ಕನ್ನಡ ಸುದ್ದಿ  /  Cricket  /  I Do Not Comment On What Going On In Social Media And Also Do Not Care Hardik Pandya Reveals Shocking Transformation Prs

ಸೋಷಿಯಲ್ ಮೀಡಿಯಾದಲ್ಲಿ ಏನೇ ಆದರೂ ಹೆದರೋನಲ್ಲ; ಟೀಕಿಸಿದ್ದ ರೋಹಿತ್ ಫ್ಯಾನ್ಸ್​ಗೆ ಹಾರ್ದಿಕ್ ಪಾಂಡ್ಯ ಖಡಕ್ ಉತ್ತರ

Hardik Pandya: ಸಾಮಾಜಿಕ ಮಾಧ್ಯಮದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಕಾಮೆಂಟ್ ಮಾಡುವುದಿಲ್ಲ ಮತ್ತು ನಾನು ಹೆದರುವುದಿಲ್ಲ ಎಂದು ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾದ ನಂತರ ಎದುರಿಸಿದ ಟೀಕೆಗಳಿಗೆ ಉತ್ತರಿಸಿದ್ದಾರೆ.

ಟೀಕಿಸಿದ್ದ ರೋಹಿತ್ ಫ್ಯಾನ್ಸ್​ಗೆ ಹಾರ್ದಿಕ್ ಪಾಂಡ್ಯ ಖಡಕ್ ಉತ್ತರ
ಟೀಕಿಸಿದ್ದ ರೋಹಿತ್ ಫ್ಯಾನ್ಸ್​ಗೆ ಹಾರ್ದಿಕ್ ಪಾಂಡ್ಯ ಖಡಕ್ ಉತ್ತರ

ಅಬ್ಬರದ ಆತ್ಮವಿಶ್ವಾಸ ಮತ್ತು ಅದ್ದೂರಿ ಜೀವನ ಶೈಲಿಗೆ ಖ್ಯಾತಿ ಪಡೆದ ಭಾರತೀಯ ಕ್ರಿಕೆಟ್​ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ (Hardik Pandya) ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಆಶ್ಚರ್ಯಕರ ಬೆಳವಣಿಗೆಯ ಬಗ್ಗೆ ತುಟಿ ಬಿಚ್ಚಿದ್ದಾರೆ. ಒಂದು ಹಂತದಲ್ಲಿ ನಾನು 50 ದಿನಗಳ ಕಾಲ ಮನೆಗೆ ಸೀಮಿತವಾಗಿದ್ದೆ. ಮನೆ ಬಿಟ್ಟು ಹೊರ ಬಂದೇ ಇಲ್ಲ ಎಂಬ ಅಚ್ಚರಿಯ ಹೇಳಿಕೆಯನ್ನು ಬಹಿರಂಗಪಡಿಸಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿ ಮಧ್ಯೆಯಲ್ಲಿ ಗಾಯಗೊಂಡು ಹೊರ ಬಿದ್ದ ಆಲ್​ರೌಂಡರ್​ ಹಾರ್ದಿಕ್, ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿಲ್ಲ. ಕಳೆದ ಐದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಹಾರ್ದಿಕ್​​ ಈಗ ಐಪಿಎಲ್​ಗೆ ಫಿಟ್ ಆಗಿದ್ದಾರೆ. ಈಗಾಗಲೇ ಸ್ಪರ್ಧಾತ್ಮಕ ಕ್ರಿಕೆಟ್​​​ ಆಡುವ ಮೂಲಕ ನಾನು ಸಿದ್ಧ ಎಂದು ಸಂದೇಶವನ್ನು ರವಾನಿಸಿದ್ದಾರೆ. ಇದೀಗ ಮನೆ ಬಾಯ್​ ಆಗಿದ್ದ ಘಟನೆಯನ್ನು ನೆನೆಸಿಕೊಂಡಿದ್ದಾರೆ.

50 ದಿನಗಳ ಕಾಲ ಮನೆಯಲ್ಲೇ ಇದ್ದೆ ಎಂದ ಹಾರ್ದಿಕ್

ನನ್ನ ಅಭಿಮಾನಿಗಳಿಗೆ ನನ್ನ ಬಗ್ಗೆ ತಿಳಿದಿಲ್ಲದ ಒಂದು ವಿಷಯ ಅಂದರೆ, ನಾನು ಈಗ ಹೊರಗೆ ಹೋಗುವುದಿಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ಅಷ್ಟೇನೂ ಹೊರಗೆ ಹೋಗಿಲ್ಲ. ಅನಿವಾರ್ಯವಾಗಿ ಮಾತ್ರ ಸಾರ್ವಜನಿಕವಾಗಿ ಓಡಾಡಿದ್ದೇನೆ. ಗಾಯಗೊಂಡ ಈ ಸಮಯದಲ್ಲಿ 50 ದಿನಗಳ ಕಾಲ ಹೊರಗೆ ಹೆಜ್ಜೆ ಹಾಕದೆ ಮನೆಯಲ್ಲೇ ಇದ್ದೆ. ಆದರೆ ಇದು ನನಗೆ ಎಂದಿಗೂ ಸಮಸ್ಯೆ ಇರಲಿಲ್ಲ ಎಂದು ಯುಕೆ 07 ರೈಡರ್‌ನೊಂದಿಗಿನ ಚಾಟ್ ಶೋನಲ್ಲಿ ಹೇಳಿದ್ದಾರೆ.

