Explained: ಹೀಗಾದರೆ ಆಸ್ಟ್ರೇಲಿಯಾ ಡಬ್ಲ್ಯುಟಿಸಿ ಫೈನಲ್​ ಕಳೆದುಕೊಳ್ಳಬಹುದು, ಹೇಗೆ? ಇದಕ್ಕಾಗಿ ನಡೆಯಬೇಕು ಪವಾಡ!
ಕನ್ನಡ ಸುದ್ದಿ  /  ಕ್ರಿಕೆಟ್  /  Explained: ಹೀಗಾದರೆ ಆಸ್ಟ್ರೇಲಿಯಾ ಡಬ್ಲ್ಯುಟಿಸಿ ಫೈನಲ್​ ಕಳೆದುಕೊಳ್ಳಬಹುದು, ಹೇಗೆ? ಇದಕ್ಕಾಗಿ ನಡೆಯಬೇಕು ಪವಾಡ!

Explained: ಹೀಗಾದರೆ ಆಸ್ಟ್ರೇಲಿಯಾ ಡಬ್ಲ್ಯುಟಿಸಿ ಫೈನಲ್​ ಕಳೆದುಕೊಳ್ಳಬಹುದು, ಹೇಗೆ? ಇದಕ್ಕಾಗಿ ನಡೆಯಬೇಕು ಪವಾಡ!

WTC Final: ಅಧಿಕೃತವಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡಕ್ಕೆ ಡಬ್ಲ್ಯುಟಿಸಿ ಫೈನಲ್ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಶ್ರೀಲಂಕಾ ಫೈನಲ್ ಪ್ರವೇಶಿಸುವ ಅವಕಾಶ ಪಡೆಯಲು ಸಜ್ಜಾಗಿದೆ. ಅದು ಹೇಗೆ ಸಾಧ್ಯ?

Explained: ಹೀಗಾದರೆ ಆಸ್ಟ್ರೇಲಿಯಾ ಡಬ್ಲ್ಯುಟಿಸಿ ಫೈನಲ್​ ಕಳೆದುಕೊಳ್ಳಬಹುದು, ಹೇಗೆ? ಇದಕ್ಕಾಗಿ ನಡೆಯಬೇಕು ಪವಾಡ!
Explained: ಹೀಗಾದರೆ ಆಸ್ಟ್ರೇಲಿಯಾ ಡಬ್ಲ್ಯುಟಿಸಿ ಫೈನಲ್​ ಕಳೆದುಕೊಳ್ಳಬಹುದು, ಹೇಗೆ? ಇದಕ್ಕಾಗಿ ನಡೆಯಬೇಕು ಪವಾಡ!

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ, 3-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತು. ಈ ಗೆಲುವಿನೊಂದಿಗೆ 10 ವರ್ಷಗಳ ನಂತರ ಬಾರ್ಡರ್​-ಗವಾಸ್ಕರ್ ಟ್ರೋಫಿಗೆ ಮುತ್ತಿಕ್ಕಿತು. ಅಷ್ಟೇ ಯಾಕೆ, ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025 ಫೈನಲ್‌ಗೂ ಅರ್ಹತೆ ಗಳಿಸಿತು. ಸತತ 2ನೇ ಬಾರಿಗೆ ಅರ್ಹತೆ ಪಡೆದಿರುವ ಹಾಲಿ ಚಾಂಪಿಯನ್​, ಇಂಗ್ಲೆಂಡ್​ನ ಲಾರ್ಡ್ಸ್​ ಮೈದಾನದಲ್ಲಿ ಜೂನ್ 11ರಂದು ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ. ಆದರೆ, ಆಸ್ಟ್ರೇಲಿಯಾ ಅಧಿಕೃತವಾಗಿ ಫೈನಲ್ ಪ್ರವೇಶಿಸಿದರೂ, ಅದನ್ನು ಕಳೆದುಕೊಳ್ಳುವ ಸಾಧ್ಯತೆ ಇನ್ನೂ ಇದೆ. ಅದು ಹೇಗೆ ಎಂಬುದರ ಸಮಗ್ರ ವಿವರ ಇಂತಿದೆ.

ಪಾಕಿಸ್ತಾನ ವಿರುದ್ಧ 2-0 ಅಂತರದಿಂದ ಟೆಸ್ಟ್ ಸರಣಿ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಆಸ್ಟ್ರೇಲಿಯಾ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಗೆಲುವಿನ ಶೇಕಡವಾರು 63.73 ಹೊಂದಿದೆ. ಯಾವುದೇ ತಂಡಕ್ಕೂ 2ನೇ ಸ್ಥಾನಕ್ಕೇರುವ ಅವಕಾಶ ಇಲ್ಲ. ಹೀಗಿದ್ದರೂ ಈ ಒಂದು ಕಾರಣದಿಂದ ಆಸೀಸ್​ಗೆ ಕಂಟಕ ಎದುರಾಗಿದೆ. ಆದರೆ ಇದು ಸಾಧ್ಯವಾಗಬೇಕೆಂದರೆ ಪವಾಡವೇ ನಡೆಯಬೇಕಿದೆ. ಒಂದು ವೇಳೆ ಆ ಪವಾಡ ನಡೆದರೆ ಆಸೀಸ್ ಫೈನಲ್​​ನಿಂದಲೇ ಹೊರಬೀಳುವ ಸಾಧ್ಯತೆ ಇದೆ. ಇದು ಭಾರತ ತಂಡಕ್ಕೆ ಯಾವುದೇ ನೆರವಾಗದಿದ್ದರೂ. ಬದಲಾಗಿ ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾ ತಂಡಕ್ಕೆ ಫೈನಲ್​ಗೇರುವ ಸುವರ್ಣಾವಕಾಶ ಒಲಿದು ಬರಲಿದೆ.

