ಫಾಫ್ ಡು ಪ್ಲೆಸಿಸ್ ಕಿತ್ತಾಕಿ, ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಲಿ; 2011ರ ವಿಶ್ವಕಪ್ ವಿಜೇತ ಆಕ್ರೋಶ
ಕನ್ನಡ ಸುದ್ದಿ  /  ಕ್ರಿಕೆಟ್  /  ಫಾಫ್ ಡು ಪ್ಲೆಸಿಸ್ ಕಿತ್ತಾಕಿ, ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಲಿ; 2011ರ ವಿಶ್ವಕಪ್ ವಿಜೇತ ಆಕ್ರೋಶ

ಫಾಫ್ ಡು ಪ್ಲೆಸಿಸ್ ಕಿತ್ತಾಕಿ, ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಲಿ; 2011ರ ವಿಶ್ವಕಪ್ ವಿಜೇತ ಆಕ್ರೋಶ

Harbhajan Singh : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದ ಬದಲಾವಣೆಗೆ ಕರೆ ನೀಡಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್​, ಫಾಫ್​ ಡು ಪ್ಲೆಸಿಸ್ ಬದಲಿಗೆ ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗಬೇಕೆಂದು ಮನವಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕನಾಗಬೇಕೆಂದ ಹರ್ಭಜನ್ ಸಿಂಗ್,
ವಿರಾಟ್ ಕೊಹ್ಲಿ ನಾಯಕನಾಗಬೇಕೆಂದ ಹರ್ಭಜನ್ ಸಿಂಗ್,

ಐಪಿಎಲ್‌ನ ಕೊನೆಯ ಸೀಸನ್‌ನಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024ರಲ್ಲೂ ಏರಿಳಿತಗಳನ್ನು ಕಾಣುತ್ತಿದೆ. ತಂಡದಲ್ಲಿ ಸ್ಥಿರತೆಯ ಕೊರತೆ ಎದ್ದು ಕಾಣುತ್ತಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ಬಿಟ್ಟರೆ ಬೇರೆ ಯಾವ ಬ್ಯಾಟ್ಸ್‌ಮನ್‌ಗಳು ಸಹ ನಿಯಮಿತವಾಗಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುತ್ತಿಲ್ಲ. ಬೌಲಿಂಗ್ ಕೂಡ ಅಷ್ಟೊಂದು ಉತ್ತಮವಾಗಿಲ್ಲ. ಉಳಿದ ತಂಡಗಳಂತೆ ಆರ್​ಸಿಬಿ ಪ್ರಗತಿ ಸಾಧಿಸಲು ಸಾಧ್ಯವಾಗದ ಸಂದಿಗ್ಧ ಸ್ಥಿತಿಗೆ ತಲುಪಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಆರ್​​ಸಿಬಿ ಸೋಲಿನ ನಂತರ 2011ರ ವಿಶ್ವಕಪ್​ ವಿಜೇತ ಹಾಗೂ ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್ ದೊಡ್ಡ ಹೇಳಿಕೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ್ದು, ವಿರಾಟ್ ಕೊಹ್ಲಿ ಅವರನ್ನು ನಾಯಕನನ್ನಾಗಿ ಮರು ನೇಮಕ ಮಾಡಬೇಕೆಂದು ಎಂದು ಮನವಿ ಮಾಡಿದ್ದಾರೆ. ಕೊಹ್ಲಿ ಕ್ಯಾಪ್ಟನ್ ಆದರೆ ಕನಿಷ್ಠ ಪಕ್ಷ ಉಳಿದ ಪಂದ್ಯಗಳಲ್ಲಿ ಹೋರಾಟವಾದರೂ ಕಂಡು ಬರಲಿದೆ. ಕೊಹ್ಲಿ ತಮ್ಮ ಆಟಗಾರರಿಗೆ ಹೋರಾಟ ಮನೋಭಾವನೆ ತುಂಬುತ್ತಾರೆ. ಆದರೆ ಫಾಫ್ ಡು ಪ್ಲೆಸಿಸ್ ಅವರ ನಾಯಕತ್ವದಲ್ಲಿ ಖದರೇ ಇಲ್ಲ. ಅವರನ್ನು ಕಿತ್ತಾಕಿ ಎಂದು ಆಗ್ರಹಿಸಿದ್ದಾರೆ.

‘ಫಾಫ್​ನಿಂದ ಗ್ರೀನ್​​ ಬೆಂಚ್​ನಲ್ಲಿದ್ದಾರೆ’

ಮುಂಬೈ ವಿರುದ್ಧದ ಪಂದ್ಯಕ್ಕೆ ಕ್ಯಾಮರೂನ್​ ಗ್ರೀನ್​ಗೆ ಅವಕಾಶ ನೀಡದಿರುವುದಕ್ಕೆ ಕಿಡಿ ಕಾರಿದ ಭಜ್ಜಿ, ಗ್ರೀನ್ ಅವರನ್ನೇಕೆ ಬೆಂಚ್ ಮಾಡಲಾಗಿದೆ. ಪ್ಲೆಸಿಸ್​ನಿಂದಾಗಿ ಆತ ಪ್ಲೇಯಿಂಗ್​ ಇಲೆವೆನ್​ನಿಂದ ಹೊರಗಿರುವಂತಾಯಿತು. ಪ್ರತಿ ಲೀಗ್​​ನಲ್ಲೂ ಸೆಂಚುರಿ ಬಾರಿಸುವ ಆಟಗಾರರನ್ನು ಹೊರಗಿಟ್ಟು ಫಾಫ್ ಆಡುತ್ತಿರುವುದು ಸರಿಯಿಲ್ಲ. ಮ್ಯಾನೇಜ್​ಮೆಂಟ್​ನಿಂದ ಫಾಫ್ ಆಡುವಂತೆ ಒತ್ತಾಯ ಇದೆ. ಇದೇ ಕಾರಣಕ್ಕೆ ಗ್ರೀನ್​ರನ್ನು ಹೊರಗಿಡಬೇಕಾಯಿತು. ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ಮಾಡಿ. ತಂಡವು ಹೋರಾಡುತ್ತದೆ. ನಂತರ ಗೆಲ್ಲುತ್ತದೆ. ತಂಡದಲ್ಲಿನ ತಪ್ಪುಗಳ ಬಗ್ಗೆ ಫಾಫ್ ಒಪ್ಪಿಕೊಂಡಿದ್ದಾರೆ. ಆದರೆ, ಬದಲಾವಣೆ ತರಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

ಹೊಸ ಆಟಗಾರರಿಗೆ ಅವಕಾಶ ನೀಡಬೇಕಿದೆ. ಅವಕಾಶಗಳನ್ನು ಬಳಸಿಕೊಳ್ಳುವುದು ಅವರಿಗೆ ಬಿಟ್ಟದ್ದು. ಆಟಗಾರರಿಗೆ ನ್ಯಾಯಯುತ ಅವಕಾಶ ನೀಡುವುದು ಮುಖ್ಯವಾಗಿದೆ. ಆದರೆ, ಬದಲಾವಣೆ ಮಾಡುವ ಸಮಯವಿರುವ ಸ್ಥಳದಲ್ಲಿ ನಮ್ಮನ್ನು ಕಂಡುಕೊಳ್ಳುವ ಅಗತ್ಯ ಇದೆ. ಮುಖ್ಯವಾದ ಒಂದು ವಿಷಯವೆಂದರೆ ಸ್ಥಿರತೆ. ಅದೇ ವಿಚಾರವಾಗಿ ತಂಡವು ನಿರಾಶೆಗೊಂಡಿದೆ. ಆದರೆ ಅದನ್ನು ಬದಲಾಯಿಸಲು ಸಾಧ್ಯ ಇದೆ. ಅದಕ್ಕಾಗಿ ಹರ್ಭಜನ್ ಫ್ರಾಂಚೈಸಿಯ ನಾಯಕರಾಗಿ ಕೊಹ್ಲಿಯನ್ನು ಮರುನೇಮಕಗೊಳಿಸಬೇಕು. ಅವರಿದ್ದರೆ ತಂಡದ ಚಿತ್ರಣ ಬದಲಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಕ್ಯಾಪ್ಟನ್ಸಿ ರೆಕಾರ್ಡ್

ಕೊಹ್ಲಿ 2013 ರಿಂದ 2021 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದರು. 2011-2012ರವರೆಗೆ ಕೊಹ್ಲಿ ಉಪನಾಯಕನಾಗಿದ್ದರು. 2013ರಲ್ಲಿ ನಾಯಕನಾಗಿ ನೇಮಕಗೊಂಡು 2016ರಲ್ಲಿ ತಂಡವನ್ನು ಫೈನಲ್​ಗೆ ಮುನ್ನಡೆಸಿದ್ದರು. 2021ರಲ್ಲಿ ಕೆಳಗಿಳಿದ ಕಾರಣ 2022ರಲ್ಲಿ ಫಾಫ್ ಡು ಪ್ಲೆಸಿಸ್ ತಂಡಕ್ಕೆ ನೂತನ ಕ್ಯಾಪ್ಟನ್ ಆಗಿ ನೇಮಕಗೊಂಡರು. ಅವರ ಅನುಪಸ್ಥಿತಿಯಲ್ಲಿ 2023ರಲ್ಲಿ ಮತ್ತೆ ಆರ್​​ಸಿಬಿ ತಂಡವನ್ನು ಮುನ್ನಡೆಸಿದ್ದರು ಕೊಹ್ಲಿ.

ಒಟ್ಟಾರೆಯಾಗಿ, ಕೊಹ್ಲಿ 143 ಪಂದ್ಯಗಳಲ್ಲಿ ಆರ್​ಸಿಬಿ ನಾಯಕತ್ವ ವಹಿಸಿದ್ದಾರೆ. 66 ಗೆಲುವು, 70ರಲ್ಲಿ ಸೋತಿದ್ದಾರೆ. 2021ರ ಐಪಿಎಲ್​ ನಂತರ ಕೊಹ್ಲಿ ಕೆಳಗಿಳಿದರು. ಬಳಿಕ 2022ರ ಋತುವಿನಲ್ಲಿ ಫಾಫ್ ಉನ್ನತ ಹುದ್ದೆಯನ್ನು ವಹಿಸಿಕೊಂಡರು. ಇಲ್ಲಿಯವರೆಗೆ ಫಾಫ್ ಆರ್​ಸಿಬಿ ತಂಡವನ್ನು 32 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. 15 ರಲ್ಲಿ ಗೆಲುವು, 17ರಲ್ಲಿ ಸೋತಿದ್ದಾರೆ. ಐಪಿಎಲ್ 2024ರಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಪರ ಕೊಹ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

Whats_app_banner