ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಆಯ್ಕೆಯಾಗಲ್ಲ: ಭಯಬಿದ್ದು ಅಚ್ಚರಿ ಹೇಳಿಕೆ ನೀಡಿದ ಆರ್ಸಿಬಿ ಸಹ ಆಟಗಾರ
Glenn Maxwell on Virat Kohli : ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆಯಲ್ಲ ಎಂಬ ವದಂತಿಗಳ ನಡುವೆ ಗ್ಲೆನ್ ಮ್ಯಾಕ್ಸ್‌ವೆಲ್, ಆತ ಭಾರತ ತಂಡದಲ್ಲಿ ಅವಕಾಶ ಪಡೆಯುವುದು ಕಷ್ಟ ಎಂದು ಹೇಳಿಕೆ ನೀಡಿದ್ದಾರೆ.
ಜೂನ್ 1ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರನ್ನು ನಿರ್ಲಕ್ಷಿಸಬಹುದು ಎಂಬ ವರದಿಗಳಿವೆ. ಬದಲಿಗೆ ಕಿರಿಯ ಆಟಗಾರರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅದಾಗಿಯೂ ಐಪಿಎಲ್ 2024ರಲ್ಲಿ ವಿರಾಟ್ ಬ್ಯಾಟ್‌ನೊಂದಿಗೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಆರ್ಸಿಬಿ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್, ಕೊಹ್ಲಿ ಆಯ್ಕೆಯಾಗಬಾರದೆಂದು ಬಯಸಿದ್ದಾರೆ.
ಇಎಸ್‌ಪಿಎನ್ ಜೊತೆಗಿನ ಸಂವಾದದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ವಿರಾಟ್ ಕೊಹ್ಲಿ ಅವರು ಅತ್ಯಂತ ಅದ್ಭುತ ಆಟಗಾರ ಎಂದು ಹೇಳಿದ್ದಾರೆ. 2016ರ ಟಿ20 ವಿಶ್ವಕಪ್‌ನಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಕೊಹ್ಲಿ 82 ರನ್ ಗಳಿಸಿದ್ದು ನಾನು ಕಂಡ ಅತ್ಯುತ್ತಮ ಇನ್ನಿಂಗ್ಸ್ ಎಂದು ಹೇಳಿದ್ದಾರೆ. ಆದರೆ ಇದೇ ವೇಳೆ ಅಚ್ಚರಿ ಹೇಳಿಕೆ ನೀಡಿರುವ ಮ್ಯಾಕ್ಸಿ, ಭಾರತವು 2024ರ ಟಿ20 ವಿಶ್ವಕಪ್‌ಗೆ ಕೊಹ್ಲಿಯನ್ನು ಆಯ್ಕೆ ಮಾಡುವುದಿಲ್ಲ ಎಂದು ಆಶಿಸಿದ್ದಾರೆ.
ಗೇಲಿ ಮಾಡಿದ ಮ್ಯಾಕ್ಸ್‌ವೆಲ್
ವಿರಾಟ್ ಕೊಹ್ಲಿ ಅತ್ಯಂತ ಅದ್ಭುತ ಆಟಗಾರ. 2016ರ ಟಿ20 ವಿಶ್ವಕಪ್‌ನಲ್ಲಿ ಮೊಹಾಲಿಯಲ್ಲಿ ಕೊಹ್ಲಿ, ನಮ್ಮ ವಿರುದ್ಧ ಆಡಿದ ಇನ್ನಿಂಗ್ಸ್ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ಅವರಲ್ಲಿ ತಂಡ ಗೆಲ್ಲಲು ಏನು ಮಾಡಬೇಕು ಎನ್ನುವುದರ ಅರಿವು ಅಸಾಧಾರಣವಾಗಿದೆ. ಆದರೆ ಈ ಬಾರಿ ಭಾರತವು ಅವರನ್ನು ಆಯ್ಕೆ ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ಅವರು ಬರದಿರುವುದೇ ಅದ್ಭುತವಾಗಿದೆ ಎಂದು ಮ್ಯಾಕ್ಸ್‌ವೆಲ್ ಗೇಲಿ ಮಾಡಿದ್ದಾರೆ.
