ಕನ್ನಡ ಸುದ್ದಿ  /  ಕ್ರಿಕೆಟ್  /  ನಾನಿನ್ನು ನಿರೋದ್ಯೋಗಿ; ಭಾರತಕ್ಕೆ ಟಿ20 ವಿಶ್ವಕಪ್ ಕಿರೀಟ ತೊಡಿಸಿದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಮಾತು

ನಾನಿನ್ನು ನಿರೋದ್ಯೋಗಿ; ಭಾರತಕ್ಕೆ ಟಿ20 ವಿಶ್ವಕಪ್ ಕಿರೀಟ ತೊಡಿಸಿದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಮಾತು

Rahul Dravid: ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ಹೆಡ್​ಕೋಚ್​ ರಾಹುಲ್ ದ್ರಾವಿಡ್ ಅವರು ಇನ್ಮುಂದೆ ನಾನು ನಿರುದ್ಯೋಗಿ ಎಂದು ತಮಾಷೆ ಮಾಡಿದ್ದಾರೆ.

ನಾನಿನ್ನು ನಿರೋದ್ಯೋಗಿ; ಭಾರತಕ್ಕೆ ಟಿ20 ವಿಶ್ವಕಪ್ ಕಿರೀಟ ತೊಡಿಸಿದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಮಾತು
ನಾನಿನ್ನು ನಿರೋದ್ಯೋಗಿ; ಭಾರತಕ್ಕೆ ಟಿ20 ವಿಶ್ವಕಪ್ ಕಿರೀಟ ತೊಡಿಸಿದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಮಾತು

ಕೆರಿಬಿಯನ್ನರ ನಾಡಿನಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ (Indian cricket Team) ಟಿ20 ವಿಶ್ವಕಪ್ (T20 World Cup 2024) ಕಿರೀಟ ತೊಡಿಸಿ ಹೆಡ್​ಕೋಚ್ ರಾಹುಲ್ ದ್ರಾವಿಡ್ (Rahul Dravid) ನಿರ್ಗಮಿಸಿದ್ದಾರೆ.​ ಆಟಗಾರರಾಹುನಾಗಿ ಐಸಿಸಿ ಟ್ರೋಫಿ (ICC Trophy) ಗೆಲ್ಲಲು ಸಾಧ್ಯವಾಗದಿದ್ದರೂ ತರಬೇತುದಾರರಾಗಿ ಪ್ರಶಸ್ತಿ ಜಯಿಸಲು ಯಶಸ್ಸಾಗಿದ್ದಾರೆ. ರಾಹುಲ್ ದ್ರಾವಿಡ್ (Rahul Dravid) ಅವರ ನಾಯಕತ್ವದಲ್ಲಿ 2007ರಲ್ಲಿ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ (ODI World Cup 2024) ಭಾರತ ಲೀಗ್​ನಿಂದಲೇ ಹೊರಬಿದ್ದಿತ್ತು. ಆಟಗಾರನಾಗಿ ಕೂಡ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ.

ಮಿಸ್ಟರ್​ ಡಿಫೆಂಡೇಬಲ್, ದಿ ವಾಲ್, ಜ್ಯಾಮಿ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ದ್ರಾವಿಡ್ ಅವರು, ಕೋಚ್​ ಆಗಿ ಟ್ರೋಫಿ ಗೆದ್ದು ಕನಸನ್ನು ನನಸು ಮಾಡಿಕೊಂಡಿದ್ದಾರೆ. ಪಂದ್ಯದ ನಂತರ ಮಾತನಾಡಿದ ನಿರ್ಗಮಿತ ಕೋಚ್​, 'ಮುಂದಿನ ವಾರ ನಾನು ನಿರುದ್ಯೋಗಿಯಾಗುತ್ತೇನೆ (ನಗು). ಭವಿಷ್ಯದ ಕುರಿತು ನಾನು ಹೆಚ್ಚೇನು ಯೋಚಿಸಲು ಬಯಸುವುದಿಲ್ಲ ಎಂದು ದ್ರಾವಿಡ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 2021ರ ವಿಶ್ವಕಪ್ ಬಳಿಕ ರವಿಶಾಸ್ತ್ರಿ ಬದಲಿಗೆ ದ್ರಾವಿಡ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. 

