ಕನ್ನಡ ಸುದ್ದಿ  /  Cricket  /  Harbhajan Singh Praises Virat Kohli As Fitness Guru Says He Reached The Peak Because Of Rcb Player Ipl 2024 Jra

ಕೊಹ್ಲಿಯಿಂದಾಗಿ ನಾನು ಉತ್ತುಂಗಕ್ಕೇರಿದೆ; ವಿರಾಟ್ ಭಾರತ ಕ್ರಿಕೆಟ್ ತಂಡದ ಫಿಟ್‌ನೆಸ್ ಗುರು ಎಂದು ಕೊಂಡಾಡಿದ ಹರ್ಭಜನ್

Harbhajan Singh:‌ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್, ತಾವು ಫಿಟ್‌ ಆಗಲು ವಿರಾಟ್ ಕೊಹ್ಲಿ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆರ್‌ಸಿಬಿ ಮಾಜಿ ನಾಯಕನನ್ನು ಭಾರತ ಕ್ರಿಕೆಟ್‌ ತಂಡದ ಫಿಟ್ನೆಸ್ ಗುರು ಎಂದು ಹರ್ಭಜನ್ ಕರೆದಿದ್ದಾರೆ.

ವಿರಾಟ್ ಭಾರತ ಕ್ರಿಕೆಟ್ ತಂಡದ ಫಿಟ್‌ನೆಸ್ ಗುರು ಎಂದು ಕೊಂಡಾಡಿದ ಹರ್ಭಜನ್
ವಿರಾಟ್ ಭಾರತ ಕ್ರಿಕೆಟ್ ತಂಡದ ಫಿಟ್‌ನೆಸ್ ಗುರು ಎಂದು ಕೊಂಡಾಡಿದ ಹರ್ಭಜನ್ (Reuters)

ವಿಶ್ವದ ಅತ್ಯಂತ ಫಿಟ್‌ ಕ್ರಿಕೆಟಿಗರಲ್ಲಿ ವಿರಾಟ್‌ ಕೊಹ್ಲಿ (Virat Kohli) ಅಗ್ರಗಣ್ಯರು. 2012ರ ಐಪಿಎಲ್ ಆವೃತ್ತಿ ನಂತರ ಮನೆಗೆ ಮರಳಿದ ವಿರಾಟ್ ಕೊಹ್ಲಿ, ಆಗ ಇದ್ದ ತಮ್ಮ ಫಿಟ್‌ನೆಸ್‌ ಬಗ್ಗೆ ತಾವೇ ಅಸಹ್ಯಪಟ್ಟರು. ಮರುಕ್ಷಣವೇ ಕೊಹ್ಲಿ ತಮ್ಮ ದಿನಚರಿ ಹಾಗೂ ಫಿಟ್‌ನೆಸ್‌ನಲ್ಲಿ ಬದಲಾವಣೆ ತರಲು ನಿರ್ಧರಿಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಫಿಟ್‌ನೆಸ್ ಮಾನದಂಡಗಳಿಗೆ ಹೋಲಿಸಿದರೆ ತಾನು ಹಿಂದುಳಿದಿದ್ದೇನೆ ಎಂಬುದನ್ನು ಅರಿತುಕೊಂಡರು. 2012ರ ಐಪಿಎಲ್ ಟೂರ್ನಿ ಬಳಿಕ ಫಿಟ್ನೆಸ್ ಮೇಲೆ ಭಾರಿ ಕೆಲಸ ಮಾಡಿದ ಆರ್‌ಸಿಬಿ ಐಕಾನ್, ಇಂದು ವಿಶ್ವದ ಅತ್ಯಂತ ಫಿಟ್ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಾರೆ.

ತಮ್ಮ ವೃತ್ತಿಜೀವನದ ಅತಿದೊಡ್ಡ ಪರಿವರ್ತನೆಯನ್ನು ಸ್ವೀಕರಿಸಿದ ಕೊಹ್ಲಿ, 2015ರಲ್ಲಿ ತಮ್ಮ ದಿನಚರಿಯಲ್ಲಿ ಲಿಫ್ಟಿಂಗ್ ಅನ್ನು ಸೇರಿಸಿಕೊಂಡರು. ಆ ಸಮಯದಲ್ಲಿ ಆರ್‌ಸಿಬಿಯಲ್ಲಿದ್ದ ಭಾರತದ ಮಾಜಿ 'ಶಕ್ತಿ ಮತ್ತು ಕಂಡೀಷನಿಂಗ್ ಕೋಚ್' ಶಂಕರ್ ಬಸು ಅವರ ಮೇಲೆ ಕೊಹ್ಲಿಗೆ ನಂಬಿಕೆ ಇತ್ತು. ಕುತೂಹಲಕಾರಿ ಎಂಬಂತೆ ಕೊಹ್ಲಿ ತಮ್ಮ ಫಿಟ್ನೆಸ್ ಮೇಲೆ ಗಮನ ಹರಿಸಿದ್ದು ಮಾತ್ರವಲ್ಲದೆ, ಒಬ್ಬ ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಲು ತಮ್ಮ ಗೆಳೆಯರಿಗೂ ಸಹಾಯ ಮಾಡಿದರು. ಕೊಹ್ಲಿ ತಾವೊಬ್ಬರು ಮಾತ್ರವಲ್ಲದೆ, ತಂಡದ ಸಹ ಆಟಗಾರರಿಗೂ ಫಿಟ್‌ನೆಸ್‌ ಮಂತ್ರ ಹೇಳಿಕೊಟ್ಟರು.

