ಗುಜರಾತ್ ಟೈಟನ್ಸ್ vs ಮುಂಬೈ ಇಂಡಿಯನ್ಸ್ ಮೊದಲ ಗೆಲುವಿನ ನಿರೀಕ್ಷೆ; ನಾಳಿನ ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್ ಟೈಟನ್ಸ್ Vs ಮುಂಬೈ ಇಂಡಿಯನ್ಸ್ ಮೊದಲ ಗೆಲುವಿನ ನಿರೀಕ್ಷೆ; ನಾಳಿನ ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು

ಗುಜರಾತ್ ಟೈಟನ್ಸ್ vs ಮುಂಬೈ ಇಂಡಿಯನ್ಸ್ ಮೊದಲ ಗೆಲುವಿನ ನಿರೀಕ್ಷೆ; ನಾಳಿನ ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು

ಸಿಎಸ್‌ಕೆ ವಿರುದ್ಧದ ಪಂದ್ಯದಿಂದ ನಿಷೇಧ ಅನುಭವಿಸಿದ್ದ ಹಾರ್ದಿಕ್ ಪಾಂಡ್ಯ, ಇದೀಗ ಗುಜರಾತ್‌ ಟೈಟನ್ಸ್ ವಿರುದ್ಧದ ಪಂದ್ಯಕ್ಕೆ ಮರಳಲಿದ್ದಾರೆ. ಅಲ್ಲದೆ‌ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಗುಜರಾತ್ ಟೈಟನ್ಸ್ vs ಮುಂಬೈ ಇಂಡಿಯನ್ಸ್: ನಾಳಿನ ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು
ಗುಜರಾತ್ ಟೈಟನ್ಸ್ vs ಮುಂಬೈ ಇಂಡಿಯನ್ಸ್: ನಾಳಿನ ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು (PTI)

ಐಪಿಎಲ್ 2025ರ ಆವೃತ್ತಿಯು ಆರಂಭಿಕ ಹಂತದಲ್ಲಿದ್ದು, ಅದಾಗಲೇ ರೋಚಕ ಹಂತ ತಲುಪಿವೆ. ಪ್ರತಿ ತಂಡಗಳು ಕನಿಷ್ಠ ಒಂದು ಪಂದ್ಯವನ್ನಾದರೂ ಆಡಿವೆ. ನಾಳೆ (ಮಾರ್ಚ್‌ 29, ಶನಿವಾರ) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಟೂರ್ನಿಯಲ್ಲಿ ಮೊದಲ ಗೆಲುವಿಗೆ ಎದುರು ನೋಡುತ್ತಿವೆ.

ಮಹತ್ವದ ಪಂದ್ಯಕ್ಕೆ ಸಂಬಂಧಿಸಿದಂತೆ 10 ಪ್ರಮುಖ ಅಂಶಗಳನ್ನು ನೋಡೋಣ.

