ಡೇಟಿಂಗ್ ನಡೆಸಿದ್ದರು, ಸುನಿಲ್ ಮತ್ತು ಸೋನಮ್ ಅವರ ಪ್ರೇಮಕಥೆಯು ಯಾವ ಸಿನಿಮಾಗೂ ಕಮ್ಮಿಇಲ್ಲ.
icon

(2 / 10)

ಸೋನಮ್ ಅವರು ಕೋಚ್ ಸುಬ್ರತಾ ಭಟ್ಟಾಚಾರ್ಯ ಅವರ ಪುತ್ರಿ. ಸುಬ್ರತಾ ಅವರು ಮೋಹನ್ ಬಗಾನ್ ಕ್ಲಬ್ ತರಬೇತುದಾರರರು. ಛೆಟ್ರಿ ಒಮ್ಮೆ ಮೋಹನ್ ಬಗಾನ್​ನಲ್ಲಿ ಸುಬ್ರತಾ ಭಟ್ಟಾಚಾರ್ಯ ಅವರ ಅಡಿಯಲ್ಲಿ ಕಣಕ್ಕಿಳಿದಿದ್ದರು.
icon

(3 / 10)

ಸಂದರ್ಶನವೊಂದರಲ್ಲಿ ಸುನಿಲ್ ಛೆಟ್ರಿ ಅವರು ಸೋನಮ್ ಅವರ ಭೇಟಿಯ ಕುರಿತು ಹಂಚಿಕೊಂಡಿದ್ದರು. ಆಕೆಯ ತಂದೆ ನನ್ನ ಕೋಚ್. ಅವರ ಮನೆಯಲ್ಲಿ ನನ್ನ ಆಟದ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ  ಸೋನಮ್​ಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೆಚ್ಚಾಗಿತ್ತು. ಆಗ ಸೋನಮ್​ಗೆ ಕೇವಲ 15 ವರ್ಷ ಮತ್ತು ನನಗೆ 18 ವರ್ಷ.
icon

(4 / 10)

ತನ್ನ ತಂದೆಯ ಫೋನ್​​​ನಲ್ಲಿ ನನ್ನ ನಂಬರ್​​ ಕದ್ದಿದ್ದ ಸೋನಮ್, ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ನನಗೆ ಸಂದೇಶ ಕಳುಹಿಸಿದ್ದರು. ಅದರ ನಂತರ, ಸೋನಮ್ ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಹೇಳಿದ್ದರು. ಈಕೆ ಯಾರೆಂದು ನನಗೆ ತಿಳಿದಿರಲಿಲ್ಲ. ಆದರೆ, ಸೋನಮ್ ಕೇಳಿದ ವಿಧಾನದಿಂದ ನಾನು ಆಕೆಯನ್ನು ಭೇಟಿಯಾಗದೆ ಇರಲು ಸಾಧ್ಯವಾಗಲಿಲ್ಲ ಎಂದು ಸುನಿಲ್ ಛೆಟ್ರಿ ಹೇಳಿದ್ದರು. ನೀನಿನ್ನೂ ಚಿಕ್ಕ ಹುಡುಗಿ ಚೆನ್ನಾಗಿ ಓದು ಎಂದು ಹೇಳಿದ್ದೆ ಎಂದರು.
icon

(5 / 10)

ಅಂದಿನಿಂದ ಇಬ್ಬರ ಪ್ರಯಾಣ ನಿರಂತರವಾಗಿ ಸಾಗುತ್ತಿತ್ತು. ಆದರೆ ಅವರು ಭೇಟಿಯಾಗುತ್ತಿದ್ದದ್ದು ವರ್ಷಕ್ಕೆ ಎರಡರಿಂದ ಮೂರು ಬಾರಿಯಷ್ಟೆ. ಫೋನ್​​​ನಲ್ಲಿ ಹೆಚ್ಚು ಸಂಪರ್ಕದಲ್ಲಿದ್ದರು. ಇದಕ್ಕಾಗಿ ಇಬ್ಬರು ಚಿತ್ರಮಂದಿರಗಳಲ್ಲಿ ರಹಸ್ಯವಾಗಿ ಭೇಟಿಯಾಗುತ್ತಿದ್ದರು, ಆದರೆ ಇಬ್ಬರು ಎಂದಿಗೂ ಒಟ್ಟಿಗೆ ಹೋಗುತ್ತಿರಲಿಲ್ಲ.
icon

(6 / 10)

13 ವರ್ಷಗಳ ಕಾಲ ಕದ್ದುಮುಚ್ಚಿ ಡೇಟಿಂಗ್ ನಡೆಸಿದ ನಂತರ ಛೆಟ್ರಿ, ಸೋನಮ್ ಅವರನ್ನು ಮದುವೆಯಾಗುವ ಬಗ್ಗೆ ತನ್ನ ಕೋಚ್​​ನೊಂದಿಗೆ ಮಾತನಾಡಲು ಧೈರ್ಯ ಮಾಡಿದರು. ಆದರೆ ಛೆಟ್ರಿ ಮಾತನಾಡಲು ಹೆದರುವಷ್ಟು ಏನೂ ಸಂಭವಿಸಲಿಲ್ಲ. ವಿಷಯ ತಿಳಿಸಿದ ನಂತರ ಕೋಚ್ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.
icon

(7 / 10)

ಸುನಿಲ್ ಛೆಟ್ರಿ ಮತ್ತು ಸೋನಮ್ ಭಟ್ಟಾಚಾರ್ಯ ದಂಪತಿಗೆ ಕಳೆದ ವರ್ಷ ಆಗಸ್ಟ್ 31 ರಂದು ಗಂಡು ಮಗು ಜನಿಸಿದ್ದಾನೆ.
icon

(8 / 10)

39 ವರ್ಷದ ಸುನಿಲ್ ಛೆಟ್ರಿ ತಮ್ಮ ವೃತ್ತಿಜೀವನದಲ್ಲಿ ಒಟ್ಟು 150 ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ, ಇದರಲ್ಲಿ ಅವರು 94 ಗೋಲುಗಳನ್ನು ಗಳಿಸಿದ್ದಾರೆ. ಸುನಿಲ್ ಛೆಟ್ರಿ ಅವರಿಗೆ ಭಾರತ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ಅಚ್ಚುಮೆಚ್ಚಿನ ಗೆಳೆಯ.
icon

(9 / 10)

ಸುನಿಲ್ ಛೆಟ್ರಿ ಜೂನ್ 6 ರಂದು ಕುವೈತ್ ವಿರುದ್ಧ ನಡೆಯಲಿರುವ ಫಿಫಾ ವಿಶ್ವಕಪ್ 2026 ಅರ್ಹತಾ ಪಂದ್ಯದ ನಂತರ ನಿವೃತ್ತರಾಗಲಿದ್ದಾರೆ.
icon

(10 / 10)

ಸುನಿಲ್ ಛೆಟ್ರಿ ಜೂನ್ 6 ರಂದು ಕುವೈತ್ ವಿರುದ್ಧ ನಡೆಯಲಿರುವ ಫಿಫಾ ವಿಶ್ವಕಪ್ 2026 ಅರ್ಹತಾ ಪಂದ್ಯದ ನಂತರ ನಿವೃತ್ತರಾಗಲಿದ್ದಾರೆ.

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು