ಕನ್ನಡ ಸುದ್ದಿ  /  Cricket  /  Gujarat Titans <Span Class='webrupee'>₹</span>3.60 Crore New Signing Robin Minz Meets With Accident Currently Under Observation Mohammed Shami Prs

ಗುಜರಾತ್ ಟೈಟಾನ್ಸ್ ತಂಡಕ್ಕೆ ಮೇಲಿಂದ ಮೇಲೆ ಆಘಾತ; 3.60 ಕೋಟಿ ಪಡೆದಿದ್ದ ಯುವ ಆಟಗಾರನಿಗೆ ಭೀಕರ ಅಪಘಾತ

Robin Minz: ಐಪಿಎಲ್​ಗೆ ಮುಂಚಿತವಾಗಿ ಗುಜರಾತ್ ಟೈಟಾನ್ಸ್ ಸ್ಟಾರ್ ರಾಬಿನ್ ಮಿನ್ಜ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಅವರು ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್, ರಾಬಿನ್ ಅವರನ್ನು 3.6 ಕೋಟಿ ರೂ.ಗೆ ಖರೀದಿಸಿತು.

ಗುಜರಾತ್ ಟೈಟಾನ್ಸ್ ತಂಡಕ್ಕೆ ಮೇಲಿಂದ ಮೇಲೆ ಆಘಾತ; 3.60 ಕೋಟಿ ಪಡೆದಿದ್ದ ಯುವ ಆಟಗಾರನಿಗೆ ಭೀಕರ ಅಪಾಘಾತ
ಗುಜರಾತ್ ಟೈಟಾನ್ಸ್ ತಂಡಕ್ಕೆ ಮೇಲಿಂದ ಮೇಲೆ ಆಘಾತ; 3.60 ಕೋಟಿ ಪಡೆದಿದ್ದ ಯುವ ಆಟಗಾರನಿಗೆ ಭೀಕರ ಅಪಾಘಾತ

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ 2024 ಆರಂಭಕ್ಕೂ ಮುನ್ನವೇ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಸತತ ಆಘಾತಗಳು ಎದುರಾಗುತ್ತಿವೆ. 2023ರ ಡಿಸೆಂಬರ್​ 19ರಂದು ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ 3.60 ಕೋಟಿಗೆ ಗುಜರಾತ್ ತಂಡವನ್ನು ಸೇರಿದ ರಾಬಿನ್ ಮಿಂಜ್ ಅವರು ಇಂದು, ಅಂದರೆ ಮಾರ್ಚ್​ 3ರ ಶನಿವಾರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ.

ಡಿಸೆಂಬರ್​​ನಲ್ಲಿ ನಡೆದ ಟ್ರೇಡ್​ ಪದ್ಧತಿಯಲ್ಲಿ ಗುಜರಾತ್​ ತೊರೆದು ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​​ ತಂಡವನ್ನು ಸೇರಿಕೊಂಡರು. ತದ ನಂತರ ಗುಜರಾತ್ ಬೌಲಿಂಗ್ ಅಸ್ತ್ರವಾಗಿದ್ದ ಮೊಹಮ್ಮದ್ ಶಮಿ ಗಾಯದ ಕಾರಣ ಟೂರ್ನಿಯಿಂದಲೇ ಹೊರಬಿದ್ದರು. ಮತ್ತೊಂದೆಡೆ ಇಂಜುರಿ ಕಾರಣ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಆಡುವ ಕುರಿತು ಇನ್ನೂ ಅಪ್ಡೇಟ್ ಕೂಡ ಸಿಕ್ಕಿಲ್ಲ.

ಈ ಎಲ್ಲದರ ನಡುವೆ ಟೈಟಾನ್ಸ್​ನ ಯಂಗ್ ಬ್ಯಾಟರ್​ ಅಪಘಾತಕ್ಕೆ ಒಳಗಾಗಿದ್ದಾನೆ. ಇದು ದೊಡ್ಡ ಮಟ್ಟದಲ್ಲಿ ಹಿನ್ನಡೆ ಉಂಟು ಮಾಡಿದೆ. ಅನ್‌ಕ್ಯಾಪ್ಡ್ ವಿಕೆಟ್-ಬ್ಯಾಟರ್ ಬೈಕ್ ಅಪಘಾತಕ್ಕೆ ಒಳಗಾಗಿದ್ದು, ಆಸ್ಪ್ರತೆಗೆ ದಾಖಲಾಗಿದ್ದಾರೆ. ರಾಬಿನ್ ಮಿಂಜ್ ತಮ್ಮ ಕವಾಸಕಿ ಸೂಪರ್ ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ. ಅದೃಷ್ಟವಶಾತ್ ಯುವ ಆಟಗಾರನಿಗೆ ಹೆಚ್ಚಿನ ಗಾಯಗಳು ಆಗಿಲ್ಲ.

ರಾಬಿನ್ ತಂದೆ ಹೇಳಿದ್ದೇನು?

ರಾಬಿನ್ ತಂದೆ ಕ್ಸೇವಿಯರ್ ಫ್ರಾನ್ಸಿನ್ ಮಿಂಜ್ ಮಗನ ಗಾಯದ ಕುರಿತು ಅಪ್ಡೇಟ್ ನೀಡಿದ್ದಾರೆ. ಮೊಣಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ರಾಬಿನ್ ಮನೆಗೆ ಹಿಂದಿರುಗುತ್ತಿದ್ದಾಗ, ಬೈಕ್ ಸ್ಕಿಡ್ ಆಗಿದ್ದು, ರಾಬಿನ್ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಬೈಕ್ ಸ್ವಲ್ಪ ಹಾನಿಯಾಗಿದೆ. ರಾಬಿನ್​ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ರಾಬಿನ್ ತಂದೆ ಆಜ್ ತಕ್​​ಗೆ ಹೇಳಿದ್ದಾರೆ.

ಐಪಿಎಲ್ ಹರಾಜಿನಲ್ಲಿ 20 ಲಕ್ಷದ ಮೂಲ ಬೆಲೆ ಹೆಸರು ನೋಂದಾಯಿಸಿಕೊಂಡಿದ್ದ ರಾಬಿನ್, 3.6 ಕೋಟಿಗೆ ಗುಜರಾತ್ ತಂಡಕ್ಕೆ ಸೇಲಾದರು. ರಾಬಿನ್ ಅವರ ತಂದೆ ರಾಂಚಿ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಹರಾಜಿನ ಮೊದಲು ಧೋನಿ ಅವರೊಂದಿಗೆ ಆತನ ತಂದೆ ಮಗನ ಕುರಿತು ಹೇಳಿದ್ದರಂತೆ. ಇದಕ್ಕೆ ಉತ್ತರಿಸಿದ್ದ ಮಾಹಿ, ಯಾರೂ ಅವರನ್ನು ಆಯ್ಕೆ ಮಾಡದಿದ್ದರೆ, ನಾವು ಮಾಡುತ್ತೇವೆ ಎಂದು ಧೋನಿ, ತಂದೆ ಕ್ಸೇವಿಯರ್ ಮಿಂಜ್‌ಗೆ ತಿಳಿಸಿದ್ದರು.

