ಕನ್ನಡ ಸುದ್ದಿ  /  Cricket  /  I Am A Woman Like Your Mother Sister Dhanashree Verma Responds To Online Hate Over Viral Pic Yuzvendra Chahal Prs

ನಿಮ್ಮ ತಾಯಿ, ಸಹೋದರಿ, ಪತ್ನಿಯಂತೆ ನಾನೂ ಮಹಿಳೆ: ನೃತ್ಯ ನಿರ್ದೇಶಕನ ಜತೆಗಿನ ಫೋಟೋ ಟ್ರೋಲ್​ಗೆ ಧನಶ್ರೀ ಖಡಕ್ ಪ್ರತಿಕ್ರಿಯೆ

Dhanashree Verma: ನೃತ್ಯ ಸಂಯೋಜಕ ಪ್ರತೀಕ್ ಉಟೇಕರ್ ಅವರೊಂದಿಗಿನ ಫೋಟೋಗೆ ನಿಂದಿಸಿದ್ದ ಟ್ರೋಲಿಗರಿಗರ ವಿರುದ್ಧ ಯುಜ್ವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ ಕಿಡಿಕಾರಿದ್ದಾರೆ.

ನೃತ್ಯ ನಿರ್ದೇಶಕನ ಜತೆಗಿನ ಫೋಟೋ ಟ್ರೋಲ್​ಗೆ ಧನಶ್ರೀ ಖಡಕ್ ಪ್ರತಿಕ್ರಿಯೆ
ನೃತ್ಯ ನಿರ್ದೇಶಕನ ಜತೆಗಿನ ಫೋಟೋ ಟ್ರೋಲ್​ಗೆ ಧನಶ್ರೀ ಖಡಕ್ ಪ್ರತಿಕ್ರಿಯೆ

ನೃತ್ಯ ನಿರ್ದೇಶಕ ಪ್ರತೀಕ್ ಉಟೇಕರ್​​ ಅವರ ಜತೆಗಿನ ವೈರಲ್ ಫೋಟೋಗಾಗಿ ತಮ್ಮನ್ನು ಮತ್ತು ಪತಿ ಯುಜ್ವೇಂದ್ರ ಚಹಲ್ (Yuzvendra Chahal) ಅವರನ್ನು ಅಪಹಾಸ್ಯ ಮಾಡಿದ ಟ್ರೋಲರ್​​ಗಳಿಗೆ ಧನಶ್ರೀ ವರ್ಮಾ (Dhanashree Verma) ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಸ್ತುತ ಡ್ಯಾನ್ಸ್ ರಿಯಾಲಿಟಿ ಶೋ 'ಝಲಕ್‌ ದಿಖಲಾಜ'ನಲ್ಲಿ ಭಾಗವಹಿಸುತ್ತಿರುವ ಧನಶ್ರೀ ಅವರು, ಟ್ರೋಲ್‌ಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೌನ ಮುರಿದ ಚಹಲ್ ಪತ್ನಿ ಧನಶ್ರೀ

ಈ ಹಿಂದೆ ಟ್ರೋಲ್ ಮಾಡಿದ್ದು ತನ್ನ ಮೇಲೆ ಪರಿಣಾಮ ಬೀರಲಿಲ್ಲ. ಆದರೆ ಇತ್ತೀಚಿನ ಪೋಸ್ಟ್​​ಗಳ ನಕಾರಾತ್ಮಕತೆಯಿಂದ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಟ್ರೋಲ್ ಅಥವಾ ಮೀಮ್​​ಗಳು ನನ್ನ ಜೀವನದಲ್ಲಿ ಎಂದೂ ಪರಿಣಾಮ ಬೀರಿಲ್ಲ. ಆದರೆ ಏಕೆಂದರೆ ಟ್ರೋಲ್​​ಗಳನ್ನು ನಿರ್ಲಕ್ಷಿಸುವ ಮತ್ತು ಜೋರಾಗಿ ನಕ್ಕು ಸುಮ್ಮನಾಗುವ ಸಾಕಷ್ಟು ಪ್ರಬುದ್ಧತೆ ಇದೆ ಎಂದು ಹೇಳಿದ್ದಾರೆ.

ಈ ಬಾರಿಯ ಟ್ರೋಲ್​​​ಗಳು ನನ್ನ ಮೇಲೆ ಪರಿಣಾಮ ಬೀರುವಂತೆ ಮಾಡಿದೆ. ಅದಕ್ಕೆ ಕಾರಣ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿರುವುದು. ಆತ್ಮೀಯರೇ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿಮಗೆಲ್ಲರಿಗೂ ಸ್ವಾತಂತ್ರ್ಯ ಇರುವುದರಿಂದ ನೀವು ನಮ್ಮ ಮತ್ತು ನಮ್ಮ ಕುಟುಂಬಗಳ ಭಾವನೆಗಳನ್ನು ಮರೆತುಬಿಡುತ್ತೀರಿ ಅಥವಾ ನಿರ್ಲಕ್ಷಿಸುತ್ತೀರಿ. ನಾನು ನಂಬುತ್ತಿದ್ದ ಸಾಮಾಜಿಕ ಜಾಲತಾಣಗಳಿಂದ ಹೀಗಾಗುತ್ತಿರುವುದು ಬೇಸರವಾಗುತ್ತಿದೆ ಎಂದಿದ್ದಾರೆ.

