ಕನ್ನಡ ಸುದ್ದಿ  /  Cricket  /  Gujarat Giants Have Won The Toss And Have Opted To Field Against Delhi Capitals Wpl 2024 Head To Head Stats Record Prs

ಗೆಲ್ಲಬೇಕಾದ ಒತ್ತಡದಲ್ಲಿ ಗುಜರಾತ್ ಜೈಂಟ್ಸ್; ಟಾಸ್ ಸೋತ ಡೆಲ್ಲಿ ಕ್ಯಾಪಿಟಲ್ಸ್; ಉಭಯ ತಂಡಗಳಿಂದ ಪ್ರಮುಖರೇ ಔಟ್

Gujarat Giants vs Delhi Capitals Women : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಗೆಲ್ಲಬೇಕಾದ ಒತ್ತಡದಲ್ಲಿ ಗುಜರಾತ್ ಜೈಂಟ್ಸ್; ಡೆಲ್ಲಿ ಗೆದ್ದರೆ ಅಗ್ರಸ್ಥಾನಕ್ಕೆ ಲಗ್ಗೆ
ಗೆಲ್ಲಬೇಕಾದ ಒತ್ತಡದಲ್ಲಿ ಗುಜರಾತ್ ಜೈಂಟ್ಸ್; ಡೆಲ್ಲಿ ಗೆದ್ದರೆ ಅಗ್ರಸ್ಥಾನಕ್ಕೆ ಲಗ್ಗೆ

ವುಮೆನ್ಸ್ ಪ್ರೀಮಿಯರ್ ಲೀಗ್​ನ 10ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಚೇಸಿಂಗ್ ಆಯ್ಕೆ ಮಾಡಿಕೊಂಡಿದೆ. ಸತತ 3 ಪಂದ್ಯಗಳಿಂದ ಸೋಲನುಭವಿಸಿರುವ ಗುಜರಾತ್, ಗೆಲುವಿನ ಖಾತೆ ತೆರೆಯಲು ಸನ್ನದ್ಧಗೊಂಡಿದೆ. ಇನ್ನು ಡೆಲ್ಲಿ ಸತತ ಎರಡು ಗೆಲುವು ದಾಖಲಿಸಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.

ಟಿಟಾಸ್​ ಸಧುಗೆ ಮಣೆ, ಹರ್ಲೀನ್​-ಸ್ನೇಹ್ ರಾಣಾ ಔಟ್

ಎರಡೂ ತಂಡಗಳು ತಲಾ ಎರಡು ಬದಲಾವಣೆಯಾಗಿವೆ. ಡೆಲ್ಲಿ ಪರ ಮರಿಜಾನ್ನೆ ಕಪ್ ಮತ್ತು ಮಿನ್ನು ಮಣಿ ತಪ್ಪಿಸಿಕೊಂಡಿದ್ದಾರೆ. ಅವರ ಬದಲಿಗೆ ಟಿಟಾಸ್ ಸಧು ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ತಂಡವನ್ನು ಸೇರಿದ್ದಾರೆ. ಇನ್ನು ಗುಜರಾತ್ ಪರ ಹರ್ಲೀನ್ ಡಿಯೋಲ್ ಮತ್ತು ಸ್ನೇಹ ರಾಣಾ ಅವರನ್ನು ಹೊರಗಿಡಲಾಗಿದೆ.

ಮುಖಾಮುಖಿ ದಾಖಲೆ

ಮುಖಾಮುಖಿ ಪಂದ್ಯಗಳು - 02

ಗುಜರಾತ್ ಗೆಲುವು - 01

ಡೆಲ್ಲಿ ಗೆಲುವು - 01

ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI)

ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ (ನಾಯಕಿ, ವಿಕೆಟ್ ಕೀಪರ್), ಫೀಬಿ ಲಿಚ್‌ಫೀಲ್ಡ್, ಆಶ್ಲೇ ಗಾರ್ಡ್ನರ್, ವೇದಾ ಕೃಷ್ಣಮೂರ್ತಿ, ದಯಾಲನ್ ಹೇಮಲತಾ, ಕ್ಯಾಥರಿನ್ ಬ್ರೈಸ್, ತನುಜಾ ಕನ್ವರ್, ತರನ್ನುಮ್ ಪಠಾಣ್, ಮೇಘನಾ ಸಿಂಗ್, ಮನ್ನತ್ ಕಶ್ಯಪ್.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI)

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರೋಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಟಿಟಾಸ್ ಸಧು, ರಾಧಾ ಯಾದವ್, ಶಿಖಾ ಪಾಂಡೆ.

ಗೆದ್ದರೆ ಡೆಲ್ಲಿ ಅಗ್ರಸ್ಥಾನಕ್ಕೆ

ಡೆಲ್ಲಿ ಮತ್ತು ಗುಜರಾತ್ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 5ನೇ ಸ್ಥಾನದಲ್ಲಿವೆ. ಡೆಲ್ಲಿ ನೆಟ್​ ರನ್ ​ರೇಟ್ +1.271, ಗುಜರಾತ್ ನೆಟ್​ ರನ್ ರೇಟ್ -1.995 ಹೊಂದಿದೆ. ಡೆಲ್ಲಿ 4 ಅಂಕ ಗಳಿಸಿದ್ದರೆ, ಗುಜರಾತ್ ಇನ್ನೂ ಖಾತೆ ತೆರೆದಿಲ್ಲ. ಒಂದು ವೇಳೆ ಈ ಪಂದ್ಯವನ್ನು ಡೆಲ್ಲಿ ಗೆದ್ದರೆ ಮುಲಾಜಿಲ್ಲದೆ, ಅಗ್ರಸ್ಥಾನಕ್ಕೆ ಏರಿಕೆ ಕಾಣಲಿದೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಆರ್​ಸಿಬಿ ಮತ್ತು ಮುಂಬೈ ತಂಡಗಳ ನಡುವಿನ ಡಬ್ಲ್ಯೂಪಿಎಲ್‌ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಪಂದ್ಯವನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ಇಲ್ಲಿ ನೋಡಬಹುದು.

IPL_Entry_Point