ಇತ್ತೀಚೆಗಷ್ಟೇ ನಡೆದ ಸಿಕೆ ನಾಯುಡು ಟ್ರೋಫಿಯಲ್ಲಿ ಜಾರ್ಖಂಡ್ ಪರ ಕಣಕ್ಕಿಳಿದಿದ್ದ ರಾಬಿನ್, ಕರ್ನಾಟಕ ವಿರುದ್ಧದ ಕ್ವಾರ್ಟರ್-ಫೈನಲ್​​ನಲ್ಲಿ 137 ರನ್​ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಸದ್ಯ ಗುಜರಾತ್ ತಂಡದ ಅಭ್ಯಾಸ ಶಿಬಿರಕ್ಕೆ ಭಾಗಿಯಾಗಲು ಸಿದ್ಧವಾಗುತ್ತಿದ್ದ ರಾಬಿನ್, ಅಪಘಾತಕ್ಕೀಡಾಗಿದ್ದಾರೆ. ಆದರೆ ಅವರು ಐಪಿಎಲ್​ಗೆ ಲಭ್ಯರಾಗುತ್ತಾರೋ ಇಲ್ಲವೋ ಎನ್ನುವುದರ ಬಗ್ಗೆ ಇನ್ನೂ ಮಾಹಿತಿ ಬರಬೇಕಿದೆ.

ರಾಂಚಿ ಕ್ರಿಸ್​ ಗೇಲ್ ಎಂದು ಕರೆಸಿಕೊಳ್ಳುತ್ತಿದ್ದ

ರಾಬಿನ್ ಮಿಂಜ್ ಕೋಚ್ ಆಸಿಫ್ ಹಕ್ ಅವರು ಹಿಂದೊಮ್ಮೆ ಮಾತನಾಡಿ ರಾಂಚಿಯ ಕ್ರಿಸ್​ಗೇಲ್ ಎಂದು ಕರೆದಿದ್ದರು. ಯುವ ವಿಕೆಟ್ ಕೀಪರ್-ಬ್ಯಾಟರ್ ಅನ್ನು ರಾಂಚಿಯ ಕ್ರಿಸ್ ಗೇಲ್ ಎಂದು ಕರೆಯಲಾಗುತ್ತದೆ. ಆತ ಯೂನಿವರ್ಸ್ ಬಾಸ್‌ನಂತೆ, ಎಡಗೈ ಬ್ಯಾಟರ್. ಅಲ್ಲದೆ, ಅವರಂತೆಯೇ ಬ್ಯಾಟ್ ಬೀಸುತ್ತಾರೆ. ದೊಡ್ಡ ಸಿಕ್ಸರ್‌ ಬಾರಿಸಲು ಎತ್ತಿದ ಕೈ. 200 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ನಡೆಸುತ್ತಾರೆ ಎಂದು ಹೇಳಿದ್ದರು.

ಮಿಂಜ್ ಕುಟುಂಬಕ್ಕೆ ಅವರು ಸೇರಿದ ಗುಮ್ಲಾ ಜಿಲ್ಲೆಯ ಬುಡಕಟ್ಟು ಪ್ರದೇಶದ ತೆಲ್ಗಾಂವ್ ಎಂಬ ಹಳ್ಳಿಯವರು. ವಿಶ್ವ ದರ್ಜೆಗೆ ಹಲವು ಹಾಕಿ ಆಟಗಾರರನ್ನು ಪರಿಚಯಿಸಿದ ಪ್ರದೇಶದಲ್ಲಿ ಕ್ರಿಕೆಟ್​ಗೆ ಅಷ್ಟು ಬೇಡಿಕೆ ಇಲ್ಲ. ಆದರೂ ರಾಬಿನ್​ ಛಲ ಬಿಡದೆ ಕ್ರಿಕೆಟರ್ ಆಗಿದ್ದು ಗಮನಾರ್ಹ. ತಂದೆ ಫ್ರಾನ್ಸಿಸ್ ಕೂಡ ಕ್ರೀಡೆಯಲ್ಲಿ ತೊಡಗಿದ್ದರು. ಅಥ್ಲೆಟಿಕ್ಸ್ ಮೇಲಿನ ಪ್ರೀತಿಯೇ ಅವರಿಗೆ ಸೈನ್ಯದಲ್ಲಿ ಕೆಲಸ ಸಿಗುವಂತೆ ಮಾಡಿತ್ತು.

IPL_Entry_Point