ಒಂದೇ ಓವರ್‌ನಲ್ಲಿ 26 ರನ್; ಪದಾರ್ಪಣೆ ಪಂದ್ಯದಲ್ಲೇ ಸಾರ್ವಕಾಲಿಕ ಕೆಟ್ಟ ದಾಖಲೆ ನಿರ್ಮಿಸಿದ ಹರ್ಷಿತ್ ರಾಣಾ
Harshit Rana unwanted record: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 26 ರನ್ ಬಿಟ್ಟಕೊಡುವ ಮೂಲಕ ಹರ್ಷಿತ್ ರಾಣಾ ಪದಾರ್ಪಣೆ ಪಂದ್ಯದಲ್ಲೇ ಸಾರ್ವಕಾಲಿಕ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ.

Harshit Rana: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಭಾರತದ ವೇಗಿ ಹರ್ಷಿತ್ ರಾಣಾ ಕೆಟ್ಟ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಡೆಬ್ಯೂ ಮಾಡಿದ ಮೊದಲ ಪಂದ್ಯದಲ್ಲೇ ಭಾರತದ ಪರ ಸಾರ್ವಕಾಲಿಕ ಅನಗತ್ಯ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಹರ್ಷಿತ್ ಒಂದೇ ಓವರ್‌ನಲ್ಲಿ 26 ರನ್ ಬಿಟ್ಟುಕೊಡುವ ಮೂಲಕ ಮುಜುಗರದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಆಡಿದ ಚೊಚ್ಚಲ ಏಕದಿನ ಪಂದ್ಯದಲ್ಲೇ ಬೌಲರ್ ಒಬ್ಬ ಬಿಟ್ಟುಕೊಟ್ಟ ಅತಿ ಹೆಚ್ಚು ರನ್‌ಗಳ ದಾಖಲೆಯಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಎಸೆದ ಆರನೇ ಓವರ್‌ನಲ್ಲಿ 26 ರನ್ ದಂಡಿಸಿಕೊಂಡರು. ಈ ಓವರ್‌ನಲ್ಲಿ ಸಾಲ್ಟ್, 3 ಸಿಕ್ಸರ್, 2 ಬೌಂಡರಿ ಸಹಿತ 26 ರನ್ ಚಚ್ಚಿದರು.
ಅಲ್ಲದೆ, ಏಕದಿನ ಪಂದ್ಯದ ಓವರ್ವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲೂ ಹರ್ಷಿತ್ ಸ್ಥಾನ ಪಡೆದಿದ್ದಾರೆ. ಈ ಲಿಸ್ಟ್ನಲ್ಲಿ ನಾಲ್ವರೊಂದಿಗೆ ಜಂಟಿ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಇಶಾಂತ್ ಶರ್ಮಾ, ಯುವರಾಜ್ ಸಿಂಗ್, ಕೃನಾಲ್ ಪಾಂಡ್ಯ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಅಲ್ಲದೆ, ದಿನೇಶ್ ಮೋಂಗಿಯಾ, ಆರ್‌ಪಿ ಸಿಂಗ್, ವಿಆರ್ವಿ ಸಿಂಗ್ ಕೂಡ ಅತಿ ಹೆಚ್ಚು ರನ್ ಬಿಟ್ಟುಕೊಟ್ಟಿರುವ ದಾಖಲೆಯನ್ನು ಹೊಂದಿದ್ದಾರೆ.
ಏಕದಿನ ಕ್ರಿಕೆಟ್: ಭಾರತೀಯ ಬೌಲರ್‌ಗಳ ಅತ್ಯಂತ ದುಬಾರಿ ಓವರ್‌ಗಳು
ಇಶಾಂತ್ ಶರ್ಮಾ: 2013ರ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 30 ರನ್ ಬಿಟ್ಟುಕೊಟ್ಟಿದ್ದರು.
ಯುವರಾಜ್ ಸಿಂಗ್: 2007ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ 30 ರನ್ ನೀಡಿದ್ದರು.
ಕೃನಾಲ್ ಪಾಂಡ್ಯ: 2021ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ 28 ರನ್ ಬಿಟ್ಟುಕೊಟ್ಟಿದ್ದರು.
ದಿನೇಶ್ ಮೊಂಗಿಯಾ: 2007 ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನದಲ್ಲಿ 26 ರನ್ ಬಿಟ್ಟುಕೊಟ್ಟಿದ್ದರು.
ಆರ್‌ಪಿ ಸಿಂಗ್: 2008 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ 26 ರನ್ ದಂಡಿಸಿಕೊಂಡಿದ್ದರು.
ವಿಕ್ರಮ್ ರಾಜ್ ವೀರ್ ಸಿಂಗ್: 2006 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ 26 ರನ್ ಚಚ್ಚಿಸಿಕೊಂಡಿದ್ದರು.
ಹರ್ಷಿತ್ ರಾಣಾ: 2025 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನದಲ್ಲಿ 26 ರನ್ ನೀಡಿದ್ದಾರೆ.
ಮೂರು ವಿಕೆಟ್ ಕಿತ್ತು ರಾಣಾ ದಾಖಲೆ
ಕೆಟ್ಟ ದಾಖಲೆಯ ಜೊತೆಗೆ ಅತ್ಯುತ್ತಮ ದಾಖಲೆಯೊಂದನ್ನೂ ತನ್ನ ಹೆಸರಿಗೆ ಸೇರಿಸಿಕೊಂಡಿದ್ದಾರೆ ಹರ್ಷಿತ್ ರಾಣಾ. ಪಂದ್ಯದಲ್ಲಿ 7 ಓವರ್ ಬೌಲಿಂಗ್ ಎಸೆದ ಹರ್ಷಿತ್ ಒಂದು ಓವರ್ ಮೇಡಿನ್ ಸಹಿತ 53 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತರು. ಇದರೊಂದಿಗೆ ಹರ್ಷಿತ್ ರಾಣಾ ಮೂರು ಸ್ವರೂಪಗಳಲ್ಲೂ ತಮ್ಮ ಚೊಚ್ಚಲ ಪಂದ್ಯದಲ್ಲಿ 3+ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೆಸ್ಟ್: 3/48 vs ಆಸ್ಟ್ರೇಲಿಯಾ, ಪರ್ತ್
ಟಿ20ಐ: 3/33 vs ಇಂಗ್ಲೆಂಡ್, ಪುಣೆ
ಏಕದಿನ: 3/53 vs ಇಂಗ್ಲೆಂಡ್, ನಾಗ್ಪುರ*
