ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ಔಟ್, ಮೂರು ಬದಲಾವಣೆ; 4ನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ಔಟ್, ಮೂರು ಬದಲಾವಣೆ; 4ನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ Xi

ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ಔಟ್, ಮೂರು ಬದಲಾವಣೆ; 4ನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ XI

India's Likely Playing XI: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೇಗಿರಲಿದೆ? ಯಾರಿಗೆ ಅವಕಾಶ? ಯಾರೆಲ್ಲಾ ಹೊರಗುಳಿಯಲಿದ್ದಾರೆ ಎಂಬುದರ ವಿವರ ಇಂತಿದೆ.

ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ಔಟ್, ಮೂರು ಬದಲಾವಣೆ; 4ನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ XI
ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ಔಟ್, ಮೂರು ಬದಲಾವಣೆ; 4ನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ XI

ಇಂಗ್ಲೆಂಡ್ ತಂಡದ ವಿರುದ್ಧ ಮೊದಲ 3 ಪಂದ್ಯಗಳಲ್ಲೂ ಬೌಲಿಂಗ್​ನಲ್ಲಿ ಮಿಂಚಿ ಬ್ಯಾಟಿಂಗ್​ನಲ್ಲಿ ಕೈಕೊಟ್ಟಿರುವ ಭಾರತ ಕ್ರಿಕೆಟ್ ತಂಡ, ಇದೀಗ ನಾಲ್ಕನೇ ಟಿ20ಐ ಪಂದ್ಯಕ್ಕೆ ಸಜ್ಜಾಗಿದೆ. ಬೌಲಿಂಗ್ ಬಲದಿಂದ ಕೋಲ್ಕತ್ತಾ, ಚೆನ್ನೈ ಟಿ20ಐಗಳಲ್ಲಿ ಗೆಲುವಿನ ರುಚಿ ಕಂಡಿರುವ ಭಾರತ, ರಾಜ್​ಕೋಟ್​ನಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ ಆಂಗ್ಲರ ಎದುರು ಮಂಡಿಯೂರಿತು. ಇದೀಗ ನಾಲ್ಕನೇ ಟಿ20ಐ ಪಂದ್ಯದಲ್ಲಿ ಜೋಸ್ ಬಟ್ಲರ್​ ಪಡೆಗೆ ತಿರುಗೇಟು ನೀಡಲು ಸೂರ್ಯಕುಮಾರ್ ಪಡೆ ಭರ್ಜರಿ ಸಿದ್ಧತೆ ನಡೆಸಿದೆ. ಒಂದೆಡೆ ಸರಣಿ ಕೈವಶ ಮಾಡಿಸಿಕೊಳ್ಳಲು, ಮತ್ತೊಂದೆಡೆ ಸರಣಿ ಜೀವಂತವಾಗಿರಿಸಲು ಉಭಯ ತಂಡಗಳಿಗೂ ಈ ಗೆಲುವು ಅನಿವಾರ್ಯ. ಜನವರಿ 31ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಈ ಪಂದ್ಯ ಜರುಗಲಿದೆ.

ಮೂರನೇ ಟಿ20ಐನಲ್ಲಿ ಸರಣಿ ಗೆಲ್ಲುವ ಉತ್ತಮ ಅವಕಾಶ ಇದ್ದರೂ ಬ್ಯಾಟರ್​ಗಳ ವೈಫಲ್ಯದಿಂದ ಪಂದ್ಯ ಕೈಚೆಲ್ಲಿದ ಭಾರತ ತಂಡ, ಇದೀಗ ಆ ತಪ್ಪಿನಿಂದ ಹೊರಬರಲು ಕಸರತ್ತು ನಡೆಸುತ್ತಿದೆ. ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, 2ನೇ ಪಂದ್ಯದಲ್ಲಿ ತಿಲಕ್ ವರ್ಮಾ ಸುನಾಮಿ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟಿದ್ದರು. ಆದರೆ 3ನೇ ಟಿ20ಐನಲ್ಲಿ ಇವರಿಬ್ಬರ ಜತೆಗೆ ಉಳಿದ ಬ್ಯಾಟರ್ಸ್ ಮತ್ತೆ ಕೈಕೊಟ್ಟರು. ಮತ್ತೊಂದೆಡೆ, ಇಂಗ್ಲೆಂಡ್​​ ಬೌಲರ್​​ಗಳು ಕೂಡ ಸರಿಯಾಗಿ ತಿರುಗೇಟು ನೀಡುವ ಮೂಲಕ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡರು. ಪ್ರಸ್ತುತ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಪಡೆದಿದ್ದರೂ ನಾಲ್ಕನೇ ಟಿ20ಐ ಗೆಲುವು ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಭಾರತ ಕೆಲವು ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆಯಿದೆ.

