ವಿಲ್ ಜಾಕ್ಸ್ ಔಟ್, ಮ್ಯಾಕ್ಸ್‌ವೆಲ್ ಇನ್; ಸಿಎಸ್ಕೆ ವಿರುದ್ಧದ ಬ್ಲಾಕ್ಬಸ್ಟರ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ XI
RCB Playing XI vs CSK: ನಿರ್ಣಾಯಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಬ್ಲಾಕ್ ಬಸ್ಟರ್ ಕದನಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದನ್ನು ಈ ಮುಂದೆ ನೋಡೋಣ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೇ 18 ರಂದು ಐಪಿಎಲ್ 2024ರ ಬ್ಲಾಕ್ಬಸ್ಟರ್ ಘರ್ಷಣೆಯಲ್ಲಿ ಆರ್ಸಿಬಿ vs ಸಿಎಸ್ಕೆ ತಂಡಗಳು ಸೆಣಸಲಿವೆ. ಪ್ಲೇಆಫ್ ಭರವಸೆ ಜೀವಂತವಾಗಿರಿಸಲು ಚೆನ್ನೈ ವಿರುದ್ಧ ಫಾಫ್ ಪಡೆ ಗೆಲ್ಲಲೇಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆದಾಗ್ಯೂ, ಬೆಂಗಳೂರು, ಋತುರಾಜ್ ಪಡೆದಿಗಂತಲೂ ಕೆಳಮಟ್ಟದ ರನ್ ರೇಟ್ ಹೊಂದಿರುವುದರಿಂದ ಕೇವಲ ಗೆಲುವು ಸಾಕಾಗುವುದಿಲ್ಲ. ಬೆಂಗಳೂರು ತಂಡ ರನ್ ರೇಟ್‌ನಲ್ಲಿ ಯಲ್ಲೋ ಆರ್ಮಿ ಉರುಳಿಸಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು 18 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳಿಂದ ಸೋಲಿಸಬೇಕು ಅಥವಾ 18.1 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಬೇಕು (ಮೊದಲ ಇನಿಂಗ್ಸ್ ಸ್ಕೋರ್ 200 ಎಂದು ಊಹಿಸಿ).
ಆರ್ಸಿಬಿ ಐಪಿಎಲ್ 2024ರ ವಿಲಕ್ಷಣ ಆರಂಭ ಪಡೆದಿತ್ತು. ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತಿತು. ಆದಾಗ್ಯೂ, ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಗಮನಾರ್ಹ ಬದಲಾವಣೆ ಮಾಡಿತು. ಗೇಮ್ ಪ್ಲಾನ್, ಹೊಸ ಹೊಸ ಸ್ಟ್ರಾಟರ್ಜಿ, ಅತ್ಯುತ್ತಮ ಪ್ಲೇಯಿಂಗ್ XI ಕಣಕ್ಕಿಳಿಸಿ ಸತತ ಐದು ಗೆಲುವು ಸಾಧಿಸಿ ಈಗ ಪ್ಲೇಆಫ್ ಪ್ರವೇಶಿಸಲು ಸಿದ್ಧವಾಗಿದೆ. ಆದರೆ ತನ್ನ ಕೊನೆಯ ಲೀಗ್ ಪಂದ್ಯ ಮತ್ತು ಸಿಎಸ್ಕೆ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ದೊಡ್ಡ ಹೊಡೆತ ಅನುಭವಿಸಿದ ಆರ್ಸಿಬಿ, ವಿಲ್ ಜಾಕ್ಸ್, ರೀಸ್ ಟೋಪ್ಲಿ ಅವರನ್ನು ಕಳೆದುಕೊಂಡಿದೆ. ಹಾಗಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಆಡುವ 11ರ ಬಳಗದಲ್ಲಿ ಮತ್ತೊಮ್ಮೆ ಅವಕಾಶ ಪಡೆಯುವುದು ಖಚಿತವಾಗಿದೆ.
ಪ್ರಸಕ್ತ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಆದರೆ ಅವರು ಬಿಗ್ಮ್ಯಾಚ್ ಪ್ಲೇಯರ್ ಆಗಿದ್ದಾರೆ. ಮ್ಯಾಕ್ಸಿ ಕೌಶಲ್ಯ ಮತ್ತು ಅನುಭವ ತಂಡಕ್ಕೆ ನೆರವಾಗಲಿದೆ. ಹೀಗಾಗಿ ಸತತ ವೈಫಲ್ಯದ ನಡುವೆಯೂ ಅವರನ್ನೇ ಕಣಕ್ಕಿಳಿಸಲು ಆರ್ಸಿಬಿ ಮ್ಯಾನೇಜ್ಮೆಂಟ್ ಚಿಂತಿಸಿದೆ. ಏತನ್ಮಧ್ಯೆ, ಮೇ 18ರ ಶನಿವಾರ ಬೆಂಗಳೂರಿನಲ್ಲಿ ಮಳೆಯ ಮುನ್ಸೂಚನೆ ಇದೆ. ಮಳೆಯಿಂದ ಪಂದ್ಯ ರದ್ದುಗೊಂಡರೆ ಆರ್ಸಿಬಿ ಪ್ಲೇಆಫ್ನಿಂದ ಅಧಿಕೃತವಾಗಿ ಹೊರಬೀಳುತ್ತದೆ. ಇದರೊಂದಿಗೆ ಕೆಕೆಆರ್, ಆರ್ಆರ್, ಎಸ್ಆರ್ಹೆಚ್ ನಂತರ ಸಿಎಸ್ಕೆ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶ ಪಡೆಯಲಿದೆ.
ಆರ್ಸಿಬಿ ತಂಡ ಹೇಗಿರಲಿದೆ?
ಆರ್ಸಿಬಿಯ ಪ್ಲೇಯಿಂಗ್ XI ಬಗ್ಗೆ ಹೇಳುವುದಾದರೆ, ಫಾಫ್ ಡು ಪ್ಲೆಸಿಸ್ - ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ವಿಲ್ ಜಾಕ್ಸ್ ಬದಲಿಗೆ ಗ್ಲೆನ್ ಮ್ಯಾಕ್ಸ್‌ವೆಲ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ರಜತ್ ಪಾಟೀದಾರ್ ನಂ.4ರಲ್ಲಿ ಆಡಲಿದ್ದಾರೆ. ಕ್ಯಾಮರೂನ್ ಗ್ರೀನ್ ಮತ್ತು ದಿನೇಶ್ ಕಾರ್ತಿಕ್ ನಂತರದ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. ಕರಣ್ ಶರ್ಮಾ, ಸ್ವಪ್ನಿಲ್ ಸಿಂಗ್ ಸ್ಪಿನ್ನರ್ಗಳಾಗಿದ್ದರೆ, ಯಶ್ ದಯಾಳ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್ ವೇಗಿಗಳಾಗಿರಲಿದ್ದಾರೆ. ಮಹಿಪಾಲ್ ಲೊಮ್ರೋರ್ ಇಂಪ್ಯಾಕ್ಟ್ ಪ್ಲೇಯರ್ ಆಗುವ ಸಾಧ್ಯತೆ ಇದೆ.
ಆರ್ಸಿಬಿ ಪ್ಲೇಯಿಂಗ್ XI vs ಸಿಎಸ್ಕೆ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಯಶ್ ದಯಾಳ್ (ಇಂಪ್ಯಾಕ್ಟ್ ಪ್ಲೇಯರ್: ಮಹಿಪಾಲ್ ಲೊಮ್ರೋರ್)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)