ಕನ್ನಡ ಸುದ್ದಿ  /  ಕ್ರಿಕೆಟ್  /  ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಏಕದಿನಕ್ಕೆ ಕೆಎಲ್ ರಾಹುಲ್, ಟಿ20ಐಗೆ ಹಾರ್ದಿಕ್ ಪಾಂಡ್ಯ ನಾಯಕ

ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಏಕದಿನಕ್ಕೆ ಕೆಎಲ್ ರಾಹುಲ್, ಟಿ20ಐಗೆ ಹಾರ್ದಿಕ್ ಪಾಂಡ್ಯ ನಾಯಕ

Hardik Pandya and KL Rahul: ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದರೆ, ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಜವಾಬ್ದಾರಿ ಹೊರಲಿದ್ದಾರೆ.

ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಏಕದಿನಕ್ಕೆ ಕೆಎಲ್ ರಾಹುಲ್, ಟಿ20ಐಗೆ ಹಾರ್ದಿಕ್ ಪಾಂಡ್ಯ ನಾಯಕ
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಏಕದಿನಕ್ಕೆ ಕೆಎಲ್ ರಾಹುಲ್, ಟಿ20ಐಗೆ ಹಾರ್ದಿಕ್ ಪಾಂಡ್ಯ ನಾಯಕ

2024ರ ಟಿ20 ವಿಶ್ವಕಪ್​ ನಂತರ ಜಿಂಬಾಬ್ವೆ ಸರಣಿಗೆ ವಿಶ್ರಾಂತಿ ಪಡೆದಿದ್ದ ಹಾರ್ದಿಕ್ ಪಾಂಡ್ಯ ಇದೀಗ ಶ್ರೀಲಂಕಾ ಪ್ರವಾಸಕ್ಕೆ ಮರಳಲು ಸಜ್ಜಾಗಿದ್ದಾರೆ. ಜುಲೈ 27 ರಿಂದ ಪ್ರಾರಂಭವಾಗವ ಶ್ರೀಲಂಕಾ ಎದುರಿನ ಟಿ20 ಸರಣಿಗೆ ಹಾರ್ದಿಕ್, ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ ಟಿ20ಐ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನಂತರ ಪಾಂಡ್ಯ ಮೆನ್ ಇನ್ ಬ್ಲ್ಯೂ ತಂಡವನ್ನು ಚುಟುಕು ಸ್ವರೂಪದಲ್ಲಿ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಕಳೆದ ತಿಂಗಳು ಅಮೆರಿಕ ಹಾಗೂ ವೆಸ್ಟ್ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು ರೋಹಿತ್​ ಶರ್ಮಾ. ರೋಹಿತ್​ರ ಚಾಣಾಕ್ಷ ನಾಯಕತ್ವದಿಂದ ಟೀಮ್ ಇಂಡಿಯಾ ಎರಡನೇ ಟಿ20 ವಿಶ್ವಕಪ್ ಗೆಲ್ಲಲು ನೆರವಾಯಿತು. ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಓವರ್​​ನಲ್ಲಿ ಭಾರತ ಜಯ ಸಾಧಿಸಿ​ ಭಾರತದ ವಿಶ್ವಕಪ್ ಬರವನ್ನು ಕೊನೆಗೊಳಿಸಿದರು.

ಇದು ರೋಹಿತ್​ ಪಾಲಿಗೂ ಕೊನೆಯ ಟಿ20ಐ ಪಂದ್ಯ. ಪಂದ್ಯ ಗೆದ್ದ ನಂತರ ಪತ್ರಿಕಾ ಗೋಷ್ಠಿಯಲ್ಲಿ ನಿವೃತ್ತಿ ಕುರಿತು ಹೇಳಿದ್ದರು. ಕೆರಿಬಿಯನ್ ನೆಲದಲ್ಲಿ ಭಾರತ ಚಾಂಪಿಯನ್ ಆದ ನಂತರ ರೋಹಿತ್ ಜೊತೆಗೆ ಬ್ಯಾಟಿಂಗ್ ಐಕಾನ್ ವಿರಾಟ್ ಕೊಹ್ಲಿ ಮತ್ತು ಅನುಭವಿ ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ನಿವೃತ್ತಿ ಘೋಷಿಸಿದರು. ಆ ಮೂಲ ಕ ಮುಂದಿನ ಪೀಳಿಗೆಗೆ ದಾರಿ ಮಾಡಿಕೊಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೀಗಾಗಿ ಹಾರ್ದಿಕ್ ಅವರು ಶ್ರೀಲಂಕಾ ಸರಣಿಯಿಂದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಪಾಂಡ್ಯ ಟಿ20 ಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೂ ಹಾರ್ದಿಕ್​​ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಮೂಲಗಳು ಎಎನ್ಐಗೆ ತಿಳಿಸಿವೆ.

ಪಾಂಡ್ಯ ಟಿ20 ವಿಶ್ವಕಪ್​ನಲ್ಲಿ ರೋಹಿತ್ ಅವರ ಉಪನಾಯಕರಾಗಿದ್ದರು. ಮುಂಬೈ ಇಂಡಿಯನ್ಸ್ (MI) ನಾಯಕ 6 ಇನ್ನಿಂಗ್ಸ್​​​ಗಳಲ್ಲಿ 48.00ರ ಸರಾಸರಿಯಲ್ಲಿ 144 ರನ್ ಗಳಿಸಿದ್ದಾರೆ. 151.57 ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟಿಂಗ್ ಮಾಡಿ ರನ್ ಗಳಿಸಿದ್ದಾರೆ. ಪಾಂಡ್ಯ 8 ಪಂದ್ಯಗಳಲ್ಲಿ 17.36 ಸರಾಸರಿ, 7.64 ಎಕಾನಮಿ ರೇಟ್​ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಫೈನಲ್​ನಲ್ಲಿ ಹಾರ್ದಿಕ್ 3/20 ಅತ್ಯುತ್ತಮ ಅಂಕಿ-ಅಂಶ ದಾಖಲಿಸಿದರು.

ಕೆಎಲ್ ರಾಹುಲ್ ಭಾರತ ಏಕದಿನ ತಂಡದ ನಾಯಕ

ಏಕದಿನ ಮತ್ತು ಟೆಸ್ಟ್​ನಲ್ಲಿ ಮುಂದುವರೆಯಲಿರುವ ರೋಹಿತ್​, ಲಂಕಾ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ಪಡೆಯಲಿದ್ದಾರೆ. ಹಾಗಾಗಿ ಶ್ರೀಲಂಕಾ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಭಾರತ ತಂಡದ ಜವಾಬ್ದಾರಿ ಹೊರಲಿದ್ದಾರೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್ ಮುನ್ನಡೆಸಲಿದ್ದಾರೆ.

ಭಾರತ vs ಶ್ರೀಲಂಕಾ ಟಿ20ಐ ಸರಣಿ ವೇಳಾಪಟ್ಟಿ

ಮೊದಲ ಟಿ20ಐ: ಜುಲೈ 27 - 7:00 PM 

ಎರಡನೇ ಟಿ20: ಜುಲೈ 28-  7:00 PM 

ಮೂರನೇ ಟಿ20: ಜುಲೈ 30 - 7:00 PM 

ಭಾರತ vs ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ

ಮೊದಲ ಏಕದಿನ: ಆಗಸ್ಟ್ 2 - 02:30 PM 

ಎರಡನೇ ಏಕದಿನ: ಆಗಸ್ಟ್ 4 - 02:30 PM

ಮೂರನೇ ಏಕದಿನ: ಆಗಸ್ಟ್ 7 - 02:30 PM