ಇದನ್ನೂ ಓದಿ | ವಿರುಷ್ಕಾ ದಂಪತಿಗೆ ಗಂಡು ಮಗು ಜನನ; ಜೂನಿಯರ್ ವಿರಾಟ್‌ಗೆ ಅಕಾಯ್‌ ಹೆಸರಿಟ್ಟ ಕೊಹ್ಲಿ-ಅನುಷ್ಕಾ -Virat Kohi Son Akaay

ಐಪಿಎಲ್ 2024ರ ಆವೃತ್ತಿಗೂ ಮುಂಚಿತವಾಗಿ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್, ತಾವು ಫಿಟ್‌ ಆಗಲು ಕೊಹ್ಲಿ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ಆಟಗಾರ, ಕೊಹ್ಲಿಯನ್ನು ಭಾರತ ಕ್ರಿಕೆಟ್‌ ತಂಡದ 'ಫಿಟ್ನೆಸ್ ಗುರು' ಎಂದು ಕರೆದಿದ್ದಾರೆ.

ಇದನ್ನೂ ಓದಿ | PSL: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಬಾಬರ್ ಅಜಾಮ್ ಹೊಸ ದಾಖಲೆ; ಈ ಮೈಲಿಗಲ್ಲು ತಲುಪಿದ ಮೊದಲ ಆಟಗಾರ

“ನಾವು ಫಿಟ್ನೆಸ್ ಬಗ್ಗೆ ಮಾತನಾಡುವುದಿದ್ದರೆ, ಖಂಡಿತವಾಗಿಯೂ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿದಾಗ ಮಾತ್ರ ನಮಗೆ ಅದು ತಿಳಿಯುತ್ತದೆ. ಹೌದು, ಇದು ಸಾಲುವುದಿಲ್ಲ ಎಂಬ ಅರಿವಾಗುತ್ತದೆ,” ಎಂದು ಹರ್ಭಜನ್ ಸಿಂಗ್‌ ಹೇಳಿದ್ದಾರೆ.

ನಾನು ಅವನನ್ನು ಫಿಟ್ನೆಸ್ ಗುರು ಎಂದು ಕರೆಯುತ್ತೇನೆ

“ನಾನು ಅವನಲ್ಲಿ ಬದಲಾವಣೆಗಳನ್ನು ಗಮನಿಸಿದಾಗ, ಆ ಬಗ್ಗೆ ಪ್ರಶ್ನಿಸಿದೆ. ಇಷ್ಟು ನಿಯಂತ್ರಣ ಹೇಗೆ ಸಾಧ್ಯ ಎಂದು ಕೇಳಿದೆ. ಆತ ಸೀಮಿತ ಆಹಾರವನ್ನು ಸೇವಿಸುತ್ತಾನೆ. ಅದನ್ನು ಕೂಡಾ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ತಿನ್ನುತ್ತಾನೆ. ಅದಕ್ಕಿಂತ ಹೆಚ್ಚು ತಿನ್ನಲ್ಲ. ಮುಖ್ಯವಾಗಿ ಸಮಯಕ್ಕೆ ಅನುಗುಣವಾಗಿ ಸೇವಿಸುತ್ತಾನೆ. ಅವನು ತನ್ನಲ್ಲಿ ಒಂದು ಶಿಸ್ತು ಪಾಲಿಸುತ್ತಿದ್ದ. ಆ ಶಿಸ್ತನ್ನು ನನ್ನಲ್ಲಿಯೂ ತರಲು ಪ್ರಯತ್ನಿಸಿದ” ಎಂದು ಬಜ್ಜಿ ಹೇಳಿದ್ದಾರೆ.

"ಆ 2 ವರ್ಷಗಳಲ್ಲಿ ನನ್ನ ಫಿಟ್‌ನೆಸ್‌ ಕೂಡಾ ಉತ್ತಮವಾಗಿತ್ತು. ವಿರಾಟ್ ಕೊಹ್ಲಿಯಿಂದಾಗಿ ನಾನು ನನ್ನ ಫಿಟ್ನೆಸ್‌ನ ಉತ್ತುಂಗವನ್ನು ತಲುಪಿದೆ. ಆತ ನನ್ನನ್ನು ಜಿಮ್‌ಗೆ ಕರೆದೊಯ್ಯಲು ಪ್ರಾರಂಭಿಸಿದ. ಇದೇ ಕಾರಣಕ್ಕಾಗಿ ನಾನು ಅವನನ್ನು ಫಿಟ್ನೆಸ್ ಗುರು ಎಂದು ಕರೆಯುತ್ತೇನೆ. ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಒಂದು ರೀತಿಯ ಫಿಟ್ನೆಸ್ ಮಾದರಿಯನ್ನು ನಿಗದಿಪಡಿಸಿದ್ದಾರೆ," ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.‌

ಇದನ್ನೂ ಓದಿ | ಯುಜ್ವೇಂದ್ರ ಚಾಹಲ್ ಹತಾಶೆಗೊಂಡಿದ್ದರು, ಆರ್‌ಸಿಬಿಯಿಂದ ಅಸಮಾಧಾನಗೊಂಡಿದ್ದರು: ಮೈಕ್ ಹೆಸನ್

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point