ವಿಶ್ವಕಪ್​ ಸೆಮೀಸ್​ಗೇರುವ ತಂಡಗಳು ಹೆಸರಿಸಿ? ಮೊದಲು ಆಸ್ಟ್ರೇಲಿಯಾ, ಉಳಿದದ್ದು ಐ ಡೋಂಟ್ ಕೇರ್ ಎಂದ ಪ್ಯಾಟ್ ಕಮಿನ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್​ ಸೆಮೀಸ್​ಗೇರುವ ತಂಡಗಳು ಹೆಸರಿಸಿ? ಮೊದಲು ಆಸ್ಟ್ರೇಲಿಯಾ, ಉಳಿದದ್ದು ಐ ಡೋಂಟ್ ಕೇರ್ ಎಂದ ಪ್ಯಾಟ್ ಕಮಿನ್ಸ್

ವಿಶ್ವಕಪ್​ ಸೆಮೀಸ್​ಗೇರುವ ತಂಡಗಳು ಹೆಸರಿಸಿ? ಮೊದಲು ಆಸ್ಟ್ರೇಲಿಯಾ, ಉಳಿದದ್ದು ಐ ಡೋಂಟ್ ಕೇರ್ ಎಂದ ಪ್ಯಾಟ್ ಕಮಿನ್ಸ್

Pat Cummins : ಜೂನ್ 1 ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್​ಎ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ನಾಲ್ಕು ತಂಡಗಳು ಯಾವುವು ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಅಚ್ಚರಿಯ ಉತ್ತರ ನೀಡಿದ್ದಾರೆ.

ಐ ಡೋಂಟ್ ಕೇರ್​; ಟಿ20 ವಿಶ್ವಕಪ್​ಗೆ ಸೆಮಿಫೈನಲಿಸ್ಟ್​ಗಳ ಆಯ್ಕೆಗೆ ಸಂಬಂಧಿಸಿ ಪ್ಯಾಟ್ ಕಮಿನ್ಸ್ ಉತ್ತರಿಸಿದ್ದು ಹೀಗೆ
ಐ ಡೋಂಟ್ ಕೇರ್​; ಟಿ20 ವಿಶ್ವಕಪ್​ಗೆ ಸೆಮಿಫೈನಲಿಸ್ಟ್​ಗಳ ಆಯ್ಕೆಗೆ ಸಂಬಂಧಿಸಿ ಪ್ಯಾಟ್ ಕಮಿನ್ಸ್ ಉತ್ತರಿಸಿದ್ದು ಹೀಗೆ

ಮುಂಬರುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ 2024 ಟೂರ್ನಿಯಲ್ಲಿ (T20 World Cup 2024) 2021ರ ಚಾಂಪಿಯನ್​ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಲಿರುವ ವೇಗಿ ಪ್ಯಾಟ್ ಕಮಿನ್ಸ್ (Pat Cummins) ಅವರು ಯಾವ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ್ದಾರೆ. ಇದು ಎಲ್ಲರನ್ನೂ ಬೆರಗುಗೊಳಿಸಿದೆ. ಜೂನ್ 1 ರಂದು ವೆಸ್ಟ್ ಇಂಡೀಸ್-ಯುಎಸ್​​ಎ ಜಂಟಿ ಆತಿಥ್ಯದಲ್ಲಿ 20 ತಂಡಗಳ ನಡುವಿನ ಮೆಗಾ ಈವೆಂಟ್ ಶುರುವಾಗಲಿದೆ.

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​​ ಟೂರ್ನಿಯಲ್ಲಿ (ODI World Cup) ಆಸೀಸ್ ತಂಡವನ್ನು ಚಾಂಪಿಯನ್ ಮಾಡಿದ್ದ 30 ವರ್ಷದ ಕಮಿನ್ಸ್, ತನ್ನ ದೇಶವನ್ನೇ ಮೊದಲು ಸೆಮಿಫೈನಲ್​ ಪ್ರವೇಶಿಸುವವರ ಪಟ್ಟಿಗೆ ಸೇರಿಸಿದ್ದಾರೆ. ಇತರ ಮೂವರು ತಂಡಗಳ ಬಗ್ಗೆ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಸಿಎನ್​ಬಿಸಿ ಅವಾಜ್​ಗೆ ನೀಡಿದ ಸಂದರ್ಶನದಲ್ಲಿ, ನಿಮ್ಮ ಪ್ರಕಾರ 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ನಾಲ್ಕು ತಂಡಗಳು ಯಾವುವು ಎಂದು ಕೇಳಲಾಯಿತು.

