ಇಂಗ್ಲೆಂಡ್ ವಿರುದ್ಧದ 3ನೇ ಟಿ20ಐಗೆ ಭಾರತದ ಸಂಭಾವ್ಯ XI; ಹಾರ್ದಿಕ್ ಪಾಂಡ್ಯ ಔಟ್, ಶಿವಂ ದುಬೆ ಇನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧದ 3ನೇ ಟಿ20ಐಗೆ ಭಾರತದ ಸಂಭಾವ್ಯ Xi; ಹಾರ್ದಿಕ್ ಪಾಂಡ್ಯ ಔಟ್, ಶಿವಂ ದುಬೆ ಇನ್

ಇಂಗ್ಲೆಂಡ್ ವಿರುದ್ಧದ 3ನೇ ಟಿ20ಐಗೆ ಭಾರತದ ಸಂಭಾವ್ಯ XI; ಹಾರ್ದಿಕ್ ಪಾಂಡ್ಯ ಔಟ್, ಶಿವಂ ದುಬೆ ಇನ್

India's Likely XI For 3rd T20I: ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 3ನೇ ಟಿ20ಐಗೆ ಭಾರತ ತಂಡದ ಪ್ಲೇಯಿಂಗ್​ 11ನಲ್ಲಿ ಒಂದೆರಡು ಬದಲಾವಣೆ ಮಾಡುವ ಸಾಧ್ಯತೆ ಇದೆ. 3ನೇ ಟಿ20ಐಗೆ ಭಾರತದ ಸಂಭಾವ್ಯ ಇಲೆವೆನ್ ಇಲ್ಲಿದೆ.

ಇಂಗ್ಲೆಂಡ್ ವಿರುದ್ಧದ 3ನೇ ಟಿ20ಐಗೆ ಭಾರತದ ಸಂಭಾವ್ಯ XI; ಹಾರ್ದಿಕ್ ಪಾಂಡ್ಯ ಔಟ್, ಶಿವಂ ದುಬೆ ಇನ್
ಇಂಗ್ಲೆಂಡ್ ವಿರುದ್ಧದ 3ನೇ ಟಿ20ಐಗೆ ಭಾರತದ ಸಂಭಾವ್ಯ XI; ಹಾರ್ದಿಕ್ ಪಾಂಡ್ಯ ಔಟ್, ಶಿವಂ ದುಬೆ ಇನ್

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟಿ20ಐ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಪಡೆದಿರುವ ಭಾರತ ತಂಡ (Indian Cricket Team), ಇದೀಗ ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ. ಜನವರಿ 28ರಂದು ಮಂಗಳವಾರ ರಾಜ್​ಕೋಟ್​ನಲ್ಲಿ 3ನೇ ಟಿ20ಐ ನಡೆಯಲಿದೆ. ಬೌಲಿಂಗ್​ನಲ್ಲಿ ಪರಾಕ್ರಮ ತೋರುತ್ತಿರುವ ಸೂರ್ಯಕುಮಾರ್ ಪಡೆ, ಬ್ಯಾಟಿಂಗ್​ನಲ್ಲಿ ಅಂದುಕೊಂಡಂತೆ ಪ್ರದರ್ಶನ ಬರುತ್ತಿಲ್ಲ. ಎರಡೂ ಪಂದ್ಯಗಳಲ್ಲಿ ಒಬೊಬ್ಬರು ಪ್ರದರ್ಶನ ನೀಡಿದ್ದು ಹೊರತುಪಡಿಸಿದರೆ ಉಳಿದ ಬ್ಯಾಟರ್​ಗಳು ಸದ್ದೇ ಮಾಡಲಿಲ್ಲ. ಇದು ಟೀಮ್ ಮ್ಯಾನೇಜ್​ಮೆಂಟ್ ತಲೆನೋವಿಗೆ ಕಾರಣವಾಗಿದೆ.

ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 79 ರನ್​ಗಳ ವಿಧ್ವಂಸಕ ಬ್ಯಾಟಿಂಗ್ ನಡೆಸಿದ್ದರು. 2ನೇ ಪಂದ್ಯದಲ್ಲಿ ತಿಲಕ್ ವರ್ಮಾ ಸ್ಫೋಟಕ ಇನ್ನಿಂಗ್ಸ್ ಕಟ್ಟುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮತ್ತೊಂದೆಡೆ ಬೌಲಿಂಗ್​ನಲ್ಲಿ ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಅಕ್ಷರ್​ ಪಟೇಲ್ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಆದರೆ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಉಳಿದ ಬ್ಯಾಟರ್​​​ಗಳು​ ಲಯಕ್ಕೆ ಮರಳುವುದು ಅನಿವಾರ್ಯ. ಮತ್ತೊಂದೆಡೆ ಸರಣಿ ಉಳಿಸಿಕೊಳ್ಳಲು ಇಂಗ್ಲೆಂಡ್ ಈ ಪಂದ್ಯವನ್ನು ಗೆಲ್ಲುವುದು ಅಗತ್ಯ. ಹೀಗಿದ್ದಾಗ ಭಾರತ ತನ್ನ ತಂಡದಲ್ಲಿ ಒಂದೆರಡು ಬದಲಾವಣೆ ನಿರೀಕ್ಷೆ ಇದೆ.

ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ

ಮೂರನೇ ಟಿ20 ಪಂದ್ಯಕ್ಕೆ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಅಲಭ್ಯರಾಗುವ ಸಾಧ್ಯತೆ ಇದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡದ ಭಾಗವಾಗಿರುವ ಹಾರ್ದಿಕ್​ಗೆ ಟಿ20ಐ ಸರಣಿಯ ಉಳಿದ ಪಂದ್ಯಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ. ಆದರೆ ಅವರ ಸ್ಥಾನವನ್ನು ಶಿವಂ ದುಬೆ ತುಂಬಲಿದ್ದಾರೆ ಎಂದು ವರದಿಯಾಗಿದೆ. ರಿಂಕ್ ಸಿಂಗ್ ಅವರ ಸ್ಥಾನಕ್ಕೆ ಭಾರತ ತಂಡಕ್ಕೆ ಸೇರ್ಪಡೆಯಾದ ಶಿವಂ ದುಬೆ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸುವ ನಿರೀಕ್ಷೆ ಇದೆ. 2ನೇ ಪಂದ್ಯದಲ್ಲಿ 4 ಸ್ಪಿನ್ನರ್​​ಗಳನ್ನು ಕಣಕ್ಕಿಳಿಸಿದ್ದ ಭಾರತ,​ 3ನೇ ಪಂದ್ಯದಲ್ಲಿ ರವಿ ಬಿಷ್ಣೋಯ್ ಸ್ಥಾನ ಕಳೆದುಕೊಳ್ಳಬಹುದು ಎನ್ನಲಾಗಿದೆ.

ರಾಜ್​ಕೋಟ್ ಪಿಚ್ ವೇಗಿಗಳಿಗೆ ನೆರವಾಗುವ ಕಾರಣ ರವಿ ಬಿಷ್ಣೋಯ್ ಬದಲಿಗೆ ವೇಗಿ ಮೊಹಮ್ಮದ್ ಶಮಿ ಅವರಿಗೆ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ತಂಡದಲ್ಲಿ ಸ್ಥಾನ ಪಡೆದರೂ ಕಳೆದ ಎರಡು ಪಂದ್ಯಗಳಿಂದ ಅವಕಾಶ ಪಡೆದಿರಲಿಲ್ಲ. ಆರಂಭಿಕರಾಗಿ ಸಂಜು ಮತ್ತು ಅಭಿಷೇಕ್ ಕಣಕ್ಕಿಳಿದರೆ, ಸೂರ್ಯಕುಮಾರ್, ತಿಲಕ್ ವರ್ಮಾ ಕ್ರಮವಾಗಿ 3, 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಬಳಿಕ ಶಿವಂ ದುಬೆ, ಧ್ರುವ್ ಜುರೆಲ್ ಫಿನಿಷಿಂಗ್ ಪಾತ್ರವನ್ನು ನಿಭಾಯಿಸಲಿದ್ದಾರೆ. ಇನ್ನು ಬೌಲಿಂಗ್​ನಲ್ಲಿ ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ ಕಣಕ್ಕಿಳಿಯಲಿದ್ದಾರೆ.

3ನೇ ಟಿ20ಐ ಗೆ ಭಾರತದ ಸಂಭಾವ್ಯ XI

ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್​), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

Whats_app_banner