ಕನ್ನಡ ಸುದ್ದಿ  /  Cricket  /  Hilarious Conversation About Hindi Between Sarfaraz Khan Shoaib Bashir Caught On Stump Mic Video Goes Viral Watch Prs

ಹೇ ಈತನಿಗೆ ಹಿಂದಿ ಬರಲ್ಲ ಎಂದ ಸರ್ಫರಾಜ್; ಥೋಡಿ ಥೋಡಿ ಆತಿಹೈ ಎಂದು ಪ್ರತ್ಯುತ್ತರ ಕೊಟ್ಟ ಬಶೀರ್, ಮಜಾ ಇದೆ ನೋಡಿ ವಿಡಿಯೋ

Sarfaraz Khan - Shoaib Bashir : ಇಸ್ಕೋ ಹಿಂದಿ ನಹೀ ಆತಿ ಹೈ (ಅವರಿಗೆ ಹಿಂದಿ ಗೊತ್ತಿಲ್ಲ) ಎಂದು ಸರ್ಫರಾಜ್ ಹೇಳಿದ್ದಾರೆ. ಇದಕ್ಕೆ ಶೋಯೆಬ್ ಬಶೀರ್, "ಆತಿ ಹೈ ಥೋಡಿ ಥೋಡಿ (ನನಗೆ ಸ್ವಲ್ಪ ಹಿಂದಿ ಗೊತ್ತು) ಎಂದು ಉಲ್ಲಾಸದಿಂದ ಉತ್ತರಿಸಿದ್ದಾರೆ.

ಹೇ ಈತನಿಗೆ ಹಿಂದಿ ಬರಲ್ಲ ಎಂದ ಸರ್ಫರಾಜ್; ಥೋಡಿ ಥೋಡಿ ಆತಿಹೈ ಎಂದು ಪ್ರತ್ಯುತ್ತರ ಕೊಟ್ಟ ಬಶೀರ್
ಹೇ ಈತನಿಗೆ ಹಿಂದಿ ಬರಲ್ಲ ಎಂದ ಸರ್ಫರಾಜ್; ಥೋಡಿ ಥೋಡಿ ಆತಿಹೈ ಎಂದು ಪ್ರತ್ಯುತ್ತರ ಕೊಟ್ಟ ಬಶೀರ್

ರಾಂಚಿಯ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಪ್ರಸ್ತುತ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಎರಡನೇ ದಿನದಾಟ ಅಂತ್ಯಗೊಂಡಿದ್ದು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ರೋಹಿತ್ ಪಡೆ, 73 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 219 ರನ್ ಕಲೆ ಹಾಕಿದ್ದು, 134 ರನ್​ಗಳ ಹಿನ್ನಡೆಯಲ್ಲಿದೆ. 3ನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದೆ.

ಮೊದಲ ದಿನದಂತ್ಯಕ್ಕೆ ಕಲೆ ಹಾಕಿದ್ದ 7 ವಿಕೆಟ್ ನಷ್ಟಕ್ಕೆ 302 ರನ್​ಗಳಿಂದ ಇಂಗ್ಲೆಂಡ್ 2ನೇ ದಿನದಾಟ ಪ್ರಾರಂಭಿಸಿ 51 ರನ್ ಸೇರಿಸಿತು. ಜೋ ರೂಟ್​ 122 ರನ್ ಗಳಿಸಿ ಅಜೇಯರಾಗಿ ಉಳಿದರು. ಒಲ್ಲಿ ರಾಬಿನ್ಸನ್ (58) ಅರ್ಧಶತಕ ಸಿಡಿಸಿದರು. ಆಂಗ್ಲರು 104.5 ಓವರ್​​​ಗಳಲ್ಲಿ 353ಕ್ಕೆ ಸರ್ವಪತನ ಕಂಡರು. ಆದರೆ ಪಂದ್ಯದ ನಡುವೆ ಭಾರತ-ಇಂಗ್ಲೆಂಡ್ ಆಟಗಾರರ ಹಾಸ್ಯಮಯ ಕ್ಷಣವೊಂದು ನಡೆದಿದೆ.

