ಕನ್ನಡ ಸುದ್ದಿ  /  Cricket  /  From Most Centuries To Highest Runs Getter 10 Unique Records Held By Virat Kohli In The Ipl History For Rcb Prs

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಸಾರ್ವಕಾಲಿಕ 10 ದಾಖಲೆಗಳು; ರೆಕಾರ್ಡ್ ಮುರಿಯೋದಿರಲಿ, ಟಚ್​ ಮಾಡೋಕು ಕಷ್ಟ ಗುರು

Virat Kohli: 17ನೇ ಸೀಸನ್​​​ನಲ್ಲೂ ಆರ್​ಸಿಬಿ ಪರವೇ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ, ಐಪಿಎಲ್​ನಲ್ಲೂ ದಾಖಲೆಗಳ ಸರದಾರನಾಗಿ ಹೊರಹೊಮ್ಮಿದ್ದಾರೆ. ಐಪಿಎಲ್​ನಲ್ಲಿ ಕೊಹ್ಲಿಯ ಟಾಪ್-10 ದಾಖಲೆಗಳು ಯಾವುವು? ಇಲ್ಲಿದೆ ಪಟ್ಟಿ.

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಸಾರ್ವಕಾಲಿಕ 10 ದಾಖಲೆಗಳು
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಸಾರ್ವಕಾಲಿಕ 10 ದಾಖಲೆಗಳು

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ (IPL 2024) ಮಾರ್ಚ್​ 22ರಿಂದ ಪ್ರಾರಂಭವಾಗುತ್ತದೆ. 2024ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RB) ಸೆಣಸಲಿದ್ದು, ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನ ಹೈವೋಲ್ಟೇಜ್ ಕದನಕ್ಕೆ ಆತಿಥ್ಯ ವಹಿಸಲಿದೆ.

17ನೇ ಸೀಸನ್​​​ನಲ್ಲೂ ಆರ್​ಸಿಬಿ ಪರವೇ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ, ಐಪಿಎಲ್​ನಲ್ಲೂ ದಾಖಲೆಗಳ ಸರದಾರನಾಗಿ ಹೊರಹೊಮ್ಮಿದ್ದಾರೆ. 2008ರಿಂದ 2023ರವರೆಗೂ ದಾಖಲೆಗಳ ಮಹಾಪರ್ವತ ನಿರ್ಮಿಸಿರುವ ಕೊಹ್ಲಿ, 17ನೇ ಆವೃತ್ತಿಯಲ್ಲೂ ದಾಖಲೆಗಳ ಬೇಟೆಗೆ ಸಿದ್ಧರಾಗಿದ್ದಾರೆ. ಐಪಿಎಲ್​ನಲ್ಲಿ ಕೊಹ್ಲಿಯ ಟಾಪ್-10 ದಾಖಲೆಗಳು ಯಾವುವು?

ಒಂದೇ ತಂಡದ ಪರ ಕಣಕ್ಕೆ: ಐಪಿಎಲ್ ಇತಿಹಾಸದಲ್ಲಿ ಯಾವುದೇ ಆಟಗಾರ ತಂಡವೊಂದರ ಪರ 17 ಸೀಸನ್​​​ಗಳನ್ನು ಆಡಿದ ದಾಖಲೆ ಹೊಂದಿಲ್ಲ. ಇದೀಗ ಈ ನೂತನ ದಾಖಲೆಯೊಂದಿಗೆ ಕೊಹ್ಲಿ ಐಪಿಎಲ್ ಅಭಿಯಾನ ಆರಂಭಿಸಲು ಸಜ್ಜಾಗಿದ್ದಾರೆ.

ಆವೃತ್ತಿಯೊಂದರಲ್ಲಿ ಹೆಚ್ಚು 50+ ಸ್ಕೋರ್: ಐಪಿಎಲ್​ ಆವೃತ್ತಿಯೊಂದರಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್ ಮಾಡಿದ ಏಕೈಕ ಬ್ಯಾಟರ್​ ಎನಿಸಿದ್ದಾರೆ. 2016ರ ಆವೃತ್ತಿಯಲ್ಲಿ ಕೊಹ್ಲಿ 11 ಬಾರಿ 50+ ಸ್ಕೋರ್ ಮಾಡಿದ್ದಾರೆ. ಈ ಪೈಕಿ 7 ಅರ್ಧಶತಕ, 4 ಶತಕಗಳಿವೆ.

ನಾಯಕನಾಗಿ ದಾಖಲೆ: ಐಪಿಎಲ್​ನಲ್ಲಿ ನಾಯಕನಾಗಿ ಅತ್ಯಧಿಕ ರನ್ ಕಲೆ ಹಾಕಿದ ದಾಖಲೆಯೂ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ನಾಯಕನಾಗಿ 4994 ರನ್ ಗಳಿಸಿದ್ದರೆ, ಧೋನಿ 4660 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ (7263 ರನ್) ಅಗ್ರಸ್ಥಾನದಲ್ಲಿದ್ದಾರೆ.

