ಅಂಡರ್-19 ವಿಶ್ವಕಪ್ ಚಾಂಪಿಯನ್ ಆಸೀಸ್ಗೆೆ ದೊರೆತ ಬಹುಮಾನವೆಷ್ಟು; ರನ್ನರ್ಅಪ್ ಭಾರತಕ್ಕೆ ಸಿಕ್ಕಿದ್ದೆಷ್ಟು?
U19 World Cup 2024 Prize Money: ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ ಮತ್ತು ರನ್ನರ್ಅಪ್ ಆದ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತವೆಷ್ಟು? ಇಲ್ಲಿದೆ ವಿವರ.
ಅಂಡರ್-19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಹಿರಿಯ ಆಟಗಾರರಿಗೆ ಸೋಲುಣಿಸಿದಂತೆ ಆಸೀಸ್ಗೆ ಸಿಕ್ಕ ನಾಲ್ಕನೇ ಟ್ರೋಫಿಯಾಗಿದೆ. ಮತ್ತೊಂದೆಡೆ 6ನೇ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತ, 79 ರನ್ಗಳ ಅಂತರದಿಂದ ಸೋತು ಪ್ರಶಸ್ತಿ ಕೈಚೆಲ್ಲಿತು. ಇತ್ತ ಆಸ್ಟ್ರೇಲಿಯಾ 2012, 2018ರಲ್ಲಿ ಭಾರತದ ಎದುರಿನ ಸೋಲಿನ ಸೇಡನ್ನು ಆಸೀಸ್ ತೀರಿಸಿಕೊಂಡಿದೆ.
ಇದರೊಂದಿಗೆ ಭಾರತದ ಆರನೇ ಟ್ರೋಫಿ ಕನಸು ಭಗ್ನಗೊಂಡಿದ್ದಲ್ಲದೆ, 2023ರ ಏಕದಿನ ವಿಶ್ವಕಪ್ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಲೂ ವಿಫಲವಾಯಿತು. ಹಾಗಾದರೆ ಗೆದ್ದ ಆಸ್ಟ್ರೇಲಿಯಾ ಮತ್ತು ರನ್ನರ್ಅಪ್ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಮೊತ್ತವೆಸ್ಟು? ಇಲ್ಲಿದೆ ವಿವರ.
ಯಾರಿಗೆಷ್ಟು ಸಿಗಲಿದೆ ಬಹುಮಾನದ ಮೊತ್ತ?
2024ರ ಅಂಡರ್-19 ವಿಶ್ವಕಪ್ ಟೂರ್ನಿಯ ಒಟ್ಟಾರೆ ಬಹುಮಾನದ ಮೊತ್ತ 1.5 ಮಿಲಿಯನ್ ಡಾಲರ್. ಭಾರತೀಯ ಕರೆನ್ಸಿಯಲ್ಲಿ 12.50 ಕೋಟಿಗೂ ಹೆಚ್ಚು. ಆದರೆ ವಿಜೇತರಿಗೆ ಈ ಒಟ್ಟಾರೆ ಬಹುಮಾನದ ಮೊತ್ತದಲ್ಲಿ ಶೇ 40 ರಿಂದ 50 ರಷ್ಟು ಪಾಲು ಸಿಗಲಿದೆ. ರನ್ನರ್ಅಪ್ ತಂಡಕ್ಕೆ 20-30ರಷ್ಟು ಪಾಲು ಸಿಗಲಿದೆ. ಸೆಮಿಫೈನಲ್ನಲ್ಲಿ ಸೋತ ತಂಡಗಳು ಸಣ್ಣ ಸಮಾಧಾನಕರ ಬಹುಮಾನ ಪಡೆಯಲಿವೆ. (ಮಾಹಿತಿ - ICC ವೆಬ್ಸೈಟ್)
ಬೆನೋನಿಯ ವಿಲೋಮೂರ್ ಪಾರ್ಕ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ, ನಿಗದಿತ 50 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಇದು ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಫೈನಲ್ನಲ್ಲಿ ಕಲೆ ಹಾಕಿದ ಅಧಿಕ ಮೊತ್ತ ಎಂಬ ದಾಖಲೆಗೆ ಪಾತ್ರವಾಗಿದೆ. ಈ ಗುರಿ ಬೆನ್ನಟ್ಟಿದ ಭಾರತ 174 ರನ್ ಗಳಿಸಲಷ್ಟೇ ಶಕ್ತವಾಯಿತು. 79 ರನ್ಗಳ ಅಂತರದಿಂದ ಪ್ರತಿಸ್ಪರ್ಧಿ ಎದುರು ಶರಣಾಯಿತು.
ಅತಿ ಹೆಚ್ಚು ಟ್ರೋಫಿ ಗೆದ್ದ ತಂಡಗಳು
ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಭಾರತ ತಂಡವಾಗಿದೆ. ಒಟ್ಟು _ ಬಾರಿ ವಿಶ್ವಕಪ್ ಗೆದ್ದು ದಾಖಲೆ ಬರೆದಿದೆ. 2000, 2008, 2012, 2018, 2022, _ ಟ್ರೋಫಿಗೆ ಮುತ್ತಿಕ್ಕಿದೆ. ಅಲ್ಲದೆ, _ ಬಾರಿ ಫೈನಲ್ನಲ್ಲಿ ಸೋತು ರನ್ನರ್ ಅಪ್ ಆಗಿದೆ. ಎರಡನೇ ಯಶಸ್ವಿ ತಂಡ ಆಸ್ಟ್ರೇಲಿಯಾ ಆಗಿದೆ. ಒಟ್ಟು _ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪಾಕಿಸ್ತಾನ ಎರಡು ಸಲ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ತಲಾ 1 ಸಲ ಚಾಂಪಿಯನ್ ಆಗಿವೆ.
ಫೈನಲ್ನಲ್ಲಿ ಕಣಕ್ಕಿಳಿದ ಆಸ್ಟ್ರೇಲಿಯಾ 11ರ ಬಳಗ
ಹ್ಯಾರಿ ಡಿಕ್ಸನ್, ಸ್ಯಾಮ್ ಕಾನ್ಸ್ಟಾಸ್, ಹಗ್ ವೀಬ್ಜೆನ್ (ನಾಯಕ), ಹರ್ಜಸ್ ಸಿಂಗ್, ರಿಯಾನ್ ಹಿಕ್ಸ್ (ವಿಕೆಟ್ ಕೀಪರ್), ಆಲಿವರ್ ಪೀಕ್, ರಾಫ್ ಮ್ಯಾಕ್‌ಮಿಲನ್, ಚಾರ್ಲಿ ಆಂಡರ್ಸನ್, ಟಾಮ್ ಸ್ಟ್ರಾಕರ್, ಮಾಹ್ಲಿ ಬಿಯರ್ಡ್‌ಮ್ಯಾನ್, ಕ್ಯಾಲಮ್ ವಿಡ್ಲರ್.
ಫೈನಲ್ನಲ್ಲಿ ಕಣಕ್ಕಿಳಿದ ಭಾರತ 11ರ ಬಳಗ
ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಉದಯ್ ಸಹರಾನ್(ಸಿ), ಪ್ರಿಯಾಂಶು ಮೊಲಿಯಾ, ಸಚಿನ್ ದಾಸ್, ಅರವೆಲ್ಲಿ ಅವನೀಶ್(ಪ), ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ, ಸೌಮಿ ಪಾಂಡೆ