ರವೀಂದ್ರ ಜಡೇಜಾ ಎಸೆತದಲ್ಲಿ ಒಲಿ ರಾಬಿನ್ಸನ್ ಔಟಾದ ನಂತರ ಶೋಯೆಬ್ ಬಶೀರ್ ಬ್ಯಾಟಿಂಗ್‌ ನಡೆಸಲು ಕ್ರೀಸ್​ಗೆ ಬಂದರು. ಪಾಕಿಸ್ತಾನ ಮೂಲದ ಇಂಗ್ಲಿಷ್ ಸ್ಪಿನ್ನರ್‌ಗೆ ನಾಯಕ ಫೀಲ್ಡಿಂಗ್ ಸೆಟ್ ಮಾಡಿದರು. ಆಗ ಸಿಲ್ಲಿ ಪಾಯಿಂಟ್‌ನಲ್ಲಿ ನಿಂತಿದ್ದ ಸರ್ಫರಾಜ್ ಖಾನ್, ಬಶೀರ್ ಅವರೊಂದಿಗೆ ತಮಾಷೆ ಮಾಡಲು ನಿರ್ಧರಿಸಿದರು. ತನ್ನ ಸಹ ಆಟಗಾರನೊಬ್ಬನ ಕಡೆಗೆ ತೋರಿಸಿದ ಸರ್ಫರಾಜ್, ಬಶೀರ್‌ಗೆ ಹಿಂದಿ ಬರುವುದಿಲ್ಲ ಎಂದು ಹೇಳಿದರು. ಆದರೆ, ಬಶೀರ್ ಹಿಂದಿಯಲ್ಲೇ ಪ್ರತ್ಯುತ್ತರ ನೀಡಿದ್ದು ಅಚ್ಚರಿ ಮೂಡಿಸಿದೆ.

ಇಸ್ಕೋ ಹಿಂದಿ ನಹೀ ಆತಿ ಹೈ (ಅವರಿಗೆ ಹಿಂದಿ ಗೊತ್ತಿಲ್ಲ) ಎಂದು ಸರ್ಫರಾಜ್ ಹೇಳಿದ್ದಾರೆ. ಇದಕ್ಕೆ ಶೋಯೆಬ್ ಬಶೀರ್, "ಆತಿ ಹೈ ಥೋಡಿ ಥೋಡಿ (ನನಗೆ ಸ್ವಲ್ಪ ಹಿಂದಿ ಗೊತ್ತು) ಎಂದು ಉಲ್ಲಾಸದಿಂದ ಉತ್ತರಿಸಿದ್ದಾರೆ. ಬಶೀರ್​ ಹಿಂದಿಯಲ್ಲಿ ಮಾತಾಡಿದ್ದು ನೋಡಿ ಸರ್ಫರಾಜ್ ಅಚ್ಚರಿಗೊಳಗಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಭಾರಿ ಮಜಾ ಇದೆ ಎಂದು ನಗುವ ಎಮೋಜಿಗಳನ್ನು ಹಾಕುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತೀಯ ಬೌಲರ್ಸ್ ಉತ್ತಮ ಪ್ರದರ್ಶನ ತೋರಿದರು. ವಿಶ್ರಾಂತಿ ಪಡೆದಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ಅವಕಾಶ ಪಡೆದಿರುವ ಆಕಾಶ್ ದೀಪ್ ಅವರು ಬೆಂಕಿ ಬೌಲಿಂಗ್ ನಡೆಸಿದರು. ಪದಾರ್ಪಣೆ ಪಂದ್ಯದಲ್ಲೇ ಮೂರು ವಿಕೆಟ್ ಪಡೆದು ಮಿಂಚಿದರು. ಇನ್ನು ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2, ಅಶ್ವಿನ್ 1 ವಿಕೆಟ್ ಪಡೆದರು.

ಜೈಸ್ವಾಲ್ ಮತ್ತೆ ಮಿಂಚು, ಉಳಿದವರು ಫೇಲ್

ಇಂಗ್ಲೆಂಡ್​ನ 353 ರನ್​ಗಳಿಗೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಭಾರತ ಆಘಾತಕ್ಕೆ ಒಳಗಾಯಿತು. ರೋಹಿತ್​ ಶರ್ಮಾ 2 ರನ್, ಶುಭ್ಮನ್ ಗಿಲ್ 38 ರನ್​ಗಳಿಗೆ ಆಟ ಮುಗಿಸಿದರು. ರಜತ್ ಪಾಟೀದಾರ್ (17) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ರವೀಂದ್ರ ಜಡೇಜಾ 12, ಸರ್ಫರಾಜ್ ಖಾನ್ 14 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮಾತ್ರ ಮತ್ತೊಮ್ಮೆ ಮಿಂಚಿದರು.

ಸತತ ವಿಕೆಟ್ ಪತನದ ನಡುವೆಯೂ ಅಬ್ಬರಿಸಿದ ಜೈಸ್ವಾಲ್ ಸಿರೀಸ್​ನಲ್ಲಿ ಎರಡನೇ ಅರ್ಧಶತಕ ಸಿಡಿಸಿದರು. ನಿಧಾನಗತಿಯಲ್ಲಿ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಯಶಸ್ವಿ, 117 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್​ ಸಹಿತ 73 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಆರ್ ಅಶ್ವಿನ್ ಸಹ 1 ರನ್​ಗೆ ಹಿಂದಿರುಗಿದರು. ಇದೀಗ ಧ್ರುವ್ ಜುರೆಲ್ ಮತ್ತು ಕುಲ್ದೀಪ್ ಯಾದವ್ 42 ರನ್​ಗಳ ಪಾಲುದಾರಿಕೆ ನೀಡಿದ್ದಾರೆ.

IPL_Entry_Point