  1. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಸ್ಟೇಡಿಯಂನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗುಜರಾತ್‌ ಸೋಲು ಕಂಡಿತ್ತು.
  2. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತರೂ, ಚೇಸಿಂಗ್‌ ವೇಳೆ ಗುಜರಾತ್‌ ಜೈಂಟ್ಸ್‌ ಕೂಡಾ ಬೃಹತ್‌ ಮೊತ್ತ ಗಳಿಸಲು ಸಾಧ್ಯವಾಯ್ತು. ಬೌಲಿಂಗ್‌ನಲ್ಲಿ ವಿಫಲವಾದರೂ, ಬ್ಯಾಟಿಂಗ್‌ನಲ್ಲಿ ಉತ್ತಮ ಮೊತ್ತ ಸಂಗ್ರಹಿಸುವ ಸಾಧ್ಯತೆ ವ್ಯಕ್ತವಾಯ್ತು. ತಂಡ ಈಗ ಮುಂಬೈ ವಿರುದ್ಧ ಪುಟಿದೇಳಲು ಉತ್ಸುಕವಾಗಿದೆ.
  3. ಮುಂಬೈ ಇಂಡಿಯನ್ಸ್‌ ತಂಡದ ಆರಂಭ ನಿರಾಶಾದಾಯಕವಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ತಂಡ ಇದೀಗ ಗೆಲುವಿನ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ. ಕಳೆದ ಹಲವು ವರ್ಷಗಳ ಐಪಿಎಲ್‌ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಸೋಲುತ್ತಾ ಬರುತ್ತಿರುವುದು ವಿಶೇಷ.
  4. ಕಳೆದ ಋತುವಿನಲ್ಲಿ ನಿಧಾನಗತಿಯ ಓವರ್-ರೇಟ್ ಅಪರಾಧಕ್ಕಾಗಿ, ಸಿಎಸ್‌ಕೆ ವಿರುದ್ಧದ ಪಂದ್ಯದಿಂದ ನಿಷೇಧ ಅನುಭವಿಸಿದ್ದ ಹಾರ್ದಿಕ್ ಪಾಂಡ್ಯ, ಇದೀಗ ಜಿಟಿ ವಿರುದ್ಧದ ಪಂದ್ಯಕ್ಕೆ ಮರಳಲಿದ್ದಾರೆ. ಅಲ್ಲದೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
  5. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಆವೃತ್ತಿಯ ಮೊದಲ ಪಂದ್ಯವು ಹೈಸ್ಕೋರಿಂಗ್‌ ಪಂದ್ಯವಾಗಿತ್ತು. ಉಭಯ ತಂಡಗಳು ಬೌಲಿಂಗ್‌ ವೇಳೆ ರನ್ ಹರಿವನ್ನು ನಿಯಂತ್ರಿಸಲು ಹೆಣಗಾಡಿದ್ದು ಕಂಡುಬಂತು. ಪಂದ್ಯದುದ್ದಕ್ಕೂ ಪಿಚ್‌ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಇಲ್ಲಿ ಟಾಸ್‌ ಗೆಲ್ಲುವ ತಂಡಗಳು ಚೇಸಿಂಗ್‌ಗೆ ಆದ್ಯತೆ ನೀಡುವ ಸಾಧ್ಯತೆಯೇ ಹೆಚ್ಚು.
  6. ಗುಜರಾತ್‌ ಮತ್ತು ಮುಂಬೈ ತಂಡಗಳು ಐಪಿಎಲ್‌ ಇತಿಹಾಸದಲ್ಲಿ ಈವರೆಗೆ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಗುಜರಾತ್‌ 3 ಪಂದ್ಯಗಳಲ್ಲಿ ಗೆದ್ದರೆ, ಮುಂಬೈ 2 ಪಂದ್ಯಗಳಲ್ಲಿ ಗೆದ್ದಿದೆ.
  7. ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಜಿಯೋಹಾಟ್‌ಸ್ಟಾರ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಇರಲಿದೆ.
  8. ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಸಮಯದಲ್ಲಿ ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಆಕಾಶವು ಸ್ಪಷ್ಟವಾಗಿರುವ ಸಾಧ್ಯತೆಯಿದೆ. ಹಗಲಿನಲ್ಲಿ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 21 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆ ಇದೆ.
  9. ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ: ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್‌ ಕೀಪರ್), ಶಾರುಖ್ ಖಾನ್, ಗ್ಲೆನ್ ಫಿಲಿಪ್ಸ್, ಸಾಯಿ ಕಿಶೋರ್, ರಶೀದ್ ಖಾನ್, ಕಗಿಸೊ ರಬಾಡ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ. (ಇಂಪ್ಯಾಕ್ಟ್ ಆಟಗಾರ: ಇಶಾಂತ್ ಶರ್ಮಾ / ರಾಹುಲ್ ತೆವಾಟಿಯಾ)
  10. ಮುಂಬೈ ಇಂಡಿಯನ್ಸ್‌ ತಂಡ: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್‌ ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧಿರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಸತ್ಯನಾರಾಯಣ ರಾಜು. (ಇಂಪ್ಯಾಕ್ಟ್ ಆಟಗಾರ: ವಿಘ್ನೇಶ್ ಪುತ್ತೂರು/ ಕಾರ್ಬಿನ್ ಬಾಷ್)

ಇದನ್ನೂ ಓದಿ | ಸಿಎಸ್‌ಕೆ vs ಆರ್‌ಸಿಬಿ: ಭಾರತದಾದ್ಯಂತ ಹೆಚ್ಚು ಅಭಿಮಾನಿಗಳು ಇರುವುದು ಯಾವ ತಂಡಕ್ಕೆ; ಸೋಷಿಯಲ್ ಮೀಡಿಯಾ ಟ್ರೆಂಡ್ ಹೇಳುವುದೇನು

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner