ಟ್ರೋಫಿ ಗೆದ್ದ ನಿಕಿ ಪ್ರಸಾದ್ಗಿಲ್ಲ ಸ್ಥಾನ, ಭಾರತದ ನಾಲ್ವರಿಗೆ ಅವಕಾಶ; ಐಸಿಸಿ ಅಂಡರ್-19 ಟಿ20 ವಿಶ್ವಕಪ್ ತಂಡ ಪ್ರಕಟ
U19 Women's T20 World Cup 2025 Team: ಐಸಿಸಿ ಪ್ರಕಟಿಸಿದ ಅಂಡರ್-19 ಟಿ20 ವಿಶ್ವಕಪ್ ತಂಡದಲ್ಲಿ ಟ್ರೋಫಿ ಗೆದ್ದ ನಿಕಿ ಪ್ರಸಾದ್ ಅವರು ಸ್ಥಾನ ಪಡೆಯದಿದ್ದರೂ ಭಾರತದ ನಾಲ್ವರಿಗೆ ಅವಕಾಶ ಸಿಕ್ಕಿದೆ.

ಎರಡನೇ ಆವೃತ್ತಿಯ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲೂ (Under 19 T20 World Cup) ಭಾರತ ತಂಡ (Indian Cricket Team) ಚಾಂಪಿಯನ್ ಪಟ್ಟಕ್ಕೇರಿದೆ. ಫೆಬ್ರವರಿ 2ರ ಭಾನುವಾರ ಜರುಗಿದ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಸೌತ್ ಆಫ್ರಿಕಾ ತಂಡವನ್ನು 9 ವಿಕೆಟ್ಗಳಿಂದ ಮಣಿಸಿದ ಕರ್ನಾಟಕದ ಬೆಂಗಳೂರಿನ ನಿಕಿ ಪ್ರಸಾದ್ (Niki prasad) ನಾಯಕತ್ವದ ಕಿರಿಯರ ತಂಡ ವಿಶ್ವಕಪ್ಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಯುವ ಆಟಗಾರ್ತಿಯರ ಅಬ್ಬರದಾಟದ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಟೂರ್ನಿ ಮುಗಿದ ಬೆನ್ನಲ್ಲೇ 12 ಸದಸ್ಯರ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ತಂಡವನ್ನು ಐಸಿಸಿ ಪ್ರಕಟಿಸಿದ್ದು, ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಪ್ರಮುಖ ರನ್ ಸ್ಕೋರರ್ ಗೊಂಗಡಿ ತ್ರಿಶಾ ಸೇರಿದಂತೆ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಈ ಪೈಕಿ ಇಬ್ಬರು ಬ್ಯಾಟರ್ಸ್, ಇಬ್ಬರು ಬೌಲರ್ಗಳು. ಆದರೆ ಭಾರತ ತಂಡ ಮುನ್ನಡೆಸಿ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ನಿಕಿ ಪ್ರಸಾದ್ಗೆ ಅವಕಾಶ ಸಿಕ್ಕಿಲ್ಲ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಐಸಿಸಿ ಪ್ರಕಟಿಸಿದ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದ ಕೈಲಾ ರೇನೆಕೆ ಅವರನ್ನು ನಾಯಕಿಯಾಗಿ ನೇಮಿಸಲಾಯಿತು. ಇವರ ಜೊತೆಗೆ ಜೆಮ್ಮಾ ಬೋಥಾ, ಥಾಬಿಸೆಂಗ್ ನಿನಿ ಅವರು ಸೌತ್ ಆಫ್ರಿಕಾ ಪರ ಅವಕಾಶ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ನ ಡೇವಿನಾ ಪೆರಿನ್, ಕೇಟೀ ಜೋನ್ಸ್, ಆಸ್ಟ್ರೇಲಿಯಾದ ಕಾಯೋಮ್ಹೆ ಬ್ರೇ, ನೇಪಾಳದ ಪೂಜಾ ಮಹತೋ, ಶ್ರೀಲಂಕಾದ ಚಮೋದಿ ಪ್ರಬೋದ ಸ್ಥಾನ ಪಡೆದಿದ್ದಾರೆ. ಐಸಿಸಿ ತಂಡದಲ್ಲಿ ಸ್ಥಾನ ಪಡೆದ 12 ಆಟಗಾರ್ತಿಯರ ಪ್ರದರ್ಶನ ಹೇಗಿದೆ ನೋಡೋಣ ಬನ್ನಿ.
ಐಸಿಸಿ ಟೂರ್ನಮೆಂಟ್ ತಂಡ ಅಂಡರ್ 19 ಮಹಿಳಾ ವಿಶ್ವಕಪ್ 2024
1. ಗೊಂಗಡಿ ತ್ರಿಶಾ (ಭಾರತ): ರನ್-309, ಸರಾಸರಿ-77.25, ಸ್ಟ್ರೈಕ್ ರೇಟ್-147.14, ಗರಿಷ್ಠ ಸ್ಕೋರ್-100 ನಾಟ್ ಔಟ್.
2. ಜೆಮ್ಮಾ ಬೋಥಾ (ದಕ್ಷಿಣ ಆಫ್ರಿಕಾ): ರನ್-105, ಸರಾಸರಿ-26.25, ಸ್ಟ್ರೈಕ್ ರೇಟ್-123.52, ಗರಿಷ್ಠ-37
3. ಡೇವಿನಾ ಪೆರಿನ್ (ಇಂಗ್ಲೆಂಡ್): ರನ್-176, ಸರಾಸರಿ-35.20, ಸ್ಟ್ರೈಕ್-ರೇಟ್- 135.38, ಗರಿಷ್ಠ- 74
4. ಜಿ ಕಮಲಿನಿ (ಭಾರತ): ರನ್-143, ಸರಾಸರಿ-35.75, ಸ್ಟ್ರೈಕ್ ರೇಟ್-104.37, ಗರಿಷ್ಠ-56*
5. ಕಾಯೋಮ್ಹೆ ಬ್ರೇ (ಆಸ್ಟ್ರೇಲಿಯಾ): ರನ್- 119, ಸರಾಸರಿ-29.75, ಸ್ಟ್ರೈಕ್ ರೇಟ್- 96.74, ಗರಿಷ್ಠ-45
6. ಪೂಜಾ ಮಹತೋ (ನೇಪಾಳ): ರನ್-70, ಸರಾಸರಿ-23.33, ಸ್ಟ್ರೈಕ್ ರೇಟ್-51.85, ಗರಿಷ್ಠ-70; ವಿಕೆಟ್-9, ಸರಾಸರಿ-7.00, ಎಕಾನಮಿ-4.34, ಅತ್ಯುತ್ತಮ ಬೌಲಿಂಗ್-4/9
7. ಕೈಲಾ ರೇನೆಕೆ (ನಾಯಕಿ) (ದಕ್ಷಿಣ ಆಫ್ರಿಕಾ): ವಿಕೆಟ್-11, ಸರಾಸರಿ- 6.27, ಎಕಾನಮಿ-4.14, ಅತ್ಯುತ್ತಮ ಬೌಲಿಂಗ್-3/2
8. ಕೇಟೀ ಜೋನ್ಸ್ (ವಿಕೆಟ್‌ಕೀಪರ್) (ಇಂಗ್ಲೆಂಡ್): ಡಿಸ್ಮಿಸಲ್-9 (ಕ್ಯಾಚ್ 2, ಸ್ಟಂಪ್ಡ್ 7)
9. ಆಯುಷಿ ಶುಕ್ಲಾ (ಭಾರತ): ವಿಕೆಟ್-14, ಸರಾಸರಿ-5.71, ಎಕಾನಮಿ-3.01, ಅತ್ಯುತ್ತಮ ಬೌಲಿಂಗ್-4/8
10. ಚಮೋದಿ ಪ್ರಬೋದ (ಶ್ರೀಲಂಕಾ): ವಿಕೆಟ್-9, ಸರಾಸರಿ-6.33, ಎಕಾನಮಿ-3.80, ಅತ್ಯುತ್ತಮ ಬೌಲಿಂಗ್-3/5
11. ವೈಷ್ಣವಿ ಶರ್ಮಾ (ಭಾರತ): ವಿಕೆಟ್-17, ಸರಾಸರಿ-4.35, ಎಕಾನಮಿ-3.36, ಅತ್ಯುತ್ತಮ ಬೌಲಿಂಗ್- 5/5
12. ಥಾಬಿಸೆಂಗ್ ನಿನಿ (ದಕ್ಷಿಣ ಆಫ್ರಿಕಾ): ವಿಕೆಟ್-6, ಸರಾಸರಿ-7.33, ಎಕಾನಮಿ-4.00, ಅತ್ಯುತ್ತಮ ಬೌಲಿಂಗ್-3/4.
