Dhammika Niroshana: ಪತ್ನಿ, ಮಕ್ಕಳ ಎದುರೇ ಶ್ರೀಲಂಕಾದ ಆಟಗಾರ ಧಮ್ಮಿಕಾ ನಿರೋಶನಾ ಗುಂಡಿಕ್ಕಿ ಹತ್ಯೆ
ಕನ್ನಡ ಸುದ್ದಿ  /  ಕ್ರಿಕೆಟ್  /  Dhammika Niroshana: ಪತ್ನಿ, ಮಕ್ಕಳ ಎದುರೇ ಶ್ರೀಲಂಕಾದ ಆಟಗಾರ ಧಮ್ಮಿಕಾ ನಿರೋಶನಾ ಗುಂಡಿಕ್ಕಿ ಹತ್ಯೆ

Dhammika Niroshana: ಪತ್ನಿ, ಮಕ್ಕಳ ಎದುರೇ ಶ್ರೀಲಂಕಾದ ಆಟಗಾರ ಧಮ್ಮಿಕಾ ನಿರೋಶನಾ ಗುಂಡಿಕ್ಕಿ ಹತ್ಯೆ

Dhammika Niroshana: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಶನಾ ಅವರನ್ನು ಜುಲೈ 16ರ ಮಂಗಳವಾರ ರಾತ್ರಿ ಶ್ರೀಲಂಕಾದ ಅಂಲಂಗೋಡದಲ್ಲಿರುವ ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕುಟುಂಬಸ್ಥರ ಎದುರೇ ಮನೆಯಲ್ಲೇ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಶನಾ ಗುಂಡಿಕ್ಕಿ ಹತ್ಯೆ
ಕುಟುಂಬಸ್ಥರ ಎದುರೇ ಮನೆಯಲ್ಲೇ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಶನಾ ಗುಂಡಿಕ್ಕಿ ಹತ್ಯೆ

ಶ್ರೀಲಂಕಾದ ಅಂಡರ್-19 ತಂಡದ ಮಾಜಿ ನಾಯಕ ಧಮ್ಮಿಕಾ ನಿರೋಶನಾ ಅವರು (Dhammika Niroshana) ತಮ್ಮ 41ನೇ ವಯಸ್ಸಿನಲ್ಲಿ ಶ್ರೀಲಂಕಾದ ಅಂಬಲಂಗೋಡದಲ್ಲಿರುವ ತಮ್ಮ ಮನೆಯ ಹೊರಗೆ ಅಪರಿಚಿತ ವ್ಯಕ್ತಿಯಿಂದ ಗುಂಡಿನ ದಾಳಿಗೆ ಒಳಗಾಗಿ ನಿಧನರಾಗಿದ್ದಾರೆ. ಜುಲೈ 16ರ ಮಂಗಳವಾರ ರಾತ್ರಿ ಗಾಲೆ ಜಿಲ್ಲೆಯ ಕರಾವಳಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ದಾಳಿ ನಡೆಸಿದ ಅವಧಿಯಲ್ಲಿ ನಿರೋಶನಾ (41) ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳು ಜೊತೆಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶ್ರೀಲಂಕಾ ಪೊಲೀಸರು ವರದಿ ಮಾಡಿದಂತೆ, ನಿರೋಶನಾ ಅವರ ಮನೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಮತ್ತು ದುಷ್ಕರ್ಮಿಯ ಗುರುತು ಸದ್ಯಕ್ಕೆ ತಿಳಿದು ಬಂದಿಲ್ಲ. ಕಾನೂನು ಜಾರಿ ಸಂಸ್ಥೆಗಳು ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದು, ಶಂಕಿತನ ಹುಡುಕಾಟ ನಡೆಯುತ್ತಿದೆ. ಆದರೆ, ಅಕಾಲಿಕ ಮರಣವು ಶ್ರೀಲಂಕಾದ ಕ್ರೀಡಾ ಸಮುದಾಯದ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೊಂದಿದ್ದರು.

