ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್; ಐತಿಹಾಸಿಕ ಗೆಲುವಿನೊಂದಿಗೆ ಹಲವು ದಾಖಲೆ ನಿರ್ಮಿಸಿದ ಆರ್​ಸಿಬಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್; ಐತಿಹಾಸಿಕ ಗೆಲುವಿನೊಂದಿಗೆ ಹಲವು ದಾಖಲೆ ನಿರ್ಮಿಸಿದ ಆರ್​ಸಿಬಿ

ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್; ಐತಿಹಾಸಿಕ ಗೆಲುವಿನೊಂದಿಗೆ ಹಲವು ದಾಖಲೆ ನಿರ್ಮಿಸಿದ ಆರ್​ಸಿಬಿ

ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಗರಿಷ್ಠ ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾತ್ರವಾಗಿದೆ. ಗುಜರಾತ್ ಜೈಂಟ್ಸ್ ವಿರುದ್ಧದ ಐತಿಹಾಸಿಕ ಗೆಲುವಿನೊಂದಿಗೆ ಹಲವು ದಾಖಲೆಗಳನ್ನೂ ನಿರ್ಮಿಸಿದೆ ಆರ್​ಸಿಬಿ.

ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್; ಐತಿಹಾಸಿಕ ಗೆಲುವಿನೊಂದಿಗೆ ಹಲವು ದಾಖಲೆ ನಿರ್ಮಿಸಿದ ಆರ್​ಸಿಬಿ
ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್; ಐತಿಹಾಸಿಕ ಗೆಲುವಿನೊಂದಿಗೆ ಹಲವು ದಾಖಲೆ ನಿರ್ಮಿಸಿದ ಆರ್​ಸಿಬಿ (AFP)

ಬೆಂಗಳೂರು, ಫೆ 14: ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಅದ್ಭುತ ಆರಂಭ ಪಡೆಯಿತು. ಬೃಹತ್ ಗುರಿ ಬೆನ್ನಟ್ಟುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಚರಿತ್ರೆ ಸೃಷ್ಟಿಸಿತು. ಕಳೆದ ಆವೃತ್ತಿಗಳಲ್ಲಿ ಯಾವೊಂದು ತಂಡವು 200 ಪ್ಲಸ್ ಸ್ಕೋರ್ ಚೇಸ್ ಮಾಡಲು ಆಗದ್ದನ್ನು ಆರ್​ಸಿಬಿ 3ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಮಾಡಿ ಮುಗಿಸಿತು. ಇತಿಹಾಸ ಪುಟಗಳಲ್ಲಿ ನೂತನ ಪುಟವೊಂದು ತೆರೆದ ಆರ್​ಸಿಬಿ, ಹಲವು ದಾಖಲೆ ನಿರ್ಮಿಸಿದೆ. ವಡೋದರಾದ ಕೋಟಂಬಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 201 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 9 ಎಸೆತ ಬಾಕಿ ಉಳಿಸಿ 202 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಗುಜರಾತ್ ಜೈಂಟ್ಸ್ ಇನ್ನಿಂಗ್ಸ್ 201/5 (20)

ಆರ್​ಸಿಬಿ ಇನ್ನಿಂಗ್ಸ್​ - 202/4 (18.3)

ಆ್ಯಶ್ಲೆ ಗಾರ್ಡ್ನರ್​ ಅಬ್ಬರ

ಗುಜರಾತ್ ಜೈಂಟ್ಸ್ ಪರ ನಾಯಕಿ ಆ್ಯಶ್ಲೆ ಗಾರ್ಡ್ನರ್​ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 37 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್​​ಗಳ ಸಹಾಯದಿಂದ ಅಜೇಯ 79 ರನ್ ಬಾರಿಸಿದರು. ಬೆತ್ ಮೂನಿ 42 ಎಸೆತಗಳಲ್ಲಿ 8 ಬೌಂಡರಿ ಸಹಿತ 56 ಸಿಡಿಸಿದರು. ಇವರಿಬ್ಬರ ಅದ್ಭುತ ಪ್ರದರ್ಶನದ ಸಹಾಯದಿಂದ ಗುಜರಾತ್ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

