ಕೃಷ್ಣ-ಕುಚೇಲನಿಗೆ ಹೋಲುತ್ತಿದ್ದ ಎಂಎಸ್ ಧೋನಿ-ಹರ್ಭಜನ್ ಸಿಂಗ್ ನಡುವೆ ವೈಮನಸ್ಸು; 10 ವರ್ಷ ಆಯ್ತು ಮಾತಾಡಿ ಎಂದ ಭಜ್ಜಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೃಷ್ಣ-ಕುಚೇಲನಿಗೆ ಹೋಲುತ್ತಿದ್ದ ಎಂಎಸ್ ಧೋನಿ-ಹರ್ಭಜನ್ ಸಿಂಗ್ ನಡುವೆ ವೈಮನಸ್ಸು; 10 ವರ್ಷ ಆಯ್ತು ಮಾತಾಡಿ ಎಂದ ಭಜ್ಜಿ

ಕೃಷ್ಣ-ಕುಚೇಲನಿಗೆ ಹೋಲುತ್ತಿದ್ದ ಎಂಎಸ್ ಧೋನಿ-ಹರ್ಭಜನ್ ಸಿಂಗ್ ನಡುವೆ ವೈಮನಸ್ಸು; 10 ವರ್ಷ ಆಯ್ತು ಮಾತಾಡಿ ಎಂದ ಭಜ್ಜಿ

MS Dhoni vs Harbhajan Singh: ಎಂಎಸ್ ಧೋನಿ ಅವರೊಂದಿಗೆ 10 ವರ್ಷಗಳಿಗಿಂತ ಹೆಚ್ಚು ಕಾಲ ಸಂಪರ್ಕದಲ್ಲಿಲ್ಲ. ನಾನು ಧೋನಿ ಜೊತೆಗೆ ಮಾತನಾಡುವುದಿಲ್ಲ. ನಾನು ಸಿಎಸ್​ಕೆ ತಂಡದಲ್ಲಿ ಆಡುತ್ತಿದ್ದಾಗ ಕೊನೆಯದಾಗಿ ಮಾತನಾಡಿಸಿದ್ದೆ ಎಂದು ಹರ್ಭಜನ್ ಸಿಂಗ್​ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕೃಷ್ಣ-ಕುಚೇಲನಿಗೆ ಹೋಲುತ್ತಿದ್ದ ಎಂಎಸ್ ಧೋನಿ-ಹರ್ಭಜನ್ ಸಿಂಗ್ ನಡುವೆ ವೈಮನಸ್ಸು
ಕೃಷ್ಣ-ಕುಚೇಲನಿಗೆ ಹೋಲುತ್ತಿದ್ದ ಎಂಎಸ್ ಧೋನಿ-ಹರ್ಭಜನ್ ಸಿಂಗ್ ನಡುವೆ ವೈಮನಸ್ಸು (Vipin Kumar/HT PHOTO)

ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ಹರ್ಭಜನ್ ಸಿಂಗ್ (Harbhajan Singh) ಇಬ್ಬರ ಗೆಳೆತನ ಕೃಷ್ಣ-ಕುಚೇಲನಿಗೆ ಹೋಲುತ್ತಿತ್ತು. ಭಾರತ ತಂಡ ಮತ್ತು ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಒಟ್ಟಿಗೆ ಕಾಣಿಸಿಕೊಂಡಿರುವ ಈ ಲೆಜೆಂಡರಿ ಜೋಡಿ ನಡುವೆ ವೈಮನಸ್ಸು ಏರ್ಪಟ್ಟಿದೆ ಎಂಬ ಅಚ್ಚರಿ ವಿಷಯ ಇದೀಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್ ನೀಡಿದ ಹೇಳಿಕೆ, ಡಿಸೆಂಬರ್​ 5 ರಂದು ಎಕ್ಸ್​ ಖಾತೆಯಲ್ಲಿ ಮಾಡಿದ ಪೋಸ್ಟ್,​ ಇಬ್ಬರ ಮಧ್ಯೆ ಬಿರುಕು ಉಂಟಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ದೀರ್ಘಕಾಲ ಒಟ್ಟಿಗೆ ಕ್ರಿಕೆಟ್​ ಆಡಿರುವ ಇಬ್ಬರ ನಡುವೆ ಏನಾಗಿದೆ? ವೈಮನಸ್ಸು ಸೃಷ್ಟಿಗೆ ಕಾರಣವೇನು?