ರಾಹುಲ್​ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡವು ನಾಲ್ಕು ಐಸಿಸಿ ಟೂರ್ನಿಗಳ ಪೈಕಿ ಮೂರರಲ್ಲಿ ಫೈನಲ್​ ಪ್ರವೇಶಿಸಿದೆ. 2022ರ ಟಿ20 ವಿಶ್ವಕಪ್​ ಸೆಮಿಫೈನಲ್​ಗೆ ಟೂರ್ನಿ ಮುಗಿಸಿದ ಭಾರತ ತಂಡ, 2023ರ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಹಾಗೂ 2023ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ರನ್ನರ್​ಅಪ್ ಆಗಿತ್ತು. ಇದೀಗ 2024 ಟಿ20 ವಿಶ್ವಕಪ್​ನಲ್ಲೂ ಫೈನಲ್​ ಪ್ರವೇಶಿಸಿ ಕಪ್ ಗೆದ್ದಿದೆ.

ಟ್ರೆಂಡಿಂಗ್​ ಸುದ್ದಿ

ಒಂದು ವರ್ಷದಲ್ಲಿ ಮೂರು ಫೈನಲ್ ಅನ್ನು ಟೀಮ್ ಇಂಡಿಯಾ ಆಡಿದೆ. ಐಸಿಸಿ ನಡೆಸಿದ ಮೂರು ಫಾರ್ಮೆಟ್​ಗಳ ಟೂರ್ನಿಗಳಲ್ಲಿ ಭಾರತ ಫೈನಲ್ ಆಡಿದೆ. ಟೆಸ್ಟ್ ಚಾಂಪಿಯನ್​ಶಿಪ್, ಏಕದಿನ ವಿಶ್ವಕಪ್ 2024 ಮತ್ತು ಟಿ20 ವಿಶ್ವಕಪ್​​ ಫೈನಲ್ ಆಡಿದೆ. ಪ್ರಸ್ತುತ ಟೀಮ್ ಇಂಡಿಯಾ ಪುರುಷರ ಟಿ20 ವಿಶ್ವಕಪ್ ಅನ್ನು ಒಂದೇ ಒಂದು ಪಂದ್ಯವನ್ನು ಸೋಲದೆ ಗೆದ್ದ ಮೊದಲ ತಂಡ ಎಂಬ ವಿಶ್ವದಾಖಲೆಗೆ ಪಾತ್ರವಾಯಿತು.

ನಾನು ಪರಂಪರೆಯ ವ್ಯಕ್ತಿಯಲ್ಲ..

ನಾನು ಪರಂಪರೆಯ ವ್ಯಕ್ತಿಯಲ್ಲ, ನಾನು ಪರಂಪರೆಯನ್ನು ಹುಡುಕುತ್ತಿಲ್ಲ. ಅಸಾಧಾರಣ ವೃತ್ತಿಪರ ಗುಂಪು, ಬುದ್ಧಿವಂತ ತರಬೇತುದಾರರು ಮತ್ತು ಇತರ ಸಹಾಯಕ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ನಾನು ಅದೃಷ್ಟಶಾಲಿ ಎಂದು ನಾನು ಭಾವಿಸುತ್ತೇನೆ. ಅವರು ಅದ್ಭುತ ವಾತಾವರಣವನ್ನು ರಚಿಸಲು ಸಾಧ್ಯವಾಗಿಸಿದ್ದಾರೆ. ಸ್ವಲ್ಪ ಅದೃಷ್ಟವು ಈ ಟ್ರೋಫಿಗೆ ಕಾರಣವಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.

ಭಾರತ vs ಸೌತ್ ಆಫ್ರಿಕಾ ಸಂಕ್ಷಿಪ್ತ ಸ್ಕೋರ್​

ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ (76) ಅವರ ಬ್ಯಾಟಿಂಗ್ ಬಲದಿಂದ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್​​ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ, ಬೆಂಕಿ ಬಿರುಗಾಳಿ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಹೆನ್ರಿಚ್ ಕ್ಲಾಸೆನ್ ಅದ್ಭುತ ಪ್ರದರ್ಶನ ನೀಡಿದರು. ಆದರೆ, ಕೊನೆಯಲ್ಲಿ ಕಳಪೆ ಪ್ರದರ್ಶನ ನೀಡಿ ಶರಣಾಯಿತು. 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ 7 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಇನ್ನಷ್ಟು ಟಿ20 ವಿಶ್ವಕಪ್​ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