ಮರಳಿ ಮುಂಬೈ ಸೇರಿದ ಬಳಿಕ ಪಾಂಡ್ಯ ಮೊದಲ ಪ್ರತಿಕ್ರಿಯೆ; ಹಿತವೆನಿಸುತ್ತಿದೆ ಎಂದ ಹಾರ್ದಿಕ್
ಕನ್ನಡ ಸುದ್ದಿ  /  ಕ್ರಿಕೆಟ್  /  ಮರಳಿ ಮುಂಬೈ ಸೇರಿದ ಬಳಿಕ ಪಾಂಡ್ಯ ಮೊದಲ ಪ್ರತಿಕ್ರಿಯೆ; ಹಿತವೆನಿಸುತ್ತಿದೆ ಎಂದ ಹಾರ್ದಿಕ್

ಮರಳಿ ಮುಂಬೈ ಸೇರಿದ ಬಳಿಕ ಪಾಂಡ್ಯ ಮೊದಲ ಪ್ರತಿಕ್ರಿಯೆ; ಹಿತವೆನಿಸುತ್ತಿದೆ ಎಂದ ಹಾರ್ದಿಕ್

Hardik Pandya: ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ, ಐಪಿಎಲ್ 2024ರ ಆವೃತ್ತಿಗೆ ಮುಂಬೈ ಇಂಡಿಯನ್ಸ್‌ ಸೇರಿಕೊಂಡಿದ್ದಾರೆ. ಮರಳಿ ಗೂಡು ಸೇರಿದ ಬಳಿಕ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ ಸೇರಿಕೊಂಡ ಬಳಿಕ ಹಾರ್ದಿಕ್‌ ಪಾಂಡ್ಯ ಮೊದಲ ಪ್ರತಿಕ್ರಿಯೆ
ಮುಂಬೈ ಸೇರಿಕೊಂಡ ಬಳಿಕ ಹಾರ್ದಿಕ್‌ ಪಾಂಡ್ಯ ಮೊದಲ ಪ್ರತಿಕ್ರಿಯೆ (BCCI-IPL)

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಆವೃತ್ತಿಗಾಗಿ ಮುಂಬೈ ಇಂಡಿಯನ್ಸ್ (Mumbai Indians) ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಕಳೆದ ಆವೃತ್ತಿಯಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ನಾಯಕನಗಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya, ಇದೀಗ ಮತ್ತೆ ತಮ್ಮ ಹಳೆಯ ತಂಡವಾದ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದಿಂದ ಬೇರ್ಪಟ್ಟು ಮಿನಿ ಹರಾಜಿಗೂ ಮುನ್ನವೇ ಮುಂಬೈ ಸೇರಿದ್ದಾರೆ. ಮರಳಿ ಮನೆ ಸೇರಿದ ಭಾವನೆಯೊಂದಿಗೆ ಸೋಮವಾರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್‌ ಸೇರಿಕೊಂಡ ಕುರಿತು, ತಮ್ಮ ಹಳೆಯ ನೆನಪುಗಳನ್ನು ಪಾಂಡ್ಯ ಮೆಲುಕು ಹಾಕಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವು ಕಡಿಮೆ ಬೆಲೆಗೆ ಹೇಗೆ ಆಲ್ ರೌಂಡರ್ ಸೇವೆಯನ್ನು ಪಡೆದುಕೊಂಡಿತು ಎಂಬುದನ್ನು ಪಾಂಡ್ಯ ನೆನಪಿಸಿಕೊಂಡರು.

ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಆಗಿರುವ ಮುಂಬೈ, 2015ರ ಐಪಿಎಲ್ ಹರಾಜಿನಲ್ಲಿ ಪಾಂಡ್ಯ ಅವರನ್ನು ಕೇವಲ 10 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. “ಇದು ಅನೇಕ ಅದ್ಭುತ ನೆನಪುಗಳನ್ನು ಮೆಲುಕು ಹಾಕಿಸಿದೆ. ಮುಂಬೈ, ವಾಂಖೆಡೆ, ಪಲ್ಟನ್. ಮುಂಬೈಗೆ ಮರಳಿರುವುದು ಹಿತವೆನಿಸುತ್ತಿದೆ,” ಎಂದು ಪಾಂಡ್ಯ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ | Explainer: ಗುಜರಾತ್ ಟೈಟಾನ್ಸ್ ಉಳಿಸಿಕೊಂಡರೂ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದು ಹೇಗೆ?

ಅತ್ತ, ಮುಂಬೈ ಶಿಬಿರಕ್ಕೆ ಮರಳಿದ ಬಳಿಕ ಪಾಂಡ್ಯ ತಮ್ಮ ಈ ಹಿಂದಿನ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ ಎಂಬುದು ಗಮನಾರ್ಹ.

ಈ ಹಿಂದಿನ ವರದಿಯ ಪ್ರಕಾರ, ಐಪಿಎಲ್‌ನ ಹೊಸ ಆವೃತ್ತಿಗೂ ಮುನ್ನ ಪಾಂಡ್ಯ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಸಂಬಂಧ ಸುಗಮವಿರಲಿಲ್ಲ. ಹೀಗಾಗಿ, ಹಾರ್ದಿಕ್ ಐಪಿಎಲ್ 2024ಕ್ಕೂ ಮುನ್ನ ಮುಂಬೈ ಫ್ರಾಂಚೈಸಿ ಸೇರಲು ತಮ್ಮ ಮಾಜಿ ಫ್ರಾಂಚೈಸ್‌ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಪಾಂಡ್ಯ ಅವರನ್ನು 2022ರ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿತ್ತು.

Whats_app_banner