ಹೀಗಾದರೆ ಆಸ್ಟ್ರೇಲಿಯಾ ಮನೆಗೆ, ಶ್ರೀಲಂಕಾ ಫೈನಲ್​ಗೆ!

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಜನವರಿ 29ರಿಂದ ಶುರುವಾಗಲಿದೆ. ಈ ಸರಣಿಗೆ ಶ್ರೀಲಂಕಾ ಆತಿಥ್ಯ ವಹಿಸುತ್ತಿದೆ. ಇಲ್ಲಿ ಆಸ್ಟ್ರೇಲಿಯಾ ತಂಡವನ್ನು 2-0 ಅಂತರದಿಂದ ಸೋಲಿಸಿದರೆ ಶ್ರೀಲಂಕಾ ತಂಡವು ಗೆಲುವಿನ ಶೇಕಡವಾರು 53.85 ಪಡೆಯಲಿದೆ. ಆಗ ಎರಡೂ ಪಂದ್ಯಗಳನ್ನೂ ಕಳೆದುಕೊಂಡರೆ ಆಸೀಸ್​ ಗೆಲುವಿನ ಶೇಕಡವಾರು 63.73ರಿಂದ 57.02ಕ್ಕೆ ಕುಸಿಯಲಿದೆ. ಹೀಗಿದ್ದಾಗ ಶ್ರೀಲಂಕಾ ಫೈನಲ್ ಪ್ರವೇಶಿಸಲು ಅರ್ಹತೆ ಪಡೆಯುವುದಿಲ್ಲ. ಅದಕ್ಕಾಗಿ ಮತ್ತೊಂದು ಪವಾಡ ನಡೆಯಬೇಕು. ಸ್ಲೋ ಓವರ್ ರೇಟ್‌ನಿಂದಾಗಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧದ 2 ಟೆಸ್ಟ್‌ಗಳಲ್ಲಿ ಒಟ್ಟು 8 ಅಂಕ ಕಳೆದುಕೊಳ್ಳಬೇಕು. ಆಗ ಶ್ರೀಲಂಕಾಗೆ ಸುವರ್ಣಾವಕಾಶ ಒಲಿದು ಬರಲಿದೆ. ಹೀಗಾದಾಗ, ಗೆಲುವಿನ ಶೇಕಡವಾರಿನಲ್ಲಿ ಆಸೀಸ್ ತಂಡವನ್ನು ಹಿಂದಿಕ್ಕುವ ಅವಕಾಶ ಪಡೆಯಲಿದೆ. ಆದರೆ, ಲಂಕಾ ತಮ್ಮ ಎರಡೂ ಟೆಸ್ಟ್‌ಗಳನ್ನು ಗೆದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ.

ಹಿಂದೆ ಅಂಕ ಕಳೆದುಕೊಂಡಿದ್ದ ತಂಡಗಳು

ಇಂಗ್ಲೆಂಡ್ ವಿರುದ್ಧ 2023ರ ಆಶಸ್‌ನ ನಾಲ್ಕನೇ ಟೆಸ್ಟ್ ನಂತರ ಆಸ್ಟ್ರೇಲಿಯಾ ಒಮ್ಮೆ 10 ಅಂಕಗಳನ್ನು ಕಳೆದುಕೊಂಡಿತ್ತು. ಅದೇ ಸರಣಿಯಲ್ಲಿ ಇಂಗ್ಲೆಂಡ್ 2 ಪಂದ್ಯಗಳಲ್ಲಿ ಒಟ್ಟು 19 ಅಂಕಗಳನ್ನು ಕಳೆದುಕೊಂಡಿತ್ತು. ಕಳೆದ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧವೂ 6 ಅಂಕಗಳನ್ನು ಕಡಿತಗೊಳಿಸಲಾಗಿತ್ತು. ಹಾಗಾಗಿ 2 ಪಂದ್ಯ ಸೋಲುವುದರ ಜೊತೆಗೆ ಸ್ಲೋ ಓವರ್​​ ರೇಟ್​ನಿಂದ ಆಸೀಸ್ ತಂಡ 8 ಅಂಕ ಕಳೆದುಕೊಂಡರೆ, ಶ್ರೀಲಂಕಾ ತಂಡ ಫೈನಲ್ ಪ್ರವೇಶಿಸಬಹುದು. ಆದರೆ ಇದು ಅಸಾಧ್ಯ. ಇದಕ್ಕಾಗಿ ಪವಾಡವೇ ನಡೆಯಬೇಕು.

ಪ್ಯಾಟ್ ಕಮಿನ್ಸ್ ಅಲಭ್ಯ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ನಿಯಮಿತ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯರಾಗಲಿದ್ದಾರೆ. ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ತನ್ನ ಪತ್ನಿಯೊಂದಿಗೆ ಇರಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.

Whats_app_banner