ಡಿವೋರ್ಸ್ ಬಳಿಕ ನತಾಶಾ ಸ್ಟಾಂಕೋವಿಕ್ ಮೊದಲ ಪೋಸ್ಟ್; ಎರಡು ಲವ್ ಎಮೋಜಿ ಹಾಕಿ ಪ್ರತಿಕ್ರಿಯಿಸಿದ ಹಾರ್ದಿಕ್ ಪಾಂಡ್ಯ
Hardik Pandya's Reaction: ಡಿವೋರ್ಸ್ ಪಡೆದ ಒಂದು ವಾರದ ನಂತರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಮಾಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ಅನ್ನು ಲೈಕ್ ಮಾಡುವುದರ ಜೊತೆಗೆ ಎರಡು ಕಾಮೆಂಟ್ಗಳ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರು ಜುಲೈ 18ರಂದು ತಮ್ಮ 4 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದರು. ಅಧಿಕೃತವಾಗಿ ವಿಚ್ಛೇದನ ಘೋಷಿಸಿ ಒಂದು ವಾರದ ನಂತರ ಕ್ರಿಕೆಟಿಗ ಹಾರ್ದಿಕ್, ಮಾಜಿ ಪತ್ನಿಯ ಪೋಸ್ಟ್ ಅನ್ನು ಲೈಕ್ ಮಾಡಿದ್ದಲ್ಲದೆ, ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಇದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಡಿವೋರ್ಸ್ ಪಡೆದಿರುವ ಭಾವನಾತ್ಮಕ ಅವಧಿಯ ಮಧ್ಯೆಯೂ ಪಾಂಡ್ಯ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ. ಜುಲೈ 25ರ ಬುಧವಾರ ಸ್ಟಾಂಕೋವಿಕ್ ಹಂಚಿಕೊಂಡಿರುವ ಪೋಸ್ಟ್ಗೆ ಲೈಕ್ ಕೊಡುವುದರ ಜತೆಗೆ 2 ಕಾಮೆಂಟ್ಗಳನ್ನೂ ಹಾಕಿದ್ದಾರೆ. ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿ, ನಿರಂತರ ಗೌರವ ಮತ್ತು ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ಕ್ರಿಕೆಟಿಗ ಹೀಗೆ ಪ್ರತಿಕ್ರಿಯಿಸಲು ಪ್ರಮುಖ ಕಾರಣ ಮಗ ಅಗಸ್ತ್ಯ ಆ ಪೋಸ್ಟ್ನಲ್ಲಿರುವುದು.
ಹಾರ್ದಿಕ್ ಮತ್ತು ನತಾಸಾ ಜುಲೈ 18ರಂದು ಬುಧವಾರ ತಮ್ಮ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಪೋಸ್ಟ್ ಮಾಡಿ ಹಲವು ತಿಂಗಳುಗಳಿಂದ ಎದ್ದಿದ್ದ ವದಂತಿಗಳು ಸತ್ಯವೆಂದು ದೃಢಪಡಿಸಿದ್ದರು. ಮಗ ಅಗಸ್ತ್ಯನನ್ನು ಜಂಟಿ ಪಾಲನೆ ಮಾಡುವುದಾಗಿ ಇಬ್ಬರು ತಮ್ಮ ಪೋಸ್ಟ್ಗಳಲ್ಲಿ ಉಲ್ಲೇಖಿಸಿದ್ದರು. ಅದರಂತೆ ಮಗನನ್ನು ನತಾಶಾ ಕರೆದೊಯ್ದಿದ್ದಾರೆ. ನಂತರ ಹಾರ್ದಿಕ್ ಅಗಸ್ತ್ಯನನ್ನು ಕರೆ ತರುವ ಸಾಧ್ಯತೆ ಇದೆ.
ಬುಧವಾರ (ಜುಲೈ 24) ಸೆರ್ಬಿಯಾದ ಥೀಮ್ ಪಾರ್ಕ್ನಲ್ಲಿ ಮಗನೊಂದಿಗೆ ಆನಂದದ ಕ್ಷಣಗಳನ್ನು ನತಾಶಾ, ಸರಣಿ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಹಾರ್ದಿಕ್ ಮಗನಿದ್ದ ಕಾರಣ ಆ ಫೋಟೋಗಳಿಗೆ ಪ್ರತಿಕ್ರಿಯಿಸಿ 2 ಕಾಮೆಂಟ್ ಮಾಡಿದ್ದಾರೆ. ಮೊದಲ ಕಾಮೆಂಟ್ನಲ್ಲಿ ಲವ್ ಹಾಗೂ ಸೂಪರ್ ಎಮೋಜಿ ಹಾಕಿದ್ದಾರೆ. ಮತ್ತೊಂದರಲ್ಲಿ ಲವ್ ಎಮೋಜಿ ಹಾಕಿದ್ದಾರೆ. ಕೃನಾಲ್ ಪಾಂಡ್ಯ ಸಹ ಲವ್ ಎಮೋಜಿ ಹಾಕಿದ್ದಾರೆ. ಬೇರ್ಪಟ್ಟ ನಂತರ ನತಾಶಾರ ಮೊದಲ ಇನ್ಸ್ಟಾ ಪೋಸ್ಟ್ ಇದಾಗಿದೆ.
ಡಿವೋರ್ಸ್ ಪೋಸ್ಟ್ನಲ್ಲಿ ಏನಿತ್ತು?
ಇಬ್ಬರೂ ಬಿಡುಗಡೆ ಮಾಡಿದ ಡಿವೋರ್ಸ್ ಹೇಳಿಕೆಯಲ್ಲಿ, ಒಟ್ಟಿಗೆ ಇರಲು ತುಂಬಾ ಪ್ರಯತ್ನ ನಡೆಸಿದೆವು. ಆದರೆ ಅದು ಸಾಧ್ಯವಾಗಿಲ್ಲ. 4 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ಇಬ್ಬರು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟ ಹೊಂದಿದ್ದ ಕಾರಣ ಬೇರೆಯಾಗಲು ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು ಎಂದು ಜಂಟಿ ಹೇಳಿಕೆ ನೀಡಿದ್ದರು.
ನಾವಿಬ್ಬರೂ ಅಗಸ್ತ್ಯನನ್ನು ಪಡೆದಿದ್ದೇವೆ. ಅವನು ನಮ್ಮಿಬ್ಬರ ಜೀವನದ ಕೇಂದ್ರ ಬಿಂದುವಾಗಿ ಮುಂದುವರಿಯುತ್ತಾನೆ. ಅವನ ಸಂತೋಷಕ್ಕಾಗಿ ನಾವು ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇವೆ ಎಂದು ಜಂಟಿ ಪಾಲನೆ ಕುರಿತು ತಿಳಿಸಿದ್ದರು. ಡಿವೋರ್ಸ್ ಘೋಷಣೆ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ನತಾಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನತಾಸಾ ಕೆಟ್ಟ ಕಮೆಂಟ್ಗಳನ್ನು ಎದುರಿಸಿದ್ದರು. ಆದರೆ ಅಭಿಮಾನಿಗಳು ಹಾರ್ದಿಕ್ಗೆ ಸಹಾನುಭೂತಿ ತೋರಿದ್ದರು.
ಹಾರ್ದಿಕ್-ನತಾಸಾ ಮದುವೆ
2018ರಿಂದಲೂ ಡೇಟಿಂಗ್ ನಡೆಸುತ್ತಿದ್ದ ಹಾರ್ದಿಕ್ ಮತ್ತು ನತಾಸಾ ಅವರು 2020ರ ಜನವರಿ 1ರಂದು ಪರಸ್ಪರ ನಿಶ್ಚಿತಾರ್ಥ ಮಾಡಿಕೊಂಡರು. ಅದಾಗಲೇ ನತಾಶಾ ಗರ್ಭಿಣಿ ಆಗಿದ್ದರು. ತದನಂತರ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅದೇ ವರ್ಷ ಮಗ ಅಗಸ್ತ್ಯ 2020ರ ಜುಲೈ 30ರಂದು ಜನಿಸಿದರು. 2023ರಲ್ಲಿ ದಂಪತಿಗಳು ಕುಟುಂಬ ಮತ್ತು ಸ್ನೇಹಿತರೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದರು.
ಶ್ರೀಲಂಕಾ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಇಲ್ಲಿ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ರೋಹಿತ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಪಾಂಡ್ಯ, ಈಗ ಟಿ20ಐ ಕ್ಯಾಪ್ಸನ್ಸಿ ಕಳೆದುಕೊಂಡಿದ್ದಾರೆ. ಅಲ್ಲದೆ, ಏಕದಿನದಲ್ಲಿ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಕೇವಲ ಆಟಗಾರನಾಗಿ ತಂಡದಲ್ಲಿ ಮುಂದುವರೆಯಲಿದ್ದಾರೆ.