ಭಾರತ ಪ್ರಕಟಿಸಿದ ತಂಡವೇ ಅಂತಿಮವಲ್ಲ; ರಿಂಕು ಸಿಂಗ್, ರಾಹುಲ್ ಸೇರಿ ಅವಕಾಶ ವಂಚಿತ ಆಟಗಾರರೂ ತಂಡ ಸೇರಬಹುದು!; ಅದ್ಹೇಗೆ?-how rinku singh kl rahul can still make it to indias t20 world cup squad team india can make changes to their squad prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ಪ್ರಕಟಿಸಿದ ತಂಡವೇ ಅಂತಿಮವಲ್ಲ; ರಿಂಕು ಸಿಂಗ್, ರಾಹುಲ್ ಸೇರಿ ಅವಕಾಶ ವಂಚಿತ ಆಟಗಾರರೂ ತಂಡ ಸೇರಬಹುದು!; ಅದ್ಹೇಗೆ?

ಭಾರತ ಪ್ರಕಟಿಸಿದ ತಂಡವೇ ಅಂತಿಮವಲ್ಲ; ರಿಂಕು ಸಿಂಗ್, ರಾಹುಲ್ ಸೇರಿ ಅವಕಾಶ ವಂಚಿತ ಆಟಗಾರರೂ ತಂಡ ಸೇರಬಹುದು!; ಅದ್ಹೇಗೆ?

India T20 Squad 2024 : ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾಗಿದ್ದರೂ ಇದು ಅಂತಿಮವಲ್ಲ. ಕೆಎಲ್ ರಾಹುಲ್, ರಿಂಕು ಸಿಂಗ್, ಶುಭ್ಮನ್ ಗಿಲ್ ಸೇರಿ ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಅವಕಾಶ ಇದೆ. ಹೇಗಂತೀರಾ ಇಲ್ಲಿದೆ ಮಾಹಿತಿ.

ಭಾರತ ಪ್ರಕಟಿಸಿದ ತಂಡವೇ ಅಂತಿಮವಲ್ಲ; ರಿಂಕು ಸಿಂಗ್, ರಾಹುಲ್ ಸೇರಿ ಅವಕಾಶ ವಂಚಿತ ಆಟಗಾರರೂ ತಂಡ ಸೇರಬಹುದು
ಭಾರತ ಪ್ರಕಟಿಸಿದ ತಂಡವೇ ಅಂತಿಮವಲ್ಲ; ರಿಂಕು ಸಿಂಗ್, ರಾಹುಲ್ ಸೇರಿ ಅವಕಾಶ ವಂಚಿತ ಆಟಗಾರರೂ ತಂಡ ಸೇರಬಹುದು

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಜೂನ್ 1 ರಿಂದ ಮೆಗಾ ಟೂರ್ನಿ ಪ್ರಾರಂಭವಾಗಲಿದೆ. ಅದಕ್ಕಾಗಿ ಭಾರತದ 15 ಸದಸ್ಯರು ಸನ್ನದ್ದಗೊಂಡಿದ್ದಾರೆ. ಆದರೆ ತಂಡ ಪ್ರಕಟವಾದ ಬೆನ್ನಲ್ಲೇ ಕೆಲ ಆಟಗಾರರಿಗೆ ಅವಕಾಶ ನೀಡದಿರುವುದಕ್ಕೆ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟರ್​​ಗಳು ತೀವ್ರ ಬೇಸರ ಹೊರ ಹಾಕಿದ್ದಾರೆ. ಅದರಲ್ಲೂ ಕೆಎಲ್ ರಾಹುಲ್, ಶುಭ್ಮನ್ ಗಿಲ್, ರಿಂಕು ಸಿಂಗ್ ಸೇರಿದಂತೆ ಪ್ರಮುಖರಿಗೆ ಬಿಸಿಸಿಐ ಸ್ಥಾನ ನೀಡದಿರುವುದಕ್ಕೆ ಆಕ್ರೋಶ ಹೆಚ್ಚಾಗಿದೆ. ಆದರೆ, ಈ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಇನ್ನೂ ಅವಕಾಶ ಇದೆ. ಆದರೆ ಪ್ರಸ್ತುತ ಪ್ರಕಟಿಸಿರುವ ತಂಡವೇ ಅಂತಿಮವಲ್ಲ. ಇನ್ನೂ ಬದಲಾವಣೆ ಕಾಣಬಹುದು.

ಹೌದು, ಈಗ ಅವಕಾಶ ವಂಚಿತರಾದ ಆಟಗಾರರಿಗೆ ಮತ್ತೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನೂ ಸಮಯ ಇದೆ. ಏಪ್ರಿಲ್ 30ರಂದು ಭಾರತ ತಂಡ ಪ್ರಕಟವಾಯಿತು. ರೋಹಿತ್​ ಶರ್ಮಾ ನಾಯಕನಾಗಿದ್ದು, ಯಶಸ್ವಿ ಜೈಸ್ವಾಲ್ ಅವರ ಜೊತೆಗಾರನಾಗಲಿದ್ದಾರೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ತಂಡದಲ್ಲಿದ್ದರೆ, ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ. ಹಾರ್ದಿಕ್ ಪಾಂಡ್ಯ-ಶಿವಂ ದುಬೆ ವೇಗದ ಆಲ್​ರೌಂಡರ್​ಗಳಾಗಿದ್ದಾರೆ. ಸ್ಪಿನ್ ಆಲ್​ರೌಂಡರ್​ಗಳಾಗಿ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಸ್ಪೆಷಲಿಸ್ಟ್ ಸ್ಪಿನ್ನರ್​​ಗಳಾಗಿದ್ದರೆ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಸಿರಾಜ್​ ವೇಗದ ಬೌಲ್​​ಗಳಾಗಿದ್ದಾರೆ.

ಮೇ 25ರೊಳಗೆ ತಂಡದಲ್ಲಿ ಬದಲಾವಣೆ ಮಾಡಬಹುದು

ನಿಜ, ಭಾರತ ತಂಡ ಮಾತ್ರವಲ್ಲ, ಎಲ್ಲಾ ತಂಡಗಳಲ್ಲೂ ಬದಲಾವಣೆಗೆ ಅವಕಾಶ ಇದೆ. ಮೇ 25ರೊಳಗೆ 15 ಸದಸ್ಯರ ತಂಡದಲ್ಲಿ ಬದಲಾವಣೆ ಮಾಡಬಹುದು. ಹೀಗಾಗಿ ಅಭಿಮಾನಿಗಳು ಸಹ ಕೆಲ ಬದಲಾವಣೆಗಳನ್ನು ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಟಿ20 ವಿಶ್ವಕಪ್ ಪ್ರಾರಂಭಕ್ಕೆ ಒಂದು ವಾರ ಮುನ್ನ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಗಾಯದ ಸಮಸ್ಯೆ, ಅನಾರೋಗ್ಯ ಅಥವಾ ಇತರ ಕಾರಣಗಳಿಗಾಗಿ ಬದಲಿ ಆಟಗಾರರನ್ನು ಆಯ್ಕೆ ಮಾಡಬಹುದು. ಆದರೆ ಹೀಗೆ ಮಾಡಬೇಕೆಂದರೆ ಐಸಿಸಿಯ ಟೆಕ್ನಿಕಲ್ ಕಮಿಟಿಯ ಅನುಮತಿ ಪಡೆಯುವುದು ಕಡ್ಡಾಯ. ಈ ಕಾರಣಕ್ಕಾಗಿ ನಾಲ್ವರನ್ನು ಮೀಸಲು ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಸದ್ಯ ತಂಡಕ್ಕೆ ಆಯ್ಕೆಯಾದ ಆಟಗಾರರು ಉಳಿದ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದರೆ ಮತ್ತೆ ಅವಕಾಶ ಕಳೆದುಕೊಳ್ಳಬಹುದು. ಅವಕಾಶ ವಂಚಿತ ಆಟಗಾರರು ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳದೆ ಅಬ್ಬರಿಸಿ ಸೆಲೆಕ್ಟರ್ಸ್​ಗೆ ಸಂದೇಶ ರವಾನಿಸಬೇಕು. ಹೀಗಾಗಿ ಮೆಗಾ ಟೂರ್ನಿ ವಿಶ್ವಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಅಚ್ಚರಿ ಬದಲಾವಣೆಗಳು ಕಂಡು ಬರುವ ಸಾಧ್ಯತೆ ಇದೆ. ಅದರಂತೆ ಅಂತಿಮ ಕ್ಷಣದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದುನೋಡೋಣ. ಮೇ 21ರಂದು ಟೀಮ್ ಇಂಡಿಯಾ ಯುಎಸ್​ಎಗೆ ಪ್ರಯಾಣ ಬೆಳೆಸಲಿದೆ. ಐಪಿಎಲ್ ಪ್ಲೇಆಫ್ ಆಡದ ಆಟಗಾರರನ್ನು ಹೊರತುಪಡಿಸಿ ಉಳಿದವರು ವಿಮಾನ ಏರಲಿದ್ದಾರೆ.

ಭಾರತದ ಟಿ20 ವಿಶ್ವಕಪ್ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಮೀಸಲು ಆಟಗಾರರು - ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್