ಜೊತೆಯಾಟದ ದಾಖಲೆ: ಐಪಿಎಲ್ ಆವೃತ್ತಿಯೊಂದರಲ್ಲಿ ಹೆಚ್ಚು ರನ್ ಗಳಿಸಿದ ಜೋಡಿ ಎಂಬ ದಾಖಲೆಯನ್ನೂ ವಿರಾಟ್ ನಿರ್ಮಿಸಿದ್ದಾರೆ. 2016ರಲ್ಲಿ ಕಿಂಗ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಒಟ್ಟು 939 ರನ್ ಕಲೆ ಹಾಕಿ ಹೊಸ ಇತಿಹಾಸ ನಿರ್ಮಿಸಿದ್ದರು.

ಅತಿ ಹೆಚ್ಚು ಪಂದ್ಯಶ್ರೇಷ್ಠ: ಐಪಿಎಲ್ ಸೀಸನ್‌ ಒಂದರಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಕೊಹ್ಲಿ. 2016ರ ಆವೃತ್ತಿಯಲ್ಲಿ ವಿರಾಟ್ 5 ಬಾರಿ ಪ್ಲೇಯರ್​ ಆಫ್ ದಿ ಮ್ಯಾಚ್​ ಪ್ರಶಸ್ತಿ ಗೆದ್ದಿದ್ದರು. ಈಗಲೂ ಈ ದಾಖಲೆಯನ್ನು ಯಾರೂ ಮುರಿದಿಲ್ಲ.

2ನೇ ಕ್ರಮಾಂಕದಲ್ಲಿ ಅತ್ಯಧಿಕ ರನ್: ಲೀಗ್​​ನ 2ನೇ ಕ್ರಮಾಂಕದಲ್ಲಿ 2 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ ವಿಶಿಷ್ಟ ದಾಖಲೆಯನ್ನೂ ಕೊಹ್ಲಿ ಹೊಂದಿದ್ದಾರೆ. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಾಗ ಕಿಂಗ್ ಈ ಸಾಧನೆ ಮಾಡಿದ್ದಾರೆ.

ಎರಡು ಇನ್ನಿಂಗ್ಸ್​​ಗಳಲ್ಲಿ ಅಧಿಕ ರನ್ ಗಳಿಸಿದ ದಾಖಲೆ: ಐಪಿಎಲ್‌ನಲ್ಲಿ ಮೊದಲ ಇನ್ನಿಂಗ್ಸ್‌ ಮತ್ತು 2ನೇ ಇನ್ನಿಂಗ್ಸ್‌ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯೂ ವಿರಾಟ್ ಹೆಸರಿನಲ್ಲಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಂದ್ಯದಲ್ಲಿ ಕೊಹ್ಲಿ 3905 ರನ್ ಗಳಿಸಿರುವ ಕೊಹ್ಲಿ, ಚೇಸಿಂಗ್​ ಪಂದ್ಯಗಳಲ್ಲಿ 3333 ರನ್ ಗಳಿಸಿದ್ದಾರೆ. ಯಾರೂ ಸಹ ಈ ದಾಖಲೆ ಬರೆದಿಲ್ಲ.

30+ ಸ್ಕೋರ್‌ಗಳ ದಾಖಲೆ: ಐಪಿಎಲ್‌ನಲ್ಲಿ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ 30+ ರನ್ ಕಲೆ ಹಾಕಿದ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಹೊಂದಿದ್ದಾರೆ. ಕೊಹ್ಲಿ 105 ಬಾರಿ ಈ ಸಾಧನೆ ಮಾಡಿದ್ದಾರೆ.

ಆವೃತ್ತಿಯೊಂದರಲ್ಲಿ ಹೆಚ್ಚು ರನ್: ಐಪಿಎಲ್‌ನ ಆವೃತ್ತಿಯೊಂದರಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಕೊಹ್ಲಿ ಹೊಂದಿದ್ದಾರೆ. 2016ರ ಆವೃತ್ತಿಯಲ್ಲಿ ಕಿಂಗ್ ಕೊಹ್ಲಿ 16 ಪಂದ್ಯಗಳಲ್ಲಿ ಒಟ್ಟು 973 ರನ್ ಗಳಿಸಿದ್ದರು.

ಗರಿಷ್ಠ ಶತಕ: ಐಪಿಎಲ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಒಟ್ಟು 7 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರ ಇಷ್ಟು ದಾಖಲೆಗಳನ್ನು ಯಾರು ಮುರಿಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

IPL_Entry_Point