ಪ್ಲೇಯಿಂಗ್ 11ನಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆಯುವುದನ್ನು ಖಚಿತಪಡಿಸಲು ನಿರಾಕರಿಸಿದ ಗೌತಮ್ ಗಂಭೀರ್; ಹಿಟ್​ಮ್ಯಾನ್​ಗೆ ಕೊಕ್?
ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ಲೇಯಿಂಗ್ 11ನಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆಯುವುದನ್ನು ಖಚಿತಪಡಿಸಲು ನಿರಾಕರಿಸಿದ ಗೌತಮ್ ಗಂಭೀರ್; ಹಿಟ್​ಮ್ಯಾನ್​ಗೆ ಕೊಕ್?

ಪ್ಲೇಯಿಂಗ್ 11ನಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆಯುವುದನ್ನು ಖಚಿತಪಡಿಸಲು ನಿರಾಕರಿಸಿದ ಗೌತಮ್ ಗಂಭೀರ್; ಹಿಟ್​ಮ್ಯಾನ್​ಗೆ ಕೊಕ್?

Gautam Gambhir: ಸಿಡ್ನಿ ಟೆಸ್ಟ್​​ಗೆ ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆಯುವುದನ್ನು ಖಚಿತಪಡಿಸಲು ಗೌತಮ್ ಗಂಭೀರ್ ನಿರಾಕರಿಸಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಪ್ಲೇಯಿಂಗ್ 11ನಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆಯುವುದನ್ನು ಖಚಿತಪಡಿಸಲು ನಿರಾಕರಿಸಿದ ಗೌತಮ್ ಗಂಭೀರ್; ಹಿಟ್​ಮ್ಯಾನ್​ಗೆ ಕೊಕ್?
ಪ್ಲೇಯಿಂಗ್ 11ನಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆಯುವುದನ್ನು ಖಚಿತಪಡಿಸಲು ನಿರಾಕರಿಸಿದ ಗೌತಮ್ ಗಂಭೀರ್; ಹಿಟ್​ಮ್ಯಾನ್​ಗೆ ಕೊಕ್?

ಜನವರಿ 3ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಗೂ ಐದನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್​ 11ನಲ್ಲಿ ನಾಯಕ ರೋಹಿತ್ ಶರ್ಮಾ ಅವರು ಕಾಣಿಸಿಕೊಳ್ಳುತ್ತಾರೆಯೇ ಎಂಬುದನ್ನು ಖಚಿತಪಡಿಸಲು ಹೆಡ್​ಕೋಚ್ ಗೌತಮ್ ಗಂಭೀರ್ ನಿರಾಕರಿಸಿದ್ದಾರೆ. ಇದೀಗ ರೋಹಿತ್​ ಅಂತಿಮ ಟೆಸ್ಟ್​ ಆಡುವುದರ ಬಗ್ಗೆ ಅನುಮಾನ ಹುಟ್ಟುಕೊಂಡಿದೆ. ಬಹುತೇಕ ವರದಿಗಳು ರೋಹಿತ್​ ಪ್ಲೇಯಿಂಗ್​ 11ನಿಂದ ಹೊರಗುಳಿಯಲಿದ್ದಾರೆ ಎಂದು ಹೇಳುತ್ತಿವೆ. ಸರಣಿಯ ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದ ಭಾರತ ನಂತರ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಎರಡರಲ್ಲಿ ಸೋತಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ವಿಶೇಷವೆಂದರೆ, ಪರ್ತ್​​ ಗೆಲುವು ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಬಂದಿತ್ತು.

