ಕನ್ನಡ ಸುದ್ದಿ  /  Cricket  /  Gujarat Titans Coach Ashish Nehra Reveals He Could Have Stopped Hardik Pandya But Never Tried To Convince Him Prs

ಹೋಗಬೇಕೆಂದು ಬಯಸಿದ್ದರು ಹೋದರು, ಮನವೊಲಿಸಲು ನಾನು ಪ್ರಯತ್ನಿಸಲಿಲ್ಲ; ಹಾರ್ದಿಕ್ ಪಾಂಡ್ಯ ಕುರಿತು ಆಶಿಶ್ ನೆಹ್ರಾ

Ashish Nehra on Hardik Pandya : ಐಪಿಎಲ್​ ಆರಂಭದ ಸಮಯದಲ್ಲಿ ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಅವರು ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿರುವ ಕುರಿತು ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಹಾರ್ದಿಕ್ ಪಾಂಡ್ಯ ಕುರಿತು ಮೊದಲ ಬಾರಿಗೆ ಮೌನ ಮುರಿದ ಆಶಿಶ್ ನೆಹ್ರಾ.
ಹಾರ್ದಿಕ್ ಪಾಂಡ್ಯ ಕುರಿತು ಮೊದಲ ಬಾರಿಗೆ ಮೌನ ಮುರಿದ ಆಶಿಶ್ ನೆಹ್ರಾ.

2022 ಮತ್ತು 2023ರ ಐಪಿಎಲ್​ನಲ್ಲಿ (IPl 2024) ಗುಜರಾತ್ ಟೈಟಾನ್ಸ್ ತಂಡಕ್ಕೆ (Gujarat Titans) ನಾಯಕನಾಗಿ 1 ಬಾರಿ ಚಾಂಪಿಯನ್​ ಮಾಡಿದ್ದ ಹಾರ್ದಿಕ್ ಪಾಂಡ್ಯ (Hardik Pandya), ಈಗ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಮುಂಬೈ ಪ್ರಾಕ್ಟೀಸ್ ಕೂಡಿಕೊಂಡಿರುವ ಪಾಂಡ್ಯ ಭರ್ಜರಿ ತಯಾರಿ ನಡೆಸುತ್ತಿದ್ದು, ದಾಖಲೆಯ 6ನೇ ಟ್ರೋಫಿ ಗೆದ್ದುಕೊಡಲು ಸಜ್ಜಾಗಿದ್ದಾರೆ.

ಐಪಿಎಲ್​ ಮಿನಿ ಹರಾಜಿಗೂ (IPL Mini Auction 2023) ಮುನ್ನ ಟ್ರೇಡ್​​​ ಮೂಲಕ ಹಾರ್ದಿಕ್, 15 ಕೋಟಿಗೆ ಗುಜರಾತ್ ತೊರೆದು ಮುಂಬೈ​​ ಸೇರಿಸಿಕೊಂಡಿದ್ದರು. ಎರಡು ಬಾರಿ ತಂಡವನ್ನು ಫೈನಲ್​ನತ್ತ ಮುನ್ನಡೆಸಿದ್ದ ಪಾಂಡ್ಯ, ಇದ್ದಕ್ಕಿದ್ದಂತೆ ಟೈಟಾನ್ಸ್ ತೊರೆದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಟೀಕೆಯೂ ವ್ಯಕ್ತವಾಗಿತ್ತು. ಈಗ ಈ ಬಗ್ಗೆ ಕೋಚ್ ಆಶಿಶ್ ನೆಹ್ರಾ ಪ್ರತಿಕ್ರಿಯಿಸಿದ್ದಾರೆ.

ಹಾರ್ದಿಕ್, ಮುಂಬೈ ಸೇರಿದ ಬೆನ್ನಲ್ಲೇ ಆತನಿಗೆ ತಂಡದ ಜವಾಬ್ದಾರಿ ವಹಿಸಲಾಯಿತು. ಐದು ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್​ ಶರ್ಮಾ ಅವರನ್ನು ಏಕ್​ಧಮ್ ಕೆಳಗಿಳಿಸಿದ ಫ್ರಾಂಚೈಸಿ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿತ್ತು. ಹಿಟ್​ಮ್ಯಾನ್ ಅಭಿಮಾನಿಗಳು ಮುಂಬೈ ಪ್ರಾಂಚೈಸಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಫಾಲೋವರ್ಸ್​ ಸಹ ತಗ್ಗಿದರು.

ಮೊದಲ ಬಾರಿಗೆ ಮೌನ ಮುರಿದ ಆಶಿಶ್ ನೆಹ್ರಾ

ಹಾರ್ದಿಕ್ ಪಾಂಡ್ಯ ಗುಜರಾತ್ ತೊರೆದಿದ್ದೇಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಟೈಟಾನ್ಸ್ ಫ್ರಾಂಚೈಸಿ, ಹಾರ್ದಿಕ್ ಅಥವಾ ಕೋಚ್ ಆಶಿಶ್ ನೆಹ್ರಾ ಅವರು ಯಾರೂ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಐಪಿಎಲ್​ ಆರಂಭದ ಸಮಯದಲ್ಲಿ ಕೋಚ್ ಆಶಿಶ್ ನೆಹ್ರಾ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಫ್ರಾಂಚೈಸಿಯಲ್ಲಿ ಉಳಿಯಲು ಹಾರ್ದಿಕ್ ಅವರನ್ನು ಮನವೊಲಿಸಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದು ನೆಹ್ರಾ ಬಹಿರಂಗಪಡಿಸಿದ್ದಾರೆ. ಬೇರೆ ತಂಡಕ್ಕೆ ಹೋಗುತ್ತಿದ್ದರೆ, ನಾನು ತಡೆಯಬಹುದಿತ್ತು. ಆದರೆ ಅವರಿಗೆ ಹೋಗಬೇಕು ಎಂದುಕೊಂಡರು, ಹೋದರು. ಹೀಗಾಗಿ ನಾವು ಹಾರ್ದಿಕ್‌ಗೆ ಗುಜರಾತ್‌ ತಂಡದಲ್ಲಿ ಇರುವಂತೆ ನಾವು ಮನವೊಲಿಸುವ ಕೆಲಸ ಮಾಡಲಿಲ್ಲ ಎಂದದ್ದಾರೆ.

‘ಹೋಗಬೇಕೆಂದು ಬಯಸಿದ್ದರು, ಹೋದರು’

ಅವರು 5 ಅಥವಾ 6 ವರ್ಷಗಳ ಕಾಲ ಆ ತಂಡಕ್ಕಾಗಿ ಆಡಿದರು. ಸಿಕ್ಕ ಅವಕಾಶ ಬಳಸಿಕೊಂಡು ಅವರು ಹೋಗಬೇಕೆಂದು ಬಯಸಿದ್ದರು ಮತ್ತು ಹೋದರು ಎಂದು ಆಶಿಶ್ ನೆಹ್ರಾ ಸ್ಪಷ್ಟವಾಗಿ ಹೇಳಿದ್ದಾರೆ. ಪಾಂಡ್ಯ ಒಬ್ಬರಿಂದ ಗುಜರಾತ್ ತಂಡ ಯಶಸ್ಸು ಕಾಣಲಿಲ್ಲ ಎಂಬುದು ನೆಹ್ರಾ, ಮಾತಿನಿಂದ ಸ್ಪಷ್ಟವಾದಂತ್ತಾಗಿದೆ.

ಟೈಟಾನ್ಸ್‌ ಸೇರಿಕೊಳ್ಳುವ ಮೊದಲು ಹಾರ್ದಿಕ್ ಪಾಂಡ್ಯ ಮುಂಬೈ ಪರ ಆಡುವಾಗ 4 ಟ್ರೋಫಿ ಗೆದ್ದಿದ್ದರು. ಆದರೆ, ಮುಂಬೈ ಒಟ್ಟಾರೆ 5 ಟ್ರೋಫಿ ಜಯಿಸಿದೆ. ಆಟಗಾರರು ಪ್ರಸ್ತುತ ತಂಡವನ್ನು ತೊರೆದು ಬೇರೆ ತಂಡ ಸೇರಿಕೊಳ್ಳುವುದು ಸರ್ವೆ ಸಾಮಾನ್ಯ. ಆಟಗಾರರ ಈ ರೀತಿಯ ನಡೆಯನ್ನು ನಾವು ಫುಟ್ಬಾಲ್​ನಲ್ಲಿ ನೋಡಬಹುದು.

ಇಂಡಿಯನ್ ಪ್ರೀಮಿಯರ್ ಲೀಗ್ ಸಾಕರ್ ಅಥವಾ ಬ್ಯಾಸ್ಕೆಟ್‌ಬಾಲ್‌ನ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಹಾರ್ದಿಕ್‌ ಟ್ರೇಡ್​ ಸೂಚಿಸುತ್ತದೆ ಎಂದು ನೆಹ್ರಾ ಭವಿಷ್ಯ ನುಡಿದಿದ್ದಾರೆ. ಈ ಆಟವು ಸಾಗುತ್ತಿರುವ ರೀತಿ ಇದು ಸಾಕರ್ ಅಥವಾ ಬ್ಯಾಸ್ಕೆಟ್‌ಬಾಲ್‌ನ ದಿಕ್ಕಿನಲ್ಲಿ ಸಾಗುತ್ತಿದೆ. ಹೌದು, ಜಿಟಿ ಪಾಂಡ್ಯ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ನಮ್ಮ ಕಡೆಯಿಂದ ಅವರಿಗೆ ಶುಭಾಶಯ ಎಂದು ಅವರು ಹೇಳಿದ್ದಾರೆ.

ಭಾರತೀಯರಿಗೆ ಅರ್ಥವಾಗಲ್ಲ ಎಂದಿದ್ದ ಕೋಚ್​

ಮುಂಬೈಗೆ ಮರಳುತ್ತಿದ್ದಂತೆ ಹಾರ್ದಿಕ್‌ಗೆ ನಾಯಕತ್ವ ನೀಡಲಾಯಿತು. ಇದು ಸಂಪೂರ್ಣವಾಗಿ ಕ್ರಿಕೆಟ್ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ನನಗಿದು ಪರಿವರ್ತನೆಯ ಹಂತ ಎನಿಸಿತು. ಆದರೆ, ಭಾರತದಲ್ಲಿ ಬಹಳಷ್ಟು ಜನರಿಗೆ ಅರ್ಥವಾಗಲ್ಲ. ಸಾಕಷ್ಟು ಭಾವುಕರಾಗುತ್ತಾರೆ ಎಂದು ಮುಂಬೈ ಮುಖ್ಯಕೋಚ್ ಮಾರ್ಕ್ ಬೌಚರ್ ಪಾಂಡ್ಯಗೆ ನಾಯಕತ್ವ ನೀಡಿದ್ದಕ್ಕೆ ಸಮರ್ಥನೆ ನೀಡಿದ್ದರು.

IPL_Entry_Point