ಪೆರಿ, ರಿಚಾ ಅಬ್ಬರಕ್ಕೆ ಗುಜರಾತ್ ಉಡೀಸ್

ಆರಂಭದಲ್ಲಿ ಬೇಗನೇ 2 ವಿಕೆಟ್ ಕಳೆದುಕೊಂಡರೂ ನಂತರ ಮಿಂಚಿದ ಎಲಿಸ್ ಪೆರಿ ಮತ್ತು ರಿಚಾ ಘೋಷ್, ಗುಜರಾತ್ ಬೌಲರ್​​ಗಳ ಬೆವರಿಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೆರಿ 34 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 57 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರೆ, ಕೊನೆಯಲ್ಲಿ ರಿಚಾ ಘೋಷ್ 27 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 67 ರನ್ ಬಾರಿಸಿ ಪಂದ್ಯವನ್ನು ಫಿನಿಷ್ ಮಾಡಿದರು. 18.3 ಓವರ್​​ಗಳಲ್ಲೇ ಪಂದ್ಯವನ್ನು ಮುಗಿಸಿದರು. ಇನ್ನು ಈ ಪಂದ್ಯದಲ್ಲಿ ದಾಖಲಾದ ದಾಖಲೆಗಳ ಪಟ್ಟಿ ಇಲ್ಲಿದೆ.

ಡಬ್ಲ್ಯುಪಿಎಲ್​: ಗರಿಷ್ಠ ಚೇಸ್ ಮಾಡಿದ ತಂಡಗಳು

  • 202 ರನ್ - ಆರ್​ಸಿಬಿ vs ಗುಜರಾತ್ ಜೈಂಟ್ಸ್, ವಡೋದರಾ, 2025*
  • 191 ರನ್ - ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್, ಡೆಲ್ಲಿ, 2024
  • 189 ರನ್ - ಆರ್​ಸಿಬಿ vs ಗುಜರಾತ್ ಜೈಂಟ್ಸ್, ಬ್ರಬೋರ್ನ್, 2023
  • 179 ರನ್ - ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್, ಬ್ರಬೋರ್ನ್, 2023
  • 172 ರನ್ - ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಬೆಂಗಳೂರು, 2024

ಇದನ್ನೂ ಓದಿ: ಆಸ್ಟ್ರೇಲಿಯಾ ಜೊತೆಗೆ ಭಾರತ ತಂಡಕ್ಕೂ ಮಣ್ಣುಮುಕ್ಕಿಸಿ ಸರಣಿ ಗೆದ್ದಿರುವ ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿ ಆಡುತ್ತಿಲ್ಲವೇಕೆ?

ಡಬ್ಲ್ಯುಪಿಎಲ್: 50+ ರನ್ ಜೊತೆಯಾಟದಲ್ಲಿ ಅತ್ಯಧಿಕ ರನ್ ರೇಟ್

  • 16.8 ರನ್ ರೇಟ್ (70 ರನ್, 25 ಎಸೆತ) - ಸೋಫಿ ಎಕ್ಲೆಸ್ಟೋನ್ & ಗ್ರೇಸ್ ಹ್ಯಾರಿಸ್ (ಯುಪಿ) vs ಜಿಜಿ, 2023
  • 15.08 ರನ್ ರೇಟ್ (93* ರನ್, 37 ಎಸೆತ) - ಕನಿಕಾ ಅಹುಜಾ & ರಿಚಾ ಘೋಷ್ (ಆರ್​ಸಿಬಿ) vs ಜಿಜಿ, 2025*
  • 14.93 ರನ್ ರೇಟ್ (107 ರನ್, 43 ಎಸೆತ) - ಮೆಗ್ ಲ್ಯಾನಿಂಗ್ & ಶಫಾಲಿ ವರ್ಮಾ (ಡಿಸಿ) vs ಜಿಜಿ, 2023
  • 14.68 ರನ್ ರೇಟ್ (93 ರನ್, 38 ಎಸೆತ) - ಹರ್ಮನ್​ಪ್ರೀತ್ ಕೌರ್ & ಅಮೆಲಿಯಾ ಕೇರ್ (ಮುಂಬೈ) vs ಜಿಜಿ, 2024

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಬಹುಮಾನ ಮೊತ್ತ ಪ್ರಕಟ; ಪ್ರೈಜ್ ಮನಿ ಶೇ 53ರಷ್ಟು ಏರಿದರೂ ಪಂತ್-ಅಯ್ಯರ್ ಐಪಿಎಲ್ ವೇತನಕ್ಕಿಂತ ಕಡಿಮೆ

ಡಬ್ಲ್ಯುಪಿಎಲ್: ಪಂದ್ಯದ ಒಟ್ಟು ಮೊತ್ತ (ಎರಡು ಇನ್ನಿಂಗ್ಸ್ ಸೇರಿ)

  • 403 ರನ್ - ಗುಜರಾತ್ vs ಆರ್​ಸಿಬಿ, ವಡೋದರಾ, 2025*
  • 391 ರನ್ - ಗುಜರಾತ್ vs ಆರ್​ಸಿಬಿ, ಬ್ರಬೋರ್ನ್, 2023
  • 386 ರನ್ - ಆರ್​​ಸಿಬಿ vs ಡೆಲ್ಲಿ, ಬ್ರಬೋರ್ನ್, 2023
  • 381 ರನ್ - ಗುಜರಾತ್ vs ಮುಂಬೈ, ಡೆಲ್ಲಿ, 2024
  • 380 ರನ್ - ಡೆಲ್ಲಿ vs ಯುಪಿ, ಡಿವೈ ಪಾಟೀಲ್, 2023
  • ಕನಿಕಾ ಅಹುಜಾ ಮತ್ತು ರಿಚಾ ಘೋಷ್ ನಡುವಿನ ಅಜೇಯ 93* ರನ್‌ಗಳ ಪಾಲುದಾರಿಕೆಯು ಡಬ್ಲ್ಯುಪಿಎಲ್​ನಲ್ಲಿ ಆರ್​ಸಿಬಿ ಪರ 3 ನೇ ಅತ್ಯುತ್ತಮ ಜೊತೆಯಾಟವಾಗಿದೆ.
  • ಪಂದ್ಯವೊಂದರಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್​ಗಳ ಪಟ್ಟಿಯಲ್ಲಿ ಆರ್​ಸಿಬಿ ಮತ್ತು ಗುಜರಾತ್ ನಡುವಿನ ಪಂದ್ಯ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ 16 ಸಿಕ್ಸರ್​ಗಳು ದಾಖಲಾದವು. ಆದರೆ ಅಗ್ರಸ್ಥಾನದಲ್ಲಿ ಆರ್​​ಸಿಬಿ ಮತ್ತು ನಡುವಿನ ಪಂದ್ಯವಿದ್ದು, ಅದರಲ್ಲಿ 19 ಸಿಕ್ಸರ್ ಸಿಡಿದಿದ್ದವು.

ಇದನ್ನೂ ಓದಿ: ವಿರಾಟ್ ಕೊಹ್ಲಿ ಹಿಂದಿಕ್ಕಿ ಹಾಶೀಮ್ ಆಮ್ಲಾ ವಿಶ್ವದಾಖಲೆ ಸರಿಗಟ್ಟಿದ ಬಾಬರ್ ಅಜಮ್; ಈ ಸಾಧನೆಗೈದ ಏಷ್ಯಾದ ಮೊದಲ ಆಟಗಾರ

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner