ಹೈದ್ರಾಬಾದ್, ಅಹ್ಮದಾಬಾದ್​ನಲ್ಲಿ ಮುಸ್ಲಿಮರೇ ಹೆಚ್ಚು, ಪಾಕಿಸ್ತಾನಕ್ಕೆ ಬೆಂಬಲ ಖಚಿತ: ಪಾಕ್ ಮಾಜಿ ಕ್ರಿಕೆಟಿಗ ಹೇಳಿಕೆ, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಹೈದ್ರಾಬಾದ್, ಅಹ್ಮದಾಬಾದ್​ನಲ್ಲಿ ಮುಸ್ಲಿಮರೇ ಹೆಚ್ಚು, ಪಾಕಿಸ್ತಾನಕ್ಕೆ ಬೆಂಬಲ ಖಚಿತ: ಪಾಕ್ ಮಾಜಿ ಕ್ರಿಕೆಟಿಗ ಹೇಳಿಕೆ, Video

ಹೈದ್ರಾಬಾದ್, ಅಹ್ಮದಾಬಾದ್​ನಲ್ಲಿ ಮುಸ್ಲಿಮರೇ ಹೆಚ್ಚು, ಪಾಕಿಸ್ತಾನಕ್ಕೆ ಬೆಂಬಲ ಖಚಿತ: ಪಾಕ್ ಮಾಜಿ ಕ್ರಿಕೆಟಿಗ ಹೇಳಿಕೆ, VIDEO

Mushtaq Ahmed, India vs Pakistan: ಬಾಬರ್​ ಅಜಮ್​ ನೇತೃತ್ವತದ ತಂಡವು ಭಾರತದಲ್ಲಿ ವಿಶೇಷವಾಗಿ ಹೈದರಾಬಾದ್​-ಅಹ್ಮದಾಬಾದ್​​ನಂತಹ ನಗರಗಳಲ್ಲಿ ದೊಡ್ಡ ಬೆಂಬಲ ಪಡೆಯಲಿದೆ. ಅಲ್ಲಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವುದೇ ಇದಕ್ಕೆ ಕಾರಣ ಎಂದು ಪಾಕ್ ಮಾಜಿ ಕ್ರಿಕೆಟಿಗ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.

ಹೈದ್ರಾಬಾದ್, ಅಹ್ಮದಾಬಾದ್​ನಲ್ಲಿ ಮುಸ್ಲಿಮರೇ ಹೆಚ್ಚು, ಪಾಕಿಸ್ತಾನಕ್ಕೆ ಬೆಂಬಲ ಖಚಿತ: ಪಾಕ್ ಮಾಜಿ ಕ್ರಿಕೆಟಿಗ ಹೇಳಿಕೆ
ಹೈದ್ರಾಬಾದ್, ಅಹ್ಮದಾಬಾದ್​ನಲ್ಲಿ ಮುಸ್ಲಿಮರೇ ಹೆಚ್ಚು, ಪಾಕಿಸ್ತಾನಕ್ಕೆ ಬೆಂಬಲ ಖಚಿತ: ಪಾಕ್ ಮಾಜಿ ಕ್ರಿಕೆಟಿಗ ಹೇಳಿಕೆ

ಅಕ್ಟೋಬರ್​ 5ರಿಂದ ನವೆಂಬರ್ 19ರವರೆಗೂ ಭಾರತದ 10 ನಗರಗಳಲ್ಲಿ ನಡೆಯಲಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್​ 2023ರ ಆವೃತ್ತಿಯಲ್ಲಿ (ICC ODI World Cup 2023) ಪಾಲ್ಗೊಳ್ಳಲು ಪಾಕಿಸ್ತಾನ (Pakistan Cricket Team), ಭಾರತಕ್ಕೆ ಬಂದಿಳಿದಿದೆ. 2016ರ ನಂತರ ಅಂದರೆ 7 ವರ್ಷಗಳ ಬಳಿಕ ಪಾಕಿಸ್ತಾನ, ಭಾರತಕ್ಕೆ ಆಗಮಿಸಿದೆ. ಸೆಪ್ಟೆಂಬರ್​ 27ರ ಸಂಜೆ ಹೈದರಾಬಾದ್​ಗೆ ಬಂದಿಳಿದ ಮೆನ್ ಇನ್ ಗ್ರೀನ್ ತಂಡಕ್ಕೆ ಭವ್ಯ ಸ್ವಾಗತ ದೊರೆಯಿತು.

