ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

Varun Aaron troll Ambati Rayudu: ಆರ್​ಸಿಬಿ ಫೈನಲ್​ ಗೆದ್ದಂತೆ ಆಡುತ್ತಿದೆ ಎಂದು ಟೀಕಿಸಿದ ಅಂಬಾಟಿ ರಾಯುಡು ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ಆಟಗಾರ ಸರಿಯಾಗಿ ತಿರುಗೇಟು ನೀಡಿದ್ದಾರೆ.

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ
ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು (Royal Challengers Bengaluru vs Chennai Super Kings) ಪ್ಲೇಆಫ್​ನಿಂದ ಹೊರದಬ್ಬಿದ ನಂತರ ಯಲ್ಲೋ ಆರ್ಮಿ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು (Ambati Rayudu) ಎದೆಗುಂದಿದಿದ್ದಾರೆ. ಈ ಪಂದ್ಯದ ಕೊನೆಯ ಎಸೆತವನ್ನು ಯಶ್ ದಯಾಳ್ (Yash Dayal)​​ ಬೌಲ್ ಮಾಡಿದ ನಂತರ ರಾಯುಡು ಮುಖದ ಮೇಲೆ ಕೈ ಹಾಕಿಕೊಂಡು ಸಂಕಟ ಪಡುತ್ತಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಡೆತ್​ ಓವರ್​​ಗಳಲ್ಲಿ ಪ್ರತಿರೋಧ ತೋರಿದ ರವೀಂದ್ರ ಜಡೇಜಾ ಕೊನೆಯ ಓವರ್​​ನ ಅಂತಿಮ ಎಸೆತದವರೆಗೂ ಕ್ರೀಸ್​ನಲ್ಲೇ ಇದ್ದರು. ಆದರೂ ಪ್ರವಾಸಿ ತಂಡವು ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಸಿಎಸ್​ಕೆ 27 ರನ್​ಗಳಿಂದ ಶರಣಾಯಿತು. ಐತಿಹಾಸಿಕ ಜಯದ ನಂತರ ಟೀಮ್ ಇಂಡಿಯಾ ಹಾಗೂ ಸಿಎಸ್​ಕೆ ಮಾಜಿ ಆಟಗಾರ ಅಂಬಾಟಿ ರಾಯುಡು ಅವರು ಫಾಫ್ ಡು ಪ್ಲೆಸಿಸ್​ ಪಡೆಯನ್ನು ಅಣಕಿಸಿದ್ದಾರೆ. ಅಪಹಾಸ್ಯ ಮಾಡಿದ ರಾಯುಡು ಈಗ ಟ್ರೋಲ್​​ಗೆ ಗುರಿಯಾಗಿದ್ದಾರೆ.

ಆರ್​ಸಿಬಿ ಕಪ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು

ಸಿಎಸ್​ಕೆ ಎದುರು ದಿಗ್ವಿಜಯ ಸಾಧಿಸಿದ ಆರ್​​ಸಿಬಿ ಪ್ಲೇಆಫ್ ಪ್ರವೇಶಿಸಿದ್ದರೂ ಕಪ್​ ಗೆದ್ದಂತೆ ಆಡುತ್ತಿದೆ. ಅವರು ಪ್ರವೇಶಿಸಿರುವುದು ಪ್ಲೇಆಫ್ ಮಾತ್ರ. ಟ್ರೋಫಿ ಜಯಿಸಿಲ್ಲ. ಅವರು ರಾತ್ರಿ ಸಂಭ್ರಮಿಸಿದ್ದು ನೋಡಿದರೆ, ಈಗಾಗಲೇ ಪ್ರಶಸ್ತಿಯನ್ನೇ ಜಯಿಸಿದವರಂತೆ ಕಂಡರು. ಬೆಂಗಳೂರಿನ ಬೀದಿಗಳಲ್ಲಿ ಅಭಿಮಾನಿಗಳಿಂದ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ನೋಡಿದ್ದೇವೆ ಎಂದು ರಾಯುಡು ಹೇಳಿದ್ದಾರೆ.

ಕಪ್​ ಗೆಲ್ಲಲು ಸಾಧ್ಯವಾಗದಿದ್ದರೆ ಚೆನ್ನೈ ಸೂಪರ್ ಕಿಂಗ್ಸ್​​ ತಮ್ಮ ಟ್ರೋಫಿಗಳಲ್ಲಿ ಒಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಬೇಕು. ಅದನ್ನು ಅವರು ಪರೇಡ್ ಮಾಡಬಹುದು ಎಂದು ಅಂಬಾಟಿ ಸ್ಟಾರ್​ಸ್ಟೋರ್ಟ್ಸ್​ನಲ್ಲಿ ರೆಡ್​ ಆರ್ಮಿಯನ್ನು ಅಣಕಿಸಿದ್ದಾರೆ. ಆ ಮೂಲಕ ಎಲಿಮಿನೇಟರ್ ಸೋಲಲಿ ಎಂದು ಬಯಸುತ್ತಿದ್ದಾರೆ ಎಂಬುದು ಅವರ ಮಾತುಗಳಲ್ಲಿ ತಿಳಿಯುತ್ತದೆ.

ವರುಣ್ ಆರೋನ್ ತಿರುಗೇಟು

ಸ್ಟಾರ್​ ಸ್ಪೋರ್ಟ್ಸ್​ ಶೋನಲ್ಲಿ ಅಂಬಾಟಿ ಪಕ್ಕದಲ್ಲೇ ಇದ್ದ ಆರ್​ಸಿಬಿ ಮಾಜಿ ಆಟಗಾರ ವರುಣ್​ ಅರೋನ್, ಸರಿಯಾಗಿ ತಿರುಗೇಟು ನೀಡಿದ್ದಾರೆ. ಸಿಎಸ್​ಕೆ ತಂಡವನ್ನು ಪ್ಲೇಆಫ್​ ರೇಸ್​ನಿಂದ ಹೊರದಬ್ಬಿದ ಆರ್​ಸಿಬಿಯ ಗೆಲುವನ್ನು ಇವರಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅರೋನ್​, ರಾಯುಡುಗೆ ಚಾಟಿ ಬೀಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಯುಡು ವಿರುದ್ಧ ಫ್ಯಾನ್ಸ್ ಗರಂ

ಸಿಎಸ್​ಕೆ ತನ್ನ ಒಂದು ಟ್ರೋಫಿಯನ್ನು ಆರ್​ಸಿಬಿಗೆ ಕೊಡಲಿ ಎಂದ ಅಂಬಾಟಿ ರಾಯುಡು ವಿರುದ್ಧ ಬೆಂಗಳೂರು ಫ್ಯಾನ್ಸ್​​ ಗರಂ ಆಗಿದ್ದಾರೆ. ನಿಯತ್ತಾಗಿ ಕಪ್​ ಗೆಲ್ತೇವೆ, ನಿಮ್ಮಂಗೆ ಎರಡು ವರ್ಷ ಬ್ಯಾನ್ ಆಗಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್​ನಲ್ಲಿ ಮ್ಯಾಚ್​ ಫಿಕ್ಸಿಂಗ್ ಮಾಡ್ಕೊಂಡು ಕಳಂಕ ತಂದವರು ನೀವು ಎಂದು ಕಿಡಿಕಾರಿದ್ದಾರೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner