ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ; ರೋಹಿತ್ 10 ವರ್ಷಗಳ ಕ್ಯಾಪ್ಟನ್ಸಿ ಅಂತ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ; ರೋಹಿತ್ 10 ವರ್ಷಗಳ ಕ್ಯಾಪ್ಟನ್ಸಿ ಅಂತ್ಯ

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ; ರೋಹಿತ್ 10 ವರ್ಷಗಳ ಕ್ಯಾಪ್ಟನ್ಸಿ ಅಂತ್ಯ

Hardik Pandya: ಐಪಿಎಲ್ 2024ರ ಸೀಸನ್‌ ಆರಂಭಕ್ಕೂ ಮುಂಚಿತವಾಗಿ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದೆ.

ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕ
ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕ (Mumbai Indians)

ಮುಂಬೈ ಇಂಡಿಯನ್ಸ್ (Mumbai Indians) ತಂಡವು ಐಪಿಎಲ್ 2024ರ (IPL 2024) ಆವೃತ್ತಿಗೂ ಮುನ್ನ ಅಚ್ಚರಿಯ ಘೋಷಣೆ ಮಾಡಿದೆ. ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ತಂಡದ ನಾಯಕನಾಗಿ ನೇಮಿಸಿದೆ. ಈ ಮಹತ್ವದ ಬೆಳವಣಿಗೆಯು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ದಾಖಲೆಯ ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಆಗಿರುವ ಮುಂಬೈ ಇಂಡಿಯನ್ಸ್‌ ತಂಡವನ್ನು 10 ವರ್ಷಗಳ ಕಾಲ ನಾಯಕನಾಗಿ ಮುನ್ನಡೆಸಿರುವ ರೋಹಿತ್ ಶರ್ಮಾ ಅವರ ಅಧಿಕಾರ ಅಂತ್ಯಗೊಂಡಿದೆ. 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿ ಫ್ರಾಂಚೈಸಿಯನ್ನು ಐಪಿಎಲ್ ಟ್ರೋಫಿಯತ್ತ ಮುನ್ನಡೆಸಿದ್ದ ಹಾರ್ದಿಕ್, ಕಳೆದ ತಿಂಗಳು ಅಚ್ಚರಿಯ ಟ್ರೇಡಿಂಗ್‌ ಮೂಲಕ ಮತ್ತೆ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಇದೀಗ ಇಲ್ಲಿಯೂ ನಾಯಕನ ಪಟ್ಟ ಸಿಕ್ಕಿದೆ.

ಇದನ್ನೂ ಓದಿ | ನಡೆಯಲು ಆಗ್ತಿದೆ; ಪಾದದ ಗಾಯದ ಕುರಿತು ಅಪ್ಡೇಟ್ ನೀಡಿದ ಸೂರ್ಯಕುಮಾರ್ ಯಾದವ್

ಐಪಿಎಲ್‌ನಲ್ಲಿ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಅನ್ನು ನಾಯಕನಾಗಿ 10 ವರ್ಷಗಳ ರೋಹಿತ್ ಶರ್ಮಾ ಮುನ್ನಡೆಸಿದ್ದರು. ಅಲ್ಲದೆ ಇದರಲ್ಲಿ 5 ಬಾರಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ಟ್ರೋಫಿ ಗೆದ್ದ ಸಾಧನೆ ಅವರದ್ದು. ಎಂಎಸ್‌ ಧೋನಿ ಮತ್ತು ರೋಹಿತ್‌ ತಲಾ ಐದು ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಹಿಟ್‌ಮ್ಯಾನ್‌ ಕೇವಲ 10 ಋತುಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಅತ್ತ ಹಾರ್ದಿಕ್‌ ಪಾಂಡ್ಯ ಎರಡು ಬಾರಿ ಮಾತ್ರ ಐಪಿಎಲ್‌ ನಾಯಕತ್ವ ವಹಿಸಿದ್ದಾರೆ. ಮೊದಲ ನಾಯಕತ್ವದಲ್ಲೇ ಗುಜರಾತ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಅವರು, ಎರಡನೇ ಬಾರಿ ಫೈನಲ್‌ವರೆಗೂ ಮುನ್ನಡೆಸಿದ್ದರು.

ಇದನ್ನೂ ಓದಿ | IPL 2024: ಕೆಕೆಆರ್ ತಂಡಕ್ಕೆ ನಾಯಕನಾಗಿ ಮರಳಿದ ಶ್ರೇಯಸ್ ಅಯ್ಯರ್; ನಿತೀಶ್ ರಾಣಾ ಉಪನಾಯಕ

“ಇದು ಪರಂಪರೆಯ ನಿರ್ಮಾಣದ ಭಾಗವಾಗಿದೆ. ಭವಿಷ್ಯದ ಪಂದ್ಯಾವಳಿಗಳಿಗಳಿಗಾಗಿ ಸಿದ್ಧತೆ ನಡೆಸುವ ತತ್ವಕ್ಕೆ ಮುಂಬೈ ಇಂಡಿಯನ್ಸ್ ಬದ್ಧವಾಗಿದೆ. ಸಚಿನ್‌ನಿಂದ ಹರ್ಭಜನ್ ಸಿಂಗ್ ಮತ್ತು ರಿಕಿ‌ ಪಾಂಟಿಂಗ್ ಅವರಿಂದ ರೋಹಿತ್‌ವರೆಗೆ ಮುಂಬೈ ತಂಡವು ಅಸಾಧಾರಣ ನಾಯಕರನ್ನು ಪಡೆದಿದೆ. ಇವರೆಲ್ಲಾ ತಕ್ಷಣದ ಯಶಸ್ಸಿಗೆ ಕೊಡುಗೆ ನೀಡುವುದರೊಂದಿಗೆ ಭವಿಷ್ಯಕ್ಕಾಗಿ ತಂಡವನ್ನು ಬಲಪಡಿಸುವತ್ತ ಗಮನಹರಿಸಿದ್ದಾರೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2024ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ” ಎಂದು ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಹೇಳಿದ್ದಾರೆ.

Whats_app_banner