ಸೋಷಿಯಲ್ ಮೀಡಿಯಾಗಳನ್ನು ಹೆಚ್ಚಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಆದರೆ, ಕಲಾವಿದೆಯಾಗಿರುವ ಕಾರಣ ಈ ವೇದಿಕೆಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿರುವ ಧನಶ್ರೀ, ಧನಾತ್ಮಕ ಅಂಶಗಳತ್ತ ಗಮನಹರಿಸಿ ಎಲ್ಲಾ ನಕಾರಾತ್ಮಕತೆಗೆ ಕಡಿವಾಣ ಹಾಕುವಂತೆ ಧನಶ್ರೀ ಅಭಿಮಾನಿಗಳಿಗೆ ವಿನಂತಿಸಿದ್ದಾರೆ. ಈ ವೇದಿಕೆಯಲ್ಲಿ ನಕರಾತ್ಮಕ ಅಂಶಗಳಿಗೆ ಹೆಚ್ಚು ಗಮನ ಹರಿಸುವುದನ್ನು ಕೈಬಿಡಿ ಎಂದು ಟ್ರೋಲರ್​​ಗಳಿಗೆ ಸಲಹೆ ನೀಡಿದ್ದಾರೆ.

ಜಾಲತಾಣಗಳಲ್ಲಿ ದ್ವೇಷ ಮತ್ತು ಅಸಂಗತತೆಯನ್ನು ದೊಡ್ಡ ಪ್ರಮಾಣದಲ್ಲಿ ಹರಡಲಾಗುತ್ತಿದೆ. ಸಾಮಾಜಿಕ ಮಾಧ್ಯಮವು ನನ್ನ ಕೆಲಸದ ಪ್ರಮುಖ ಭಾಗವಾಗಿದೆ. ನಾನು ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ನೀವು ಹೆಚ್ಚು ಸಂವೇದನಾಶೀಲರಾಗಿರಿ. ನಮ್ಮ ಪ್ರತಿಭೆ, ಕೌಶಲ್ಯದ ಮೇಲೆ ಕೇಂದ್ರೀಕರಿಸಿ ಎಂದು ವಿನಂತಿಸುತ್ತೇನೆ. ಏಕೆಂದರೆ ನಾವು ನಿಮ್ಮನ್ನು ಮನರಂಜಿಸುವುದೇ ನಮ್ಮ ಉದ್ದೇಶ ಎಂದು ಇನ್​ಸ್ಟಾ ಪೋಸ್ಟ್​​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.

ಆದ್ದರಿಂದ ನಿಮ್ಮ ತಾಯಿ, ನಿಮ್ಮ ಸಹೋದರಿ, ನಿಮ್ಮ ಸ್ನೇಹಿತೆ, ನಿಮ್ಮ ಹೆಂಡತಿಯಂತೆಯೇ ನಾನು ಕೂಡ ಮಹಿಳೆ ಎಂಬುದನ್ನು ಮರೆಯಬೇಡಿ. ಹೀಗೆ ಟ್ರೋಲ್ ಮಾಡುವುದುದು ನ್ಯಾಯೋಚಿತವಲ್ಲ. ಇದು ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ. ಯುಜ್ವೇಂದ್ರ ಅವರು ತುಂಬಾ ಬೆಂಬಲ ನೀಡುತ್ತಾರೆ. ರಿಯಾಲಿಟಿ ಶೋನಲ್ಲಿ ಭಾಗವಹಿಸುವಂತೆ ಸಪೋರ್ಟ್​ ಮಾಡಿದ್ದಾರೆ. ನಾವಿಬ್ಬರೂ ಪ್ರತಿಯೊಬ್ಬರನ್ನು ಬೆಂಬಲಿಸುತ್ತೇವೆ ಎಂದು ಧನಶ್ರೀ ಎಂದಿದ್ದಾರೆ.

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು ಧನಶ್ರೀ ಫೋಟೋ

ಭಾರತ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರ ಹೆಂಡತಿ ಧನಶ್ರೀ ವರ್ಮಾ ಅವರು ನೃತ್ಯ ನಿರ್ದೇಶಕ ಪ್ರತೀಕ್ ಉಟೇಕರ್​​ ಅವರೊಂದಿಗೆ ತೀರಾ ಕ್ಲೋಸ್​ ಕಾಣಿಸಿಕೊಂಡಿದ್ದ ಕಾರಣ ಟ್ರೋಲ್ ಆಗಿದ್ದರು. ಆಪ್ತವಾಗಿ ಕಾಣಿಸಿಕೊಂಡ ಕಾರಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಫೋಟೋ ನೋಡಿದ ಅಭಿಮಾನಿಗಳು ಸಂಸಾರ ಹಾಳು ಮಾಡುತ್ತಿದ್ದೀಯಾ ಎಂದು ಕಿಡಿಕಾರಿದ್ದರು.