ಚಿಲಾವ್ ಮೇರಿಯನ್ಸ್ ಕ್ರಿಕೆಟ್ ಕ್ಲಬ್, ಗಾಲೆ ಕ್ರಿಕೆಟ್ ಕ್ಲಬ್ ಮತ್ತು ಶ್ರೀಲಂಕಾದ ಸಿಂಘಾ ಸ್ಪೋರ್ಟ್ಸ್ ಕ್ಲಬ್ ಅನ್ನು ಪ್ರತಿನಿಧಿಸಿದ್ದಾರೆ. ಒಟ್ಟು 12 ಪ್ರಥಮ ದರ್ಜೆ ಪಂದ್ಯಗಳಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸಿ 19 ವಿಕೆಟ್ ಕಬಳಿಸುವ ಮೂಲಕ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. 12 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದು, ಲೀಸ್ಟ್​ ಎ ಪಂದ್ಯಗಳಲ್ಲಿ 5 ವಿಕೆಟ್ ಉರುಳಿಸಿದ್ದಾರೆ. 2000ರಲ್ಲಿ ಅಂಡರ್​ - 19 ತಂಡಕ್ಕೆ ಪದಾರ್ಪಣೆ ಮಾಡಿದ್ದು, 2002ರಲ್ಲಿ ನಾಯಕತ್ವ ವಹಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು, ಶೋಕ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ, ರೋಹಿತ್​​ಗೆ ಗೌತಮ್ ಗಂಭೀರ್ ಮನವಿ

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಪಂದ್ಯವಳಿಯಲ್ಲಿ ಸೋತರೂ, ಈ ಬಾರಿಯ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ಬಳಿಕ ಭಾರತ ಕ್ರಿಕೆಟ್‌ ತಂಡ ತುಸು ನಿರಾಳವಾಗಿದೆ. ಇದೀಗ ಟೀಮ್‌ ಇಂಡಿಯಾ ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಪ್ರಮುಖ ಐಸಿಸಿ ಟೂರ್ನಮೆಂಟ್‌ಗೆ ಸಿದ್ಧತೆಯಾಗಿ ತಂಡವು ಎರಡು ಸರಣಿಗಳಲ್ಲಿ ಕೇವಲ ಆರು ಏಕದಿನ ಪಂದ್ಯಗಳಲ್ಲಿ ಮಾತ್ರ ಆಡಲಿದೆ. ಮೊದಲ ಸರಣಿಯು ಆಗಸ್ಟ್ 3ರಿಂದ 7ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದ್ದು, 2ನೇ ಸರಣಿಯು 2025ರ ಫೆಬ್ರವರಿ ಮೊದಲ ವಾರದಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿದೆ.

ಹಾಗಾಗಿ, ಶ್ರೀಲಂಕಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಏಕದಿನ ಸರಣಿಯ ಭಾಗವಾಗಬೇಕೆಂದು ಹೆಡ್​ಕೋಚ್ ಗೌತಮ್ ಗಂಭೀರ್​ಬಯಸಿದ್ದಾರೆ. ಬಿಸಿಸಿಐ ಈ ವಾರದಲ್ಲೇ ಈ 2 ಸರಣಿಗಳಿಗೆ ತಂಡವನ್ನು ಪ್ರಕಟಿಸಲಿದೆ. ಅದಕ್ಕೂ ಮೊದಲು ಗಂಭೀರ್ ಈ ಮೂವರಿಗೂ ಮನವಿ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ, ಟಿ20 ವಿಶ್ವಕಪ್ ಗೆಲುವಿನ ಬಳಿಕ ಆಟಗಾರರು ಪ್ರಸ್ತುತ ವಿರಾಮದಲ್ಲಿದ್ದಾರೆ. ಹೆಚ್ಚಿನ ಆಟಗಾರರು ತಮ್ಮ ಕುಟುಂಬಗಳೊಂದಿಗೆ ವಿದೇಶದಲ್ಲಿರುವುದರಿಂದ ಅವರು ಇನ್ನೂ ತವರಿಗೆ ಮರಳಿಲ್ಲ. ಹೀಗಾಗಿ ಈ ಮೂವರನ್ನು ಗಂಭಿರ್‌ ಸಂಪರ್ಕಿಸಿ ತಂಡಕ್ಕೆ ಮರಳುವಂತೆ ಕೇಳಿಕೊಂಡಿದ್ದಾರೆ.

Whats_app_banner