ನಾಯಕ ಬಾಬರ್​ ಅಜಮ್, ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್, ವೇಗಿ ಶಾಹೀನ್ ಅಫ್ರಿದಿ ಸೇರಿದಂತೆ ಪಾಕಿಸ್ತಾನ ಕ್ರಿಕೆಟಿಗರು, ಈ ಭವ್ಯ ಸ್ವಾಗತಕ್ಕೆ ಮಾರು ಹೋಗಿದ್ದಾರೆ. ಪಾಕಿಸ್ತಾನ ತಂಡವು ಹೈದರಾಬಾದ್​​ನಲ್ಲಿ ಇನ್ನೂ 10 ದಿನಗಳ ಕಾಲ ತಂಗಲಿದೆ. ಅಕ್ಟೋಬರ್​ 6 ಮತ್ತು 10ರಂದು ಕ್ರಮವಾಗಿ ಮೊದಲ ಎರಡು ಪಂದ್ಯಗಳಲ್ಲಿ ನೆದರ್ಲೆಂಡ್ಸ್​ ಮತ್ತು ಶ್ರೀಲಂಕಾ ತಂಡಗಳನ್ನು ಪಾಕಿಸ್ತಾನ ಎದುರಿಸಲಿದೆ.

ಈ ಎರಡು ಪಂದ್ಯಗಳ ನಂತರ ಪಾಕಿಸ್ತಾನ ತನ್ನ 3ನೇ ಪಂದ್ಯಕ್ಕೆ ಅಹ್ಮದಾಬಾದ್​​ಗೆ ಪ್ರಯಾಣ ಬೆಳೆಸಲಿದೆ. ಅಂದು ಪ್ರವಾಸಿ ತಂಡವು, ವಿಶ್ವದ ನಂಬರ್​ 1 ತಂಡ ಭಾರತವನ್ನು ಎದುರಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳ ಸಾಮರ್ಥ್ಯ ಹೊಂದಿರುವ ಐಕಾನಿಕ್ ನರೇಂದ್ರ ಮೋದಿ ಮೈದಾನದಲ್ಲಿ ಹೈವೋಲ್ಟೇಜ್​ ಕದನ ನಡೆಯಲಿದೆ. ಆದರೆ, ಈ ಪಂದ್ಯಕ್ಕೆ ಹೈದರಾಬಾದ್ ಮತ್ತು ಅಹ್ಮದಾಬಾದ್ ನಗರಗಳ ಮುಸ್ಲಿಮರು ಪಾಕಿಸ್ತಾನಕ್ಕೆ ಬೆಂಬಲ ನೀಡಲಿದ್ದಾರಂತೆ.

ಆಘಾತಕಾರಿ ಹೇಳಿಕೆ ನೀಡಿದ ಮುಷ್ತಾಕ್ ಅಹ್ಮದ್

ಏಕದಿನ ವಿಶ್ವಕಪ್​​ನಲ್ಲಿ ಪಾಕಿಸ್ತಾನದ ಅಭಿಯಾನದ ಆರಂಭಕ್ಕೂ ಮುನ್ನ ಪಾಕ್ ಮಾಜಿ ಸ್ಪಿನ್ನರ್​ ಮುಷ್ತಾಕ್ ಅಹ್ಮದ್, ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಇಮ್ರಾನ್ ಖಾನ್ ನಾಯಕತ್ವದಲ್ಲಿ 1992ರ ವಿಶ್ವಕಪ್ ಗೆದ್ದ ಪಾಕಿಸ್ತಾನಿ ತಂಡದ ಭಾಗವಾಗಿದ್ದ 53 ವರ್ಷದ ಕ್ರಿಕೆಟಿಗ, ಬಾಬರ್​ ಅಜಮ್​ ನೇತೃತ್ವತದ ತಂಡವು ಭಾರತದಲ್ಲಿ ವಿಶೇಷವಾಗಿ ಹೈದರಾಬಾದ್​-ಅಹ್ಮದಾಬಾದ್​​ನಂತಹ ನಗರಗಳಲ್ಲಿ ಅಭಿಮಾನಿಗಳಿಂದ ದೊಡ್ಡ ಬೆಂಬಲ ಪಡೆಯಲಿದೆ. ಅಲ್ಲಿ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವುದೇ ಇದಕ್ಕೆ ಕಾರಣ ಎಂದಿದ್ದಾರೆ.

ಮುಸ್ಲಿಮರಿಂದ ಅಪಾರ ಬೆಂಬಲ ಎಂದ ಅಹ್ಮದ್

ಗುರುವಾರ (ಸೆಪ್ಟೆಂಬರ್​ 28) ಪಾಕಿಸ್ತಾನದಲ್ಲಿ ಸಮ್ಮಾ ಟಿವಿ ಶೋನಲ್ಲಿ ಮಾತನಾಡಿದ ಮುಷ್ತಾಕ್ ಅಹ್ಮದ್, 52 ಟೆಸ್ಟ್​ ಮತ್ತು 144 ಏಕದಿನ ಪಂದ್ಯಗಳಲ್ಲಿ ಅನುಭವಿ. ಅಹ್ಮದಾಬಾದ್​ ಮತ್ತು ಹೈದರಾಬಾದ್​ನಂತಹ ನಗರಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದೆ. ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ ತಂಡಕ್ಕೆ ಮುಸ್ಲಿಂ ಜನರಿಂದ ಅಗಾಧ ಬೆಂಬಲ ದೊರೆಯಿತು ಎಂದು ಮುಷ್ತಾಕ್ ಹೇಳಿದ್ದಾರೆ. ಅಲ್ಲಿರುವ ಮುಸ್ಲಿಮರಿಂದ ಪಾಕಿಸ್ತಾನಕ್ಕೆ ಅಪಾರ ಬೆಂಬಲ ಸಿಗಲಿದೆ ಎಂದಿದ್ದಾರೆ.

ಅಹ್ಮದಾಬಾದ್ ಮತ್ತು ಹೈದರಾಬಾದ್ ಎರಡು ನಗರಗಳಲ್ಲಿ ಹೆಚ್ಚು ಮುಸ್ಲಿಮರು ಇದ್ದಾರೆ. ಅವರಲ್ಲಿ ಹಲವರು ಪಾಕಿಸ್ತಾನ ತಂಡವನ್ನು ಬೆಂಬಲಿಸುತ್ತಾರೆ. ಹಾಗಾಗಿಯೇ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ ತಂಡಕ್ಕೆ ಉತ್ತಮ ಬೆಂಬಲ ಸಿಕ್ಕಿತು. ಮುಂದಿನ ಪಂದ್ಯಗಳಿಗೂ ಪಾಕಿಸ್ತಾನ ತಂಡಕ್ಕೆ ಉತ್ತಮ ಸಪೋರ್ಟ್​ ಸಿಗಲಿದೆ ಎಂದು ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಬಲ ನಿರೀಕ್ಷಿಸುವುದು ಕಷ್ಟ ಎಂದ ಹಫೀಜ್ ಇಮ್ರಾನ್

ಸಮ್ಮಾ ಟಿವಿಯ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ಚರ್ಚೆಯ ಭಾಗವನ್ನು ಸೇರಿಸಲಾಗಿಲ್ಲ. ಆದರೆ, ಚರ್ಚೆಯ ಭಾಗವಾಗಿದ್ದ ಪ್ಯಾನೆಲಿಸ್ಟ್‌ಗಳು ಮಾಡಿದ ಇತರ ಟೀಕೆಗಳು ಒಳಗೊಂಡಿದೆ. ಪಾಕಿಸ್ತಾನಿ ಕ್ರಿಕೆಟ್ ವಿಶ್ಲೇಷಕ ಹಫೀಜ್ ಇಮ್ರಾನ್, ಹೈದರಾಬಾದ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಜನರು ಹಾಜರಿದ್ದಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟ. ಆದರೆ, ಕ್ರೀಡಾಂಗಣದ ಒಳಗೆ ಸನ್ನಿವೇಶಗಳು ವಿಭಿನ್ನವಾಗಿರಲಿದೆ ಎಂದು ಹೇಳಿದ್ದಾರೆ.

ಇದು ತಂದಿಕ್ಕುವ ಪ್ರಯತ್ನ ಎಂದ ನೆಟ್ಟಿಗರು

ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವೇಶಿಸಿದಾಗ ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್ ಭಾರತವನ್ನು ಶತ್ರು ರಾಷ್ಟ್ರ ಎಂದು ಹೇಳಿದ್ದರು. ಶತ್ರು ದೇಶದಲ್ಲಿ ಕ್ರಿಕೆಟ್ ಆಡಲು ಹೋಗುವಾಗ ಜಾಗರೂಕರಾಗಿರಬೇಕು. ನಾವು ಎಲ್ಲಿದ್ದೇವೆ ಎಂದು ತಿಳಿದುಕೊಂಡು ಆಡಬೇಕು ಎಂದಿದ್ದರು. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುಷ್ತಾಕ್ ಅಹ್ಮದ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಹಿಂದೂ-ಮುಸ್ಲಿಮರ ನಡುವೆ ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

Whats_app_banner