ಸಿಎಸ್​ಕೆ ತೊರೆದು ಹೊಸ ಐಪಿಎಲ್ ತಂಡ ಕಟ್ಟಲು ಮುಂದಾದ್ರಾ ಎಂಎಸ್ ಧೋನಿ; ತಲೆಗೆ ಹುಳ ಬಿಟ್ಟ ಮಾಹಿ ಫೇಸ್​ಬುಕ್ ಪೋಸ್ಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್​ಕೆ ತೊರೆದು ಹೊಸ ಐಪಿಎಲ್ ತಂಡ ಕಟ್ಟಲು ಮುಂದಾದ್ರಾ ಎಂಎಸ್ ಧೋನಿ; ತಲೆಗೆ ಹುಳ ಬಿಟ್ಟ ಮಾಹಿ ಫೇಸ್​ಬುಕ್ ಪೋಸ್ಟ್

ಸಿಎಸ್​ಕೆ ತೊರೆದು ಹೊಸ ಐಪಿಎಲ್ ತಂಡ ಕಟ್ಟಲು ಮುಂದಾದ್ರಾ ಎಂಎಸ್ ಧೋನಿ; ತಲೆಗೆ ಹುಳ ಬಿಟ್ಟ ಮಾಹಿ ಫೇಸ್​ಬುಕ್ ಪೋಸ್ಟ್

MS Dhoni: ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಅವರು ಐಪಿಎಲ್​ನಲ್ಲಿ ನೂತನ ತಂಡ ಕಟ್ಟಲು ಮುಂದಾಗಿದ್ದಾರೆಯೇ? ಗೊಂದಲ ಸೃಷ್ಟಿಸುತ್ತದೆ ಅವರ ಫೇಸ್​ಬುಕ್​ ಪೋಸ್ಟ್.

ಸಿಎಸ್​ಕೆ ತೊರೆದು ಹೊಸ ಐಪಿಎಲ್ ತಂಡ ಕಟ್ಟಲು ಮುಂದಾದ್ರಾ ಎಂಎಸ್ ಧೋನಿ; ತಲೆಗೆ ಹುಳ ಬಿಟ್ಟ ಫೇಸ್​ಬುಕ್ ಪೋಸ್ಟ್
ಸಿಎಸ್​ಕೆ ತೊರೆದು ಹೊಸ ಐಪಿಎಲ್ ತಂಡ ಕಟ್ಟಲು ಮುಂದಾದ್ರಾ ಎಂಎಸ್ ಧೋನಿ; ತಲೆಗೆ ಹುಳ ಬಿಟ್ಟ ಫೇಸ್​ಬುಕ್ ಪೋಸ್ಟ್

2020ರ ಆಗಸ್ಟ್​ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ (MS Dhoni), ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ (IPL 2024) ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಇದೀಗ ಮಿಲಿಯನ್ ಡಾಲರ್ ಟೂರ್ನಿಗೂ ಗುಡ್​ಬೈ ಹೇಳುವ ಸಮಯ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ, ಮೇ 18ರಂದು ಆರ್​ಸಿಬಿ ವಿರುದ್ಧ ಆಡಿದ್ದೇ ಕೊನೆಯ ಐಪಿಎಲ್ ಪಂದ್ಯ ಹೇಳಲಾಗುತ್ತಿದೆ. ವಿಶ್ವದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಾಹಿ, ಆಗಾಗ್ಗೆ ಫೇಸ್​​ಬುಕ್​ನಲ್ಲಿ ಅಚ್ಚರಿಯ ಪೋಸ್ಟ್​ ಮೂಲಕ ಅಭಿಮಾನಿಗಳ ತಲೆಗೆ ಹುಳಬಿಡುತ್ತಾರೆ. ಈಗ ಅಂತಹದ್ದೇ ಪೋಸ್ಟ್​ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.

ಐಪಿಎಲ್ 2024 ಧೋನಿ ಪಾಲಿಗೆ ಕೊನೆಯದು ಎಂದು ಹೇಳಲಾಗುತ್ತಿದೆ. ಟೂರ್ನಿಯ ಆರಂಭದಲ್ಲಿ ಆರಂಭಿಕ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಅವರಿಗೆ ತನ್ನ ನಾಯಕತ್ವ ಹಸ್ತಾಂತರಿಸುವ ಮೂಲಕ ನಿವೃತ್ತಿಯ ಸುಳಿವನ್ನು ನೀಡುವ ಮೂಲಕ ಇದು ಕೊನೆಯ ಸೀಸನ್​ ಆಗಲಿದೆ ಎಂಬುದಕ್ಕೆ ಪುಷ್ಠಿ ನೀಡಿದ್ದರು. ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ತನ್ನ ಕೊನೆಯ ಐಪಿಎಲ್ ಪಂದ್ಯ ಆಡಬೇಕೆಂಬ ಆಸೆ ಹೊಂದಿದ್ದ ಮಾಹಿ, 2025ರ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ ಎಂಬುದನ್ನು ಹಲವು ಮೂಲಗಳು ಹೇಳುತ್ತಿವೆ. ಮೇ 18 ರಂದು ಜರುಗಿದ ಪ್ಲೇಆಫ್​ ಡಿಸೈಡರ್ ಪಂದ್ಯದಲ್ಲಿ ಸಿಎಸ್​ಕೆ ಸೋತು ಹೊರಬಿದ್ದ ನಂತರ ಮಾಹಿ ಎಲ್ಲೂ ಕಾಣಿಸಿಕೊಂಡಿಲ್ಲ.

ಅಭಿಮಾನಿಗಳ ಗೊಂದಲ ಹೆಚ್ಚಿಸಿದ ಸಿಎಸ್​ಕೆ ಮಾಜಿ ನಾಯಕ

ಜುಲೈ 7ರಂದು 42ನೇ ವರ್ಷಕ್ಕೆ ಕಾಲಿಡಲಿರುವ ಎಂಎಸ್, ಸಾಕಷ್ಟು ಇಂಜುರಿ ಸೇರಿದಂತೆ ಫಿಟ್​ನೆಸ್​ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲೂ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದೀಗ ಲಂಡನ್​ನಲ್ಲಿ ಸರ್ಜರಿ ಮಾಡಿಸಿಕೊಳ್ಳಲು ಸಜ್ಜಾಗಿದ್ದಾರೆ. ಹೀಗಾಗಿ ಮುಂದಿನ ವರ್ಷ ಅವರು ಆಡುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಆಡಿದರೂ ಚೆಪಾಕ್​ನಲ್ಲಿ ಸಿಎಸ್​ಕೆ ಅಭಿಮಾನಿಗಳ ಮುಂದೆ ಫೇರ್​ವೆಲ್ ಪಂದ್ಯವನ್ನಾಡಬಹುದು. ಈ ಎಲ್ಲದರ ನಡುವೆ ಧೋನಿ ಫೇಸ್‌ಬುಕ್ ಪೋಸ್ಟ್ ಕುತೂಹಲದ ಜೊತೆಗೆ ಗೊಂದಲ ಸೃಷ್ಟಿಸಿದೆ. ಆರ್​ಸಿಬಿ ವಿರುದ್ಧದ ಸವಾಲಿಗೆ ನೂತನ ತಂಡ ಕಟ್ಟಲು ಸಜ್ಜಾಗಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.

ಹೊಸ ತಂಡ ಕಟ್ಟುತ್ತೇನೆ ಎಂದ ಎಂಎಸ್ ಧೋನಿ

ಎಂಎಸ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ತೀರಾ ಅಂದರೆ, ತೀರಾ ಕಡಿಮೆ. ಪೋಸ್ಟ್​ ಮಾಡುವುದೇ ಅಪರೂಪಕ್ಕೆ ಒಮ್ಮೆ. ಇಂತಹ ವ್ಯಕ್ತಿ ಮೇ 22ರ 11.58ರ ಸುಮಾರಿಗೆ ಫೇಸ್​ಬುಕ್​ ಗೋಡೆಯಲ್ಲಿ ಅಚ್ಚರಿಯ ಪೋಸ್ಟ್​ ಹಾಕಿದ್ದು, ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ. ಅಭಿಮಾನಿಗಳಂತೂ ಏನೂ ತಿಳಿಯಲಾಗದೆ ತಲೆ ಕೆರೆದುಕೊಳ್ಳುತ್ತಿದ್ದಾರೆ. 'ಮುಂದಕ್ಕೆ ಸಾಗುವ ಸಮಯ ಬಂದಿದೆ. ಮುಖ್ಯ ಎನಿಸುವಂತಹದ್ದನ್ನು ಮಾಡುವ ಸಮಯ ಇದಾಗಿದೆ. ನಾನು ನನ್ನ ಸ್ವಂತ ತಂಡವನ್ನು ಪ್ರಾರಂಭಿಸುತ್ತಿದ್ದೇನೆ' ಎಂದು ಪೋಸ್ಟ್​​ನಲ್ಲಿ ಬರೆದಿದ್ದಾರೆ. ಇಲ್ಲಿ ಟ್ವಿಸ್ಟ್ ಏನೆಂದರೆ ಜಾಹೀರಾತು ಪೋಸ್ಟ್ ಇದಾಗಿದೆ.

 

ಇಲ್ಲಿ ಹೊಸ ತಂಡವನ್ನು ಪ್ರಾರಂಭ ಮಾಡುತ್ತಿದ್ದೇನೆ ಎಂದು ಬರೆದಿರುವುದನ್ನು ನೋಡಿದ ಅಭಿಮಾನಿಗಳು, ನೂತನ ತಂಡ ಖರೀದಿಗೆ ಮುಂದಾಗಿದ್ದಾರೆಯೇ? ಎಂದು ಉತ್ಸಾಹಗೊಂಡಿದ್ದರು. ಆದರೆ ನೂರಕ್ಕೆ ನೂರು ಸುಳ್ಳು. ಇದು ಜಾಹೀರಾತು ಪೋಸ್ಟ್ ಅಷ್ಟೆ. ಸಿಟ್ರನ್ ಕಾರು ಸಂಸ್ಥೆಗೆ ಟ್ಯಾಗ್ ಮಾಡಿರುವ ಧೋನಿ, ಆ ಕಂಪನಿಯೊಂದಿಗೆ ಹೂಡಿಕೆ ಮಾಡುವ ಸಾಧ್ಯತೆಯೂ ಇದೆ ಹೇಳಲಾಗಿದೆ. ಇತ್ತೀಚೆಗಷ್ಟೇ ಈ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವ ಧೋನಿ, ಈ ಪೋಸ್ಟ್​ನಲ್ಲಿ ಪೇಯ್ಡ್​ ಪ್ರಮೋಷನ್​ ಎಂದು ಬಳಸಿದ್ದು, ಸಿಟ್ರನ್ ಕಾರಿನ ಸಂಸ್ಥೆಯ ಪ್ರಚಾರದ ಪೋಸ್ಟ್​ ಎಂಬುದು ಸ್ಪಷ್ಟವಾಗಿ ಸೂಚಿಸುತ್ತದೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner