ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಗೌತಮ್ ಗಂಭೀರ್ ಲವ್​ಸ್ಟೋರಿ; ಗಿಫ್ಟ್ ನೀಡಿ ನತಾಶಾರನ್ನು ಸೆಳೆದಿದ್ದ!
ಕನ್ನಡ ಸುದ್ದಿ  /  ಕ್ರಿಕೆಟ್  /  ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಗೌತಮ್ ಗಂಭೀರ್ ಲವ್​ಸ್ಟೋರಿ; ಗಿಫ್ಟ್ ನೀಡಿ ನತಾಶಾರನ್ನು ಸೆಳೆದಿದ್ದ!

ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಗೌತಮ್ ಗಂಭೀರ್ ಲವ್​ಸ್ಟೋರಿ; ಗಿಫ್ಟ್ ನೀಡಿ ನತಾಶಾರನ್ನು ಸೆಳೆದಿದ್ದ!

Gautam Gambhir Love Story: ಗೌತಮ್ ಗಂಭೀರ್ ಸದಾ ಗಂಭೀರವಾಗಿರುತ್ತಾರೆ ಎಂಬುದಷ್ಟೇ ನಿಮಗೆ ಗೊತ್ತು. ಆದರೆ, ಅವರಲ್ಲಿ ಕೂಡ ರೊಮ್ಯಾಂಟಿಕ್​ ಆ್ಯಂಗಲ್ ಇದೆ ಎನ್ನುವುದು ಸಾಕಷ್ಟು ಮಂದಿಗೆ ತಿಳಿದಿಲ್ಲ!

ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಗೌತಮ್ ಗಂಭೀರ್ ಲವ್​ಸ್ಟೋರಿ; ಗಿಫ್ಟ್ ನೀಡಿ ನತಾಶಾರನ್ನು ಸೆಳೆದಿದ್ದ!
ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ ಗೌತಮ್ ಗಂಭೀರ್ ಲವ್​ಸ್ಟೋರಿ; ಗಿಫ್ಟ್ ನೀಡಿ ನತಾಶಾರನ್ನು ಸೆಳೆದಿದ್ದ!

ಗೌತಮ್ ಗಂಭೀರ್ ಪ್ರಸ್ತುತ ಟೀಮ್ ಇಂಡಿಯಾದ ನೂತನ ಕೋಚ್. ಇದೇ ತಿಂಗಳ ಶ್ರೀಲಂಕಾ ಸರಣಿಯಲ್ಲಿ ಜವಾಬ್ದಾರಿ ವಹಿಸಿಕೊಳ್ಳಲಿದ್ದು, 2027ರ ತನಕ ಸೇವೆ ಸಲ್ಲಿಸಲಿದ್ದಾರೆ. ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಗೌತಿ, 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್​​ ಗೆಲುವಿನಲ್ಲಿ ಅಪಾರ ಕೊಡುಗೆ ನೀಡಿದ್ದರು. ಎರಡೂ ಟೂರ್ನಿಗಳ ಫೈನಲ್​​ಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಮೆನ್ ಇನ್ ಬ್ಲ್ಯೂ ಪರ ಅದೆಷ್ಟೋ ಶ್ರೇಷ್ಠ ಇನ್ನಿಂಗ್ಸ್​​ಗಳನ್ನು ಕಟ್ಟಿರುವ ಗಂಭೀರ್, ಇದೇ ವರ್ಷ ಐಪಿಎಲ್​ನಲ್ಲಿ ಕೆಕೆಆರ್ ತಂಡದ ಮೆಂಟರ್​ ಆಗಿದ್ದರು.

ಮೈದಾನದ ಒಳಗೆ ಹಾಗೂ ಹೊರಗೆ ಸದಾ ಗಂಭೀರವಾಗಿರುವ ಗಂಭೀರ್ ಕೂಡ ಪ್ರೀತಿ ಮಾಡಿಯೇ ಮದುವೆಯಾಗಿದ್ದಾರೆ ಎಂಬುದನ್ನು ನಂಬುತ್ತೀರಾ? ಹೌದು, ಗಂಭೀರ್​ ಲವ್​ ಮಾಡಿದ್ರಾ ಎಂದು ನೀವು ಅಚ್ಚರಿ ವ್ಯಕ್ತಪಡಿಸಿದರೂ ಇದೇ ನಿಜ. ಆದರೆ, ಗಂಭೀರ್ ಮತ್ತು ಪತ್ನಿ ನತಾಶಾ ಜೈನ್ ಅವರ ಪ್ರೀತಿ ಕಥೆ (Gautam Gambhir Natasha Jain Love Story) ಯಾವ ಸಿನಿಮಾ ಸ್ಟೋರಿಗೂ ಕಮ್ಮಿ ಇಲ್ಲ. ಈ ದಂಪತಿ 2011ರಲ್ಲಿ ವಿವಾಹವಾದರು. ಇವರಿಗೀಗ ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಮದುವೆಗೂ ಮುನ್ನ ಗಂಭೀರ್​​, ನತಾಶಾಗೆ ಷರತ್ತು ಹಾಕಿದ್ದರು. ತಂದೆಯ ಸ್ನೇಹಿತನ ಮಗಳನ್ನೇ ಗಂಭೀರ್ ಮದುವೆಯಾಗಿರುವುದು ಮತ್ತೊಂದು ವಿಶೇಷ.

ಗಂಭೀರ್-ನತಾಶಾ ಲವ್​​ಸ್ಟೋರಿ ಶುರುವಾಗಿದ್ದೇಗೆ?

ಗಂಭೀರ್​​ ಮತ್ತು ನತಾಶಾ ಅವರ ತಂದೆ ಉತ್ತಮ ಸ್ನೇಹಿತರು. ಇವರಿಬ್ಬರ ತಂದೆಯವರ ಸ್ನೇಹ 35 ವರ್ಷಗಳ ಹಳೆಯದ್ದು. ಗಂಭೀರ್ ತಂದೆ ದೀಪಕ್ ಅವರು ಟೆಕ್ಸ್ಟ್​ಟೈಲ್ ಉದ್ಯಮ ನಡೆಸುತ್ತಿದ್ದರು. ನತಾಶಾ ತಂದೆ ರವೀಂದ್ರ ಜೈನ್ ಕೂಡ ಉದ್ಯಮಿಯಾಗಿದ್ದರು. ಹಾಗಾಗಿ ಗಂಭೀರ್-ನತಾಶಾ ಕೂಡ ಉತ್ತಮ ಸ್ನೇಹಿತರಾಗಿದ್ದರು. ನವದೆಹಲಿಯಲ್ಲಿ ಜನಿಸಿದ ಗಂಭೀರ್, ಲಾಲ್​ ಬಹುದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ 10ನೇ ತರಗತಿಯಿಂದ ಕ್ರಿಕೆಟ್​ ತರಬೇತಿ ಪಡೆಯುತ್ತಿದ್ದರು.

ಇವರಿಬ್ಬರ ಕುಟುಂಬಗಳ ಸ್ನೇಹ ತುಂಬಾ ಸಲುಗೆಯಿಂದ ಕೂಡಿತ್ತು. ಅವರ ಮನೆಗೆ ಇವರು, ಇವರ ಮನೆಗೆ ಅವರು ತುಂಬಾ ಮುಕ್ತವಾಗಿ ಓಡಾಡುತ್ತಿದ್ದರು. ಅದರಲ್ಲೂ ಗಂಭೀರ್-ನತಾಶಾ ಜಾಸ್ತಿ. ಒಟ್ಟಿಗೆ ಓಡಾಡುತ್ತಿದ್ದರು, ತಿರುಗುತ್ತಿದ್ದರು. ಇದಕ್ಕೆ ಎರಡೂ ಕುಟುಂಬ ಸದಸ್ಯರ ಒಪ್ಪಿಗೆಯೂ ಇತ್ತು. ಅವರಿಬ್ಬರು ಏನೇ ಮಾಡಿದರೂ, ಎಂದೂ ಪೋಷಕರು ಪ್ರಶ್ನಿಸಿಲ್ಲ. ಅಷ್ಟರಮಟ್ಟಿಗೆ ಸ್ವಾತಂತ್ರ್ಯ ನೀಡಿದ್ದರು.

ಪ್ರೀತಿ ಕಡೆಯ ಹೆಜ್ಜೆ

ಆರಂಭದಲ್ಲಿ ಸ್ನೇಹಿತರಾಗಿದ್ದ ಗೌತಿ-ನತಾಶಾ 2-3 ವರ್ಷಗಳ ಓಡಾಟ, ತಿರುಗಾಟದ ನಂತರ ಪರಸ್ಪರ ಪ್ರೀತಿಯ ಬಲೆಗೆ ಬಿದ್ದರು. ಜೀವನಪೂರ್ತಿ ಒಟ್ಟಾಗಿ ಇರಲು ನಿರ್ಧರಿಸಿದರು. ಅವರಿಬ್ಬರೂ ಮೊದಲು ಮದುವೆಯಾಗಲೂ ನಿರ್ಧರಿಸಿದರು. ನಂತರ ಪೋಷಕರ ಒಪ್ಪಿಗೆ ಪಡೆದರು. ವಿಶೇಷ ಅಂದರೆ, ಎರಡೂ ಕುಟುಂಬಗಳು ಸಂತೋಷದಿಂದಲೇ ಒಪ್ಪಿದವು. 2010ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ನತಾಶಾಗೆ ಕ್ರಿಕೆಟ್ ಮೇಲಿರಲಿಲ್ಲ ಒಲವು

ನತಾಶಾಗೆ ಕ್ರಿಕೆಟ್​​ ಮೇಲೆ ಹುಚ್ಚು ಇರಲಿಲ್ಲ. ಇದು ಗಂಭೀರ್​ಗೂ ಇಷ್ಟವಾಗಿತ್ತು. ಏಕೆಂದರೆ, ಸಿಕ್ಕ ಸಿಕ್ಕವರೆಲ್ಲಾ ಜೊತೆ ಬೇರೆ ವಿಷಯಗಳ ಕುರಿತು ಮಾತಾಡಿದರೂ, ಕೊನೆಗೆ ಕ್ರಿಕೆಟ್​​​ ಚರ್ಚೆಯಲ್ಲಿ ಅಂತ್ಯವಾಗುತ್ತಿತ್ತು. ಆದರೆ ನತಾಶಾಗೆ ಕ್ರಿಕೆಟ್​​ ಬಗ್ಗೆ ಎಂದೂ ಮಾತಾಡಿದವರೇ ಅಲ್ಲ. ಕ್ರಿಕೆಟ್​ ಬಿಟ್ಟು ಬೇರೆ ಮಾತಾಡುತ್ತಿದ್ದರು. ಇದು ಗಂಭೀರ್​ಗೆ ತುಂಬಾ ಇಷ್ಟವಾಗಿತ್ತು. ಅಚ್ಚರಿ ಅಂದರೆ, ಗಂಭೀರ್​​ ಅವರನ್ನು ಪ್ರೀತಿಸಲು ತುಂಬಾ ಮಂದಿ ಹಿಂದೆ ಬಿದ್ದಿದ್ದರಂತೆ. ಆದರೆ, ನತಾಶಾ ಅದಕ್ಕೆ ಅವಕಾಶ ನೀಡಲಿಲ್ಲವಂತೆ.

ಗಿಫ್ಟ್ ಕೊಟ್ಟು ಇಂಪ್ರೆಸ್ ಮಾಡಿದ್ದ

ಆಕೆಗೆ ಫ್ಯಾಷನ್, ಬಟ್ಟೆ ಮೇಕಪ್, ಚಿನ್ನಾಭರಣಗಳ ಮೇಲೆ ಆಸಕ್ತಿ ಹೆಚ್ಚಿತ್ತು. ಇದನ್ನೇ ಲಾಭ ಮಾಡಿಕೊಂಡ ಗೌತಿ, ಅವುಗಳನ್ನೇ ಗಿಫ್ಟ್​ ಕೊಟ್ಟು ಇಂಪ್ರೆಸ್​ ಮಾಡುತ್ತಿದ್ದರಂತೆ. ಆಗ ಗಂಭೀರ್​,​ ನತಾಶಾಗೆ ಮತ್ತಷ್ಟು ಹತ್ತಿರವಾಗಿದ್ದರು. ಹೀಗಂತ ನತಾಶಾ ಮಾಧ್ಯಮ ಒಂದಕ್ಕೆ ಹೇಳಿದ್ದರು. ಗಂಭೀರ್ ಅವರ ಸರಳ ವ್ಯಕ್ತಿತ್ವ ನನಗೆ ತುಂಬಾ ಆಕರ್ಷಿಸಿತು. ಈ ಗುಣ ನನಗೆ ಬಹಳ ಇಷ್ಟವಾಯಿತು. ಹಾಗಾಗಿ, ಇವರೇ ನನ್ನ ಬೆಸ್ಟ್​​ ಪಾಟ್ನರ್ ಎಂದು ನಿರ್ಧರಿಸಿದ್ದೆ ಎಂದು ನತಾಶಾ ಹೇಳಿದ್ದರು.

ಮದುವೆಗೆ ಷರತ್ತು ಹಾಕಿದ್ದ ಗಂಭೀರ್

ಪ್ರೇಮ ವಿಚಾರ ಮನೆಯಲ್ಲಿ ಹೇಳುವುದಕ್ಕೂ ಮೊದಲು ಇವರಿಬ್ಬರು ರಹಸ್ಯವಾಗಿ ಡೇಟಿಂಗ್ ನಡೆಸುತ್ತಿದ್ದರು. ಮನೆಯವರು ಇದ್ದಾಗ ಉತ್ತಮ ಸ್ನೇಹಿತರಂತೆ ವರ್ತನೆ, ಯಾರೂ ಇಲ್ಲದ ವೇಳೆ ರೊಮ್ಯಾಂಟಿಕ್ ಆಗಿ ಇರುತ್ತಿದ್ದರು. ಈ ವಿಷಯವನ್ನೇ ಖುದ್ದು ಅವರೇ ಬಹಿರಂಗಪಡಿಸಿದ್ದಾರೆ. ಆದರೆ ಈ ಪ್ರೀತಿ ನಡುವೆಯೇ ಗಂಭೀರ್​ ಕ್ರಿಕೆಟ್​ನಲ್ಲೂ ದೊಡ್ಡ ಹೆಸರು ಸಂಪಾದಿಸಿದ್ದರು. ಮದುವೆಗೂ ಮುನ್ನ 2007ರ ಟಿ20 ವಿಶ್ವಕಪ್​ ಗೆದ್ದ ಭಾರತ ತಂಡದ ಸದಸ್ಯರು ಆಗಿದ್ದರು.

ಈ ವಿಶ್ವಕಪ್​ ಮುಗಿದ ನಂತರ ಮನೆಯಲ್ಲಿ ತಮ್ಮ ಪ್ರೇಮ ವಿಚಾರವನ್ನು ಪ್ರಸ್ತಾಪಿಸಿದ್ದರು. ಮನೆಯಲ್ಲೂ ಒಪ್ಪಿಗೆ ಸಿಕ್ಕಿತು. ಆದರೆ 2011ರ ಏಕದಿನ ವಿಶ್ವಕಪ್ ನಂತರ ಮದುವೆಯಾಗೋಣ ಎಂದು ತೀರ್ಮಾನ ತೆಗೆದುಕೊಂಡಿದ್ದರು. 2010ರಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡಿದ್ದರು. ಏಕದಿನ ವಿಶ್ವಕಪ್​ ಗೆದ್ದ ನಂತರ ಅಕ್ಟೋಬರ್​ 29ರಂದು ಇಬ್ಬರು ಮದುವೆಯಾದರು.

ಸರಳ ಮದುವೆ

ಗುರ್‌ಗಾಂವ್‌ನ ಫಾರ್ಮ್​​ಹೌಸ್​​ನಲ್ಲಿ ನಡೆದ ವಿವಾಹದಲ್ಲಿ ಕುಟುಂಬ ಸದಸ್ಯರು, ಕೆಲವೇ ಕೆಲವು ಆಪ್ತರು ಭಾಗಿಯಾಗಿದ್ದರು. ಪಂಜಾಬಿ ಸಂಪ್ರಾದಾಯದ ಶೈಲಿಯಲ್ಲಿ ಮದುವೆ, ಮೆಹೆಂದಿ ಕಾರ್ಯಕ್ರಮ, ಸಂಗೀತ್ ಕಾರ್ಯಕ್ರಮ ನಡೆದಿತ್ತು. ಈ ದಂಪತಿಗೆ ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಜೀನ್ 2014ರ ಮೇನಲ್ಲಿ ಜನಿಸಿದರೆ, ಕಿರಿಯ ಮಗಳು 2017ರ ಜೂನ್​ನಲ್ಲಿ ಜನಿಸಿದಳು. ಗೌತಮ್ ಗಂಭೀರ್ ಆಸ್ತಿ ಮೌಲ್ಯ, 265 ಕೋಟಿಗೂ ಹೆಚ್ಚಿದೆ. ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗಂಭೀರ್ 2003 ರಲ್ಲಿ ತಮ್ಮ ಚೊಚ್ಚಲ ಪ್ರವೇಶ ಪ್ರವೇಶ ಮಾಡಿದರು. ಅವರು 2018 ರಲ್ಲಿ ವಿದಾಯ ಹೇಳಿದರು.

Whats_app_banner