ಹರ್ಷಿತ್ ರಾಣಾ ಅಮಾನತು, ಚೇತನ್ ಸಕಾರಿಯಾ ಇನ್; ಎಂಐ ಪಂದ್ಯಕ್ಕೆ ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI
MI vs KKR Playing XI : 2024ರ ಐಪಿಎಲ್ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ ಮತ್ತು ಪ್ಲೇಯಿಂಗ್ XI ಇಲ್ಲಿದೆ ನೋಡಿ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ 51ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು (Mumbai Indians vs Kolkata Knight Riders) ಸೆಣಸಾಟ ನಡೆಸಲಿವೆ. ಈ ಉಭಯ ತಂಡಗಳ ಕಾದಾಟಕ್ಕೆ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನವು ಆತಿಥ್ಯ ವಹಿಸಲಿದೆ. ಕೆಕೆಆರ್ ಮತ್ತು ಎಂಐ, ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. 2012ರಲ್ಲಿ ವಾಂಖೆಡೆಯಲ್ಲಿ ಎಂಐ ವಿರುದ್ಧ ಗೆಲುವು ಸಾಧಿಸಿದ್ದ ಕೆಕೆಆರ್, ಅಂದಿನಿಂದ ಇಲ್ಲಿಯವರೆಗೂ ಸತತ ಸೋಲುಗಳಿಗೆ ಶರಣಾಗಿದೆ. 11 ವರ್ಷಗಳ ನಂತರ ಮೊದಲ ಗೆಲುವಿಗೆ ಭಾರಿ ಕರಸತ್ತು ನಡೆಸುತ್ತಿದೆ ಕೋಲ್ಕತ್ತಾ.
ಪ್ರಸ್ತುತ ಪ್ಲೇಆಫ್ ಪ್ರವೇಶಿಸಲು ಕೊನೆಯ ನಾಲ್ಕು ಪಂದ್ಯಗಳನ್ನು ಭಾರಿ ಸಿದ್ಧತೆ ನಡೆಸುತ್ತಿರುವ ಮುಂಬೈ, ತನ್ನ ತಂಡದಲ್ಲಿ ಯಾವುದೇ ಬದಲಾವಣೆ ತರುವ ಸಾಧ್ಯತೆ ಕಡಿಮೆ. ನುವಾನ್ ತುಷಾರ ಮತ್ತು ಸೂರ್ಯಕುಮಾರ್ ಯಾದವ್ ಇಂಪ್ಯಾಕ್ಟ್ ಪ್ಲೇಯರ್ಗಳಾಗಿ ಮುಂದುವರೆಯಲಿದ್ದಾರೆ. ಆದರೆ, ಇಬ್ಬರಿಂದಲೂ ಇಂಪ್ಯಾಕ್ಟ್ಫುಲ್ ಇನ್ನಿಂಗ್ಸ್ ಬರುತ್ತಿಲ್ಲ. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ. ಉಭಯ ತಂಡಗಳು ಒಟ್ಟು 32 ಬಾರಿ ಮುಖಾಮುಖಿಯಾಗಿವೆ. ಮುಂಬೈ 23ರಲ್ಲಿ ಗೆದ್ದಿದ್ದರೆ, ಕೆಕೆಆರ್ ಕೇವಲ 9ರಲ್ಲಿ ಜಯ ಸಾಧಿಸಿದೆ. ಆದರೆ ಪ್ರಸ್ತುತ ಆವೃತ್ತಿಯಲ್ಲಿ ತಂಡಗಳ ಫಾರ್ಮ್ ಗಮನಿಸಿದರೆ ಕೆಕೆಆರ್ ತಂಡವೇ ಈ ಬಾರಿ ಮೇಲುಗೈ ಸಾಧಿಸಬಹುದು.
ಕೆಕೆಆರ್ ಈ ಪಂದ್ಯಕ್ಕೆ ಇಬ್ಬರೂ ರಾಣಾಗಳಿಲ್ಲದೆ ಕಣಕ್ಕಿಳಿಯಲಿದೆ. ಐಪಿಎಲ್ ನಿಯಮ ಉಲ್ಲಂಘಿಸಿದ ಹರ್ಷಿತ್ ರಾಣಾ ಒಂದು ಪಂದ್ಯಕ್ಕೆ ಅಮಾನತುಗೊಂಡಿದ್ದರೆ, ಕೆಕೆಆರ್ ಪರ ಆರಂಭಿಕ ಪಂದ್ಯ ಆಡಿದ ನಂತರ ಕೈಗೆ ಗಾಯ ಮಾಡಿಕೊಂಡ ನಿತೀಶ್, ನೆಟ್ಸ್‌ಗೆ ಮರಳಿದ್ದರೂ ಈ ಪಂದ್ಯಕ್ಕೆ ಲಭ್ಯರಾಗುವುದು ಅನುಮಾನ. ಹರ್ಷಿತ್ ಸ್ಥಾನಕ್ಕೆ ವೈಭವ್ ಅರೋರಾ ಅಥವಾ ಚೇತನ್ ಸಕರಿಯಾ ಆರೋರಾ ಬರಬಹುದು. ಮಿಚೆಲ್ ಸ್ಟಾರ್ಕ್ ಐಪಿಎಲ್ನ ದುಬಾರಿ ಬೌಲರ್ಗಳಲ್ಲಿ ಒಬ್ಬರಾಗಿದ್ದು, ತಂಡದ ತಲೆನೋವು ಹೆಚ್ಚಿಸಿದೆ. ಈ ಪಂದ್ಯದಲ್ಲಾದರೂ ಮಿಂಚುತ್ತಾರೆಯೇ ಎಂಬುನ್ನು ಕಾದುನೋಡಬೇಕಿದೆ.
ಕೆಕೆಆರ್ ಸಂಭಾವ್ಯ XI
ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಚೇತನ್ ಸಕಾರಿಯಾ.
ಮುಂಬೈ ಇಂಡಿಯನ್ಸ್ ಸಂಭಾವ್ಯ XI
ಇಶಾನ್ ಕಿಶನ್ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ವೇಹಾಲ್ ವಧೇರಾ, ಟಿಮ್ ಡೇವಿಡ್, ಮೊಹಮ್ಮದ್ ನಬಿ, ಪಿಯೂಷ್ ಚಾವ್ಲಾ, ಜೆರಾಜ್ ಕೊಯೆಟ್ಜಿ, ಜಸ್ಪ್ರೀತ್ ಬುಮ್ರಾ.
ಅಂಕಿ-ಅಂಶ
- ರೋಹಿತ್ ವಿರುದ್ಧ ಕೆಕೆಆರ್ ನರೇನ್ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಎಲ್ಲಾ ಟಿ20ಗಳಲ್ಲಿ ನರೈನ್ ವಿರುದ್ಧ 171 ಎಸೆತಗಳಲ್ಲಿ 187 ರನ್ ಗಳಿಸಿರುವ ರೋಹಿತ್, 9 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
- ಕೆಕೆಆರ್‌ನ ಸ್ಪಿನ್ನಿಂಗ್ ಜೋಡಿಗಳಾದ ನರೈನ್ ಮತ್ತು ಚಕ್ರವರ್ತಿ ವಿರುದ್ಧ ಸೂರ್ಯಕುಮಾರ್ ಅಬ್ಬರಿಸಿಲ್ಲ. ಅವರ ವಿರುದ್ಧ ಎಲ್ಲಾ ಟಿ20ಗಳಲ್ಲಿ 78 ಎಸೆತಗಳಲ್ಲಿ 89 ರನ್ ಗಳಿಸಿ ಕೇವಲ ಒಮ್ಮೆ ಔಟಾಗಿದ್ದಾರೆ.
- ಟಿಮ್ ಡೇವಿಡ್ ಅವರು ಆಂಡ್ರೆ ರಸೆಲ್ ವಿರುದ್ಧ ಉತ್ತಮ ಸಾಧನೆ ಮಾಡಿದ್ದಾರೆ. ಇದುವರೆಗಿನ ಎಲ್ಲಾ ಟಿ20ಗಳಲ್ಲಿ ಎದುರಿಸಿದ 25 ಎಸೆತಗಳಲ್ಲಿ 57 ರನ್ ಗಳಿಸಿದ್ದಾರೆ.
- ನರೈನ್ ವಿರುದ್ಧ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ನರೇನ್ 9 ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ಒಂದು ಬಾರಿ ಔಟಾಗಿದ್ದಾರೆ.
- ರೋಹಿತ್ ಶರ್ಮಾ ಅವರು ಟಿ20ಯಲ್ಲಿ 12,000ರ ಗಡಿ ತಲುಪಲು ಇನ್ನೂ 29 ರನ್‌ಗಳ ಅಗತ್ಯ ಇದೆ.
- ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಎಂಐನ ಗೆಲುವಿನ ಶೇಕಡಾವಾರು 71.8 ರಷ್ಟಿದೆ. ಇದು ಲೀಗ್‌ನಲ್ಲಿ ಅತ್ಯಂತ ಪ್ರಬಲವಾದ ಹೆಡ್-ಟು-ಹೆಡ್ ದಾಖಲೆಯಾಗಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ ಕುರಿತ ಪ್ರಶ್ನೆ; ನಕ್ಕು ಸುಮ್ಮನಾದ ರೋಹಿತ್ ಶರ್ಮಾ, ಅದೆಲ್ಲಾ ಮ್ಯಾಟರೇ ಅಲ್ಲ ಎಂದ ಅಗರ್ಕರ್