ಕನ್ನಡ ಸುದ್ದಿ  /  ಕ್ರಿಕೆಟ್  /  Gary Kirsten: ಪಾಕಿಸ್ತಾನ ತಂಡದಲ್ಲಿ ಒಗ್ಗಟ್ಟೇ ಇಲ್ಲ; ಹೆಡ್​​ಕೋಚ್​ ಗ್ಯಾರಿ ಕರ್ಸ್ಟನ್ ಅಚ್ಚರಿ ಹೇಳಿಕೆ

Gary Kirsten: ಪಾಕಿಸ್ತಾನ ತಂಡದಲ್ಲಿ ಒಗ್ಗಟ್ಟೇ ಇಲ್ಲ; ಹೆಡ್​​ಕೋಚ್​ ಗ್ಯಾರಿ ಕರ್ಸ್ಟನ್ ಅಚ್ಚರಿ ಹೇಳಿಕೆ

Gary Kirsten: ಪಾಕಿಸ್ತಾನದ ಸೋಲಿಗೆ ಪ್ರಮುಖ ಕಾರಣಗಳು ಏನು ಎಂಬುದನ್ನು ವಿವರಿಸಿರುವ ಹೆಡ್​ಕೋಚ್​ ಗ್ಯಾರಿ ಕರ್ಸ್ಟನ್, ಆಟಗಾರರಲ್ಲಿ ಏಕತೆಯ ಕೊರತೆ ಮತ್ತು ಫಿಟ್ನೆಸ್ ಸಮಸ್ಯೆಗಳೇ ಪಾಕಿಸ್ತಾನ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

Gary Kirsten: ಪಾಕಿಸ್ತಾನ ತಂಡದಲ್ಲಿ ಒಗ್ಗಟ್ಟೇ ಇಲ್ಲ; ಹೆಡ್​​ಕೋಚ್​ ಗ್ಯಾರಿ ಕರ್ಸ್ಟನ್ ಅಚ್ಚರಿ ಹೇಳಿಕೆ
Gary Kirsten: ಪಾಕಿಸ್ತಾನ ತಂಡದಲ್ಲಿ ಒಗ್ಗಟ್ಟೇ ಇಲ್ಲ; ಹೆಡ್​​ಕೋಚ್​ ಗ್ಯಾರಿ ಕರ್ಸ್ಟನ್ ಅಚ್ಚರಿ ಹೇಳಿಕೆ

ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಗುಂಪು ಹಂತದಲ್ಲೇ ಹೊರಬಿದ್ದಿತು. ಯುಎಸ್​ಎ ಮತ್ತು ಭಾರತ ತಂಡದ ವಿರುದ್ಧ ಸೋತ ಪಾಕ್, ಕೊನೆಯ ಎರಡು ಪಂದ್ಯಗಳನ್ನು ಗೆದ್ದರೂ ಮುಂದಿನ ಹಂತಕ್ಕೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಯುಎಸ್​ಎ 5 ಅಂಕ ಗಳಿಸಿ ಸೂಪರ್​​-8ಗೆ ಲಗ್ಗೆ ಇಟ್ಟಿತು. ಪಾಕ್ 4 ಅಂಕ ಪಡೆದು ಟೂರ್ನಿಯಿಂದ ಹೊರಬಿತ್ತು. ತಂಡದ ಕಳಪೆ ಪ್ರದರ್ಶನಕ್ಕೆ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್,​ ನಿರಾಶಾದಾಯಕವಾಗಿ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ಸೋಲಿಗೆ ಪ್ರಮುಖ ಕಾರಣಗಳು ಏನು ಎಂಬುದನ್ನು ವಿವರಿಸಿರುವ ಗ್ಯಾರಿ ಕರ್ಸ್ಟನ್, ಆಟಗಾರರಲ್ಲಿ ಏಕತೆಯ ಕೊರತೆ ಮತ್ತು ಫಿಟ್ನೆಸ್ ಸಮಸ್ಯೆಗಳೇ ಪಾಕಿಸ್ತಾನ ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ಸೂಪರ್​-8 ಸುತ್ತಿಗೆ ಅರ್ಹತೆ ಪಡೆಯದ ಪಾಕ್ ತಂಡವನ್ನು ಹೆಡ್​ಕೋಚ್ ಗ್ಯಾರಿ ಕರ್ಸ್ಟನ್ ಅವರೇ ಟೀಕಿಸಿದ್ದಾರೆ. ತಂಡದಲ್ಲಿ ಆಟಗಾರರ ನಡುವೆ ಒಗ್ಗಟ್ಟು ಇಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