ಒಂದು ವೇಳೆ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ಗೆ ಆಯ್ಕೆಯಾದರೆ, ನಮ್ಮ ವಿರುದ್ಧ ಮತ್ತೆ ಅಬ್ಬರಿಸುತ್ತಾರೆ ಎನ್ನುವ ಅರ್ಥದಲ್ಲಿ ಮ್ಯಾಕ್ಸಿ ಹೇಳಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಕೊಹ್ಲಿ ಸ್ಥಾನ ಪಡೆಯಲ್ಲ ಎಂಬ ವದಂತಿಗಳ ನಡುವೆ ಮ್ಯಾಕ್ಸ್‌ವೆಲ್, ಟೀಮ್ ಇಂಡಿಯಾಗೆ ಕೊಹ್ಲಿ ಪ್ರವೇಶಿಸುವುದು ಕಷ್ಟ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ಆದರೆ ಕೊಹ್ಲಿ ಬಗ್ಗೆ ಮ್ಯಾಕ್ಸಿ ಹೇಳಿರುವುದು ತಮಾಷೆಯಾಗಿ ಎಂಬುದನ್ನು ಇಲ್ಲಿ ತಿಳಿಯಬೇಕಿದೆ. ಅವರು ತಂಡಕ್ಕೆ ಆಯ್ಕೆ ಆಗಲ್ಲ ಎಂದು ಗೇಲಿ ಮಾಡಿದ್ದಾರೆ.
ಪ್ರಸಕ್ತ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆಡಿರುವ 6 ಪಂದ್ಯಗಳಲ್ಲಿ 319 ರನ್ ಗಳಿಸಿದ್ದಾರೆ. 105ರ ಬ್ಯಾಟಿಂಗ್ ಸರಾಸರಿ, 143ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ. 2 ಅರ್ಧಶತಕ ಮತ್ತು 1 ಶತಕ ಸಿಡಿಸಿದ್ದಾರೆ. ಮತ್ತೊಂದೆಡೆ ಮ್ಯಾಕ್ಸ್‌ವೆಲ್ ಆಡಿದ ಐದು ಪಂದ್ಯಗಳಲ್ಲಿ ಕೇವಲ 32 ರನ್ ಗಳಿಸಿದ್ದಾರೆ. ಅದು ಕೂಡ ಕೇವಲ 6.2ರ ಬ್ಯಾಟಿಂಗ್ ಸರಾಸರಿಯಲ್ಲಿ.
ಕ್ರ.ಸಂ | ತಂಡ | ಪಂದ್ಯ | ಗೆಲುವು | ಸೋಲು | ಅಂಕ | NRR |
---|---|---|---|---|---|---|
1 | ರಾಜಸ್ಥಾನ್ ರಾಯಲ್ಸ್ | 5 | 4 | 1 | 8 | +0.871 |
2 | ಕೋಲ್ಕತ್ತಾ ನೈಟ್ ರೈಡರ್ಸ್ | 4 | 3 | 1 | 6 | +1.528 |
3 | ಲಕ್ನೋ ಸೂಪರ್ ಜೈಂಟ್ಸ್ | 4 | 3 | 1 | 6 | +0.775 |
4 | ಚೆನ್ನೈ ಸೂಪರ್ ಕಿಂಗ್ಸ್ | 5 | 3 | 2 | 6 | +0.666 |
5 | ಸನ್ರೈಸರ್ಸ್ ಹೈದರಾಬಾದ್ | 5 | 3 | 2 | 6 | +0.344 |
6 | ಗುಜರಾತ್ ಟೈಟಾನ್ಸ್ | 6 | 3 | 3 | 6 | -0.637 |
7 | ಪಂಜಾಬ್ ಕಿಂಗ್ಸ್ | 5 | 2 | 3 | 4 | -0.196 |
8 | ಮುಂಬೈ ಇಂಡಿಯನ್ಸ್ | 4 | 1 | 3 | 2 | -0.704 |
9 | ರಾಯಲ್ ಚಾಲೆಂಜರ್ಸ್ ಬೆಂಗಳೂರು | 5 | 1 | 4 | 2 | -0.843 |
10 | ಡೆಲ್ಲಿ ಕ್ಯಾಪಿಟಲ್ಸ್ | 5 | 1 | 4 | 2 | -1.370 |