ಸಚಿನ್ರಿಂದ ಶುಭ್ಮನ್ ಗಿಲ್ ತನಕ; ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ಗೆದ್ದಿರುವ ಭಾರತೀಯ ಆಟಗಾರರು
Orange Cap winners in IPL : ಉದ್ಘಾಟನಾ ಆವೃತ್ತಿ 2008ರಿಂದಲೂ ನೀಡಲಾಗುತ್ತಿರುವ ಆರೆಂಜ್ ಕ್ಯಾಪ್ ಅನ್ನು ದಿಗ್ಗಜರೇ ಗೆದ್ದಿದ್ದಾರೆ. ಹಾಗಾದರೆ 16 ಆವೃತ್ತಿಗಳ ಪೈಕಿ ಆರೆಂಜ್ ಕ್ಯಾಪ್ ಗೆದ್ದಿರುವ ಭಾರತೀಯ ಆಟಗಾರರು ಯಾರು? ಇಲ್ಲಿದೆ ಮಾಹಿತಿ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2024 (Indian Premier League 2024) ಮುಂದಿನ ತಿಂಗಳು ಮಾರ್ಚ್ ಅಂತ್ಯದಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಎಲ್ಲಾ 10 ತಂಡಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. 2024ರ ಶ್ರೀಮಂತ ಲೀಗ್ ಯಶಸ್ವಿಯಾಗಿ ಆಯೋಜಿಸಲು ಬಿಸಿಸಿಐ ಕೂಡ ಭರ್ಜರಿ ತಯಾರಿಯಲ್ಲಿ ತೊಡಗಿದೆ.
ಆಟಗಾರರು ಕೂಡ ಅತ್ಯದ್ಭುತ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಲು ತಯಾರಿ ನಡೆಸುತ್ತಿದ್ದಾರೆ. ಇದರೊಂದಿಗೆ ಆರೆಂಜ್ ಕ್ಯಾಪ್ ಗೆಲ್ಲಲು ಸಹ ಸಿದ್ಧರಾಗಿದ್ದಾರೆ. ಉದ್ಘಾಟನಾ ಆವೃತ್ತಿ 2008ರಿಂದಲೂ ನೀಡಲಾಗುತ್ತಿರುವ ಆರೆಂಜ್ ಕ್ಯಾಪ್ ಅನ್ನು ದಿಗ್ಗಜರೇ ಗೆದ್ದಿದ್ದಾರೆ. ಹಾಗಾದರೆ 16 ಆವೃತ್ತಿಗಳ ಪೈಕಿ ಆರೆಂಜ್ ಕ್ಯಾಪ್ ಗೆದ್ದಿರುವ ಭಾರತೀಯ ಆಟಗಾರರು ಯಾರು? ಇಲ್ಲಿದೆ ಮಾಹಿತಿ.
ಸಚಿನ್ ತೆಂಡೂಲ್ಕರ್
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಬ್ಯಾಟರ್. ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಸಚಿನ್, 2010ರ ಸೀಸನ್ನಲ್ಲಿ 15 ಪಂದ್ಯಗಳಲ್ಲಿ 618 ರನ್ ಗಳಿಸಿದ್ದರು. 47.54ರ ಬ್ಯಾಟಿಂಗ್ ಸರಾಸರಿ, 132.62ರ ಸ್ಟ್ರೈಕ್ರೇಟ್ ಹೊಂದಿದ್ದರು. 5 ಅರ್ಧಶತಕಗಳು ಇದ್ದವು.
ರಾಬಿನ್ ಉತ್ತಪ್ಪ
ಆರಂಭಿಕ ಬಲಗೈ ಆಟಗಾರ ರಾಬಿನ್ ಉತ್ತಪ್ಪ ಅವರು ಭಾರತದ ಪರ ಆರೆಂಜ್ ಕ್ಯಾಪ್ ಗೆದ್ದ 2ನೇ ಆಟಗಾರ ಎನಿಸಿದ್ದಾರೆ. ಉತ್ತಪ್ಪ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ 2014ರಲ್ಲಿ ಉತ್ತಪ್ಪ 16 ಪಂದ್ಯಗಳಲ್ಲಿ 44ರ ಬ್ಯಾಟಿಂಗ್ ಸರಾಸರಿ, 137.79 ಸ್ಟ್ರೈಕ್ರೇಟ್ನಲ್ಲಿ 660 ರನ್ ಕಲೆ ಹಾಕಿದ್ದರು. 5 ಅರ್ಧಶತಕಗಳನ್ನು ಸಿಡಿಸಿದ್ದರು.
ವಿರಾಟ್ ಕೊಹ್ಲಿ
ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನ 2016ರ ಋತುವಿನಲ್ಲಿ ಆರೆಂಜ್ ಕ್ಯಾಪ್ ಗೆದ್ದರು. 16 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೊಹ್ಲಿ 973 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದರು. 81.08ರ ಬ್ಯಾಟಿಂಗ್ ಸರಾಸರಿ, 152ರ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆ ಹಾಕಿದ್ದರು. 7 ಅರ್ಧಶತಕ, 4 ಶತಕ ಕೂಡ ಸೇರಿವೆ.
ಕೆಎಲ್ ರಾಹುಲ್
ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ನಾಲ್ಕನೇ ಭಾರತೀಯ ಬ್ಯಾಟರ್. 2020ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ರಾಹುಲ್ 14 ಪಂದ್ಯಗಳಲ್ಲಿ 670 ರನ್ ಕಲೆ ಹಾಕಿದ್ದರು. 55.83ರ ಬ್ಯಾಟಿಂಗ್ ಸರಾಸರಿ, 129.34ರ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆ ಹಾಕಿದ್ದರು. 1 ಶತಕ, 5 ಅರ್ಧಶತಕಗಳನ್ನೂ ರಾಹುಲ್ ಸಿಡಿಸಿದ್ದರು.
ಋತುರಾಜ್ ಗಾಯಕ್ವಾಡ್
ಋತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರನಾಗಿ ಆರೆಂಜ್ ಕ್ಯಾಪ್ ಗೆದ್ದರು. ಗಾಯಕ್ವಾಡ್ 2021ರ ಸೀಸನ್ನಲ್ಲಿ 16 ಪಂದ್ಯಗಳಲ್ಲಿ ಕಣಕ್ಕಿಳಿದು 635 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದರು. 45.36ರ ಬ್ಯಾಟಿಂಗ್ ಸರಾಸರಿ, 136.27ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದರು. 1 ಶತಕ, 4 ಅರ್ಧಶತಕ ಕೂಡ ಸಿಡಿಸಿದ್ದರು.
ಶುಭ್ಮನ್ ಗಿಲ್
ಇಂಡಿಯನ್ ಪ್ರೀಮಿಯರ್ ಲೀಗ್‌ನ 2023ರ ಋತುವಿನಲ್ಲಿ ಶುಭ್ಮನ್ ಗಿಲ್ ಆರೆಂಜ್ ಕ್ಯಾಪ್ ಗೆದ್ದರು. ಮೂರು ಶತಕಗಳ ನೆರವಿನೊಂದಿಗೆ ಗಿಲ್ 17 ಪಂದ್ಯಗಳಲ್ಲಿ ಒಟ್ಟು 890 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದರು. 59.33ರ ಬ್ಯಾಟಿಂಗ್ ಸರಾಸರಿ, 157.80ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದರು. 3 ಶತಕಗಳ ಜೊತೆಗೆ 4 ಅರ್ಧಶತಕಗಳು ಇವೆ.