ಸಿಡ್ನಿ ಟೆಸ್ಟ್​ ಪಂದ್ಯಕ್ಕೂ ಮುನ್ನಾ ದಿನ ನಡೆದ ಪತ್ರಿಕಾಗೋಷ್ಠಿಯನ್ನು ನಾಯಕ ರೋಹಿತ್​ ಶರ್ಮಾ ಬದಲಿಗೆ ಹೆಡ್​​ಕೋಚ್​ ಗೌತಮ್ ಗಂಭೀರ್​ ನಡೆಸಿಕೊಟ್ಟರು. ಈ ವೇಳೆ ಹಲವು ಅಂಶಗಳನ್ನು ಬಿಚ್ಚಿಟ್ಟ ಗಂಭೀರ್, ರೋಹಿತ್ ಏಕೆ ಗೈರುಹಾಜರಾಗಿದ್ದಾರೆ ಎಂದು ಕೇಳಿದ್ದಕ್ಕೆ ಅಚ್ಚರಿ ಉತ್ತರ ನೀಡಿದ್ದಾರೆ. 37 ವರ್ಷದ ಆಟಗಾರನೊಂದಿಗೆ ಎಲ್ಲವೂ ಸರಿಯಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ತರಬೇತುದಾರರ ಉಪಸ್ಥಿತಿ ಸಾಕು ಎಂದು ಹೇಳಿದ್ದಾರೆ. ಎಲ್ಲವೂ ಸರಿಯಾಗಿದೆ. ರೋಹಿತ್​ ಅವರೇ ಪತ್ರಿಕಾಗೋಷ್ಠಿ ನಡೆಸಬೇಕು ಎನ್ನುವ ಸಂಪ್ರದಾಯ ಇಲ್ಲ. ಹೆಡ್​ಕೋಚ್​ ಇದ್ದರೆ ಸಾಕು. ಪಿಚ್​ ಮತ್ತು ವಿಕೆಟ್ ನೋಡಿದ ಬಳಿಕ ಪ್ಲೇಯಿಂಗ್ 11 ಅಂತಿಮ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ರೋಹಿತ್​ ಶರ್ಮಾ ಅವರು ಪ್ಲೇಯಿಂಗ್​ 11ನಲ್ಲಿ ಅವಕಾಶ ಪಡೆಯುತ್ತಾರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಗಂಭೀರ್, 'ನಾನು ಈಗಷ್ಟೇ ಹೇಳಿದಂತೆ ನಾವು ಪಿಚ್ ಮತ್ತು ವಿಕೆಟ್ ಪರಿಶೀಲಿಸಿದ ಬಳಿಕವೇ ನಮ್ಮ ಪ್ಲೇಯಿಂಗ್ ಇಲೆವೆನ್ ಅನ್ನು ಘೋಷಿಸಲಿದ್ದೇವೆ. ಉತ್ತರ ಒಂದೇ ಆಗಿರುತ್ತದೆ ಎಂದು ಹೇಳುವ ಮೂಲಕ ನಾಯಕನ ಸ್ಥಾನವನ್ನೇ ಖಚಿತಪಡಿಸಲು ನಿರಾಕರಿಸಿದ್ದಾರೆ. ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಟಾಸ್ ಅವಧಿಯಲ್ಲೇ ಪ್ಲೇಯಿಂಗ್​ 11 ಪ್ರಕಟಿಸುವುದು ಭಾರತ ತಂಡದ ಸಂಪ್ರದಾಯ. ಉಳಿದ ಆಟಗಾರರ ಸ್ಥಾನ ಎಂದೂ ಖಚಿತವಾಗದಿದ್ದರೂ ನಾಯಕ ಮೊದಲೇ ಗೊತ್ತಿರುತ್ತದೆ. ಆದರೆ ಗಂಭೀರ್, ರೋಹಿತ್​ ಸ್ಥಾನದ ಕುರಿತು ಖಚಿತಪಡಿಸಲು ನಿರಾಕರಿಸಿರುವುದು ಅಚ್ಚರಿ ಮೂಡಿಸಿದೆ.

ಜಸ್ಪ್ರೀತ್ ಬುಮ್ರಾಗೆ ನಾಯಕತ್ವದ ಪಟ್ಟ?

ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಟೀಮ್ ಇಂಡಿಯಾ 295 ರನ್​ಗಳ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಕೊನೆಯ ಟೆಸ್ಟ್​ಗೂ ಅವರನ್ನೇ ನಾಯಕನ್ನಾಗಿ ಮಾಡಲು ಟೀಮ್ ಮ್ಯಾನೇಜ್​​ಮೆಂಟ್ ಚಿಂತಿಸಿದೆ. ರೋಹಿತ್​ ಶರ್ಮಾ ಅವರನ್ನು ಅಂತಿಮ ಟೆಸ್ಟ್​ಗೆ ಕೈ ಬಿಡಲು ಚಿಂತನೆ ನಡೆದಿದೆ.

ರೋಹಿತ್ ಶರ್ಮಾ ಕೆಟ್ಟ ಫಾರ್ಮ್​

2024ರ ವರ್ಷದಲ್ಲಿ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದರೂ ಅಷ್ಟೇ ಟೀಕೆಗೂ ಗುರಿಯಾಗಿದೆ. ಬ್ಯಾಟಿಂಗ್​ನಲ್ಲೂ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ನಾಯಕನಾಗಿ, ಬ್ಯಾಟರ್ ಆಗಿ ದಾರುಣ ಕುಸಿತ ಕಂಡಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ತನ್ನ ನಾಯಕತ್ವದಲ್ಲಿ ಸರಣಿ ಕಳೆದುಕೊಂಡಿದ್ದ ರೋಹಿತ್​, ಇದೀಗ ಆಸೀಸ್ ವಿರುದ್ಧ ಮೂರು ಪಂದ್ಯಗಳಲ್ಲಿ ಎರಡು ಸೋಲು ಕಂಡಿದ್ದಾರೆ. ಕಳೆದ ಆರು ಟೆಸ್ಟ್​​ ಪಂದ್ಯಗಳಿಂದ ಅವರ ನಾಯಕತ್ವದಲ್ಲಿ ಭಾರತ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಬ್ಯಾಟಿಂಗ್​ನಲ್ಲಿ ಕಳೆದ ಮೂರು ಟೆಸ್ಟ್​ ಸರಣಿಗಳಲ್ಲಿ ರೋಹಿತ್​ ಶರ್ಮಾ 15 ಇನ್ನಿಂಗ್ಸ್​​ಗಳಲ್ಲಿ ಕಣಕ್ಕಿಳಿದಿದ್ದಾರೆ.

8 ಟೆಸ್ಟ್​ಗಳ 15 ಇನ್ನಿಂಗ್ಸ್​ಗಳಲ್ಲಿ 10.93ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 164 ರನ್ ಗಳಿಸಿದ್ದಾರೆ. ಈ ಪೈಕಿ 31 ರನ್​ಗಳು ಪ್ರಸ್ತುತ ನಡೆಯುತ್ತಿರುವ ಆಸೀಸ್ ಪ್ರವಾಸದಲ್ಲಿ ಬಂದಿರುವ ಸ್ಕೋರ್. ಇಲ್ಲಿ ಒಂದು ಸಲ ಮಾತ್ರ ಅವರು ಎರಡಂಕಿ ದಾಟಿದ್ದಾರೆ. ಮೆಲ್ಬೋರ್ನ್​​ನಲ್ಲಿ ವೈಫಲ್ಯದ ನಂತರ ರೋಹಿತ್ ಸರಾಸರಿ ಕೇವಲ 6.20 ಆಗಿತ್ತು. ಇದು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ (ಕನಿಷ್ಠ 5 ಇನ್ನಿಂಗ್ಸ್) ಪ್ರವಾಸಿ ನಾಯಕನ ಕನಿಷ್ಠ ಬ್ಯಾಟಿಂಗ್ ಸರಾಸರಿಯಾಗಿದೆ.  ಈ ಹಿಂದೆ 1996/97ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ಬೌಲಿಂಗ್ ದಂತಕತೆ ಕರ್ಟ್ನಿ ವಾಲ್ಷ್ ಕೇವಲ 7.75ರ ಸರಾಸರಿಯಲ್ಲಿ ಈ ದಾಖಲೆ ಬರೆದಿದ್ದರು. 

Whats_app_banner