ಐ ಡೋಂಟ್ ಕೇರ್​ ಎಂದ ಪ್ಯಾಟ್ ಕಮಿನ್ಸ್

ಇದಕ್ಕೆ ಉತ್ತರಿಸಿದ ಕಮಿನ್ಸ್, ಖಂಡಿತವಾಗಿಯೂ ಆಸ್ಟ್ರೇಲಿಯಾ ಇರಲಿದೆ ಎಂದು ಹೇಳಿದ್ದಾರೆ. ಉಳಿದ ಯಾವ ತಂಡಗಳನ್ನು ಆಯ್ಕೆ ಮಾಡಲಿದ್ದೀರಿ ಎಂದು ಸಂದರ್ಶಕರು ಕೇಳಿದ್ದಾರೆ. ಮತ್ತೆ ಉತ್ತರಿಸಿದ ಕಮಿನ್ಸ್, ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಐ ಡೋಂಟ್ ಕೇರ್​. ನೀವೇ ಯಾವುದನ್ನಾದರೂ ಆಯ್ಕೆ ಮಾಡಬಹುದು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಮಾತಿಗೆ ಸಂದರ್ಶಕರು ಸಹ ಶಾಕ್ ಆಗಿದ್ದಾರೆ.

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ತನ್ನ ತವರಿನಲ್ಲಿ ಅಕ್ಟೋಬರ್-ನವೆಂಬರ್​​ನಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಕಳೆದ ಬಾರಿ ತವರಿನ ಅಭಿಮಾನಿಗಳ ಮುಂದೆ ಮುಜುಗರ ಅನುಭವಿಸಿದ್ದ ಆಸ್ಟ್ರೇಲಿಯಾ, ಈ ವರ್ಷದ ಜೂನ್‌ನಲ್ಲಿ ದೊಡ್ಡ ಪ್ರದರ್ಶನ ನೀಡಲು ಮತ್ತು ಇತಿಹಾಸದಲ್ಲಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲಲು ಸಿದ್ಧವಾಗಿದೆ. ಈವರೆಗೆ, ವೆಸ್ಟ್ ಇಂಡೀಸ್ (2012, 2016) ಮತ್ತು ಇಂಗ್ಲೆಂಡ್ (2010, 2022) ತಂಡಗಳು ಮಾತ್ರ ಎರಡು ಬಾರಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಜೂನ್ 8 ರಂದು ಆಸೀಸ್​ vs ಇಂಗ್ಲೆಂಡ್

ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರಲ್ಲಿ ಆಸ್ಟ್ರೇಲಿಯಾ ತನ್ನ ಅಭಿಯಾನವನ್ನು ಜೂನ್ 5 ರಂದು ಬಾರ್ಬಡೋಸ್‌ನಲ್ಲಿ ಓಮನ್ ವಿರುದ್ಧ ಪ್ರಾರಂಭಿಸುತ್ತದೆ. ನಂತರ ಜೂನ್ 8 ರಂದು ಅದೇ ಸ್ಥಳದಲ್ಲಿ ಎದುರಾಳಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯಾದ ಮೂರನೇ ಗುಂಪು ಹಂತದ ಪಂದ್ಯವು ಜೂನ್ 11 ರಂದು ನಮೀಬಿಯಾ ವಿರುದ್ಧ, ಮತ್ತು ಕಾಂಗರೂ ಪಡೆ ಜೂನ್ 15 ರಂದು ಸೇಂಟ್ ಲೂಸಿಯಾದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.

ತಂಡವನ್ನು ಮುನ್ನೆಡಸಲಿದ್ದಾರೆ ಮಾರ್ಷ್

ಸ್ಟಾರ್ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರು ಜೂನ್ 1 ರಂದು ಪ್ರಾರಂಭವಾಗುವ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಅಂಡರ್​​-19 ವಿಶ್ವಕಪ್ ಗೆದ್ದುಕೊಟ್ಟ ಆಸೀಸ್ ತಂಡದ ನಾಯಕ ಮಾರ್ಷ್​​, ತನ್ನ ಪ್ರಮುಖ ಚೊಚ್ಚಲ ಟೂರ್ನಿಯಲ್ಲೇ ಗೆದ್ದು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಕಳೆದ ವರ್ಷ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​​ನಲ್ಲಿ ಐಸಿಸಿ ಟ್ರೋಫಿ ಗೆದ್ದುಕೊಟ್ಟಿದ್ದರೂ ಕಮಿನ್ಸ್​ಗೆ ಟಿ20 ನಾಯಕತ್ವದಿಂದ ಕೊಕ್ ನೀಡಲಾಗಿದೆ.

Whats_app_banner