ಮುಂಬೈನ ನೈಟ್ಕ್ಲಬ್ನಲ್ಲಿ ಭೇಟಿ, ಎರಡೇ ವರ್ಷಕ್ಕೆ ಮದುವೆ; ಇದು ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಲವ್ಸ್ಟೋರಿ
Hardik Pandya Natasa Stankovic Love story: ವಿಚ್ಛೇದಿತ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಅವರು 2018ರಲ್ಲಿ ಭೇಟಿಯಾಗಿ 2020ರಲ್ಲಿ ಮದುವೆಯಾದರು. ಇದೀಗ ನಾಲ್ಕೆ ವರ್ಷಗಳಲ್ಲಿ ಮದುವೆಯಾದರು. ಇದು ನತಾಶಾ ಹಾಗೂ ಹಾರ್ದಿಕ್ ಸಿಂಪಲ್ ಲವ್ಸ್ಟೋರಿಯಾಗಿದೆ.

ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಡ್ಯಾನ್ಸರ್ ಹಾಗೂ ಮಾಡೆಲ್ ಆಗಿದ್ದ ನತಾಶಾ ಸ್ಟಾಂಕೋವಿಕ್ (Natasa Stankovic) ಜೋಡಿ ಜುಲೈ 18ರಂದು ಗುರುವಾರ ವಿಚ್ಛೇದನ ಪಡೆದಿದೆ. ತಾವು ಬೇರ್ಪಟ್ಟ ಸುದ್ದಿಯನ್ನು ಇಬ್ಬರು ತಮ್ಮ ಸಾಮಾಜಿಕ ಖಾತೆಗಳಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ನತಾಶಾ ತನ್ನ ಮಗ ಅಗಸ್ತ್ಯ (Agastya) ಜೊತೆಗೆ ಸೆರ್ಬಿಯಾಕ್ಕೆ ತೆರಳಿದ ಒಂದು ದಿನದ ನಂತರ ಈ ಸುದ್ದಿಯನ್ನು ಪ್ರಕಟಿಸಿದ್ದಾರೆ.
ನಾಲ್ಕು ವರ್ಷಗಳ ಒಟ್ಟಿಗೆ ಇದ್ದ ನಂತರ ಪರಸ್ಪರ ಬೇರೆಯಾಗಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ನಾವು ಒಟ್ಟಾಗಿ ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೇವೆ. ನಾವು ಎಲ್ಲವನ್ನೂ ಅರ್ಪಿಸಿದ್ದೇವೆ. ನಮ್ಮಿಬ್ಬರ ಹಿತಾಸಕ್ತಿಗೆ ಈ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಈ ತೀರ್ಮಾನ ತೆಗೆದುಕೊಳ್ಳಲು ತುಂಬಾ ಕಷ್ಟಪಟ್ಟೆವು ಎಂದು ಇಬ್ಬರು ಹೇಳಿದ್ದಾರೆ. ಪರಸ್ಪರ ಗೌರವ ಮತ್ತು ಒಡನಾಟವನ್ನು ನಾವು ಒಟ್ಟಿಗೆ ಆನಂದಿಸಿದ್ದೇವೆ ಎಂದು ತಮ್ಮ ಪೋಸ್ಟ್ಗಳಲ್ಲಿ ಬರೆದಿದ್ದಾರೆ.
ಅಗಸ್ತ್ಯನ ಜಂಟಿ ಪಾಲನೆ ಮಾಡಲಿದೆ ಈ ದಂಪತಿ
ನಾಲ್ಕು ವರ್ಷದ ಅಗಸ್ತ್ಯನನ್ನು ಇಬ್ಬರೂ ನೋಡಿಕೊಳ್ಳುವುದಾಗಿ ಘೋಷಿಸಿದ್ದಾರೆ. ಪುತ್ರನನ್ನು ಜಂಟಿಯಾಗಿ ಪಾಲನೆ ಮಾಡುವುದಾಗಿ ತಿಳಿಸಿದ್ದಾರೆ. ಅಗಸ್ತ್ಯ ನಮ್ಮಿಬ್ಬರ ಜೀವನದ ಕೇಂದ್ರ ಬಿಂದುವಾಗಿ ಮುಂದುವರಿಯಲಿದ್ದಾರೆ. ಅವನ ಸಂತೋಷಕ್ಕಾಗಿ ನಾವು ಅವನಿಗೆ ಸಾಧ್ಯವಿರುವ ಎಲ್ಲವನ್ನೂ ನಾವು ಒಟ್ಟಿಗೆ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ. ಅವರಿಬ್ಬರ ನಡುವೆ ಬಿರುಕು ಉಂಟಾಗಿರುವ ಕುರಿತು ಅವರ ಕುಟುಂಬ ಸದಸ್ಯರು ತುಟಿ ಬಿಚ್ಚಿರಲಿಲ್ಲ.