2024ರ ವಿಶ್ವಕಪ್​ನಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಪಾಕಿಸ್ತಾನ ಕೂಡ ಒಂದಾಗಿತ್ತು. ಆದರೀಗ ಲೀಗ್​​ನಲ್ಲೇ ಹೊರಬಿದ್ದು ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಇದರ ಮಧ್ಯೆ ತಂಡದ ಕೋಚ್​ ಗ್ಯಾರಿ ಅವರೇ ಟೀಕಿಸಿದ್ದು ಚರ್ಚೆಗೆ ಕಾರಣವಾಗಿದೆ. ತಮ್ಮ ತಂಡದ ಪ್ರದರ್ಶನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಗತ್ತಿನಲ್ಲಿ ಸಾಕಷ್ಟು ತಂಡಗಳ ಜೊತೆ ಕೆಲಸ ಮಾಡಿದ್ದೇನೆ. ಪಾಕಿಸ್ತಾನದಂತಹ ಅತ್ಯಂತ ಕೆಟ್ಟ ತಂಡ ಮತ್ತೊಂದಿಲ್ಲ ಎಂದು ಗ್ಯಾರಿ ದೂರಿದ್ದಾರೆಂದು ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಒಗ್ಗಟ್ಟು ಇಲ್ಲವೇ ಇಲ್ಲ. ಇದು ಸರಿಯಾದ ತಂಡವೇ ಅಲ್ಲ. ತಂಡದೊಳಗೆ ಒಬ್ಬರನ್ನು ಒಬ್ಬರಿಗೆ ಕಂಡರೆ ಆಗುವುದಿಲ್ಲ. ಪರಸ್ಪರ ಬೆಂಬಲ ನೀಡುವುದಿಲ್ಲ. ಎಡ-ಬಲ ಎನ್ನುವಂತೆ ಪ್ರತಿಯೊಬ್ಬರೂ ಪ್ರತ್ಯೇಕವಾಗಿರುತ್ತಾರೆ. ವಿಶ್ವದಲ್ಲಿ ಹಲವು ತಂಡಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಆದರೆ, ಈ ತಂಡದಲ್ಲಿರುವ ಸನ್ನಿವೇಶ ನಾನು ಎಲ್ಲೂ ನೋಡಿಲ್ಲ ಎಂದು ಗ್ಯಾರಿ ಹೇಳಿಕೆಯನ್ನು ಜಿಇಓ ನ್ಯೂಸ್‌ ವರದಿ ಮಾಡಿದೆ.

ಆಟಗಾರರಿಗೆ ಎಚ್ಚರಿಕೆ ನೀಡಿದ್ದ ಕೋಚ್‌

ವಿಶ್ವ ಶ್ರೇಷ್ಠ ತಂಡಗಳ ಎದುರು ಆಡಬೇಕಾದರೆ ಪಾಕಿಸ್ತಾನ ತಂಡವು ಫಿಟ್ನೆಸ್ ಮತ್ತು ಕೌಶಲ್ಯಗಳ ಕಡೆಗೆ ಹೆಚ್ಚಿನ ಕೆಲಸ ಮಾಡಬೇಕಿದೆ. ಫಿಟ್​ನೆಸ್​​ನಲ್ಲಿ ಬೆಳವಣಿಗೆ ಸಾಧಿಸಿದ ಆಟಗಾರರನ್ನಷ್ಟೇ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಎಚ್ಚರಿಸಿದ್ದರು ಕೋಚ್​. ಫಿಟ್ನೆಸ್​ ವಿಚಾರದಲ್ಲಿ ತುಂಬಾ ಹಿಂದೆ ಇದ್ದೇವೆ. ಅಗ್ರ ದರ್ಜೆಯ ತಂಡಗಳೊಂದಿಗೆ ಸ್ಪರ್ಧಿಸಲು ಬಯಸಿದರೆ ಆಟಗಾರರ ಫಿಟ್ನೆಸ್ ಸುಧಾರಿಸಬೇಕು ಎಂದು ಈ ಹಿಂದೆ ಪಾಕಿಸ್ತಾನವು​ ಹೆಡ್​ಕೋಚ್​ ಎಚ್ಚರಿಕೆ ಕೊಟ್ಟಿದ್ದರು.

2011ರ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದ ಭಾರತ ತಂಡದ ಕೋಚ್​ ಆಗಿದ್ದ ಕರ್ಸ್ಟನ್, ಈ ಹಿಂದೆ ಭಾರತ ವಿರುದ್ಧದ ಸೋಲಿನ ನಂತರ ನಿರಾಶೆ ವ್ಯಕ್ತಪಡಿಸಿದ್ದರು. ನಿರಾಶಾದಾಯಕ ಸೋಲು. 120 ಸುಲಭದ ಗುರಿಯಲ್ಲ ಎಂದು ತಿಳಿದಿತ್ತು. ನಾವು ಗೆಲ್ಲುವ ಹಂತದಲ್ಲಿದ್ದೆವು. ಬೇಗನೇ ಗುರಿ ಮುಟ್ಟಬಹುದಿತ್ತು. ಆದರೆ ಗೆಲುವಿನ ರೇಖೆ ದಾಟದಿರುವುದು ನಿರಾಸೆ ತಂದಿತು ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಇನ್ನಷ್ಟು ಟಿ20 ವಿಶ್ವಕಪ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್​ ಮಾಡಿ.