ರೋಹಿತ್​ ಅಭಿಮಾನಿಗಳಿಗೆ ಖಡಕ್ ಉತ್ತರ

ಸಾಮಾಜಿಕ ಮಾಧ್ಯಮದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಕಾಮೆಂಟ್ ಮಾಡುವುದಿಲ್ಲ ಮತ್ತು ನಾನು ಹೆದರುವುದಿಲ್ಲ ಎಂದು ಅವರು ಮುಂಬೈ ಇಂಡಿಯನ್ಸ್ ನಾಯಕನಾದ ನಂತರ ಎದುರಿಸಿದ ಟೀಕೆಗಳಿಗೆ ಉತ್ತರಿಸಿದ್ದಾರೆ. ಅಲ್ಲದೆ, ರೋಹಿತ್​​ ಶರ್ಮಾ ಅಭಿಮಾನಿಗಳ ಬೆದರಿಕೆಗೆ ಈ ಮೂಲಕ ಉತ್ತರ ಕೊಟ್ಟಿದ್ದಾರೆ. ಇದೇ ವೇಳೆ ಅವರು ತಮಾಷೆಯ ಘಟನೆಯೊಂದನ್ನು ನೆನಪಿಸಿಕೊಂಡರು.

ಐಪಿಎಲ್‌ನಲ್ಲಿ ತಮ್ಮ ಮೊದಲ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯ ಬಗ್ಗೆ ಮಾತನಾಡಿದರು. ಪಂದ್ಯದ ಪುರುಷೋತ್ತಮ ಪ್ರಶಸ್ತಿ ಪಡೆದ ಆಟಗಾರನು ಎಲ್ಲಾ ಹಣವನ್ನು ಪಡೆಯುತ್ತಾನೆ ಎಂದು ನಾನು ಭಾವಿಸಿದೆವು. ಹಾಗಾಗಿ ನಾನು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಾಗ, ಆ ಹಣ ನನಗೆ ಎಂದು ನಾನು ಭಾವಿಸಿದೆವು, ಆದರೆ ತಂಡದ ನಡುವೆ ಹಂಚಿಕೆಯಾಗುತ್ತದೆ ಎಂದು ನಾನು ಕಲಿತಿದ್ದೇನೆ ಎಂದು ನಕ್ಕರು.

ಮುಂಬೈ ನಾಯಕನಾದಾಗ ಟೀಕೆ

ಗುಜರಾತ್ ಟೈಟಾನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಈಗ ಮತ್ತೊಂದು ತಂಡವನ್ನು ಮುನ್ನಡೆಸಲಿದ್ದಾರೆ. 2022, 2023ರಲ್ಲಿ ಗುಜರಾತ್​​ವನ್ನು ಫೈನಲ್​ಗೇರಿಸಿದ್ದ ಹಾರ್ದಿಕ್, 2024ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ. 15 ಕೋಟಿ ರೂಪಾಯಿಗೆ ಟ್ರೇಡ್ ಮೂಲಕ ಅಂಬಾನಿ ಮಾಲೀಕತ್ವದ ಫ್ರಾಂಚೈಸಿ ಪಾಲಾದರು. ಹೀಗಾಗಿ ರೋಹಿತ್ ಶರ್ಮಾ ಅವ​ರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು.

ಮುಂಬೈಗೆ 5 ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್​ ಶರ್ಮಾ ಅವರನ್ನು ಏಕಾಏಕಿ ಕೆಳಗಿಳಿಸುತ್ತಿದ್ದಂತೆ ಹಿಟ್​ಮ್ಯಾನ್ ಅಭಿಮಾನಿಗಳು ಹಾರ್ದಿಕ್​ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಅನ್​ ಫಾಲೋ ಮಾಡಿದ್ದಾರೆ. ಅಲ್ಲದೆ ಹಾರ್ದಿಕ್​ ಅವರನ್ನು ನಿಂದಿಸಿದ್ದರು.

ಮುಂಬೈ ಇಂಡಿಯನ್ಸ್‌ ತಂಡ

ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್, ರೊಮಾರಿಯೋ ಶೆಫರ್ಡ್ ಹಾರ್ದಿಕ್ ಪಾಂಡ್ಯ (Hardik Pandya), ಜೆರಾಲ್ಡ್ ಕೊಯೆಟ್ಜಿ, ದಿಲ್ಶನ್ ಮಧುಶಂಕ, ಶ್ರೇಯಸ್ ಗೋಪಾಲ್, ನುವಾನ್ ತುಷಾರ, ನಮನ್ ಧೀರ್, ಅಂಶುಲ್ ಕಾಂಬೋಜ್, ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ.

IPL_Entry_Point