ಹಲವು ತಿಂಗಳ ಹಿಂದೆಯೇ ಇಬ್ಬರು ಬೇರ್ಪಟ್ಟಿರುವ ವದಂತಿ ಹರಡಿತ್ತು. ನತಾಶಾ ಅವರು ಹಾರ್ದಿಕ್ ಉಪನಾಮವನ್ನು ತೆಗೆದು ಹಾಕಿದ್ದರು. ಅಲ್ಲದೆ, ಇಬ್ಬರು ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಮೈದಾನದಲ್ಲಿ ಪಾಂಡ್ಯಗೆ ಬೆಂಬಲ ಸೂಚಿಸುತ್ತಿದ್ದ ನತಾಶಾ, ಈ ಬಾರಿಯ ಐಪಿಎಲ್ನಲ್ಲಿ ಮೈದಾನಕ್ಕೆ ಬರಲೇ ಇಲ್ಲ. ಟಿ20 ವಿಶ್ವಕಪ್ ಗೆದ್ದಾಗಲೂ ನತಾಶಾ ಅವರು ಒಂದೇ ಒಂದು ಪೋಸ್ಟ್ ಹಾಕಿರಲಿಲ್ಲ. ಹಾರ್ದಿಕ್ ಬೆಂಬಲದ ಪೋಸ್ಟ್ ಸಹ ಹಾಕಿರಲಿಲ್ಲ. ಎಲ್ಲೂ ಜೋಡಿಯಾಗಿಯೂ ಕಾಣಿಸಿಕೊಂಡಿರಲಿಲ್ಲ.
ಹಾರ್ದಿಕ್ - ನತಾಶಾ ಮೊದಲ ಭೇಟಿ ಯಾವಾಗ, ಎಲ್ಲಿ?
ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ 2018ರಲ್ಲಿ ಮುಂಬೈನ ನೈಟ್ಕ್ಲಬ್ನಲ್ಲಿ ಸರ್ಬಿಯಾದ ಮಾಡೆಲ್ ಕಮ್ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಭೇಟಿಯಾದರು. ಅಲ್ಲಿ ಪರಿಚಯವಾದ ಜೋಡಿ ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದರು. ಈ ಜೋಡಿ ಹಾರ್ದಿಕ್ ಅವರ ಜನ್ಮದಿನದಲ್ಲಿ ಕಾಣಿಸಿಕೊಂಡಿತು. ರೂಮರ್ಸ್ ಹಬ್ಬಿದ ಇದೇ ಸಂದರ್ಭದಲ್ಲಿ ನನ್ನ ಫ್ರೆಂಡ್ ಅಂತ ನತಾಶಾ ಉಲ್ಲೇಖಿಸಿದ್ದರು. ಆದರೆ 2020ರಲ್ಲಿ ತಮ್ಮ ನಿಶ್ಚಿತಾರ್ಥದ ಸುದ್ದಿಯೊಂದಿಗೆ ಪ್ರಕಟಿಸುವ ಮೂಲಕ ಜಗತ್ತನ್ನೇ ಅಚ್ಚರಿಗೊಳಿಸಿದ್ದರು.
2020ರ ಹೊಸ ವರ್ಷದ ದಿನದಂದು ಹಾರ್ದಿಕ್ ವಿಹಾರ ನೌಕೆಯಲ್ಲಿ ನತಾಶಾಗೆ ಪ್ರಪೋಸ್ ಮಾಡಿದ್ದರು. ಈ ಜೋಡಿ 2020ರ ಮೇ ತಿಂಗಳಲ್ಲಿ ಕೊರೊನಾ ಅವಧಿಯಲ್ಲಿ ಮದುವೆಯಾದರು. ಮದುವೆಗೂ ಮುನ್ನ ನತಾಶಾ ಗರ್ಭಿಣಿಯಾಗಿದ್ದರು. 2020ರ ಮೇನಲ್ಲಿ ಮನೆಯಲ್ಲೇ ಸರಳ ವಿವಾಹದ ನಂತರ ಹಾರ್ದಿಕ್ ಮತ್ತು ನತಾಶಾ ಅವರು 2023ರ ಫೆಬ್ರವರಿ 14ರಂದು ಉದಯಪುರದಲ್ಲಿ ಅದ್ಧೂರಿ ವಿವಾಹವನ್ನು ಆಯೋಜಿಸುವ ಮೂಲಕ ತಮ್ಮ ಪ್ರತಿಜ್ಞೆ ಪಡೆದಿದ್ದರು.
ಇದರಲ್ಲಿ ಅವರ ಆಪ್ತರು ಮತ್ತು ಕುಟುಂಬದವರು ಭಾಗವಹಿಸಿದ್ದರು. ಆದಾಗ್ಯೂ, ಅಂದಿನಿಂದ ಅವರ ನಡುವೆ ವಿಷಯಗಳು ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ಮಗ ಅಗಸ್ತ್ಯನ ಮುಂದೆಯೇ ಮದುವೆಯಾಗುವ ಮೂಲಕ ಗಮನ ಸೆಳೆದಿದ್ದರು.