ಅರ್ಷದೀಪ್ ಇನ್, ರವಿ ಬಿಷ್ಣೋಯ್ ಔಟ್

ಮೂರನೇ ಪಂದ್ಯಕ್ಕೆ ವಿಶ್ರಾಂತಿ ಪಡೆದು ಮೊಹಮ್ಮದ್ ಶಮಿಗೆ ಜಾಗ ಬಿಟ್ಟುಕೊಟ್ಟಿದ್ದ ವೇಗಿ ಅರ್ಷ್ದೀಪ್ ಸಿಂಗ್‌ ಪುಣೆ ಪಂದ್ಯಕ್ಕೆ ಮರಳುವ ನಿರೀಕ್ಷೆ ಇದೆ. ಮತ್ತೊಂದೆಡೆ ಶಮಿ ಅವರನ್ನು ಕೈಬಿಡುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ, 2023ರ ಏಕದಿನ ವಿಶ್ವಕಪ್ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಶಮಿ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸಂಪೂರ್ಣ ಮ್ಯಾಚ್ ಫಿಟ್ ಆಗುವ ಅವಶ್ಯಕತೆ ಇದೆ. ಆದರೆ ಉತ್ತಮ ಫಾರ್ಮ್‌ನಲ್ಲಿಲ್ಲದ ಸ್ಪಿನ್ನರ್​ ರವಿ ಬಿಷ್ಣೋಯ್ ಬದಲಿಗೆ ವೇಗಿ ಅರ್ಷದೀಪ್ ಮರಳುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ.

ಹಾರ್ದಿಕ್ ಪಾಂಡ್ಯಗೆ ರೆಸ್ಟ್, ಶಿವಂ ದುಬೆಗೆ ಅವಕಾಶ

ಮೊದಲ ಮೂರು ಪಂದ್ಯಗಳಲ್ಲೂ ಕಣಕ್ಕಿಳಿದಿರುವ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಗೆ ಉಳಿದ ಎರಡು ಟಿ20ಐಗಳಿಗೆ ವಿಶ್ರಾಂತಿ ನೀಡುವ ನಿರೀಕ್ಷೆ ಇದೆ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾದ ಕಾರಣ ಹಾರ್ದಿಕ್​ ಲಭ್ಯತೆ ಅಗತ್ಯವಿರುವ ಹಿನ್ನೆಲೆ ವಿಶ್ರಾಂತಿ ನೀಡಬಹುದು. ಹೀಗಾಗಿ, ಪಾಂಡ್ಯ ಬದಲಿಗೆ ಶಿವಂ ದುಬೆ ಆಡುವ 11ರ ಬಳಗಕ್ಕೆ ಮರಳಬಹುದು. ಬೆನ್ನುನೋವಿನ ಕಾರಣ 2ನೇ ಮತ್ತು ಮೂರನೇ ಟಿ20ಐ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ರಿಂಕು ಸಿಂಗ್ ಕೂಡ ಮರಳುವ ಸಾಧ್ಯತೆ ಇದೆ. ಧ್ರುವ್ ಜುರೆಲ್ ಬದಲಿಗೆ ಪ್ಲೇಯಿಂಗ್​ 11ಗೆ ಮರಳಬಹುದು ಎನ್ನಲಾಗಿದೆ. ಉಳಿದಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವರದಿಯಾಗಿದೆ.

ನಾಲ್ಕನೇ ಟಿ20ಐಗೆ ಭಾರತದ ಸಂಭಾವ್ಯ XI

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.

Whats_app_banner