2007 ಮತ್ತು 2011ರಲ್ಲಿ ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವಿನ ಸಂದರ್ಭದಲ್ಲಿ ಧೋನಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಹರ್ಭಜನ್ ಸಿಂಗ್, ಈ ವಾರದ ಆರಂಭದಲ್ಲಿ ಮಾಹಿ ಜೊತೆಗೆ ಒಂದು ದಶಕಕ್ಕೂ ಹೆಚ್ಚು ಕಾಲ ಮಾತನಾಡಿಲ್ಲ ಎಂದು ಬಹಿರಂಗಪಡಿಸಿದ್ದರು. ನ್ಯೂಸ್ 18 ಜೊತೆಗೆ ಈ ಬಗ್ಗೆ ಮಾತನಾಡಿದ್ದ ಹರ್ಭಜನ್, ಧೋನಿ ಅವರೊಂದಿಗೆ 10 ವರ್ಷಗಳಿಗಿಂತ ಹೆಚ್ಚು ಕಾಲ ಸಂಪರ್ಕದಲ್ಲಿಲ್ಲ. ನಾನು ಧೋನಿ ಜೊತೆಗೆ ಮಾತನಾಡುವುದಿಲ್ಲ. ನಾನು ಸಿಎಸ್​ಕೆ ತಂಡದಲ್ಲಿ ಆಡುತ್ತಿದ್ದಾಗ ಕೊನೆಯದಾಗಿ ಮಾತನಾಡಿಸಿದ್ದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಾನು ಅವರೊಂದಿಗೆ ಮಾತು ಬಿಟ್ಟು 10 ವರ್ಷಕ್ಕೂ ಮೇಲಾಗಿದೆ. ಐಪಿಎಲ್​​ನಲ್ಲಿ ನಾವು ಸಿಎಸ್​ಕೆ ಪರ ಆಡುತ್ತಿದ್ದಾಗ, ಮಾತನಾಡುತ್ತಿದ್ದೆವು. ಅದು ಕೂಡ ಮೈದಾನಕ್ಕೆ ಸೀಮಿತ ಆಗಿತ್ತು. ಅದರ ನಂತರ ಅವರು ನನ್ನ ಕೋಣೆಗೆ ಬರಲಿಲ್ಲ. 2018 ರಿಂದ 2020 ರವರೆಗೆ ಚೆನ್ನೈ ಜೊತೆಗಿನ ಕಡಿಮೆ ಅವಧಿಯಲ್ಲಿ ಸಂವಾದವು ಕಟ್ಟುನಿಟ್ಟಾಗಿ ವೃತ್ತಿಪರವಾಗಿತ್ತು. ಮೈದಾನದಲ್ಲಿನ ಚರ್ಚೆಗಳಿಗೆ ಸೀಮಿತವಾಗಿತ್ತು ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಭಜ್ಜಿ ಎಕ್ಸ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಅಚ್ಚರಿ ಪೋಸ್ಟ್ ಹಾಕಿ ಮತ್ತೊಂದು ಅಚ್ಚರಿ ಮೂಡಿಸಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಗೊಂದಲ ಮೂಡಿಸಿದೆ.

ಕುತೂಹಲದ ಪದರ ಸೇರಿಸಿದ ಹರ್ಭಜನ್ ಪೋಸ್ಟ್

ಹರ್ಭಜನ್ ಹಾಕಿರುವ ಅಚ್ಚರಿಯ ಪೋಸ್ಟ್​, ಧೋನಿಯೊಂದಿಗಿನ ಸಂಬಂಧದ ಕುರಿತು ಊಹಾಪೋಹಗಳಿಗೆ ಮತ್ತಷ್ಟು ತುಪ್ಪ ಸುರಿಯುವಂತಿದೆ. ಉತ್ತಮ ಸ್ನೇಹಿತರು ಅಪರಿಚಿತರಾಗಬಹುದು, ಸುಲಭವಾಗಿ ಅಪರಿಚಿತರು ಉತ್ತಮ ಸ್ನೇಹಿತರಾಗಬಹುದು ಎಂದು ಪೋಸ್ಟ್​ ಹಾಕಿದ್ದಾರೆ. ಇಲ್ಲಿ ಹೆಸರನ್ನು ಉಲ್ಲೇಖಿಸದಿದ್ದರೂ, ಈ ಪೋಸ್ಟ್ ಅನ್ನು ಧೋನಿಗೆ ಹೇಳಿದಂತಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಧೋನಿಯೊಂದಿಗೆ ಮಾತನಾಡದ ಕುರಿತು ಹೇಳಿಕೆ ನೀಡಿದ ಬಳಿಕ ಈ ಪೋಸ್ಟ್ ಹಂಚಿಕೊಂಡಿದ್ದು, ಅವರ ಸಂಬಂಧಕ್ಕೆ ಮತ್ತೊಂದು ಕುತೂಹಲದ ಪದರವನ್ನು ಸೇರಿಸಿದೆ.

ಒಂದೆರಡು ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ ಎಂದ ಹರ್ಭಜನ್

ಹರ್ಭಜನ್ ಅವರು ಧೋನಿ ಬಗ್ಗೆ ಯಾವುದೇ ಕೆಟ್ಟ ಭಾವನೆಗಳನ್ನು ಹೊಂದಿಲ್ಲ ಎಂದು ಒತ್ತಿ ಹೇಳಿದ್ದಾರೆ. ನನಗೆ ಅವರ ವಿರುದ್ಧ ಯಾವುದೇ ದ್ವೇಷವಿಲ್ಲ. ಅವರಿಗೆ ಏನಾದರೂ ಹೇಳಲು ಇದ್ದರೆ, ಅವರು ನನಗೆ ಹೇಳಬಹುದು. ಆದರೆ ಅವರು ಹಾಗೆ ಮಾಡಿದ್ದರೆ, ಅವರು ಈ ಹೊತ್ತಿಗೆ ನನಗೆ ಹೇಳುತ್ತಿದ್ದರು. ಸಂಬಂಧವು ಯಾವಾಗಲೂ ಕೊಡು-ಕೊಳ್ಳುವಿಕೆಗೆ ಸಂಬಂಧಿಸಿದೆ. ನಾನು ನಿಮ್ಮನ್ನು ಗೌರವಿಸಿದರೆ, ನೀವು ನನ್ನನ್ನು ಮತ್ತೆ ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ತನ್ನನ್ನು ಧೋನಿ ನಿರ್ಲಕ್ಷಿಸಿದ್ದನ್ನೂ ವಿವರಿಸಿದ್ದಾರೆ. ನಾನು ನಿಮಗೆ ಒಂದು ಅಥವಾ ಎರಡು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದಿದ್ದರೆ, ನಾನು ಬಹುಶಃ ನನಗೆ ಅಗತ್ಯವಿರುವಷ್ಟು ಮಾತ್ರ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಅವರು ಹೇಳಿದ್ದಾರೆ.

2007ರ ಐಸಿಸಿ ಟಿ 20 ವಿಶ್ವಕಪ್, 2011 ಐಸಿಸಿ ಕ್ರಿಕೆಟ್ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿರುವ ಧೋನಿ, ತನ್ನ ನಾಯಕತ್ವ ಮತ್ತು ತಂತ್ರಗಾರಿಕೆಗೆ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದಾರೆ. ಧೋನಿ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಆರ್ ಅಶ್ವಿನ್ ಅವರಂತಹ ಆಟಗಾರರನ್ನು ಬೆಳೆಸುವ ಯತ್ನದಲ್ಲಿ ಹರ್ಭಜನ್, ಯುವರಾಜ್ ಸಿಂಗ್ ಅವರಂತಹ ಹಿರಿಯ ಕ್ರಿಕೆಟಿಗರನ್ನು ಸೈಡ್ ಮಾಡಿದರು. ಈ ಬದಲಾವಣೆಯು ಧೋನಿ ಮತ್ತು ಹರ್ಭಜನ್ ನಡುವಿನ ಅಂತರ ಹೆಚ್ಚಿಸುವಂತೆ ಮಾಡಿದೆ.

Whats_app_banner